Connect with us

    Internal Reservation; ಒಳ ಮೀಸಲಾತಿ ಶೀಘ್ರ ಜಾರಿಗೆ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಿ | ನಿಮ್ಮ ಪರ ನಾನಿರುತ್ತೇನೆ | ಸಂಸದ ಗೋವಿಂದ ಕಾರಜೋಳ

    ಮಾದಿಗ ಸಮುದಾಯದ ಪ್ರತಿಭಾವಂತ ಮಕ್ಕಳ ಪ್ರತಿಭಾ ಪುರಸ್ಕಾರ

    ಮುಖ್ಯ ಸುದ್ದಿ

    Internal Reservation; ಒಳ ಮೀಸಲಾತಿ ಶೀಘ್ರ ಜಾರಿಗೆ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಿ | ನಿಮ್ಮ ಪರ ನಾನಿರುತ್ತೇನೆ | ಸಂಸದ ಗೋವಿಂದ ಕಾರಜೋಳ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 22 SEPTEMBER 2204

    ಚಿತ್ರದುರ್ಗ: ಒಳ ಮೀಸಲಾತಿ(Internal reservation) ಜಾರಿಯಿಂದ ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಹೋರಾಡಿದರೆ ಮಾತ್ರ ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ಅನುಷ್ಟಾನಗೊಳಿಸುತ್ತದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

    ಕ್ಲಿಕ್ ಮಾಡಿ ಓದಿ: Best School Award; ವಿಶ್ವಮಾನವ ವಿದ್ಯಾಸಂಸ್ಥೆಗೆ ಅತ್ಯುತ್ತಮ ಶಾಲೆ ಪ್ರಶಸ್ತಿ

    ಜಿಲ್ಲಾ ಮಾದಿಗ ನೌಕರರ ಸಾಂಸ್ಕೃತಿಕ ಸಂಘದಿಂದ ತ.ರಾ.ಸು.ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭ ಹಾಗೂ ಸಮುದಾಯದ ಪ್ರತಿಭಾವಂತ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ಚುನಾವಣೆ ಬಂದಾಗ ನೀವುಗಳು ಯ್ಯಾವ್ಯಾವ ಪಕ್ಷದಲ್ಲಿ ಬೇಕಾದರೂ ಇದ್ದುಕೊಂಡು ರಾಜಕೀಯ ಮಾಡಿಕೊಳ್ಳಿ, ಆದರೆ ಸಮಾಜದ ಪ್ರಶ್ನೆ ಬಂದಾಗ ಅಪಸ್ವರ ಬೇಡ ಎಲ್ಲರೂ ಒಂದಾಗಿ ಎಂದರು.

    ಅನಿರೀಕ್ಷಿತವಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ನನ್ನನ್ನು ನೀವುಗಳೆಲ್ಲಾ ಸೇರಿಸಿ ಗೆಲ್ಲಿಸಿದ್ದೀರಿ. ನಿಮ್ಮಗಳ ಋಣ ನನ್ನ ಮೇಲಿದೆ. ನ್ಯಾಯಯುತವಾದ ಹಕ್ಕುಗಳಿಗೆ ಹೋರಾಡಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳದಿದ್ದರೆ ಮುಂದಿನ ಪೀಳಿಗೆಯ ಮಕ್ಕಳು ತೊಂದರೆ ಅನುಭವಿಸಬೇಕಾಗುತ್ತದೆ.

    ಸಂಸದರಾದ ಗೋವಿಂದ್ ಕಾರಜೋಳವರಿಗೆ ಸನ್ಮಾನ

    ಸಂಸದರಾದ ಗೋವಿಂದ್ ಕಾರಜೋಳವರಿಗೆ ಸನ್ಮಾನ

    ಮಾದಿಗ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆಯಿರುವುದು ನೋವಿನ ಸಂಗತಿ. ಪರಿಶಿಷ್ಟ ಜಾತಿಯಲ್ಲಿನ ನೂರ ಒಂದು ಜಾತಿಗಳಿಗೂ ನ್ಯಾಯ ಒದಗಿಸುವುದು ನನ್ನ ಕರ್ತವ್ಯ ಎಂದರು.

    ಕ್ಲಿಕ್ ಮಾಡಿ ಓದಿ: Protest; ಸೆ.26 ರಂದು ಗ್ರಾಮ ಆಡಳಿತಾಧಿಕಾರಿಗಳ‌ ಮುಷ್ಕರ | ಕೆಲಸ‌ ಬಹಿಷ್ಕರಿಸಿ ಪ್ರತಿಭಟಿಸಲು ತೀರ್ಮಾನ

    ಒಳ ಮೀಸಲಾತಿ ಜಾರಿಗೆ ಅಡ್ಡಿಪಡಿಸುತ್ತಿರುವವರು ಯಾರು ಎನ್ನುವುದು ಬಯಲಿಗೆ ಬರಲಿ. ನಿಮ್ಮ ಹೋರಾಟದ ಜೊತೆ ಸದಾ ನಾನಿರುತ್ತೇನೆ. ಯಾರಿಗೂ ಹೆದರುವ ಅಗತ್ಯವಿಲ್ಲ. ಇದುವರೆವಿಗೂ ರಾಜ್ಯದಲ್ಲಿ ಆಡಳಿತ ನಡೆಸಿದ ಯಾವ ಮುಖ್ಯಮಂತ್ರಿಯೂ ಧೈರ್ಯ ಮಾಡಲಿಲ್ಲ.

    ಬಸವರಾಜ್‌ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಎಸ್ಸಿ.ಎಸ್ಟಿ.ಗಳಿಗೆ ಮೀಸಲಾತಿಯನ್ನು ಹೆಚ್ಚಿಸಿದರು. ರಾಜಕಾರಣಿಗಳಾದ ನಾವುಗಳು ಚುನಾವಣೆಯಲ್ಲಿ ಅನಿವಾರ್ಯವಾಗಿ ಪಕ್ಷದ ಕೆಲಸ ಮಾಡಬೇಕು. ಆದರೆ ನೀವುಗಳು ಮಾತ್ರ ಯಾರು ನಿಮಗೆ ನ್ಯಾಯ ಒದಗಿಸುತ್ತಾರೋ ಅಂತಹವರ ಪರವಾಗಿರಿ ಎಂದು ತಿಳಿಸಿದರು.

    ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ, ಕಳೆದ 40 ವರ್ಷಗಳ ಹಿಂದೆ ಯಾರಿಗೆ ಬೇಕಾದರೂ ಸರ್ಕಾರಿ ನೌಕರಿ ಸಿಗುತ್ತಿತ್ತು. ಆದರೆ ಈಗ ಶಿಕ್ಷಣ, ಉದ್ಯೋಗದಲ್ಲಿ ಪ್ರಭಲ ಸ್ಪರ್ಧೆಯಿದೆ. ಒಳ ಮೀಸಲಾತಿ ಜಾರಿಯಿಂದ ಮಾತ್ರ ಎಲ್ಲರಿಗೂ ನೌಕರಿ ಸಿಗಲು ಸಾಧ್ಯ.

    30 ವರ್ಷಗಳ ಸುಧೀರ್ಘ ಹೋರಾಟದ ಫಲವಾಗಿ ಸುಪ್ರೀಂಕೋರ್ಟ್ ಒಳ ಮೀಸಲಾತಿ ವಿಚಾರದಲ್ಲಿ ಐತಿಹಾಸಿಕ ತೀರ್ಪು ನೀಡಿ ಮಾದಿಗರ ಮನೆಯ ಕದ ತಟ್ಟುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಡ ಮಾಡದೆ ಅನುಷ್ಟಾನಗೊಳಿಸಬೇಕು. ಅಲ್ಲಿಯವರೆಗೂ ಯಾವುದೇ ಹುದ್ದೆಗಳಿಗೆ ನೇಮಕ ಮಾಡಬಾರದೆಂದು ಒತ್ತಾಯಿಸಿದರು.

    ಕ್ಲಿಕ್ ಮಾಡಿ ಓದಿ: Kannada novel: 4. ಮೈಲಾರಲಿಂಗಸ್ವಾಮಿ ಗುಡಿ ನಿರ್ಮಾಣ

    ಬಡತನ, ಹಸಿವು ನಿವಾರಣೆಗೆ ಶಿಕ್ಷಣ ಅಸ್ತ್ರ ಎನ್ನುವುದನ್ನು ಮಾದಿಗ ಜನಾಂಗದ ಮಕ್ಕಳು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.

    ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿಎಸ್ ಮಂಜುನಾಥ್ ಅವರಿಗೆ ಸನ್ಮಾನ

    ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿಎಸ್ ಮಂಜುನಾಥ್ ಅವರಿಗೆ ಸನ್ಮಾನ

    ಮಾಜಿ ಸಂಸದ ಎ.ನಾರಾಯಣಸ್ವಾಮಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಎಲ್ಲಾ ಜಾತಿ ಧರ್ಮದವರಿಗೂ ಸಮಾನತೆ ಸಿಗಲಿ ಎನ್ನುವ ಕಾರಣಕ್ಕಾಗಿ ಮೀಸಲಾತಿಯನ್ನು ಕೊಡುಗೆಯಾಗಿ ನೀಡಿದ್ದಾರೆ.

    ತಿರಸ್ಕಾರ, ಶೋಷಣೆಗೊಳಗಾದವರಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ರಾಜಕೀಯವಾಗಿ ಶಕ್ತಿ ತುಂಬಬೇಕಾಗಿದೆ. ಅಧಿಕಾರಿಗಳು ಧೈರ್ಯ ಮಾಡಿ ಜಿಲ್ಲಾ ಮಾದಿಗ ನೌಕರರ ಸಾಂಸ್ಕೃತಿಕ ಸಂಘ ಕಟ್ಟಿರುವುದು ಮನಸ್ಸಿಗೆ ತುಂಬಾ ಖುಷಿಯಾಗಿದೆ ಎಂದರು.

    ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆಗಳು ಬಲಿಷ್ಟರ ಕೈಗೆ ಸಿಕ್ಕಿರುವುದರಿಂದ ಮಾದಿಗ ಸಮಾಜದ ಮಕ್ಕಳು ಅವಕಾಶದಿಂದ ವಂಚಿತರಾಗುತ್ತಿದ್ದಾರೆ.

    ಕ್ಲಿಕ್ ಮಾಡಿ ಓದಿ: Taralabalu mata sirigere: ತರಳಬಾಳು ಮಠ ಸರ್ವಜನಾಂಗದ ಶಾಂತಿಯ ತೋಟ | ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

    ಸಿ.ಇ.ಟಿ.ಯಲ್ಲಿಯೂ ಭ್ರಷ್ಟಾಚಾರ, ಹಾಗಾಗಿ ಒಳ ಮೀಸಲಾತಿಯನ್ನು ಗಂಭೀರವಾಗಿ ಪರಿಗಣಿಸಿ ಹೋರಾಟಕ್ಕೆ ಇಳಿಯದಿದ್ದರೆ ಮುಂದಿನ ದಿನಗಳಲ್ಲಿ ಕಷ್ಟ ಅನುಭವಿಸಬೇಕಾಗುತ್ತದೆ.

    ಶಿಕ್ಷಣದಲ್ಲಿ ಮಕ್ಕಳು ಏಕ್ರಾಗತೆ, ಬದ್ದತೆ ಇಟ್ಟುಕೊಳ್ಳಬೇಕು. ಶಿಕ್ಷಣದ ಜೊತೆ ತಾಂತ್ರಿಕ ಜ್ಞಾನವಿರಬೇಕು. ಒಳ ಮಿಸಲಾತಿಗಾಗಿ ಬೀದಿಗಿಳಿದು ಹೋರಾಡೋಣ ಎಂದು ಹೇಳಿದರು.

    ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ ಸಮಾಜದ ವಿಚಾರ ಬಂದಾಗ ಮಾದಿಗ ಜನಾಂಗ ಮೊದಲು ಒಗ್ಗಟ್ಟಾಗಬೇಕು. ಸುಪ್ರೀಂಕೋರ್ಟ್ ಒಳ ಮೀಸಲಾತಿ ಕುರಿತು ಮಹತ್ವದ ತೀರ್ಪು ನೀಡಿದೆ. ಹೋರಾಟದ ಮೂಲಕ ಪಡೆದುಕೊಳ್ಳಬೇಕಾಗಿದೆ.

    ಸಹೋದರ ಸಮಾಜದವರು ಒಳ ಮೀಸಲಾತಿಯಿಂದ ಅನ್ಯಾಯವಾಗುತ್ತಿದೆ ಎಂದು ಅವರವರೆ ಮಾತನಾಡಿಕೊಳ್ಳುತ್ತಿರುವುದರಲ್ಲಿ ಅರ್ಥವಿಲ್ಲ. ಪರಿಶಿಷ್ಟ ಜಾತಿಯಲ್ಲಿನ ನೂರ ಒಂದು ಜಾತಿಗಳಲ್ಲಿ ಯಾರಿಗೂ ಅನ್ಯಾಯವಾಗುವುದಿಲ್ಲವೆಂದು ಸ್ಪಷ್ಟಪಡಿಸಿದರು.

    ಕ್ಲಿಕ್ ಮಾಡಿ ಓದಿ: Stone Gate: ಏಕಾಏಕಿ ಕುಸಿದ ಕಲ್ಲಿನ ದ್ವಾರ | ನೀರುಗಂಟಿ ಮೇಲೆ ಬಿದ್ದ ಕಲ್ಲು

    ಕರ್ನಾಟಕ ಆದಿ ಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಸನ್ಮಾನ ಸ್ವೀಕರಿಸಿ ಮಾತನಾಡಿ, ರಾಜ್ಯದಲ್ಲಿ ಮಾದಿಗರ ಸಂಘಟನೆ ಕ್ಷೀಣಿಸುತ್ತಿದೆ. ಮಾದಿಗರ ಹೆಸರಿನಲ್ಲಿ ಹುಟ್ಟಿಕೊಂಡಿರುವ ಸಾವಿರಾರು ಸಂಘಟನೆಗಳು ಅಧಿಕಾರಿಗಳನ್ನು ಹೆದರಿಸಿ ಬ್ಲಾಕ್‌ಮೇಲ್ ಮಾಡುತ್ತಿವೆ. ಜೀವನ ಬದುಕು ಕಟ್ಟಿಕೊಳ್ಳುವ ಕೆಲಸವಾಗುತ್ತಿಲ್ಲ ಎಂದರು.

    ಮಾದಿಗ ಜನಾಂಗದ ರಾಜಕಾರಣಿಗಳ ಶಕ್ತಿ ಮಾದಿಗರ ಉದ್ದಾರಕ್ಕೆ ಬಳಕೆಯಾಗಬೇಕಿದೆ. ಇಂದಲ್ಲ ನಾಳೆ ಒಳ ಮೀಸಲಾತಿ ಸಿಕ್ಕೆ ಸಿಗುತ್ತದೆ. ಮೊದಲು ಅಸೂಯೆ ಬಿಟ್ಟು ಮಾದಿಗರು ಒಂದಾಗಿ ಎಂದು ಹೇಳಿದರು.

    ಸಾನಿಧ್ಯ ವಹಿಸಿದ್ದ ಹಿರಿಯೂರು ಆದಿಜಾಂಬವ ಗುರುಪೀಠದ ಷಡಕ್ಷರಮುನಿ ಸ್ವಾಮೀಜಿ ಆಶೀರ್ವಚನ ನೀಡಿ, ರಾಜಕೀಯ ದೊಂಬರಾಟ, ಇಬ್ಬಗೆಯ ಮಾತುಗಳಿಂದ ಮಾದಿಗ ಸಮುದಾಯಕ್ಕೆ ಧಕ್ಕೆಯಾಗುತ್ತಿದೆ. ಒಳ ಮೀಸಲಾತಿ ಕುರಿತು ಮಾದಿಗ ಸಮುದಾಯದ ರಾಜಕಾರಣಿಗಳು ಸದನದಲ್ಲಿ ಧ್ವನಿ ಎತ್ತಬೇಕು.

    ಸುಪ್ರೀಂಕೋರ್ಟ್ ತೀರ್ಪಿನಂತೆ ಒಳ ಮೀಸಲಾತಿಯನ್ನು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರಬೇಕು. ಇಲ್ಲವಾದಲ್ಲಿ ಬೀದಿಗಿಳಿದು ಹೋರಾಡಬೇಕಾಗುತ್ತದೆ. ಅದಕ್ಕಾಗಿ ಮೊದಲು ಮಾದಿಗ ಸಮಾಜದ ಮಕ್ಕಳು ಶಿಕ್ಷಣವಂತರಾಗಬೇಕೆಂದು ತಿಳಿಸಿದರು.

    ರಾಷ್ಟ್ರೀಯ ಹೆದ್ದಾರಿ ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಕೆ.ಜಿ.ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಮಾದಿಗ ನೌಕರರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಿ.ಟಿ.ಶ್ರೀನಿವಾಸನ್ ಅಧ್ಯಕ್ಷತೆ ವಹಿಸಿದ್ದರು.

    ಕ್ಲಿಕ್ ಮಾಡಿ ಓದಿ: Murder case: ಅತ್ತೆ, ಮಾವನ ಕೊಲೆ ಪ್ರಕರಣ | ಅಳಿಯ ಎಸ್ಕೇಪ್‌ | ಇಬ್ಬರ ಬಂಧನ

    ಕಾರ್ಯಪಾಲಕ ಇಂಜಿನಿಯರ್ ಎಲ್.ಹನುಮಂತಪ್ಪ, ನಿವೃತ್ತ ಜಂಟಿ ನಿರ್ದೇಶಕ ಎಂ.ರೇವಣಸಿದ್ದಪ್ಪ, ಖಜಾನೆ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಪಿ.ಜಯಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ನರಸಿಂಹರಾಜ, ನಿವೃತ್ತ ಕಾರ್ಯಪಾಲಕ ಜಿ.ಆರ್.ಅಭಿಯಂತರ ದೇವರಾಜ್ , ಬಿ.ಸಿ.ಎಂ.ಇಲಾಖೆ ನಿವೃತ್ತ ಅಧಿಕಾರಿ ಡಿ.ಟಿ.ಜಗನ್ನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top