CHITRADURGA NEWS | 29 MAY 2026
ಹೊಳಲ್ಕೆರೆ: ಇನ್ನೂ ಮೂರ್ನಾಲ್ಕು ದಿನದಲ್ಲಿ ಗಂಗಸಮುದ್ರ ಕೆರೆಗೆ ಭದ್ರಾ ಪ್ರಾಜೆಕ್ಟ್‍ನಿಂದ ನೀರು ತುಂಬಿಸಿ ತಾಲ್ಲೂಕಿನಲ್ಲಿರುವ 37 ಕೆರೆಗಳಿಗೆ ನೀರು ಹರಿಸಲಾಗುವುದೆಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.
ಇದನ್ನೂ ಓದಿ: DCC ಬ್ಯಾಂಕ್ ಅಧ್ಯಕ್ಷರಾಗಿ ಶಾಸಕ ಟಿ.ರಘುಮೂರ್ತಿ ಅವಿರೋಧ ಆಯ್ಕೆ
ಹೊಳಲ್ಕೆರೆ ತಾಲೂಕಿನ ತಾಳಿಕಟ್ಟೆ ಕಾವಲು ಗ್ರಾಮದಲ್ಲಿ ಒಂದು ಕೋಟಿ ರೂ.ವಚ್ಚದಲ್ಲಿ ತಾಳಿಕಟ್ಟೆ ಕಾವಲಿನಿಂದ ರಣದಮ್ಮ ದೇವಸ್ಥಾನದವರೆಗೂ ಸಿ.ಸಿ.ರಸ್ತೆ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಮಾನವೀಯತೆ ಎನ್ನುವುದು ನನ್ನ ಜಾಯಮಾನದಲ್ಲಿ ಬಂದಿದೆ. ಯಾರು ಏನೆ ಕೇಳಲಿ, ನನಗೆ ಮತ ಹಾಕಿದವರು, ಹಾಕದವರು ಎನ್ನುವ ತಾರತಮ್ಯ ಮಾಡುವುದಿಲ್ಲ. ಹೃದಯ ಕರಗುತ್ತದೆ. ನೂರು ವರ್ಷ ಹಾಳಾಗದಂತೆ ಗಟ್ಟಿಮುಟ್ಟಾಗಿರುವ ರಸ್ತೆ ಮಾಡಿಸುತ್ತಿದ್ದೇನೆ. ನೀವುಗಳು ಉಳುಮೆ ಮಾಡುತ್ತಿರುವ ಭೂಮಿ ನಿಮ್ಮ ನಿಮ್ಮ ಹೆಸರಿಗೆ ಆದಾಗ ಯಾವುದೆ ಸಮಸ್ಯೆಯಾಗುವುದಿಲ್ಲ. ಒಂದಲ್ಲ ಒಂದು ದಿನ ತೊಂದರೆಯಾಗುತ್ತದೆ. ಸರ್ಕಾರದಿಂದ ಹಕ್ಕುಪತ್ರಗಳನ್ನು ಪಡೆದುಕೊಳ್ಳುವುದು ನಿಮ್ಮ ಜವಾಬ್ದಾರಿ ಎಂದರು.
ಕೆರೆ ಏರಿ ಅಗಲ ಮಾಡಿಸುತ್ತಿದ್ದೇನೆ. ಕೆಲಸ ಪೂರ್ಣಗೊಂಡ ನಂತರ ಡಾಂಬರ್ ರಸ್ತೆಯಾಗುತ್ತದೆ. ಹನುಮಲಿ ಬಳಿ ಮೂರುವರೆ ಎಕರೆ ಜಾಗದಲ್ಲಿ 23 ಕೋಟಿ ರೂ.ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣವಾಗುತ್ತಿದೆ.
ಇದನ್ನೂ ಓದಿ: ಮೊಳಕಾಲ್ಮೂರು ಬಳಿ ಮತ್ತೊಂದು ಅಪಘಾತ | ಚಳ್ಳಕೆರೆಯ 5 ಜನ ಸಾವು
ಕೆಂಚಾಪುರ, ತಾಳ್ಯ, ತೇಕಲವಟ್ಟಿ, ಎನ್.ಜಿ.ಹಳ್ಳಿ ಸೇರಿದಂತೆ ಹದಿನೇಳು ಕಡೆ ವಿದ್ಯುತ್ ಪವರ್ ಸ್ಟೇಷನ್ ಕಟ್ಟಿಸುತ್ತಿದ್ದೇನೆ. ಇಲ್ಲಿಗೆಲ್ಲಾ ಕರೆಂಟ್ ಪೂರೈಕೆಯಾಗಬೇಕಾದರೆ ಚಿಕ್ಕಜಾಜೂರಿನ ಕೋಟೆಹಾಳ್ ಸಮೀಪ ಐದು ನೂರು ಕೋಟಿ ರೂ.ವೆಚ್ಚದಲ್ಲಿ ದೊಡ್ಡ ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣವಾಗುತ್ತಿದೆ.
ನೇರವಾಗಿ ಜೋಗ್‍ಫಾಲ್ಸ್‍ನಿಂದ ಇಲ್ಲಿಗೆ ವಿದ್ಯುತ್ ಪೂರೈಕೆಯಾಗಲಿದೆ. ಇದರಿಂದ ಇನ್ನು ಐವತ್ತು ವರ್ಷಗಳ ಕಾಲ ರೈತರಿಗೆ ವಿದ್ಯುತ್ ಸಮಸ್ಯೆ ಕಾಡುವುದಿಲ್ಲ ಎಂದರು.
360 ಕೋಟಿ ರೂ.ವೆಚ್ಚ ಮಾಡಿ ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ತಂದು ತಾಲ್ಲೂಕಿನಾದ್ಯಂತ ಪ್ರತಿ ಮನೆ ಮನೆಗೆ ಶುದ್ದ ಕುಡಿಯುವ ನೀರು ಪೂರೈಸಲಾಗುವುದು.
ಕ್ಷೇತ್ರದಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಜನ ನೆಮ್ಮದಿಯಿಂದಿರಬೇಕೆಂಬುದು ನನ್ನ ಆಸೆ. ಗದ್ದಲ ಗಲಾಟೆಗೆ ಎಲ್ಲಿಯೂ ಅವಕಾಶ ಕೊಟ್ಟಿಲ್ಲ. ಯಾರು ಪೊಲೀಸ್ ಠಾಣೆ ಮೆಟ್ಟಿಲೇರಲು ಬಿಡಲ್ಲ. ಐದು ಸಾರಿ ಎಂಎಲ್‍ಎ. ಆಗಿದ್ದೇನೆ. ಯಾರು ನಿಮ್ಮ ಕಷ್ಟ-ಸುಖ ಸಮಸ್ಯೆಗಳನ್ನು ಆಲಿಸಿ ನೆರವಿಗೆ ಬರುತ್ತಾರೆನ್ನುವುದನ್ನು ಗಮನದಲ್ಲಿಟ್ಟುಕೊಂಡು ಚುನಾವಣೆಯಲ್ಲಿ ಮತ ಚಲಾಯಿಸಿ. ಯಾರದೊ ನಯವಂಚಕತನ ಮಾತಿಗೆ ಮರುಳಾಗಬೇಡಿ ಎಂದು ಶಾಸಕ ಡಾ.ಎಂ.ಚಂದ್ರಪ್ಪ ತಾಳಿಕಟ್ಟೆ ಕಾವಲು ಗ್ರಾಮದವರನ್ನು ಎಚ್ಚರಿಸಿದರು.
ಇದನ್ನೂ ಓದಿ: ವಿಶ್ವ ಪರಿಸರ ದಿನದ ಅಂಗವಾಗಿ ಮುರುಘಾ ಮಠದಿಂದ ಮೇ.30 ರಿಂದ ಜೂನ್ 5ರವರೆಗೆ ಸಸಿ ನೆಡುವ ಸಪ್ತಾಹ
ಈ ವೇಳೆ ಹೊಳಲ್ಕೆರೆ ಬಿಜೆಪಿ ಮಂಡಲ ಅಧ್ಯಕ್ಷ ಕುಮಾರಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಗಂಗಾಧರ್, ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಹಳ್ಳಪ್ಪ, ನುಲೇನೂರು ಶೇಖರಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಣ್, ಕೆಂಚಪ್ಪ, ಲೋಕೇಶ್, ಮಂಜಪ್ಪ ಹಾಗೂ ಗ್ರಾಮದ ಮುಖಂಡರುಗಳು ಇದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
