By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    ಅರ್ಜಿ ಅಹ್ವಾನ
    ಅರಿವು ಶೈಕ್ಷಣಿಕ ಸಾಲ | ಅರ್ಜಿ ಅಹ್ವಾನ 
    3 hours ago
    ಚಿತ್ರದುರ್ಗ ಅಂಚೆ ಕಚೇರಿ
    ರಾಷ್ಟ್ರಮಟ್ಟದ ಪತ್ರ ಬರವಣಿಗೆ ಸ್ಪರ್ಧೆ | ಅಂಚೆ ವಿಭಾಗದಿಂದ ಆಹ್ವಾನ
    3 hours ago
    Representative image
    ಹೈನುರಾಸು ಯೋಜನೆ | 3,039 ಫಲಾನುಭವಿಗಳ ಪಟ್ಟಿ ಪ್ರಕಟ | ಸೆ.15ರೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ
    3 hours ago
    ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ಕಾಲುವೆಗೆ ನೀರು ಹರಿಯುತ್ತಿರುವುದು
    ಬಯಲುಸೀಮೆಯ ಬರದ ಹಣೆಪಟ್ಟಿ ಅಳಿಸುವತ್ತ ಭದ್ರೆ ಹೆಜ್ಜೆ
    3 hours ago
    Bhadra water flowing through the canal
    ಚಿತ್ರದುರ್ಗ ರೈತರ ದಶಕಗಳ ಕನಸು ನನಸು | ಚಿತ್ರದುರ್ಗದತ್ತ ಮುಖ ಮಾಡಿದ ಭದ್ರೆ
    4 hours ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    ಖಾಸಗಿ ಬಸ್ ಪಲ್ಟಿ | ಸ್ಥಳದಲ್ಲೇ ಮೂವರ ಸಾವು | 15ಕ್ಕೂ ಹೆಚ್ಚು ಮಂದಿಗೆ ಗಾಯ
    2 weeks ago
    ಚಲಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಲಾರಿ ಡಿಕ್ಕಿ | ಇಬ್ಬರು ಸಾವು
    3 weeks ago
    ನಾಯಿ ತಪ್ಪಿಸಲು ಹೋಗಿ ರಸ್ತೆ ಬದಿ ನಿಂತಿದ್ದವರಿಗೆ ಕಾರು ಡಿಕ್ಕಿ | ಸ್ಥಳದಲ್ಲೇ ಓರ್ವ ಸಾವು
    2 months ago
    LOHITH NITHYASHREE
    ಭೀಕರ ಅಪಘಾತ ಮಾರುತಿ ಗ್ಯಾಸ್‌ನ ಲೋಹಿತ್‌ ಪ್ರಸಾದ್‌ ದಂಪತಿ ಸಾವು | ಹೊಳಲ್ಕೆರೆ ಕಣಿವೆ ಬಳಿ ಕಾರು ಲಾರಿ ನಡುವೆ ಅಪಘಾತ
    2 months ago
    ಲಾರಿ-ಬಸ್ ನಡುವೆ ಭೀಕರ ಅಪಘಾತ | 12ಕ್ಕೂ ಹೆಚ್ಚು ಮಂದಿಗೆ ಗಾಯ
    2 months ago
  • ತಾಲೂಕು
    ತಾಲೂಕುShow More
    ಮಾರಿಕಾಂಭ ದೇವಿಯ ಪರವು ಆಚರಣೆ
    ಮಾರಿಕಾಂಭ ದೇವಿಯ ಪರವು ಆಚರಣೆ | ಶತಮಾನದ ಪರಂಪರೆ ಮುಂದುವರಿಕೆ
    2 days ago
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    2 weeks ago
    ವಿದ್ಯುತ್ ಸ್ಪರ್ಶಿಸಿ ನವಿಲು, ಚಿರತೆ ಸಾವು
    4 weeks ago
    ಸಾಣೇಹಳ್ಳಿ ಶ್ರೀಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ
    ಬದುಕು ಬದಲಿಸುವ ಶಕ್ತಿ ಇಷ್ಟಲಿಂಗ ದೀಕ್ಷೆಗಿದೆ | ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ
    1 month ago
    ಚಳ್ಳಕೆರೆ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ
    ಜವಾಬ್ದಾರಿ ಅರಿತವರು ಮಾತ್ರ ಪತ್ರಕರ್ತರಾಗಲು ಸಾಧ್ಯ | ಶಾಸಕ ಟಿ.ರಘುಮೂರ್ತಿ
    2 months ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    arecanut price list
    ಅಡಿಕೆ ಧಾರಣೆ | ಸೆಪ್ಟಂಬರ್‌ 4 | ಯಾವ ಅಡಿಕೆಗೆ ಎಷ್ಟು ರೇಟ್‌
    2 days ago
    arecanut price list
    ಅಡಿಕೆ ಧಾರಣೆ | ಸೆ.3 | ಚನ್ನಗಿರಿ, ತೀರ್ಥಹಳ್ಳಿ ಸೇರಿ ರಾಜ್ಯದ ಅಡಿಕೆ ವಹಿವಾಟು
    3 days ago
    arecanut price list
    ಅಡಿಕೆ ಧಾರಣೆ | ಅಡಿಕೆ ಬೆಲೆಯಲ್ಲಿ ಕುಸಿತ
    2 months ago
    ARECANUT RATE
    ಅಡಿಕೆ ಧಾರಣೆ | 8 ಜೂನ್‌ | ಇಂದಿನ ಅಡಿಕೆ ರೇಟ್‌
    3 months ago
    ARECANUT RATE
    ಅಡಿಕೆ ಧಾರಣೆ | 6 ಜೂನ್‌ | ಭೀಮಸಮುದ್ರ, ಚನ್ನಗಿರಿ, ತೀರ್ಥಹಳ್ಳಿ ಹಾಗೂ ರಾಜ್ಯದ ಅಡಿಕೆ ರೇಟ್‌
    3 months ago
  • Dina Bhavishya
    Dina BhavishyaShow More
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 06 | ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬ, ಹಠಾತ್ ಆರ್ಥಿಕ ಲಾಭದ ಸೂಚನೆ
    11 hours ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 05 | ಶ್ರಮಕ್ಕೆ ತಕ್ಕ ಫಲಿತಾಂಶ ಅರೋಗ್ಯದಲ್ಲಿ ಜಾಗೃತಿ ವಹಿಸಿ
    1 day ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 04 | ಉದ್ಯೋಗಗಳಲ್ಲಿ ಕೆಲಸದ ಒತ್ತಡ, ದೂರದ ಪ್ರಯಾಣ ಬೇಡ
    2 days ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 03 | ಕೈಗೊಂಡ ಕಾರ್ಯಗಳಲ್ಲಿ ಅಡೆತಡೆಗಳು, ಉದ್ಯೋಗದಲ್ಲಿ ಗೊಂದಲದ ಪರಿಸ್ಥಿತಿ
    3 days ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 02 | ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಲಾಭ
    4 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 05 | ಹತ್ತಿ ರೇಟ್ ಎಷ್ಟಿದೆ?
    1 day ago
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 04 | ರಾಗಿ, ಶೇಂಗಾ ರೇಟ್…..
    2 days ago
    ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
    3 days ago
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 02 | ಮೆಕ್ಕೆಜೋಳ, ರಾಗಿ ರೇಟ್ ಎಷ್ಟಿದೆ?
    4 days ago
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 01 | ಹತ್ತಿ ರೇಟ್ ಎಷ್ಟಿದೆ?
    5 days ago
  • ಹೊಳಲ್ಕೆರೆ
    ಹೊಳಲ್ಕೆರೆShow More
    Inauguration of Teachers' Day Celebrations
    ಗುರು ಸ್ಥಾನ ಪರಮ ಪವಿತ್ರ | ಮಕ್ಕಳ ಭವಿಷ್ಯ ರೂಪಿಸುವ ಹೊಣೆ ಶಿಕ್ಷಕರದ್ದು | ಶಾಸಕ ಎಂ.ಚಂದ್ರಪ್ಪ
    11 hours ago
    Inauguration of the Public Service Movement meeting
    ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ | ಶಾಸಕ ಚಂದ್ರಪ್ಪ
    20 hours ago
    ತಾಳಿಕಟ್ಟೆ–ದೊಗ್ಗನಾಳ್ ರಸ್ತೆ ಅಭಿವೃದ್ಧಿಗೆ ₹12 ಕೋಟಿ | ಶಾಸಕ ಎಂ.ಚಂದ್ರಪ್ಪ
    6 days ago
    ಹೊಳಲ್ಕೆರೆ ಪಟ್ಟಣದ ಕ್ರೀಡಾಂಗಣದಲ್ಲಿ 80ನೇ ಸ್ವಾತಂತ್ರ್ಯೋತ್ಸವ
    ಹಿರಿಯರ ತ್ಯಾಗದ ಮಾರ್ಗದರ್ಶನದಲ್ಲಿ ಮುನ್ನಡೆಯೋಣ | ಶಾಸಕ ಡಾ.ಎಂ.ಚಂದ್ರಪ್ಪ
    3 weeks ago
    ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ
    ಮನೆ ಮನೆಗೆ ಶುದ್ಧ ಕುಡಿಯುವ ನೀರು, ಮಕ್ಕಳಿಗೆ ಉಚಿತ ಶಿಕ್ಷಣ–ಸೌಲಭ್ಯ | ಶಾಸಕ ಚಂದ್ರಪ್ಪ
    4 weeks ago
  • ಹಿರಿಯೂರು
    ಹಿರಿಯೂರುShow More
    Power outage on May 1
    ಜೂನ್ 23 ರಂದು ಹಿರಿಯೂರು ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯ
    3 months ago
    ವೈಷ್ಣವ
    ನಾಲ್ಕು ವರ್ಷದ ಬಾಲಕ ಸಾವು | ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಪುತ್ರ
    3 months ago
    Babburu Horticulture college
    ಕೃಷಿ ಪ್ರಾಯೋಗಿಕ ಮರು ಪರೀಕ್ಷೆ ಜೂನ್ 1ಕ್ಕೆ ನಿಗದಿ
    4 months ago
    ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಪ್ರತಿಭಟನೆ
    ಹಿರಿಯೂರು | ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಒತ್ತಾಯ 
    5 months ago
    VaniVilasa sagara dam
    ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು | ಒಂದು ತಿಂಗಳು ನಾಲೆಗೆ ನೀರಿನ ಹರಿವು
    7 months ago
  • ಹೊಸದುರ್ಗ
    ಹೊಸದುರ್ಗShow More
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    2 weeks ago
    ವಿದ್ಯುತ್ ಸ್ಪರ್ಶಿಸಿ ನವಿಲು, ಚಿರತೆ ಸಾವು
    4 weeks ago
    ಸಾಣೇಹಳ್ಳಿ ಶ್ರೀಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ
    ಬದುಕು ಬದಲಿಸುವ ಶಕ್ತಿ ಇಷ್ಟಲಿಂಗ ದೀಕ್ಷೆಗಿದೆ | ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ
    1 month ago
    ಉಪನ್ಯಾಸ ಹಾಗೂ ಸ್ವಾಗತ ಸಮಾರಂಭ
    ಬಡತನ ನಿರ್ಮೂಲನೆಗೆ ಶಿಕ್ಷಣವೇ ಬ್ರಹ್ಮಾಸ್ತ್ರ | ಶಾಂತವೀರ ಶ್ರೀ
    2 months ago
    ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ | 4 ಬೈಕುಗಳು ವಶಕ್ಕೆ
    3 months ago
  • Life Style
    Life StyleShow More
    white and blue conch flowers
    ಬಿಳಿ ಮತ್ತು ನೀಲಿ ಶಂಖಪುಷ್ಪ ಹೂಗಳಲ್ಲಿ ಸೇವಿಸಲು ಯಾವುದು ಉತ್ತಮ?
    8 hours ago
    coconut oil to your hair
    ಕೂದಲಿಗೆ ತೆಂಗಿನ ಎಣ್ಣೆ ಹಚ್ಚುವಾಗ ಈ ತಪ್ಪು ಮಾಡಿದರೆ ನಿಮ್ಮ ಕೂದಲಿಗೆ ಹಾನಿಯಾಗಬಹುದು
    9 hours ago
    PCOS
    ಪಿಸಿಓಎಸ್‍ನಿಂದ ಬಳಲುತ್ತಿರುವವರು ಈ ಹಣ್ಣುಗಳನ್ನು ತಿನ್ನಿ
    1 day ago
    Eucalyptus oil
    ಶೀತದ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಈ ಎಣ್ಣೆಯನ್ನು ಬಳಸಿ
    1 day ago
    Iron deficiency in women
    ಮಹಿಳೆಯರು ಕಬ್ಬಿಣದ ಕೊರತೆಯನ್ನು ನೀಗಿಸಲು ಈ 5 ಆಹಾರಗಳನ್ನು ಸೇವಿಸಿ
    2 days ago
Reading: ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ 
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಹೊಸದುರ್ಗ

ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ 

News Desk Chitradurga News
Last updated: 2 June 2026 16:37
News Desk Chitradurga News
3 months ago
Share
ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ
ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ
SHARE

CHITRADURGA NEWS | 02 JUNE 2026

ಹೊಸದುರ್ಗ: ಸಾಣೇಹಳ್ಳಿ ಶ್ರೀಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮ ಜರುಗಿತು.

ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ನೀಡಿರುವುದು ಕುರುಬ ಸಮಾಜಕ್ಕೆ ನೋವುಂಟಾಗಿದೆ | ಜಗದೀಶ್

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಜಗತ್ತಿನಲ್ಲಿರುವ ಅಸಂಖ್ಯಾತ ಜೀವರಾಶಿಗಳಿಗೂ ಮಾನವನಿಗೂ ಇರುವ ಮುಖ್ಯ ವ್ಯತ್ಯಾಸ ‘ಅರಿವು’. ಮನುಷ್ಯನಿಗೆ ಮಾತ್ರ ಇರುವ ಈ ಅರಿವಿನ ಪರಿಧಿಯಿಂದಾಗಿಯೇ ಆತ ಜಗತ್ತಿನ ಕಿರೀಟದಂತೆ ಕಂಗೊಳಿಸುವನು.

ವ್ಯಕ್ತಿಯು ಜಗತ್ತಿನ ಕಿರೀಟವಾಗಬೇಕಾದರೆ ತನ್ನಲ್ಲಿರುವ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ, ದ್ವೇಷ ಹಾಗೂ ಅಸೂಯೆಯಂತಹ ಅವಗುಣಗಳನ್ನು ಕಳೆದುಕೊಳ್ಳಬೇಕು. ಮನುಷ್ಯ ಇವುಗಳಿಂದ ಹೊರಬರಲು ಸಂಸ್ಕಾರ ಮುಖ್ಯ. ಸಂಸ್ಕಾರವಿಲ್ಲದ ಮನುಷ್ಯ ಶಿವನಾಗದೆ ಶವವಾಗುವನು. 

ಕಾಡಿನ ಮೃಗಗಳಾದರೂ ಹೊಟ್ಟೆ ತುಂಬಿದ ಮೇಲೆ ಮತ್ತೊಂದು ಪ್ರಾಣಿಯ ಬೇಟೆಯಾಡುವುದಿಲ್ಲ. ಆದರೆ ಮಾನವನಲ್ಲಿ ಹೊಟ್ಟೆ ತುಂಬಿದ್ದರೂ ದ್ವೇಷ, ಅಸೂಯೆ ಸದಾ ಕಾಡುತ್ತಿರುತ್ತದೆ. ಆದುದರಿಂದ ಆತ ಕಾಡುಪ್ರಾಣಿಗಿಂತ ಕಡೆಯಾಗದೆ ಆದರ್ಶದ ಬದುಕು ಸಾಗಿಸಬೇಕು. ಆಸ್ತಿ, ಒಡವೆ, ಅಧಿಕಾರಗಳಿಗಿಂತ ಶಿವಜ್ಞಾನವೇ ಮುಖ್ಯ. 

ಇದನ್ನೂ ಓದಿ: JDU ಪಕ್ಷ ಸಂಘಟನೆ ಮಾಡುವುದು ನಮ್ಮ ಮುಂದಿನ ಗುರಿ | ಪ್ರಧಾನ ಕಾರ್ಯದರ್ಶಿ ರಂಗನಾಥ್

ಜಗತ್ತಿನ ಶ್ರೇಷ್ಠ ಅನುಭಾವಿ ಬಸವಣ್ಣನವರು ಎಂದಿಗೂ ತಮ್ಮನ್ನು ದೊಡ್ಡವರೆಂದು ಭಾವಿಸದೆ ಕಿರಿಯರಲ್ಲಿ ಕಿರಿಯನಾಗಲು ಇಷ್ಟಪಟ್ಟರು. ಬಾಲ್ಯದಲ್ಲೇ ತಮಗೆ ಜನಿವಾರ ಹಾಕಲು ಬಂದಾಗ, “ಇದೇ ಜನಿವಾರ ನಮ್ಮ ತಾಯಿ ಹಾಗೂ ಅಕ್ಕನಿಗೆ ಏಕೆ ಇಲ್ಲ?” ಎಂದು ಪ್ರಶ್ನಿಸಿದ್ದರು. 

ಈ ರೀತಿ ಬಾಲ್ಯದಿಂದಲೇ ಮಕ್ಕಳಲ್ಲಿ ಪ್ರಶ್ನಿಸುವ ಗುಣ ಬೆಳೆಸಬೇಕು. ಮಗು ಪ್ರಶ್ನಿಸಿದಾಗ ಹೆದರಿಸಿ ಸುಮ್ಮನಿರಿಸಬಾರದು. ಪ್ರಶ್ನಿಸುವ ಮೂಲಕ ಸತ್ಯವನ್ನು ಒಪ್ಪುವ ಮತ್ತು ತಪ್ಪು ವಿಚಾರಗಳನ್ನು ನಿರಾಕರಿಸುವ ಮನೋಭಾವ ಬೆಳೆಯಬೇಕು. ಅನುಭವ ಮಂಟಪದಲ್ಲಿ ವಯಸ್ಸಿನ ಭೇದವಿಲ್ಲದೆ ಪ್ರಶ್ನಿಸುವ ಸ್ವಾತಂತ್ರ್ಯವಿತ್ತು. ಅಲ್ಲಿ ಜ್ಞಾನ ಮತ್ತು ಅನುಭಾವದ ಮೂಲಕವೇ ಹಿರಿತನಕ್ಕೆ ಗೌರವ ಸಿಗುತ್ತಿತ್ತು ಎಂದರು.

ತಾಯಿ ಗರ್ಭಿಣಿಯಾಗಿದ್ದಾಗ 7 ತಿಂಗಳಿಗೆ ತವರು ಮನೆಗೆ ಕಳುಹಿಸುವ ಮುನ್ನ ಜಂಗಮರು ತಾಯಿಗೆ ಸಂಸ್ಕಾರ ನೀಡಿ, ಮಗು ಲಿಂಗದ ಮಗುವಾಗಿ ಬೆಳೆಯಲಿ ಎಂದು ಉಪದೇಶಿಸಿ ತಾಯಿಯ ಕೈಗೆ ಲಿಂಗವನ್ನು ನೀಡುತ್ತಾರೆ.

ಇದನ್ನೂ ಓದಿ: ಡಿಕೆಶಿ ಭೇಟಿಯಾದ ಸುಧಾಕರ್‌ ಪುತ್ರ ಸುಹಾಸ್‌

ನಾವು ಹೊರಗಿನ ಗುಡಿ-ಗುಂಡಾರಗಳಿಗೆ ಅಲೆಯುವ ಜನವಾಗಬಾರದು. ಚೈತನ್ಯವಿಲ್ಲದ ಜಡ ವಿಗ್ರಹಗಳನ್ನು ಪೂಜಿಸುವ ಬದಲು, ನಮ್ಮ ಒಳಗಿರುವ ಚೈತನ್ಯವನ್ನು ಗುರುತಿಸಬೇಕು. ಹೊರಗಿನ ಯಾವುದೇ ದೇವರು ನಮಗೆ ಶಾಪವನ್ನಾಗಲಿ, ವರವನ್ನಾಗಲಿ ಕೊಡುವುದಿಲ್ಲ. ರಸ್ತೆಯಲ್ಲಿ ಹೋಗುವಾಗ ನಿಯಮ ಪಾಲಿಸು, ಯಾರಿಗೂ ಕೀಡು ಮಾಡಬೇಡ ಎಂದು ನಮ್ಮ ವಿವೇಕ ನಮಗೆ ಎಚ್ಚರಿಸುತ್ತದಲ್ಲವೇ? ಆ ಎಚ್ಚರಿಕೆಯೇ ದೇವರು ಎಂದರು.

ಪ್ರತಿಯೊಂದು ಧರ್ಮಕ್ಕೂ ಅದರದ್ದೇ ಆದ ಗುರುಗಳು, ಲಾಂಛನಗಳು ಹಾಗೂ ಧರ್ಮಗ್ರಂಥಗಳು ಇರುತ್ತವೆ. ಅದರಂತೆ, ಅಷ್ಟಾವರಣ, ಪಂಚಾಚಾರ, ಷಟ್‌ಸ್ಥಲಗಳ ತತ್ವ ಸಿದ್ಧಾಂತಗಳನ್ನು ನೀಡಿದ ಬಸವಣ್ಣನವರೇ ಲಿಂಗಾಯತ ಧರ್ಮದ ಧರ್ಮಗುರುಗಳು. ಈ ಧರ್ಮದ ಪರಮೋಚ್ಚ ಸಂಕೇತ ‘ಇಷ್ಟಲಿಂಗ’ವಾಗಿದ್ದು, ಇದನ್ನು ಹೊರತುಪಡಿಸಿ ಬೇರೆ ಯಾವುದೇ ಆರಾಧನೆಗೆ ಇಲ್ಲಿ ಅವಕಾಶವಿಲ್ಲ. ಶರಣರು ರಚಿಸಿದ ‘ವಚನ ಸಾಹಿತ್ಯ’ವೇ ನಮಗೆ ಪರಮ ಪವಿತ್ರವಾದ ಧರ್ಮಗ್ರಂಥ.

ಕಾಶಿ, ಕೂಡಲಸಂಗಮ, ಬಸವಕಲ್ಯಾಣ ಅಥವಾ ಸಾಣೇಹಳ್ಳಿ ಮಾತ್ರವೇ ಧರ್ಮಕ್ಷೇತ್ರಗಳಲ್ಲ; ನಾವು ಎಲ್ಲಿ ವಾಸಿಸುತ್ತೇವೆಯೋ, ಎಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತೇವೆಯೋ ಆ ತಾಣವನ್ನೇ ಧರ್ಮಕ್ಷೇತ್ರವನ್ನಾಗಿ ಮಾಡಿಕೊಳ್ಳಬೇಕು. ಮದುವೆಯ ಸಂದರ್ಭಕ್ಕಾಗಿ ಔಪಚಾರಿಕವಾಗಿ ದೀಕ್ಷೆ ಪಡೆಯುವುದಕ್ಕಿಂತ, ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತಾವಿರುವ ಮನೆಯನ್ನೇ ಮಹಾಮನೆಯನ್ನಾಗಿ ಹಾಗೂ ಅನುಭವ ಮಂಟಪವನ್ನಾಗಿ ಪರಿವರ್ತಿಸಿಕೊಂಡಾಗ ಮಾತ್ರ ನೆಮ್ಮದಿಯ ಜೀವನ ಸಾಧ್ಯ ಎಂದರು.

ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜೂನ್ 01 | ಮೆಕ್ಕೆಜೋಳ, ರಾಗಿ ರೇಟ್..

ಪೂಜಾ ವ್ಯವಸ್ಥೆಯನ್ನು ಶ್ರೀಮಠದ ವತಿಯಿಂದ ಮಾಡಲಾಗಿತ್ತು. ನಾಗರಾಜ್ ಹೆಚ್.ಎಸ್ ವಚನಗಳನ್ನು ಹೇಳಿಕೊಟ್ಟರು.

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:ChitradurgaChitradurga newsIshtalinga initiation ceremonySanehalli Mathಇಷ್ಟಲಿಂಗ ದೀಕ್ಷಾ ಸಂಸ್ಕಾರಚಿತ್ರದುರ್ಗಚಿತ್ರದುರ್ಗ ನ್ಯೂಸ್ಸಾಣೇಹಳ್ಳಿ ಮಠ
Share This Article
Facebook Email Print
Previous Article ಹೊಸದುರ್ಗದಿಂದ ಶೃಂಗೇರಿಗೆ ನೂತನ KSRTC ಬಸ್ ಸೇವೆಗೆ ಚಾಲನೆ ಹೊಸದುರ್ಗದಿಂದ ಶೃಂಗೇರಿಗೆ ನೂತನ KSRTC ಬಸ್ ಸೇವೆಗೆ ಚಾಲನೆ
Next Article ಬಸವೇಶ್ವರ ವೈದ್ಯಕೀಯ ವಿದ್ಯಾಲಯದ 103 ಸ್ನಾತಕ, 41 ಸ್ನಾತಕೋತ್ತರ ಪದವೀಧರರಿಗೆ ಪ್ರಮಾಣ ಪತ್ರ ವಿತರಣೆ ಬಸವೇಶ್ವರ ವೈದ್ಯಕೀಯ ವಿದ್ಯಾಲಯದ 103 ಸ್ನಾತಕ, 41 ಸ್ನಾತಕೋತ್ತರ ಪದವೀಧರರಿಗೆ ಪ್ರಮಾಣ ಪತ್ರ ವಿತರಣೆ 
1 Comment
  • NvkasynopolskaFan says:
    2 June 2026 at 14:55

    The monthly ritual at Sanehalli Matha sounds interesting. Is there a specific reason for holding it monthly?

    Reply

Leave a Reply Cancel reply

Your email address will not be published. Required fields are marked *

ಅರ್ಜಿ ಅಹ್ವಾನ
ಅರಿವು ಶೈಕ್ಷಣಿಕ ಸಾಲ | ಅರ್ಜಿ ಅಹ್ವಾನ 
ಮುಖ್ಯ ಸುದ್ದಿ
ಚಿತ್ರದುರ್ಗ ಅಂಚೆ ಕಚೇರಿ
ರಾಷ್ಟ್ರಮಟ್ಟದ ಪತ್ರ ಬರವಣಿಗೆ ಸ್ಪರ್ಧೆ | ಅಂಚೆ ವಿಭಾಗದಿಂದ ಆಹ್ವಾನ
ಮುಖ್ಯ ಸುದ್ದಿ
Representative image
ಹೈನುರಾಸು ಯೋಜನೆ | 3,039 ಫಲಾನುಭವಿಗಳ ಪಟ್ಟಿ ಪ್ರಕಟ | ಸೆ.15ರೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ
ಮುಖ್ಯ ಸುದ್ದಿ
ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ಕಾಲುವೆಗೆ ನೀರು ಹರಿಯುತ್ತಿರುವುದು
ಬಯಲುಸೀಮೆಯ ಬರದ ಹಣೆಪಟ್ಟಿ ಅಳಿಸುವತ್ತ ಭದ್ರೆ ಹೆಜ್ಜೆ
ಮುಖ್ಯ ಸುದ್ದಿ
© Chitradurga News 2025 | Powered By Karnatakabest.com
Welcome Back!

Sign in to your account

Username or Email Address
Password

Lost your password?

Not a member? Sign Up