CHITRADURGA NEWS | 12 FEBRUARY 2026
ಹಿರಿಯೂರು: ಬೆಸ್ಕಾಂ ಹಿರಿಯೂರು ಉಪ ವಿಭಾಗ ವ್ಯಾಪ್ತಿಯ ವಿವಿಧ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ 4ನೇ ತ್ರೆöÊಮಾಸಿಕ ನಿರ್ವಹಣಾ ಕಾಮಗಾರಿ ನಿರ್ವಹಿಸುವುದರಿಂದ ಇದೇ ಫೆ12ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಫೆಬ್ರವರಿ 11 | ಮೆಕ್ಕೆಜೋಳ ರೇಟ್ ಎಷ್ಟಿದೆ?
ಹಿರಿಯೂರು ಉಪ ವಿಭಾಗ ವ್ಯಾಪ್ತಿಯ ಹರಿಯಬ್ಬೆ, ಪಿ.ಡಿ.ಕೋಟೆ, ಕಲಮರಹಳ್ಳಿ, ಮಲ್ಲಪ್ಪನಹಳ್ಳಿ, ಮತ್ತು ಐಮಂಗಲ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 4ನೇ ತ್ರೆöÊಮಾಸಿಕ ನಿರ್ವಹಣಾ ಕಾರ್ಯಕ್ಕಾಗಿ ವಿವಿ ಕೇಂದ್ರಗಳಿಗೆ ಮಾರ್ಗ ಮುಕ್ತತೆ ನೀಡಬೇಕಾಗಿರುವುದರಿಂದ ಈ ವಿ.ವಿ ಕೇಂದ್ರಗಳಿAದ ವಿದ್ಯುತ್ ಸರಬರಾಜಾಗುವ ಎಲ್ಲಾ 11 ಕೆ.ವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ.
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:
ಹರಿಯಬ್ಬೆ, ಧರ್ಮಪುರ, ಶ್ರವಣಗೆರೆ, ಬೆನಕನಹಳ್ಳಿ, ಸಕ್ಕರ, ಕೃಷ್ಣಪುರ, ಸೂಗೂರು, ಬುರುಡುಕುಂಟ, ಚಿಲ್ಲಹಳ್ಳಿ, ಈಶ್ವರಗೆರೆ, ಹೂವಿನಹೊಳೆ, ಅಬ್ಬಿನಹೋಳೆ, ಕಣಜನಹಳ್ಳಿ, ಬೇತೂರು, ಪಾಳ್ಯ, ವಿ.ಕೆ.ಗುಡ್ಡ, ಪಿ.ಡಿ.ಕೋಟೆ, ಖಂಡೆಡನಹಳ್ಳಿ, ಹಲಗಲದ್ದಿ, ಮದ್ದಿಹಳ್ಳಿ, ಹೊಸಕೆರೆ, ಅರಳಿಕೆರೆ, ಬಿ.ಕೆ.ಹಟ್ಟಿ, ಬುರುಡಕುಂಟೆ, ಯಳವಾರಹಟ್ಟಿ, ಹೂಸಹಳ್ಳಿ, ಗುಳ್ಯಾ, ಗುಳ್ಯಾಗೊಲ್ಲರಹಟ್ಟಿ, ಸೂಗೂರು ಸಾಲುಣಸೆ ಮೇಟಿಕುರ್ಕೆ, ಹುಲಿತೊಟ್ಟಿಲು, ಸೂರಗೊಂಡನಹಳ್ಳಿ, ತವಂದಿ, ಆದಿರಾಳು, ಗುಯಿಲಾಳು, ಹರ್ತಿಕೋಟೆ, ಮಲ್ಲಪನಹಳ್ಳಿ, ಗನ್ನಾಯಕನಹಳ್ಳಿ, ಕಳವಿಬಾಗಿ, ಯರಬಳ್ಳಿ, ಗೊಲ್ಲರಹಳ್ಳಿ, ಕಂದಿಕೆರೆ, ಮೇಟಿಕುರ್ಕೆ ಕೈಗಾರಿಕಾ ಪ್ರದೇಶ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಅಡಚಣೆಯಾಗಲಿದೆ.
ಇದನ್ನೂ ಓದಿ: ಭದ್ರೆಗಾಗಿ ರೈತರ ಪಾದಯಾತ್ರೆ | ನೀರಾವರಿ ಹೋರಾಟ ಸಮಿತಿಯ ಬೆಂಬಲ | ಪಿ.ಕೋದಂಡರಾಮಯ್ಯ ಘೋಷಣೆ
ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಹಿರಿಯೂರು ಸಹಾಯಕ ಕಾರ್ಯನಿರ್ವಹಕ ಇಂಜಿನಿಯರ್ ಪೀರ್ ಸಾಬ್.ಹೆಚ್ ತಿಳಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
