CHITRADURGA NEWS | 18 JULY 2026
ಹೊಳಲ್ಕೆರೆ: ಸಬೂಬು ಹೇಳಿಕೊಂಡು ಕಾಲಹರಣ ಮಾಡಿದರೆ ಸಹಿಸಿಕೊಂಡು ಸುಮ್ಮನಿರಲ್ಲ. ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆಂದು ಶಾಸಕ ಡಾ.ಎಂ.ಚಂದ್ರಪ್ಪ ಅಧಿಕಾರಿಗಳನ್ನು ಎಚ್ಚರಿಸಿದರು.
ಇದನ್ನೂ ಓದಿ: ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ | ಅರ್ಜಿ ಅಹ್ವಾನ
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲಿಸಿ, ಮಾತನಾಡಿದರು.
ಓವರ್‍ಹೆಡ್ ಟ್ಯಾಂಕ್‍ಗಳನ್ನು ಎಲ್ಲಿಯೂ ಸರಿಯಾಗಿ ಕಟ್ಟಿಲ್ಲವೆಂದ ಮೇಲೆ ನೀರು ಹೇಗೆ ಸರಬರಾಜು ಮಾಡುತ್ತೀರ? ಕಡಿಮೆ ಕೆಲಸ ಮಾಡಿರುವವರಿಗೆ ಹೆಚ್ಚು ಪೇಮೆಂಟ್ ಮಾಡಲಾಗಿದೆ. ನಿಮ್ಮನ್ನು ಏಕೆ ಅಮಾನತ್ತುಗೊಳಿಸಬಾರದೆಂದು ಸಂಬಂಧಪಟ್ಟ ಇಲಾಖೆಯ ಇಂಜಿನಿಯರ್‍ಗೆ ತರಾಟೆ ತೆಗೆದುಕೊಂಡರು.
2.93 ಲಕ್ಷ ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಎಲ್ಲೆಲ್ಲಿ ಕೆಲಸ ಆಗಿದೆ. ಚರಂಡಿ, ಪೈಪ್‍ಲೈನ್, ಗುಂಡಿ ತೆಗೆಯುತ್ತಾರೆನ್ನುವುದನ್ನು ನೀವುಗಳು ಏಕೆ ಗಮನಿಸುವುದಿಲ್ಲ. ಕ್ರಿಮಿನಲ್ ಕೇಸ್ ದಾಖಲಿಸಿ ಗುತ್ತಿಗೆದಾರರ ಲೈಸೆನ್ಸ್ ರದ್ದುಪಡಿಸಲಾಗುವುದು.
ತಾಲ್ಲೂಕಿನಲ್ಲಿ ಅಧಿಕಾರಿಗಳು ಮೈಚಳಿ ಬಿಟ್ಟು ಕೆಲಸ ಮಾಡಬೇಕು. ಇನ್ನು ಒಂದು ತಿಂಗಳ ನಂತರ ಮತ್ತೆ ಸಭೆ ಕರೆಯುತ್ತೇನೆ. ಸಂಪೂರ್ಣ ಮಾಹಿತಿಯೊಂದಿಗೆ ಹಾಜರಾಗುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ: ಮಾದಕ ವಸ್ತು ವಿರೋಧಿಸಿ ಪೊಲೀಸ್ ಇಲಾಖೆಯಿಂದ ಬೃಹತ್ ಜಾಗೃತಿ ಜಾಥಾ
ದನ-ಕುರು, ಕುರಿ-ಮೇಕೆಗಳ ಮೇವಿಗೆ ಜಮೀನು ಮೀಸಲಿಟ್ಟು ಹೆಚ್ಚುವರಿ ಭೂಮಿಯನ್ನು ಮಾತ್ರ ಸಾಗುವಳಿಗೆ ನೀಡಬೇಕೆಂಬ ನಿಯಮವಿದೆ. ಸಿಟಿಯಿಂದ 5 ಕಿ.ಮೀ. ದೂರದಲ್ಲಿರುವವರಿಗೆ ಮಾತ್ರ ಅಲಾಟ್ ಮಾಡಬೇಕೆಂಬ ಷರತ್ತಿದೆ.
ನಾಲ್ಕು ಕಾವಲುಗಳಲ್ಲಿ ಭೂಮಿಯನ್ನು ಬಡವರಿಗೆ ಕೊಡಬೇಕೆಂದು 2023 ರಲ್ಲಿ ಕ್ಯಾಬಿನೆಟ್‍ನಲ್ಲಿ ಪಾಸ್ ಮಾಡಿಸಿದ್ದೆ. ಪಟ್ಟಭದ್ರಾ ಹಿತಾಸಕ್ತಿಗಳಿಗೆ ಯಾವುದೇ ಕಾರಣಕ್ಕೂ ಮಣೆ ಹಾಕುವುದಿಲ್ಲ. ತೆಂಗು ಮತ್ತು ಅಡಿಕೆಗೆ ಕಪ್ಪುತಲೆ ಹುಳು ರೋಗ ಕಾಣಿಸಿಕೊಂಡು 25 ವರ್ಷಗಳಾಗಿದೆ. ಕಚೇರಿಯಲ್ಲಿ ಕುಳಿತುಕೊಳ್ಳುವುದನ್ನು ಬಿಟ್ಟು ರೈತರ ತೋಟಗಳಿಗೆ ಹೋಗಿ ಕಪ್ಪುತಲೆ ಹುಳು ರೋಗವನ್ನು ಹತೋಟಿಗೆ ತರುವಲ್ಲಿ ಏಕೆ ಶ್ರಮಿಸುತ್ತಿಲ್ಲ.
ಇನ್ನು ಹದಿನೈದು ದಿನಗಳ ಒಳಗಾಗಿ ನನಗೆ ಸಂಪೂರ್ಣ ವರದಿ ಕೊಡಬೇಕು. ರೈತರಿಗೆ ತೊಂದರೆ ಕೊಡುವ ಅಧಿಕಾರಿಗಳನ್ನು ಸುಮ್ಮನೆ ಬಿಡಲ್ಲ. ನೀವುಗಳಿರುವುದು ಜನ ಸೇವೆ ಮಾಡಲಿಕ್ಕೆ ಎನ್ನುವುದನ್ನು ಮರೆಯಬೇಡಿ ಎಂದು ತಾಕೀತು ಮಾಡಿದರು.
ಇದನ್ನೂ ಓದಿ: ಸರ್ಕಾರಿ ಶಾಲೆಯ ಶೌಚಾಲಯ, ಕಟ್ಟಡಗಳ ಸಮರ್ಪಕ ನಿರ್ವಹಣೆ ಮಾಡದಿದ್ದರೆ ಕಠಿಣ ಕ್ರಮ
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಿವಪ್ರಕಾಶ್, ಚಿತ್ರದುರ್ಗ ತಹಶೀಲ್ದಾರ್ ಗೋವಿಂದರಾಜ್, ಹೊಳಲ್ಕೆರೆ ತಹಶೀಲ್ದಾರ್ ವಿಜಯಕುಮಾರ್, ಜಿಲ್ಲಾ ಗ್ಯಾರೆಂಟಿ ಯೋಜನೆ ಅಧ್ಯಕ್ಷ ಆರ್.ಶಿವಣ್ಣ, ತಾಲ್ಲೂಕು ಅಧ್ಯಕ್ಷ ಹನುಮಂತಪ್ಪ, ಕೆಡಿಪಿ ಸದಸ್ಯರುಗಳಾದ ಗಂಗಾಧರ್, ಪುಟ್ಟಸ್ವಾಮಿ, ಕಿರಣ್‍ಕುಮಾರ್, ಸುರೇಶ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

