CHITRADURGA NEWS | 11 JUNE 2026
ಹೊಸದುರ್ಗ: ಸಾತ್ವಿಕತೆ ಇರುವಲ್ಲಿ ಸಹಬಾಳ್ವೆ ಸೌಹಾರ್ದತೆ ಇರುತ್ತದೆ ಎಂದು ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠ ಶ್ರೀ ಶಾಂತವೀರ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಛಲವಾದಿ ಮಠದ ಜಮೀನು ಟ್ರಸ್ಟ್‌ಗೆ ಹಸ್ತಾಂತರ
ಹೊಸದುರ್ಗದ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ನಡೆದ 23ನೇ ವರ್ಷದ 6ನೇ ತಿಂಗಳ ಸುಜ್ಞಾನ ಸಂಗಮ ಹಾಗೂ ಜೈನ ಸಮಾಜ ಬಾಂಧವರಿಗೆ ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ.
ಬದುಕೆಂಬುದು ಪ್ರತಿಧ್ವನಿಯಂತೆ ನಾವು ಏನನ್ನು ಕೂಗುತ್ತೇವೋ ಪ್ರತಿಧ್ವನಿಯಾಗಿ ಮರಳಿ ಕೇಳಿಸುತ್ತದೆ ಹಾಗಾಗಿ ಒಳ್ಳೆಯದನ್ನೇ ಮಾಡಿದರೆ, ಒಳ್ಳೆಯದೇ ಕೇಳಿಸುತ್ತದೆ ಕೆಡುಕನ್ನು ಮಾಡಿದರೆ ಕೆಡುಕೆ ಕೇಳಿಸುತ್ತದೆ ತನ್ನ ಧರ್ಮವನ್ನು ಅನುಸರಿಸಿ. ಪರಧರ್ಮವನ್ನು ತಿಳಿದು. ಗೌರವಿಸುವ ಮೂಲಕ ಸಮಾಜದಲ್ಲಿ ಸಹಬಾಳ್ವೆ ಮಾಡಬೇಕಾಗಿದೆ.
ಜೈನ ಸಮಾಜ ಕಳೆದ 23 ವರ್ಷಗಳಿಂದ ನಮ್ಮೊಂದಿಗೆ ಅತ್ಯಂತ ಪ್ರೀತಿ ಗೌರವದೊಂದಿಗೆ ನಮ್ಮ ಶ್ರೀ ಮಠಕ್ಕೆ ನಡೆದುಕೊಳ್ಳುತ್ತಿದ್ದಾರೆ. ಹಾಗೆಯೇ ನಾವು ಕೂಡ ಜೈನ ಸಮಾಜದ ಎಲ್ಲಾ ಹಾಗೂ ಹೋಗುಗಳಲ್ಲಿ ಭಾಗವಹಿಸಿ ಅವರೊಟ್ಟಿಗೆ ನಿಲ್ಲುವ ಕೆಲಸವನ್ನು ಮಾಡಿಕೊಂಡು ಬಂದಿದ್ದೇವೆ. ಮುಂದೆಯೂ ಜೈನ ಸಮಾಜದೊಂದಿಗೆ ಇರುತ್ತೇವೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜೂನ್ 11 | ಹತ್ತಿ ರೇಟ್ ಎಷ್ಟಿದೆ?
ಸರ್ವ ಸಮಾಜಗಳು ಒಗ್ಗಟ್ಟಿನಿಂದ ಸೌಹಾರ್ದತೆಯಿಂದ ಬಾಳುವುದೇ ನಿಜವಾದ ಧರ್ಮ. ಹಾಗಾಗಿ ಧರ್ಮ ಪ್ರಜ್ಞೆಯನ್ನು ಹೊಂದಿರುವ ಜೈನರು ಅಹಿಂಸೆಯನ್ನೇ ಉಸಿರಾಗಿಸಿಕೊಂಡು ಬದುಕುವ ಮೂಲಕ ಸಕಲ ಜೀವಾತ್ಮರಿಗೆ ಒಳಿತನ್ನೆ ಬಯಸಿದ್ದಾರೆ. ಅವರ ಜೀವನ ಶೈಲಿ ಬೇರೆ ಜಾತಿ ಧರ್ಮದವರಿಗೆ ದಾರಿದೀಪಗಳಾಗಿವೆ ಎಂದರು.
ಹೊಸದುರ್ಗ ಜೈನ ಸಮಾಜದ ಅಧ್ಯಕ್ಷ ಎಚ್.ಡಿ.ಅದಿರಾಜಯ್ಯ ಮಾತನಾಡಿ, ಅತ್ಯಂತ ಚಿಕ್ಕ ಜೈನ ಸಮಾಜವನ್ನು ಗೌರವಿಸುವ ಮೂಲಕ ಶಾಂತವೀರ ಶ್ರೀಗಳು ನಮ್ಮೆಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಜೈನ ಸಮಾಜದ ಅನೇಕ ಸಂಕಷ್ಟ ಸಮಯಗಳಲ್ಲಿ ನಮ್ಮೊಟ್ಟಿಗೆ ನಿಲ್ಲುವ ಮೂಲಕ ಧೈರ್ಯ ತುಂಬಿದ್ದಾರೆ. ಅವರ ಉದಾತ್ತ, ಜಾತ್ಯತೀತ ನೆಲವು ಸರ್ವ ಸಮಾಜಗಳಿಗೂ ಪ್ರೇರಣೆಯಾಗಿದೆ.
ಸುಜ್ಞಾನ ಸಂಗಮ ಇದೊಂದು ಜಾತ್ಯತೀತ, ಪಕ್ಷತೀತ ಧರ್ಮತೀತವಾದ ಅದ್ವಿತೀಯ ಆಧ್ಯಾತ್ಮದ ಹಸಿವನ್ನು ನೀಗಿಸುವ ಅರಿವನ್ನು ಜಾಗೃತಿಗೊಳಿಸುವ ಶ್ರೇಷ್ಠ ಕಾರ್ಯಕ್ರಮ. ಶಾಂತವೀರ ಶ್ರೀಗಳಂತ ಶ್ರೇಷ್ಠ ಗುರುಗಳನ್ನು ಪಡೆದ ಕುಂಚಿಟಿಗ ಸಮಾಜವೇ ಪುಣ್ಯವಂತರು ಎಂದು ಹೇಳಿದರು.
ಜೈನ ಸಮಾಜದ ಮುಖಂಡರಾದ ಇ.ವಿ.ಅಜ್ಜಪ್ಪ ಮಾತನಾಡಿದರು. ಕಾರ್ಕಳದ ಮುನಿರಾಜ್ ರೇಂಜಾಳ್ ಉಪನ್ಯಾಸ ನೀಡಿದರು.
ಇದನ್ನೂ ಓದಿ: ಡಿಪ್ಲೋಮಾ ಲ್ಯಾಟರಲ್ ಪ್ರವೇಶ | ಅರ್ಜಿ ಆಹ್ವಾನ
ಈ ವೇಳೆ ಬಾಹುಬಲಿ ಜೈನ ಸಮಾಜದ ಉಪಾಧ್ಯಕ್ಷರು, ಬ್ರಹ್ಮಪಾಲ್ ಜೈನ ಸಮಾಜದ ಉಪಾಧ್ಯಕ್ಷರು, ಇಂದ್ರಕುಮಾರ್ ಜೈನ ಸಮಾಜದ ಕಾರ್ಯದರ್ಶಿಗಳು ಭಾಗವಹಿಸಿದ್ದರು.
ಆರ್.ಎಸ್.ಮತಮ್, ಡಾ.ಇ.ಎಸ್ ಬ್ರಹ್ಮರಾಜ್, ಎಂ.ಡಿ.ಧರಣೇಂದ್ರ, ಇ.ವಿ.ಶೀತಲ್ಕುಮಾರ್, ಶೈಲಜಾ ಬಾಹುಬಲಿ ಅವರಿಗೆ ಸನ್ಮಾನಿಸಲಾಯಿತು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

