CHITRADURGA NEWS | 11 JUNE 2026
ಚಿತ್ರದುರ್ಗ: ನಗರದ ಹೊರವಲಯ ದಾವಣಗೆರೆ ರಸ್ತೆಯಲ್ಲಿರುವ ಛಲವಾದಿ ಗುರು ಪೀಠದ ಜಮೀನನ್ನು ಹೊಸ ತಿದ್ದುಪಡಿ ಮೂಲಕ ಛಲವಾದಿ ಮಹಾಸಭಾ ಛಲವಾದಿ ಗುರುಪೀಠದ ಟ್ರಸ್ಟ್‌ಗೆ ಹಸ್ತಾಂತರಿಸಲಾಗಿದೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜೂನ್ 11 | ಹತ್ತಿ ರೇಟ್ ಎಷ್ಟಿದೆ?
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಛಲವಾದಿ ಸಮಾಜದ ಮುಖಂಡರ ಸಭೆಯಲ್ಲಿ ಗುರುಪೀಠದ ಜಮೀನನ್ನು ಟ್ರಸ್ಟ್‌ಗೆ ವರ್ಗಾಯಿಸಿ ನಂತರ ಮಾತನಾಡಿದ ಶ್ರೀ ಬಸವನಾಗಿದೇವ ಸ್ವಾಮೀಜಿ, ಇದೊಂದು ಐತಿಹಾಸಕ ತೀರ್ಮಾನ ಎಂದರು.
ಮನಃಪೂರ್ವಕವಾಗಿ ಜಮೀನನ್ನು ಟ್ರಸ್ಟ್‌ಗೆ ಹಸ್ತಾಂತರಿಸಿದ್ದೇನೆ. ಇನ್ನು ಮುಂದೆ ಮಠದ ಅಭಿವೃದ್ದಿ ಕಾರ್ಯಗಳು ಸುಸೂತ್ರವಾಗಿ ನಡೆಯಲು ನನ್ನದೇನು ತಕರಾರಿಲ್ಲ. ನೆಲಮಂಗಲದ ಬಳಿ ಸರ್ಕಾರ 32 ಗುಂಟೆ ಜಮೀನನ್ನು ಗುರುಪೀಠಕ್ಕೆ ನೀಡಿದೆ.
ಅಲ್ಲಿ ಶಾಖಾ ಮಠ ಕಟ್ಟಲು ನಿಮ್ಮೆಲ್ಲರ ಸಹಕಾರ ಮುಖ್ಯ. ಜಮೀನು ಹಸ್ತಾಂತರಕ್ಕೆ ಸಂಬಂಧಿಸಿದಂತೆ ಜನಾಂಗದ ಹಿರಿಯರಾದ ಮಾಜಿ ರಾಜ್ಯಸಭೆ ಸದಸ್ಯ ಹೆಚ್.ಹನಮಂತಪ್ಪ ಸೇರಿದಂತೆ ಅನೇಕರು ನನ್ನ ಜೊತೆ ಹಲವಾರು ಬಾರಿ ಚರ್ಚಿಸಿದ್ದರ ಪರಿಣಾಮವಾಗಿ ಸುದಿನ ಕೂಡಿ ಬಂದಿದೆ ಎಂದರು.
ಇದನ್ನೂ ಓದಿ: ಡಿಪ್ಲೋಮಾ ಲ್ಯಾಟರಲ್ ಪ್ರವೇಶ | ಅರ್ಜಿ ಆಹ್ವಾನ
ರಾಜ್ಯಸಭೆ ಮಾಜಿ ಸದಸ್ಯ ಹಾಗೂ ಛಲವಾದಿ ಮಹಾಸಭಾ ಗುರುಪೀಠದ ಟ್ರಸ್ಟ್ ಗೌರವಾಧ್ಯಕ್ಷ ಹೆಚ್.ಹನುಮಂತಪ್ಪ ಮಾತನಾಡಿ, ಡಿ.ವಿ.ಸದಾನಂದಗೌಡರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಹದಿನೇಳು ಮಠಗಳಿಗೆ ಹಣ ಮಂಜೂರು ಮಾಡಿಸಿದ್ದೆ. ನಮ್ಮ ಜನಾಂಗದ ಮಠ ಉಳಿದ ಎಲ್ಲಾ ಮಠಗಳಂತೆ ಅಭಿವೃದ್ದಿಯಾಗಬೇಕೆಂಬುದು ನನ್ನ ಆಸೆ. ಇನ್ನು ಮುಂದಾದರೂ ಮುನಿಸು, ಭಿನ್ನಾಭಿಪ್ರಾಯ ಬೇಡ. ಸರ್ಕಾರಕ್ಕೆ ವಾಪಸ್ ಹೋಗಿರುವ ಐದುವರೆ ಕೋಟಿ ರೂ. ಅನುದಾನವನ್ನು ಮರಳಿ ಪಡೆದುಕೊಂಡು ಮಠ ಕಟ್ಟೋಣ ಎಂದು ಹೇಳಿದರು.
ಛಲವಾದಿ ಮಹಾಸಭಾ ಗುರುಪೀಠದ ಟ್ರಸ್ಟ್ ಅಧ್ಯಕ್ಷ ಎನ್.ಲಕ್ಷ್ಮಿನರಸಯ್ಯ ಮಾತನಾಡಿ, ಹತ್ತು ವರ್ಷಗಳ ಬಳಿಕ ಜಮೀನು ಹೊಸ ತಿದ್ದುಪಡಿಯೊಂದಿಗೆ ಟ್ರಸ್ಟ್ ನೊಂದಣಿ ಮಾಡಿಸುತ್ತಿರುವುದು ಸಂತೋಷವೆನಿಸುತ್ತಿದೆ. ಸರ್ಕಾರಕ್ಕೆ ಹಿಂದಿರುಗಿರುವ ಅನುದಾನವನ್ನು ಮರಳಿ ತರಲು ಜನಾಂಗದ ಹಿರಿಯರಾದ ಹೆಚ್.ಹನುಮಂತಪ್ಪನವರ ಪರಿಶ್ರಮ ಬೇಕು ಎಂದರು.
ನೆಲಮಂಗಲದ ಬಳಿ ಸರ್ಕಾರ ಮಂಜೂರು ಮಾಡಿರುವ 32 ಗುಂಟೆ ಜಮೀನಿನಲ್ಲಿ ಶಾಖಾ ಮಠ ಕಟ್ಟಲು ಸಮಾಜದ ಎಲ್ಲರೂ ಸಹಾಯ ಹಸ್ತ ಚಾಚುವಂತೆ ಮನವಿ ಮಾಡಿದರು.
ಟ್ರಸ್ಟ್ ಖಜಾಂಚಿ ಹೆಚ್.ಸಿ.ನಿರಂಜನಮೂರ್ತಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಹಿರಿಯರು ಎಷ್ಟು ಸಂತೋಷ ಪಟ್ಟರೋ ಅದಕ್ಕಿಂತಲೂ ಈಗ ಹೆಚ್ಚಿನ ಖುಷಿಯಾಗಿದೆ. ಬಸವನಾಗಿದೇವಸ್ವಾಮೀಜಿ ಗುರುಪೀಠದ ಹೆಸರಿನಲ್ಲಿದ್ದ ಜಮೀನನ್ನು ಟ್ರಸ್ಟ್‌ಗೆ ಹಸ್ತಾಂತರಿಸಿ ನೊಂದಾಯಿಸಿರುವುದು ನಮಗೆಲ್ಲರಿಗೂ ಸಮಾಧಾನ ತಂದಿದೆ.
ಇದನ್ನೂ ಓದಿ: ದೃಶ್ಯಕಲಾ ಕಾಲೇಜು ಪ್ರವೇಶಕ್ಕೆ ಅರ್ಜಿ ಆಹ್ವಾನ
ಸರ್ಕಾರದಿಂದ ಮಂಜೂರಾಗಿರುವ ಹಣ ಪಡೆದುಕೊಳ್ಳದಿದ್ದರೆ ನಮಗಿಂತಲೂ ನತದೃಷ್ಟರು ಮತ್ಯಾರು ಇಲ್ಲ. ಎಲ್ಲರೂ ಸೇರಿ ಒಮ್ಮತಕ್ಕೆ ಬಂದ ಮೇಲೆ ಮಠದ ಅಭಿವೃದ್ದಿಗೆ ಶ್ರಮಿಸೋಣ ಎಂದರು.
ಟ್ರಸ್ಟ್ ಕಾರ್ಯದರ್ಶಿ ಜಿ.ಹೆಚ್.ಮೋಹನ್, ಉಪಾಧ್ಯಕ್ಷ ಡಾ.ಪಿ.ವಿ.ಶ್ರೀಧರಮೂರ್ತಿ, ಸಹ ಕಾರ್ಯದರ್ಶಿ ನಟರಾಜ್, ಟ್ರಸ್ಟಿಗಳಾದ ಗುರುಮೂರ್ತಿ, ಎಸ್.ಎನ್.ರವಿಕುಮಾರ್, ನಾಗರಾಜ್, ನ್ಯಾಯವಾದಿಗಳಾದ ಬಸವರಾಜ್, ಪರಮೇಶ್ ಹಾಗೂ ಲಕ್ಷ್ಮಣ, ಮಂಜುಳಮ್ಮ ಇತರರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

