CHITRADURGA NEWS | 24 JULY 2026
ಹೊಳಲ್ಕೆರೆ: ತಾಲೂಕಿನ ಚಿಕ್ಕೆನಹಳ್ಳಿ ಗ್ರಾಮದಲ್ಲಿ 3 ಕೋಟಿ ವೆಚ್ಚದ ನೂತನ ಸಿ.ಸಿ.ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿಪೂಜೆ ಸಲ್ಲಿಸಿದರು.
ಇದನ್ನೂ ಓದಿ: ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಖಂಡನೀಯ | ಶಾಸಕ ಟಿ.ರಘುಮೂರ್ತಿ
ನಂತರ ಮಾತನಾಡಿ ಶಾಸಕರು, ನೂರು ಕಿ.ಮೀ. ದೂರದಲ್ಲಿರುವ ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ತಂದು ಪ್ರತಿ ಮನೆ ಮನೆಗೂ ಶುದ್ದ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಫಿಲ್ಟರ್‍ಗೆ 60 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದೇನೆಂದು ತಿಳಿಸಿದರು.
ನಿಮ್ಮ ಗ್ರಾಮಕ್ಕೆ ಶಾಲೆ, ದೇವಸ್ಥಾನ, ಸಿ.ಸಿ.ರಸ್ತೆ, ಕುಡಿಯುವ ನೀರು ಕೊಟ್ಟಿದ್ದೇನೆ. ಎಲ್ಲಾ ಹಳ್ಳಿಗಳಿಗೆ ಕುಡಿಯುವ ನೀರು ಕೊಡಲು 130 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುವುದು. ವಾಣಿವಿಲಾಸಸಾಗರದಲ್ಲಿ ಮೆಷಿನರಿ, ಪೈಪ್‍ಲೈನ್ ಅಳವಡಿಸಲಾಗಿದೆ. ಜಲಜೀವನ್ ಮಿಷನ್ ಪೈಪ್‍ಲೈನ್ ಹಾಕಿದ ತಕ್ಷಣ ಸಿ.ಸಿ.ರಸ್ತೆ, ಚರಂಡಿ ಮಾಡಿಸುತ್ತೇನೆಂದು ಹೇಳಿದರು.
ರೈತರಿಗೆ ತೊಂದರೆಯಾಗಬಾರದೆಂದು ಎಲ್ಲಾ ಕೆರೆಗಳಿಗೆ ನೀರು ತುಂಬಿಸುತ್ತೇನೆ. ಅಜ್ಜಪ್ಪನಹಳ್ಳಿ ಬಳಿ 250 ಕೋಟಿ ರೂ.ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ಕಟ್ಟಿಸಲಾಗುತ್ತಿದ್ದು, ಮುಕ್ಕಾಲು ಭಾಗ ಕೆಲಸ ಮುಗಿದಿದೆ.
ಇದನ್ನೂ ಓದಿ: ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿಗೆ ಇನ್ನೋವ ಕಾರು ಗಿಫ್ಟ್ ನೀಡಿದ ಭಕ್ತ
ಬಡ ಮಕ್ಕಳು ಶಿಕ್ಷಣವಂತರಾಗಲೆಂದು ನನ್ನ ಅನುದಾನದಲ್ಲಿ ಸರ್ಕಾರಿ ಶಾಲೆಗೆ ಬಸ್‍ಗಳನ್ನು ಕೊಟ್ಟಿದ್ದೇನೆ. ದಿನನಿತ್ಯವೂ ಬಸ್ ಮನೆ ಬಾಗಿಲಿಗೆ ಹೋಗಿ ಮಕ್ಕಳನ್ನು ಕರೆತಂದು ಗುಣ ಮಟ್ಟದ ಶಿಕ್ಷಣ ನೀಡಿ, ಸಂಜೆ ಸುರಕ್ಷಿತವಾಗಿ ಮನೆಗೆ ತಲುಪಿಸಲಾಗುವುದೆಂದರು.
ಮುಂದಿನ ದಿನಗಳಲ್ಲಿ ಬಡವರ ಗುಡಿಸಲುಗಳನ್ನು ತೆಗೆಸಿ ಮನೆಗಳನ್ನು ಕಟ್ಟಿಸಿಕೊಡಲಾಗುವುದು. ಬಿಟ್ಟು ಹೋಗಿರುವ ರಸ್ತೆಗಳಿಗೆ ಇನ್ನು ಹತ್ತು ಕೋಟಿ ರೂ.ಗಳನ್ನು ಬಿಡುಗಡೆಗೊಳಿಸುವುದಾಗಿ ಶಾಸಕ ಡಾ.ಎಂ.ಚಂದ್ರಪ್ಪ ಭರವಸೆ ನೀಡಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜುಲೈ 23 | ಹತ್ತಿ ರೇಟ್ ಎಷ್ಟಿದೆ?
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೋಹನ್, ಗೌಡ್ರು ಮಾದೇವಣ್ಣ, ಮುಶ್ರಫ್, ಷಣ್ಮುಖಪ್ಪ, ತಿಪ್ಪೇಸ್ವಾಮಿ, ನಾಗರಾಜ್, ಪಂಚಾಕ್ಷರಿ, ಮಂಜಣ್ಣ, ಮಾಲತೇಶ್, ರಾಜಣ್ಣ ಹಾಗೂ ಗ್ರಾಮದ ಮುಖಂಡರುಗಳು ಹಾಜರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

