CHITRADURGA NEWS | 23 JULY 2026
ಚಿತ್ರದುರ್ಗ: ಯಕ್ಷಗಾನ ತಾಳಮದ್ದಳೆ ಎಂಬುದು ಕೇವಲ ಮನರಂಜನೆಯ ಕಲೆಯಲ್ಲ, ಬದಲಾಗಿ ಅದು ನಮ್ಮ ಸಂಸ್ಕೃತಿ, ಪರಂಪರೆ, ಧಾರ್ಮಿಕ ಮೌಲ್ಯಗಳು ಹಾಗೂ ಜೀವನದ ಆದರ್ಶಗಳನ್ನು ಜನರಿಗೆ ತಲುಪಿಸುವ ಅಪರೂಪದ ಕಲಾ ಪ್ರಕಾರವಾಗಿದೆ ಎಂದು ರೋಟರಿ ಕ್ಲಬ್ ಆಫ್ ಚಿತ್ರದುರ್ಗ ಅಧ್ಯಕ್ಷ ಯೋಗೀಶ್ ಸಹ್ಯಾದ್ರಿ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಬರದ ನಾಡಲ್ಲಿ ಮುಖ್ಯಮಂತ್ರಿ ಪ್ರಗತಿ ಪರಿಶಿಲನಾ ಸಭೆ | ಅನುಭವ ಮಂಟಪದಲ್ಲಿ ಭರದ ತಯಾರಿ
ರೋಟರಿ ಕ್ಲಬ್ ಆಫ್ ಚಿತ್ರದುರ್ಗ, ಯಕ್ಷ ಕಲಾ ಬಳಗ, ಚಿತ್ರದುರ್ಗ, ಹಾಗೂ ಫಾಟಕ್ ಯಕ್ಷ ಸಂಸ್ಕೃತಿ ಟ್ರಸ್ಟ್, ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,
ವೇಷಭೂಷಣ ಮತ್ತು ನೃತ್ಯವಿಲ್ಲದೆ ಕೇವಲ ಭಾಗವತರ ಗಾಯನ, ಚಂಡೆಮದ್ದಳೆಯ ನಾದ ಹಾಗೂ ಅರ್ಥಪೂರ್ಣ ಸಂವಾದಗಳ ಮೂಲಕ ಪುರಾಣ ಕಥೆಗಳನ್ನು ಜೀವಂತವಾಗಿ ಪ್ರಸ್ತುತಪಡಿಸುವ ವಿಶಿಷ್ಟ ಕಲಾರೂಪವೇ ತಾಳಮದ್ದಳೆ. ಇದು ಕಲಾವಿದರ ಜ್ಞಾನ, ವಾಕ್ಚಾತುರ್ಯ, ಸಾಹಿತ್ಯಪ್ರಜ್ಞೆ ಮತ್ತು ತಕ್ಷಣದ ವಿಚಾರಶಕ್ತಿಯನ್ನು ಅನಾವರಣಗೊಳಿಸುವ ಅದ್ಭುತ ವೇದಿಕೆಯಾಗಿದೆ.
ಭಕ್ತ ಮಯೂರ ಧ್ವಜ, ಪ್ರಸಂಗವು ಭಕ್ತಿ, ತ್ಯಾಗ, ಸತ್ಯನಿಷ್ಠೆ ಮತ್ತು ಧರ್ಮಪಾಲನೆಯ ಶ್ರೇಷ್ಠ ಆದರ್ಶಗಳನ್ನು ಸಾರುವ ಅಮೂಲ್ಯ ಕಥೆಯಾಗಿದೆ. ಇಂತಹ ಪ್ರಸಂಗಗಳು ಸಮಾಜದಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಸಮಾಜ ಸೇವೆಯ ಜೊತೆಗೆ ನಮ್ಮ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮತ್ತು ಪ್ರೋತ್ಸಾಹಕ್ಕೂ ರೋಟರಿ ಸದಾ ಬದ್ಧವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜುಲೈ 23 | ಹತ್ತಿ ರೇಟ್ ಎಷ್ಟಿದೆ?
ಪ್ರಾಸ್ತಾವಿಕವಾಗಿ ಚಿತ್ರದುರ್ಗ ಯಕ್ಷ ಕಲಾ ಬಳಗದ ಅಧ್ಯಕ್ಷ ಅನಂತಕೃಷ್ಣ ಮಾತನಾಡಿದರು.
ಈ ಸಂದರ್ಭದಲ್ಲಿ ಫಾಟಕ್ ಯಕ್ಷ ಸಂಸ್ಕೃತಿ ಟ್ರಸ್ಟ್ ನ ಸಂಯೋಜಕ ವಿದ್ವಾನ್ ಅನಂತ ಪದ್ಮನಾಭ ಫಾಟಕ್, ರೋಟರಿ ಕ್ಲಬ್ ಚಿತ್ರದುರ್ಗ ಕಾರ್ಯದರ್ಶಿ ಕೆ.ಜಿ.ಮಂಜುನಾಥ್, ಎಂ.ಆರ್.ಲಕ್ಷ್ಮಣ್, ಸಾಹಿತಿ ಬಿ. ರಾಜಶೇಖರಪ್ಪ, ಇನ್ನರ್ ವೀಲ್ ಕ್ಲಬ್ ಆಫ್ ಚಿತ್ರದುರ್ಗ ಅಧ್ಯಕ್ಷೆ ರಾಧಾ ಸತೀಶ್, ಕಲಾವಿದರಾದ ಅನಂತ ಹೆಗಡೆ ದಂತಳಿಗೆ, ವಿಶ್ವೇಶ್ವರ ಭಟ್ ಸುಣ್ಣಂಬಳ, ರಾಧಾಕೃಷ್ಣ ಕಲ್ಚಾರ್, ವಾಸುದೇವ ರಂಗಭಟ್, ಗಣೇಶ ಭಟ್ ಸುಂಕಸಾಳ, ಸುಹಾಸ್ ಮರಾಠೆ ಹಾಗೂ ಅನೇಕ ಸಾಹಿತ್ಯಾಸಕ್ತರು, ಕಲಾಭಿಮಾನಿಗಳು ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

