CHITRADURGA NEWS | 30 JUNE 2026
ಹೊಸದುರ್ಗ: ಶಿಕ್ಷಣದಿಂದ ಮಾತ್ರ ಬದುಕಿನ ಸುಧಾರಣೆ, ಸಾಮಾಜಿಕ ನ್ಯಾಯ ಪಡೆಯಬಹುದು ಹಾಗೂ ಮೌಡ್ಯ ಕಂದಾಚಾರದಿಂದ ದೂರವಿದ್ದು ಸಮಾಜವನ್ನು ಉನ್ನತಿಗೆ ಕೊಂಡೊಯ್ಯಲು ಶಿಕ್ಷಣ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದು ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠದ ಶಾಂತವೀರ ಶ್ರೀ ಹೇಳಿದರು.
ಇದನ್ನೂ ಓದಿ: ಅರಿವು ಶೈಕ್ಷಣಿಕ ಸಾಲಕ್ಕೆ ಅರ್ಜಿ ಆಹ್ವಾನ
ಹೊಸದುರ್ಗದ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ನಡೆದ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಉಪನ್ಯಾಸ ಹಾಗೂ ಸ್ವಾಗತ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಉನ್ನತಿ ಕಾಣಬೇಕು, ಶ್ರೇಷ್ಠ ಮನಸುಗಳಿಗೆ ಜ್ಞಾನವೇ ಆಹಾರ ಹಾಗಾಗಿ ವಿದ್ಯಾರ್ಥಿಗಳು ಜ್ಞಾನದ ಅನ್ವೇಷಣೆಯಲ್ಲಿ ಸದಾ ತಲ್ಲಿನರಾಗಬೇಕು.
ಸ್ನೇಹಿತರನ್ನು ಹಣಕೊಟ್ಟಾದರೂ ಪಡೆಯಬೇಕು, ದುಷ್ಟ ಸ್ನೇಹಿತರನ್ನು ಹಣಕೊಟ್ಟಾದರೂ ದೂರ ಮಾಡಬೇಕು, ಸತತ ಪರಿಶ್ರಮ ಮೇರುಮಟ್ಟಕ್ಕೆ ಮುಟ್ಟಿಸುತ್ತದೆ. ಶಿಕ್ಷಣ ಎಂದರೆ ಕೇವಲ ಅಂಕ ಗಳಿಕೆಯೆಲ್ಲಾ ನೈತಿಕ ಶಿಕ್ಷಣದೊಂದಿಗೆ ಜವಾಬ್ದಾರಿಯುತ ಮೌಲ್ಯಗಳನ್ನು ಅನುಸರಿಸುವ ಆದರ್ಶ ಶಿಕ್ಷಣದ ಅಗತ್ಯವಿದೆ. ಜೀವನೋತ್ಸಹಕ್ಕೆ ಆತ್ಮಬಲಕ್ಕೆ ನೈತಿಕ ಶಿಕ್ಷಣ ಅಗತ್ಯವಾಗಿ ಬೇಕಾಗಿದೆ ಎಂದರು.
ಸಮಾರಂಭ ಉದ್ಘಾಟಿಸಿದ ಸಾಣೇಹಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಕಾಂತರಾಜುರವರು ಕಾಂತರಾಜ್ ಮಾತನಾಡಿ, ವಿದ್ಯಾರ್ಥಿಗಳು ಸರಿಯಾದ ದಾರಿಯಲ್ಲಿ ಸಾಗಿ ಏಕಾಗ್ರತೆಯಿಂದ ಅಧ್ಯಯನ ಮಾಡಬೇಕು. ಸಮಾಜದ ಉನ್ನತಿಗೆ ವಿದ್ಯಾರ್ಥಿಗಳ ಕೊಡುಗೆ ಅಪಾರ.
ಇದನ್ನೂ ಓದಿ: ಹವಾಮಾನ ಆಧಾರಿತ ಬೆಳೆ ವಿಮೆ | ನೋಂದಣಿಗೆ ಜುಲೈ 31 ಕೊನೆದಿನ
ಮುಂದಿನ ಜನನಾಯಕರಾಗಬೇಕಾದ ಜವಾಬ್ದಾರಿ ಸ್ಥಾನಗಳನ್ನು ನಿರ್ವಹಿಸಬೇಕಾದ ವಿದ್ಯಾರ್ಥಿಗಳು ಪರಿಪೂರ್ಣವಾಗಿ ತಯಾರಾಗಬೇಕು. ಶಿಸ್ತು, ಸಂಯಮ ಬದುಕಿಗೆ ಅತ್ಯಂತ ಅಗತ್ಯ. ಶಿಕ್ಷಣದ ಜೊತೆ ಜೊತೆಗೆ ಸಂಸ್ಕಾರವನ್ನು ಕಲಿತು, ಗುರು ಹಿರಿಯರನ್ನು ಗೌರವದಿಂದ ಕಾಣುವಂತರಾಗಬೇಕು ಎಂದರು.
ಮದುರೆ ಪದವಿ ಪೂರ್ವ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಸುರೇಶ್ ಉಪನ್ಯಾಸ ನೀಡಿದರು.
ಕಾಲೇಜಿನ ಪ್ರಾಚಾರ್ಯರಾದ ಹನುಮಂತಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನೇತ್ರಾವತಿ, ಚನ್ನರಾಯಪ್ಪ, ಇಸ್ಮೈಲ್ ಮನೋಹರ್, ವಸಂತ್ ಕುಮಾರ್, ರಜನಿ ಶ್ರೀನಿವಾಸ್, ತಿಮ್ಮಣ್ಣ ಇದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
