
CHITRADURGA NEWS | 19 JUNE 2026
ಹೊಳಲ್ಕೆರೆ: ಮಲೆನಾಡು ಕಡೆ ಹೆಚ್ಚು ಮಳೆಯಾದರೆ ಇನ್ನು ಮೂರು ತಿಂಗಳಲ್ಲಿ ತಾಲ್ಲೂಕಿನಲ್ಲಿರುವ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವುದಾಗಿ ಶಾಸಕ ಡಾ.ಎಂ.ಚಂದ್ರಪ್ಪ ಭರವಸೆ ನೀಡಿದರು.

ಇದನ್ನೂ ಓದಿ: ಕಾಗಾಜ್ ಫೌಂಡೇಶನ್ ವತಿಯಿಂದ SSLC, PUC ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಹುಲೆಮಳಲಿ ಗ್ರಾಮದಲ್ಲಿ 70 ಲಕ್ಷ ರೂ.ವೆಚ್ಚದಲ್ಲಿ ನೂತನ ಸಿ.ಸಿ.ರಸ್ತೆ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.
3-4 ದಿನಗಳಲ್ಲಿ ನಿಮ್ಮ ಕೆರೆಗಳಿಗೆ ನೀರು ಕೊಡಬೇಕೆಂದು ಪ್ರಯತ್ನ ಪಟ್ಟೆ. ಎಂಬತ್ತು ಅಡಿ ಚಾನಲ್ ತೆಗೆಯಬೇಕು. ಅಲ್ಲಿ ಬೃಹಧಾಕಾರದ ಬಂಡೆಗಳಿವೆ. ದೊಡ್ಡ ದೊಡ್ಡ ಇಟಾಚಿ, ಲಾರಿಗಳನ್ನಿಟ್ಟು ಬಂಡೆಗಳನ್ನು ಬ್ಲಾಸ್ಟ್ ಮಾಡುವ ಕೆಲಸ ನಡೆಯುತ್ತಿದೆ. ಮೊದಲು ನೀರು ಬರುವುದೇ ಹೊಳಲ್ಕೆರೆಗೆ.
170 ಬೋರ್‍ಗಳನ್ನು ಕೊರೆಸಿದ್ದೇನೆ. ಸರ್ಕಾರದಲ್ಲಿ ಹಣವಿಲ್ಲ. ಮಳೆ ಕೈಕೊಟ್ಟಿದೆ. ನಯಾ ಪೈಸೆ ಅನುದಾನ ಬಂದಿಲ್ಲ. ಕುಡಿಯುವ ನೀರಿಗೆ ಸಮಸ್ಯೆಯಾಗಬಾರದೆಂದು ಪ್ರತಿನಿತ್ಯ ಎರಡು ಮೂರು ಬೋರ್‍ವೆಲ್‍ಗಳನ್ನು ಕೊರೆಸುತ್ತಿದ್ದೇನೆಂದು ಹೇಳಿದರು.
ಚಿಕ್ಕಜಾಜೂರಿನ ಕೋಟೆಹಾಳ್ ಸಮೀಪ ಹದಿಮೂರುವರೆ ಎಕರೆ ಪ್ರದೇಶದಲ್ಲಿ ಐದು ನೂರು ಕೋಟಿ ರೂ.ವೆಚ್ಚದಲ್ಲಿ 450 ಕೆ.ವಿ. ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣವಾಗುತ್ತಿದೆ. ಜೋಗ್‍ಫಾಲ್ಸ್‍ನಿಂದ ಇಲ್ಲಿಗೆ ನೇರವಾಗಿ ವಿದ್ಯುತ್ ಪೂರೈಕೆಯಾಗಲಿದೆ. ಇದರಿಂದ ಇನ್ನು ಐವತ್ತು ವರ್ಷಗಳ ಕಾಲ ರೈತರಿಗೆ ಕರೆಂಟ್ ಸಮಸ್ಯೆಯಿರುವುದಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ | 4 ಬೈಕುಗಳು ವಶಕ್ಕೆ
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತಿಪ್ಪೇಸ್ವಾಮಿ, ಡಿ.ಸಿ.ಮೋಹನ್, ಗೋವಿಂದಸ್ವಾಮಿ, ಅಜ್ಜಯ್ಯ, ಷಣ್ಮುಖಪ್ಪ, ರಾಜಕುಮಾರ, ತಿಪ್ಪೇಸ್ವಾಮಿ, ರುದ್ರಪ್ಪ, ದೇವರಾಜಯ್ಯ, ಮರುಳಸಿದ್ದಪ್ಪ, ಸುಧಾಕರ್ ಹಾಗೂ ಗ್ರಾಮದ ಮುಖಂಡರುಗಳು ಹಾಜರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
