CHITRADURGA NEWS | 19 JUNE 2026
ಚಿತ್ರದುರ್ಗ: ಮೈಸೂರಿನ ಸಿದ್ದಾರ್ಥನಗರದಲ್ಲಿರುವ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ) ವತಿಯಿಂದ 2026-27ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಬ್ಯಾಚುಲರ್ ಆಫ್ ವಿಶ್ಯುಯಲ್ ಆರ್ಟ್ಸ್ (ಬಿ.ವಿ.ಎ.) ಪದವಿ ಪ್ರವೇಶಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ: ಕೋಟ್ಯಾಂತರ ವಂಚನೆ | ಚಿತ್ರದುರ್ಗದ 470 ಮಹಿಳೆಯರಿಗೆ ಮೋಸ | ಆಂಧ್ರ ಮೂಲದ ಕಂಪನಿ ವಿರುದ್ಧ ದೂರು ದಾಖಲು
ಮೈಸೂರು ವಿಶ್ವವಿದ್ಯಾನಿಲಯದ ಪ್ರವೇಶಾತಿ ಅಧಿಸೂಚನೆಯನ್ವಯ, ರಾಜ್ಯ ಶಿಕ್ಷಣ ಪದ್ಧತಿ ಅಡಿಯಲ್ಲಿ ನಾಲ್ಕು ವರ್ಷಗಳ ಎಂಟು ಸೆಮಿಸ್ಟರ್‌ಗಳ ಈ ಪದವಿ ಕೋರ್ಸ್ಗೆ ಪ್ರವೇಶ ಬಯಸುವ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಕೋರ್ಸ್ಗಳಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಯುಯುಸಿಎಂಎಸ್ (UUCMS) ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಚಿತ್ರಕಲೆ (Painting), ಶಿಲ್ಪಕಲೆ (Sculpture),ಗ್ರಾಫಿಕ್ಸ್ (Graphics),ಅನ್ವಯಕಲೆ (Applied Art), ಕಲಾ ಇತಿಹಾಸ (Art History) ಛಾಯಾಚಿತ್ರ ಮತ್ತು ಛಾಯಾಚಿತ್ರ ಪತ್ರಿಕೋದ್ಯಮ (Photography & Photojournalism) ಪದವಿ ಕೋರ್ಸ್ಲ್ ಲಭ್ಯವಿವೆ.
ಜೂನ್ 12 ಅರ್ಜಿ ಸಲ್ಲಿಸಲು ಕೊನೆಯ ದಿನ, ಆಸಕ್ತರುವ https://uucms.karnataka.gov.in ಅಧಿಕೃತ ಜಾಲತಾಣದಲ್ಲಿ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: ಮುಂಗಾರು ಹಂಗಾಮು ಬೆಳೆ ವಿಮೆ | ರೈತರ ನೋಂದಣಿಗೆ ಅವಕಾಶ
ಪ್ರವೇಶಾತಿ ಕೋರಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ದಿನಾಂಕ 23-06-2026 ರಂದು ಅರ್ಹತಾ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನವನ್ನು ನಡೆಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಕಚೇರಿ ವೇಳೆಯಲ್ಲಿ ಕಾಲೇಜಿನ ದೂರವಾಣಿ ಸಂಖ್ಯೆ 0821-2438931 ಸಂಪರ್ಕಿಸಬಹುದು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

