CHITRADURGA NEWS | 14 FEBRUARY 2026
ಚಿತ್ರದುರ್ಗ: ಜಿಲ್ಲೆಯ ಜನರ ಜೀವನಾಡಿ ಎಂದೇ ಹೆಸರಾಗಿರುವ ವಾಣಿವಿಲಾಸ ಸಾಗರ ಜಲಾಶಯದಿಂದ ಹಿರಿಯೂರು ತಾಲೂಕಿನ ಅಚ್ಚುಕಟ್ಟು ಪ್ರದೇಶಗಳಿಗೆ ಬೇಸಿಗೆ ಕಾಲದ ನೀರು ಹರಿಸಲಾಗುತ್ತಿದೆ.
ಸತತ ಒಂದು ತಿಂಗಳ ಕಾಲ ವಿವಿ ಸಾಗರದಿಂದ ನೀರು ಹರಿಯಲಿದ್ದು, ಅಚ್ಚುಕಟ್ಟು ಭಾಗದಲ್ಲಿ ಕೃಷಿ ಚಟುವಟಿಕೆಗಳು ಚುರುಕು ಪಡೆದುಕೊಳ್ಳಲಿವೆ.
ಈ ಭಾಗದ ರೈತರ ಬೇಡಿಕೆ ಅನುಸಾರ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಚರ್ಚೆ ನಡೆಸಿ ಜಲಾಶಯ ಮುಂಭಾಗದ ಎರಡು ನಾಲೆಗಳ ಮೂಲಕ ನೀರು ಹರಿಸಲು ತೀರ್ಮಾನಿಸಿದ್ದಾರೆ.
ಎಲ್ಲೆಲ್ಲಿವೆ ನಾಲೆಗಳು, ಯಾವೆಲ್ಲಾ ಊರಿಗೆ ನೀರು ತಲುಪಲಿದೆ:
ವಿವಿ ಸಾಗರ ಡ್ಯಾಂನಿಂದ ಮುಂಭಾಗದಲ್ಲಿರುವ ಕಾತ್ರಿಕೇನಹಳ್ಳಿ ಬಳಿಯಿರುವ ಅಣೆಕಟ್ಟಿನಿಂದ ಎಡನಾಲೆ ವಿಂಗಡಣೆಯಾಗಲಿದ್ದು, ಇಲ್ಲಿಂದ ಸುಮಾರು 48 ಕಿ.ಮೀ ಮುಂದಕ್ಕೆ ನೀರು ಹರಿಯಲಿದೆ.
ಕುಂದಲಗುರ ಬಳಿ ಬಲನಾಲೆ ಹರಿಯಲಿದ್ದು, ಇದರಲ್ಲಿ 46 ಕಿ.ಮೀ ದೂರದ ಬಿದರಕೆರೆವರೆಗೆ ನೀರು ಹರಿಯುತ್ತದೆ.
ಪ್ರತಿ ದಿನ ಎಷ್ಟು ನೀರು ಹೊರಕ್ಕೆ:
ಜಲಾಶಯದಿಂದ ಪ್ರತಿ ದಿನ 500 ರಿಂದ 600 ಕ್ಯೂಸೆಕ್ ನೀರು ನಾಲೆಗಳಿಗೆ ಹರಿಯಲಿದೆ. ಬೇಸಿಗೆ ಹಂಗಾಮಿನಲ್ಲಿ ಅಚ್ಚುಕಟ್ಟು ಪ್ರದೇಶದಲ್ಲಿ ನೀರು ಹರಿಯುವುದರಿಂದ ತೋಟಗಾರಿಕೆ ಬೆಳೆಗಳಿಗೆ ಅನುಕೂಲ ಆಗುವ ಜೊತೆಗೆ ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ, ರಾಗಿ ಇನ್ನಿತರೆ ಬೆಳೆಗಳಿಗೂ ಅನುಕೂಲವಾಗಲಿದೆ.
ಜಲಾಶಯದಲ್ಲಿ ಸದ್ಯ ಎಷ್ಟು ನೀರಿದೆ:
ವಾಣಿವಿಲಾಸ ಸಾಗರ ಜಲಾಶಯದಲ್ಲಿ ಬಳಕೆಗೆ ಲಭ್ಯವಿರುವ ನೀರಿನ ಪ್ರಮಾಣ 27.965 ಟಿಎಂಸಿ ಅಂದರೆ 129.30 ಅಡಿವರೆಗೆ ನೀರಿದೆ.
ಇದರಲ್ಲಿ ಹಿರಿಯೂರು, ಚಳ್ಳಕೆರೆ, ಚಿತ್ರದುರ್ಗ ನಗರ ಹಾಗೂ ಸಂಶೋಧನಾ ಕೇಂದ್ರಗಳ ಬಳಕೆ ಹಾಗೂ 18 ಹಳ್ಳಿಗಳ ಬಹುಗ್ರಾಮ ಕುರಿಯುವ ನೀರಿಗೆ 0.139 ಟಿಎಂಸಿ ಮೀಸಲಿದೆ.
ಅಚ್ಚುಕಟ್ಟು ಪ್ರದೇಶಕ್ಕೆ ಒಂದು ತಿಂಗಳ ಕಾಲ ನೀರು ಹರಿಸಿದರೆ 1.50 ಟಿಎಂಸಿ ಖರ್ಚಾಗುತ್ತದೆ. ಫೆಬ್ರವರಿಯಿಂದ ಮೇವರೆಗೆ ಬೇಸಿಗೆ ಬಿಸಲಿಗೆ ಆವಿಯಾಗುವ ನೀರಿನ ಪ್ರಮಾಣ 0.340 ಟಿಎಂಸಿ. ಒಟ್ಟಾರೆ 1.979 ಟಿಎಂಸಿ ನೀರು ಈ ಬೇಸಿಗೆಯಲ್ಲಿ ಖರ್ಚಾಗಲಿದೆ.
ಎಲ್ಲಾ ಮುಗಿದು ಜಲಾಶಯದಲ್ಲಿ 25.986 ಟಿಎಂಸಿ ಅಂದರೆ 126.95 ಅಡಿವರೆಗೆ ನೀರು ಉಳಿಕೆಯಾಗಲಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
