
CHITRADURGA NEWS | 27 AUGUST 2026
ಚಿತ್ರದುರ್ಗ: ಪ್ರತಿಯೊಬ್ಬರೂ ಮರಣಾನಂತರ ತಮ್ಮ ಕಣ್ಣುಗಳನ್ನು ದಾನ ಮಾಡುವ ಸಂಕಲ್ಪ ಮಾಡಬೇಕು. ನೇತ್ರದಾನದ ಮಹತ್ವದ ಸಂದೇಶವನ್ನು ಸಮಾಜಕ್ಕೆ ತಲುಪಿಸುವುದು ಅಗತ್ಯ ಎಂದು ಡಾ.ಅನುಶ್ರೀ ಹೇಳಿದರು.
ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚಿದ ಶೀತ, ಕೆಮ್ಮು, ಜ್ವರ | ಮುನ್ನೆಚ್ಚರಿಕೆ ವಹಿಸಲು ಜಿಲ್ಲಾ ಆರೋಗ್ಯ ಇಲಾಖೆ ಸೂಚನೆ
ನಗರದ ಚಳ್ಳಕೆರೆ ರಸ್ತೆಯಲ್ಲಿರುವ ಎಸ್ಒಎಸ್ ಮತ್ತು ಪಿಯು ಕಾಲೇಜ್ ಆಫ್ ಎಕ್ಸಲೆನ್ಸ್ ಸಭಾಂಗಣದಲ್ಲಿ ಬಸವೇಶ್ವರ ಪುನರ್ಜ್ಯೋತಿ ಐ ಬ್ಯಾಂಕ್ (ರಿ.), ಬಸವೇಶ್ವರ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಎಸ್ಒಎಸ್ ಮತ್ತು ಪಿಯು ಕಾಲೇಜ್ ಆಫ್ ಎಕ್ಸಲೆನ್ಸ್ ಸಹಯೋಗದಲ್ಲಿ 41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮರಣದ ನಂತರ ಮಾನವ ದೇಹವನ್ನು ಹೂಳಲಾಗುತ್ತದೆ ಅಥವಾ ಸುಡಲಾಗುತ್ತದೆ. ಕಣ್ಣುಗಳೂ ನಾಶವಾಗುತ್ತವೆ. ಆದರೆ ಅವುಗಳನ್ನು ದಾನ ಮಾಡಿದರೆ ಕುರುಡುತನದಿಂದ ಬಳಲುತ್ತಿರುವವರಿಗೆ ದೃಷ್ಟಿ ಮರಳಿ ಪಡೆಯಲು ಸಾಧ್ಯವಾಗುತ್ತದೆ. ಕತ್ತಲೆಯಲ್ಲಿ ಬದುಕುತ್ತಿರುವವರಿಗೆ ಬೆಳಕು ನೀಡುವುದು ಶ್ರೇಷ್ಠ ಸೇವೆಯಾಗಿದೆ. ನೇತ್ರದಾನವು ಕೇವಲ ದೇಹದ ಒಂದು ಅಂಗವನ್ನು ದಾನ ಮಾಡುವುದಲ್ಲ, ಬದಲಾಗಿ ಮತ್ತೊಬ್ಬರ ಜೀವನದಲ್ಲಿ ಭರವಸೆಯ ಬೆಳಕನ್ನು ಮೂಡಿಸುವ ಕಾರ್ಯವಾಗಿದೆ ಎಂದರು.
ನಟ ಪುನೀತ್ ರಾಜ್ಕುಮಾರ್ ಅವರಂತೆ ಪ್ರತಿಯೊಬ್ಬರೂ ನೇತ್ರದಾನ ಮಾಡುವ ಪ್ರತಿಜ್ಞೆ ಕೈಗೊಳ್ಳಬೇಕು. ದೇಶದಲ್ಲಿ ಕಾರ್ನಿಯಾ ಸಂಬಂಧಿತ ಅಂಧತ್ವದಿಂದ ಅನೇಕರು ಬಳಲುತ್ತಿದ್ದಾರೆ. ಮರಣಾನಂತರ ಕಣ್ಣುಗಳನ್ನು ದಾನ ಮಾಡುವ ಮೂಲಕ ಅನೇಕರಿಗೆ ದೃಷ್ಟಿ ನೀಡಬಹುದು. ನೇತ್ರದಾನದಿಂದ ದೃಷ್ಟಿ ಕಳೆದುಕೊಂಡವರ ಸ್ವಾವಲಂಬನೆ ಹಾಗೂ ಜೀವನಮಟ್ಟವನ್ನು ಸುಧಾರಿಸಲು ಸಾಧ್ಯ ಎಂದು ತಿಳಿಸಿದರು.
ಇದನ್ನೂ ಓದಿ: ಕಸಾಪ ಅಧ್ಯಕ್ಷ ಸ್ಥಾನಕ್ಕೆ ಜಾಣಗೆರೆ ವೆಂಕಟರಾಮಯ್ಯ ಸ್ಪರ್ಧೆ | ಎಸ್.ಜಿ.ಸಿದ್ದರಾಮಯ್ಯ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್ಒಎಸ್ ಮತ್ತು ಪಿಯು ಕಾಲೇಜ್ ಆಫ್ ಎಕ್ಸಲೆನ್ಸ್ ಅಧ್ಯಕ್ಷ ಪ್ರಶಾಂತ್ ವಿ.ಎಲ್. ಮಾತನಾಡಿ, ಮರಣದ ನಂತರ ಕಣ್ಣುಗಳನ್ನು ದಾನ ಮಾಡುವ ಮೂಲಕ ಮತ್ತೊಬ್ಬರ ಜೀವನದಲ್ಲಿ ಬೆಳಕು ಮೂಡಿಸಬಹುದು. ನೇತ್ರದಾನವೂ ಹೃದಯ, ಮೂತ್ರಪಿಂಡ ಹಾಗೂ ಯಕೃತ್ತಿನಂತಹ ಅಂಗಾಂಗ ದಾನದಷ್ಟೇ ಮಹತ್ವದ್ದಾಗಿದೆ ಎಂದರು.
ಬಸವೇಶ್ವರ ಪುನರ್ಜ್ಯೋತಿ ಐ ಬ್ಯಾಂಕ್ನ ಎಸ್.ವಿ. ಗುರುಮೂರ್ತಿ ಮಾತನಾಡಿ, ನೇತ್ರದಾನದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಮರಣಾನಂತರ ಕಣ್ಣು ದಾನ ಮಾಡಲು ಜನರನ್ನು ಪ್ರೋತ್ಸಾಹಿಸುವುದು ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಉದ್ದೇಶವಾಗಿದೆ.
1985ರಲ್ಲಿ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಈ ಅಭಿಯಾನ ಆರಂಭವಾಯಿತು. ಬಸವೇಶ್ವರ ಪುನರ್ಜ್ಯೋತಿ ಐ ಬ್ಯಾಂಕ್ ವತಿಯಿಂದ ಈವರೆಗೆ 2,675 ಕಣ್ಣುಗಳನ್ನು ಸಂಗ್ರಹಿಸಿ ಅಗತ್ಯವಿರುವವರಿಗೆ ಅಳವಡಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಹಿಂದೂ ಮಹಾಗಣಪತಿ ಮಹೋತ್ಸವಕ್ಕೆ ಗೋಪೂಜೆ, ಧ್ವಜಪೂಜೆ ಮೂಲಕ ಚಾಲನೆ
ಟಿ. ವೀರಭದ್ರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಆಗಸ್ಟ್ 25ರಿಂದ ಸೆಪ್ಟೆಂಬರ್ 8ರವರೆಗೆ ನಡೆಯುವ ರಾಷ್ಟ್ರೀಯ ನೇತ್ರದಾನ ಪಾಕ್ಷಿಕವು ಕಾರ್ನಿಯಾ ದಾನದ ಕುರಿತು ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ. ನೇತ್ರದಾನದ ಕುರಿತು ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸಿ, ಮರಣಾನಂತರ ಕಣ್ಣು ದಾನ ಮಾಡುವ ನಿರ್ಧಾರಕ್ಕೆ ಕುಟುಂಬದವರು ಗೌರವ ನೀಡುವಂತೆ ಅರಿವು ಮೂಡಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದರು.
ನೇತ್ರದಾನಕ್ಕೆ ವ್ಯಾಪಕ ಇಚ್ಛೆ ಇದ್ದರೂ ಕಸಿ ಮಾಡಲು ಅಗತ್ಯವಿರುವ ದಾನಿತ ಕಾರ್ನಿಯಾಗಳ ಕೊರತೆಯೇ ಪ್ರಮುಖ ಸವಾಲಾಗಿದೆ. ಒಬ್ಬ ವ್ಯಕ್ತಿಯ ಮರಣಾನಂತರ ಕಣ್ಣು ದಾನ ಮಾಡುವ ನಿರ್ಧಾರವು ಮತ್ತೊಬ್ಬರ ದೃಷ್ಟಿಯನ್ನು ಮರಳಿ ನೀಡುವುದರ ಜತೆಗೆ ಅವರ ಜೀವನದ ಗುಣಮಟ್ಟವನ್ನೂ ಪರಿವರ್ತಿಸಬಹುದು ಎಂದು ಹೇಳಿದರು.
ಇದನ್ನೂ ಓದಿ: ಈ ಐದು ಜನರು ದಾಳಿಂಬೆ ತಿನ್ನುವುದು ಹಾನಿಕಾರಕವಂತೆ
41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕವನ್ನು ಬಸವೇಶ್ವರ ಪುನರ್ಜ್ಯೋತಿ ಐ ಬ್ಯಾಂಕ್ ಅಧ್ಯಕ್ಷ ಎಸ್. ವಿರೇಶ್ ಉದ್ಘಾಟಿಸಿದರು. ಸಂಸ್ಥಾಪಕ ಅಧ್ಯಕ್ಷೆ ಗಾಯತ್ರಿ ಶಿವರಾಂ, ಸಿ.ಎಲ್. ಮಧುಸೂದನ ರೆಡ್ಡಿ, ಪಿ.ಬಿ. ಶಿವರಾಂ, ಡಾ. ನಾಗರಾಜ್, ಕೆ.ಸಿ. ರಾಮು, ಸುರೇಶ್ ಬಾಬು ಸೇರಿದಂತೆ ಹಲವರು ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

