
CHITRADURGA NEWS | 27 AUGUST 2026
ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿಯ ಹುಣಸೇಕಟ್ಟೆ ಗ್ರಾಮದ ಸೇವಂತಿಗೆ ಬೆಳೆಗಾರರ ಜಮೀನುಗಳಿಗೆ ಈಚೆಗೆ ತೋಟಗಾರಿಕೆ ಅಧಿಕಾರಿಗಳ ತಂಡ ಭೇಟಿ ನೀಡಿ ತಪಾಸಣೆ ನಡೆಸಿತು.
ಇದನ್ನೂ ಓದಿ: ನೇಪಾಳ ಪ್ರಕೃತಿ ವಿಕೋಪ | ಸಂಪರ್ಕಕ್ಕೆ ಸಿಗದ ಪ್ರವಾಸಿಗರ ಮಾಹಿತಿ ನೀಡಲು ಜಿಲ್ಲಾಡಳಿತ ಮನವಿ
ಪರಿಶೀಲನೆ ವೇಳೆ ಸೇವಂತಿ ಬೆಳೆಗೆ ಮಾರಕವಾದ ‘ಫ್ಯೂಜೇರಿಯಂ ವಿಲ್ಟ್’ (ಸೊರಗು ರೋಗ) ತಗುಲಿರುವುದು ಕಂಡುಬಂದಿದ್ದು, ರೋಗ ಹತೋಟಿಗೆ ತೋಟಗಾರಿಕೆ ಅಧಿಕಾರಿಗಳು ತಾಂತ್ರಿಕ ಸಲಹೆ ನೀಡಿದ್ದಾರೆ.
ಫ್ಯೂಜೇರಿಯಂ ಆಕ್ಸಿಸ್ಪೋರಂ ಕ್ರೈಸಾಂತಮಿ ಎಂಬ ಶಿಲೀಂದ್ರದಿಂದ ಬರುವ ಈ ರೋಗವು ಮಣ್ಣಿನಲ್ಲಿ ಜೀವಿಸುತ್ತದೆ ಹಾಗೂ ರೋಗಗ್ರಸ್ತ ಗಿಡಗಳಿಂದ ಮಾಡಿದ ಕಟಿಂಗ್ಸ್ ಮೂಲಕ ಹರಡುತ್ತದೆ. ಇದರಿಂದ ಗಿಡಗಳ ಬೇರುಗಳು ಹಾನಿಗೊಳಗಾಗಿ ಪೂರ್ತಿ ಗಿಡವೇ ಒಣಗಿಹೋಗುತ್ತದೆ. ಇದರ ನಿಯಂತ್ರಣಕ್ಕಾಗಿ ರೈತರು ಕಳೆದ ಸಾಲಿನಲ್ಲಿ ರೋಗ ಬಂದ ಭೂಮಿಯಲ್ಲಿ ಪುನಃ ಸೇವಂತಿಗೆ ಬೆಳೆಯಬಾರದು.
ಬೆಳೆಯುವ ಮುನ್ನ 1 ಲೀಟರ್ ನೀರಿಗೆ 2 ಗ್ರಾಂ ಕಾರ್ಬನ್ಡೇಜಿಂ 50 WP ಬೆರೆಸಿದ ದ್ರಾವಣದಲ್ಲಿ ಸಸಿಗಳನ್ನು ಅದ್ದಿ ನಾಟಿ ಮಾಡಬೇಕು. ಅಲ್ಲದೆ, Trichoderma harzianum ಮತ್ತು Bacillus subtilis ಮಿಶ್ರಿತ ಕೊಟ್ಟಿಗೆ ಗೊಬ್ಬರ ಅಥವಾ ಬೇವಿನ ಹಿಂಡಿಯನ್ನು ಮಣ್ಣಿಗೆ ಸೇರಿಸುವುದು ಸೂಕ್ತ. ಔಷಧೋಪಚಾರಕ್ಕಾಗಿ ತೈಯೋಪನೆಟ್ ಮಿಥೇಲ್ 70% WP (Roko) 1 ಗ್ರಾಂ ಅಥವಾ ಕಾರ್ಬನ್ಡೇಜಿಂ 40% WP (Bavistin) 1 ಗ್ರಾಂ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಎಲೆಗಳ ಮೇಲೆ ಸಿಂಪರಣೆ ಮಾಡಬೇಕು.
ಇದನ್ನೂ ಓದಿ: ಆಗಸ್ಟ್ 30 ರಂದು ಚಿತ್ರದುರ್ಗ ನಗರ, ಚಿಕ್ಕಜಾಜೂರು ರೈಲ್ವೆ ಮೇಲುಸೇತುವೆಗಳ ಭೂಮಿಪೂಜೆ | ಸಚಿವ ವಿ.ಸೋಮಣ್ಣ ಭಾಗಿ
ಅದೇ ರೀತಿ ಇವುಗಳನ್ನು ಪ್ರತಿ ಲೀಟರ್ ನೀರಿಗೆ 2 ಗ್ರಾಂ ನಂತೆ ಬೆರೆಸಿ ಮಣ್ಣಿಗೆ ಸುರಿಯಬೇಕು (Drenching). ಪರ್ಯಾಯವಾಗಿ ಡೈಫಿನೊಕೊನಜೋಲ್ 25% EC (Score) ಅಥವಾ ಪೆÇ್ರಪಿಕೊನಜೋಲ್ 1 ಮಿ.ಲೀ ನಂತೆ ಪ್ರತಿ ಲೀಟರ್ ನೀರಿಗೆ ಬೆರೆಸಿ ಎಲೆಗಳ ಮೇಲೆ ಸಿಂಪರಣೆ ಹಾಗೂ ಮಣ್ಣಿಗೆ ಹಾಕಿ ಭೂಮಿಯನ್ನು ಚೆನ್ನಾಗಿ ನೆನೆಸಬೇಕು. ರೋಗಪೀಡಿತ ಮಣ್ಣಿನಲ್ಲಿ ಯಾವುದೇ ಕಾರಣಕ್ಕೂ ಮರುನಾಟಿ ಮಾಡಬಾರದು ಎಂದು ಸಲಹೆ ನೀಡಿದ್ದಾರೆ.
ಹುಣಸೇಕಟ್ಟೆ ಗ್ರಾಮದ ಸೇವಂತಿ ಬೆಳೆಗಾರರ ತಾಕುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೇವಂತಿ ಗಿಡಗಳ ಮಾದರಿಯನ್ನು ಸಂಗ್ರಹಿಸಿ ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಗೆ ಕಳುಹಿಸಕೊಡಲಾಗಿತ್ತು.
ಸಂಸ್ಥೆಯ ಇನ್ಕ್ಯುಬೇಷನ್ ಪರೀಕ್ಷೆಯಲ್ಲಿ ಈ ರೋಗ ದೃಢಪಟ್ಟಿದೆ. ಶೀಘ್ರದಲ್ಲೇ ಐಐಎಚ್‍ಆರ್ ವಿಜ್ಞಾನಿಗಳ ತಂಡವು ಹುಣಸೇಕಟ್ಟೆ ಗ್ರಾಮದ ಜಮೀನುಗಳಿಗೆ ಖುದ್ದಾಗಿ ಭೇಟಿ ನೀಡಲಿದ್ದಾರೆ.
ಇದನ್ನೂ ಓದಿ: ನೇಪಾಳ ದುರಂತ | ನಾಪತ್ತೆಯಾದ ಕನ್ನಡಿಗರ ಮಾಹಿತಿ ನೀಡಲು ಸರ್ಕಾರ ಮನವಿ
ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಬಿ.ದೇವರಾಜ್, ಸಹಾಯಕ ತೋಟಗಾರಿಕೆ ಅಧಿಕಾರಿ ಸುರೇಶ್ ಸೇರಿದಂತೆ ರೈತರು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

