CHITRADURGA NEWS | 18 JUNE 2026
ಚಿತ್ರದುರ್ಗ: ಆಂಧ್ರ ಮೂಲದ ವ್ಯಕ್ತಿಯೊಬ್ಬರ ಕಂಪನಿಯಿಂದ ಕರ್ನಾಟಕದಲ್ಲಿ ನೂರಾರು ಕೋಟಿ ರೂ. ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ನೀಟ್ ಮರು ಪರೀಕ್ಷೆ | ಸೂಕ್ತ ಪೊಲೀಸ್ ಭದ್ರತೆ ಕಲ್ಪಿಸಲು ಡಿಸಿ ಸೂಚನೆ
ಎಸ್‌ಎಲ್‌ವಿ ಮಹಿಳಾ ಮಾರ್ಟ್ ಮತ್ತು ಮಾರ್ಕೆಟಿಂಗ್ ಕಂಪನಿ ಕರ್ನಾಟಕದಲ್ಲಿ 9 ಕಡೆಗಳಲ್ಲಿ ತನ್ನ ಶಾಖೆ ತೆರೆದು, ಮಹಿಳೆಯರಿಂದ ಒಂದು ಲಕ್ಷದಿಂದ 50 ಲಕ್ಷದವರೆಗೆ ಹೂಡಿಕೆ ಮಾಡಿಸಿಕೊಂಡು, ಮನೆಯಿಂದಲೇ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಿ, ಪ್ರತಿ ಲಕ್ಷ ರೂ.ಗೆ 20 ಸಾವಿರದಷ್ಟು ವೇತನ ನೀಡುವುದಾಗಿ ಹೇಳಿ ಒಂದೆರಡು ತಿಂಗಳು ಹಣ ಕೊಟ್ಟು ಆನಂತರ ನಾಪತ್ತೆಯಾಗಿದೆ.
ಚಿತ್ರದುರ್ಗ, ಬೆಂಗಳೂರು, ತುಮಕೂರು, ರಾಯಚೂರು, ಹೊಸೂರು, ಹಾವೇರಿ, ಹೊಸಕೋಟೆಯಲ್ಲಿ ತನ್ನ ಶಾಖೆಗಳನ್ನು ತೆರೆದು ಸ್ಥಳೀಯವಾಗಿ ಸಿಬ್ಬಂದಿ ನೇಮಕ ಮಾಡಿಕೊಂಡು ಏಕಾಏಕಿ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಾರೆ.
ಆಂಧ್ರಪ್ರದೇಶದ ನೆಲ್ಲೂರು ಮೂಲದ ರಾಜೇಶ್ ಬೊಮ್ಮಾಲು ಎಂಬ ವ್ಯಕ್ತಿ ಈ ಕಂಪನಿಯ ಎಂಡಿಯಾಗಿದ್ದು, ಈ ಸಂಸ್ಥೆ ಮೂಲಕ ಕರ್ನಾಟಕದಲ್ಲಿ ಅಂದಾಜು 860 ಕೋಟಿ ರೂ. ವಂಚಿಸಿದೆ ಎಂದು ಅಂದಾಜಿಸಿದ್ದು, ಚಿತ್ರದುರ್ಗ ಜಿಲ್ಲೆ ಒಂದರಲ್ಲೇ 470 ಕ್ಕೂ ಹೆಚ್ಚು ಮಹಿಳೆಯರಿಂದ 60 ರಿಂದ 70 ಕೋಟಿ ರೂ. ಹಣ ಪಡೆದು ನಾಪತ್ತೆಯಾಗಿದ್ದಾರೆ.
ಇದನ್ನೂ ಓದಿ: ವಿದ್ಯುತ್ ಖಾಸಗೀಕರಣ ವಿರೋಧಿಸಿ ಬೆಸ್ಕಾಂ ಎದುರು ಪ್ರತಿಭಟನೆ
ವಂಚನೆಗೊಳಗಾದ ಮಹಿಳೆಯರು ಹಾಗೂ ಸಾರ್ವಜನಿಕರು ಗುರುವಾರ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದು, ಜಿ.ಎಚ್.ತಿಪ್ಪಾರೆಡ್ಡಿ ಅವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರ ಜೊತೆ ಚರ್ಚಿಸಿ ಕೋಟೆ ಪೊಲೀಸ್ ಠಾಣೆಯಲ್ಲಿ ಹಣ ಕಳೆದುಕೊಂಡವರಿಂದ ದೂರು ದಾಖಲಿಸಿದ್ದಾರೆ.
ಚಿತ್ರದುರ್ಗದ ಆಟೋ ಚಾಲಕ ಉಮೇಶ್ ಎಂಬುವವರು ಹೆಚ್ಚಿನ ಲಾಭದ ಆಸೆಗೆ ತನ್ನ ಸೈಟ್ ಮಾರಿ 20 ಲಕ್ಷ ಪಾವತಿಸಿರುವುದಾಗಿ ತಿಳಿಸಿದರೆ, ನೂರುಲ್ಲಾ ಷರೀಫ್ ಎಂಬುವವರು ಸಾಲ ಮಾಡಿ 3 ಲಕ್ಷ ರೂ. ಕೊಟ್ಟಿರುವುದಾಗಿ ಹೇಳಿದ್ದಾರೆ.
ಆಭರಣಗಳನ್ನು ಮಾರಾಟ ಮಾಡಿ ಈ ಸಂಸ್ಥೆಯಲ್ಲಿ ತೊಡಗಿಸಿದವರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬೇರೆ ಬೇರೆ ಸಂಘ, ಫೈನಾನ್ಸ್‌ಗಳಲ್ಲೂ ಸಾಲ ಮಾಡಿ ತಂದು ಎಸ್‌ಎಲ್‌ವಿ ಕಂಪನಿಗೆ ಜನ ಹಣ ಹಾಕಿದ್ದಾರೆ.
ಇದನ್ನೂ ಓದಿ: ನಾಳೆ ಚಿತ್ರದುರ್ಗ ನಗರದಲ್ಲಿ ವಿದ್ಯುತ್ ವ್ಯತ್ಯಯ
ಪ್ಯಾಕಿಂಗ್ ಮತ್ತು ಯಂತ್ರಾಧಾರಿತ ವ್ಯವಹಾರದ ಆಮಿಷ:
ಊದುಬತ್ತಿ, ಮೇಣದ ಬತ್ತಿ, ಪೆನ್ಸಿಲ್, ಪೇಪರ್ ಕ್ಲಾತ್, ಚಾಕ್‌ಪೀಸ್, ಸಾಂಬ್ರಾಣಿ, ಪೇಪರ್ ಪ್ಲೇಟ್ ಸೇರಿದಂತೆ ವಿವಿಧ ವಸ್ತುಗಳ ತಯಾರಿ ಮಾಡುವ ಯಂತ್ರಗಳನ್ನು ಒದಗಿಸಿ ಅದರಿಂದ ಉತ್ಪಾಧನೆ ಮಾಡಿದ ವಸ್ತುಗಳನ್ನು ಖರೀದಿ ಮಾಡುವುದು ಒಂದು ಒಪ್ಪಂಧವಾದರೆ, ಯಂತ್ರ ಬೇಡ ಎಂದವರಿಗೆ ಈ ವಸ್ತುಗಳನ್ನು ಪ್ಯಾಕಿಂಗ್ ಮಾಡಿಸಿ ಅದಕ್ಕೆ ಪ್ರತಿ ತಿಂಗಳು ಹಣ ಪಾವತಿಸುವುದು ಮತ್ತೊಂದು ಒಪ್ಪಂಧ. ಇದಕ್ಕಾಗಿ ಕನಿಷ್ಟ 1 ಲಕ್ಷ ರೂ. ಡಿಪಾಸಿಟ್ ಮಾಡಬೇಕು. ಪ್ರತಿ ಲಕ್ಷಕ್ಕೆ 20 ಸಾವಿರದವರೆಗೆ ದುಡಿಯುವ ಆಮಿಷ ತೋರಿಸಲಾಗಿದೆ ಎಂದು ಸಂತ್ರಸ್ಥರು ವಿವರಿಸಿದರು.
ಇದೊಂದು ದೊಡ್ಡ ವಂಚನೆಯಾಗಿದ್ದು, ನೂರಾರು ಮಹಿಳೆಯರು ಸಾಲ ಮಾಡಿ, ಮನೆಯಲ್ಲಿ ಕಷ್ಟಪಟ್ಟು ಹಣ ಪಾವತಿಸಿದ್ದಾರೆ. ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದು, ಈ ಪ್ರಕರಣವನ್ನು ಸಿಐಡಿ ಮೂಲಕ ತನಿಖೆ ನಡೆಸಬೇಕಾಗುತ್ತದೆ. ಅಧಿವೇಶನದಲ್ಲೂ ನಮ್ಮ ಪಕ್ಷದ ನಾಯಕರಿಂದ ಈ ಬಗ್ಗೆ ಪ್ರಸ್ತಾಪಿಸಲಾಗುವುದು. ಜನ ಇಂತಹ ಕಂಪನಿಗಳಿಂದ ಜಾಗೃತರಾಗಿರಬೇಕು.
-ಜಿ.ಎಚ್.ತಿಪ್ಪಾರೆಡ್ಡಿ, ಮಾಜಿ ಶಾಸಕರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

