
CHITRADURGA NEWS | 30 JUNE 2026
ಚಿತ್ರದುರ್ಗ: ಮುರುಘಾ ಮಠದ ಅನುಭವ ಮಂಟಪದಲ್ಲಿ ಸೋಮವಾರ ಸಂಜೆ ಬೊಳುವಾರು ಮಹಮದ್ ಕುಂಞ ಅವರ ಕಾದಂಬರಿ ಆಧಾರಿತ ನಾಟಕ ‘ಸ್ವಾತಂತ್ರ‍್ಯದ ಓಟ’ ನಾಟಕ ಪ್ರದರ್ಶನವಾಯಿತು.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ | ಬಸ್‍ಪಾಸ್ ಶುಲ್ಕ ಮರು ಪಾವತಿಗೆ ಅರ್ಜಿ ಅಹ್ವಾನ
ಪ್ರಸನ್ನ ನಿರ್ದೇಶನದಲ್ಲಿ ಮೂಡಿ ಬಂದಿರುವ ಸುಮಾರು ಮೂರುವರೆ ತಾಸಿನ ಈ ನಾಟಕವನ್ನು ಶಿವಮೊಗ್ಗ ರಂಗಾಯಣದ ಕಲಾವಿದರು ಮನೋಜ್ಞವಾಗಿ ಅಭಿನಯಿಸಿದರು.
ಬಸವಕೇಂದ್ರ ಮುರುಘಾ ಮಠ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಸಹಯೋಗದಲ್ಲಿ ಅಗಲಿದ ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜನಪ್ಪ ಅವರ ಸ್ಮರಣಾರ್ಥ ನಾಟಕ ಆಯೋಜಿಸಲಾಗಿತ್ತು.
ನಾಟಕಕ್ಕೆ ಚಾಲನೆ ನೀಡಿದ ಮಾಜಿ ಸಚಿವ ಎಚ್.ಆಂಜನೇಯ ಮಾತನಾಡುತ್ತಾ, ಯಾವುದೇ ಚಳುವಳಿ, ಹೋರಾಟ, ಅಷ್ಟಾಗಿ ಗಮನಸೆಳೆಯದೆ ಎಲ್ಲವನ್ನು ಸಹಿಸಿಕೊಳ್ಳುವ ಭಾವ ಈಗೀಗ ವ್ಯಕ್ತವಾಗುತ್ತಿದೆ. ಅಂದಿನ ನಮ್ಮ ಸ್ವಾತಂತ್ರ‍್ಯ ಸೇನಾನಿಗಳು ಹೋರಾಟ ಮಾಡದೇ ಹೋಗಿದ್ದರೆ ಈ ರೀತಿ ಬ್ರಿಟೀಷರ ಗುಲಾಮರಾಗಿಯೇ ಇರಬೇಕಾಗಿರುತ್ತಿತ್ತು. ಏನೇನೋ ಸಾಹಸ ಪಟ್ಟು ತಮ್ಮ ಪ್ರಾಣ ಬಲಿಕೊಟ್ಟು ನಮ್ಮ ದೇಶವನ್ನು ದಾಸ್ಯದಿಂದ ವಿವೇಚನೆಗೊಳಿಸಿದ್ದಾರೆ ಎಂದರು.
ಇದನ್ನೂ ಓದಿ: ಬಡತನ ನಿರ್ಮೂಲನೆಗೆ ಶಿಕ್ಷಣವೇ ಬ್ರಹ್ಮಾಸ್ತ್ರ | ಶಾಂತವೀರ ಶ್ರೀ
ಮಹಾತ್ಮ ಗಾಂಧೀಜಿ ಅವರು ಸೇರಿದಂತೆ ಅನೇಕ ತ್ಯಾಗಿಗಳ ಹೋರಾಟದ ಫಲವಾಗಿ ನಾವಿಂದು ಸ್ವತಂತ್ರರಾಗಿದ್ದೇವೆ. ಆದರೆ, ಅದರ ಮಹತ್ವ ಗೊತ್ತಾಗದೆ ಮರೆಯುತ್ತಿರುವಾಗ ಅದರ ನೆನಪನ್ನು ಇಂತಹ ನಾಟಕಗಳ ಮೂಲಕ ಮತ್ತೆ ಈಗಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಹಿರಿಯ ಪತ್ರಕರ್ತ ಜಿ.ಎಸ್. ಉಜ್ಜಿನಪ್ಪ ಅವರ ಕುರಿತು ಮಾತನಾಡುತ್ತ, ಅವರು ಬಹುಮುಖ ಪ್ರತಿಭೆಯ ವ್ಯಕ್ತಿಯಾಗಿದ್ದು ಆಂಗ್ಲಭಾಷೆಯಲ್ಲಿ ಪರಿಣಿತಿ ಹೊಂದಿದ್ದರು. ಎಸ್. ನಿಜಲಿಂಗಪ್ಪ, ಹೆಚ್. ಹನುಮಂತಪ್ಪ ಅವರ ಒಡನಾಡಿಯಾಗಿದ್ದರು ಎಂದು ಸ್ಮರಿಸಿದರು.
ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ, ಬಯಲುಸೀಮೆಯ ಚಿತ್ರದುರ್ಗದಲ್ಲಿ ಅನೇಕ ಪ್ರತಿಭಾನ್ವಿತರು ಆಗಿಹೋಗಿದ್ದಾರೆ. ಅದರಲ್ಲಿ ಪತ್ರಕರ್ತರಾಗಿದ್ದರೂ ರೈತ, ಜನಪರ, ಕಾರ್ಮಿಕರ ಪರ ಸೇರಿದಂತೆ ಹೋರಾಟ ಮಾಡಿದರು. ಪರ್ತಕರ್ತರಾಗಿ, ಕಾದಂಬರಿ, ಕಥೆ-ಕವನ, ಹಾಡುಗಾರಿಕೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಕೃಷಿ ಮಾಡಿದ್ದರೆಂದು ಸ್ಮರಿಸಿದರು. ಈ ನಾಟಕ ಅವರ ನೆನಹಿನಲ್ಲಿ ಪ್ರದರ್ಶನವಾಗಲಿದೆ ಎಂದು ನುಡಿದರು.
ಇದನ್ನೂ ಓದಿ: ಹವಾಮಾನ ಆಧಾರಿತ ಬೆಳೆ ವಿಮೆ | ನೋಂದಣಿಗೆ ಜುಲೈ 31 ಕೊನೆದಿನ
ವೇದಿಕೆಯಲ್ಲಿ ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ, ಹಿರಿಯ ಸಾಹಿತಿ ಮೃತ್ಯುಂಜಯಪ್ಪ, ಹಿರಿಯ ಕಲಾವಿದರಾದ ಜಂಬುನಾಥ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವಿನಾಯಕ ತೊಡರನಾಳ್, ರೈತ ಮುಖಂಡರಾದ ಮಲ್ಲಾಪುರ ತಿಪ್ಪೇಸ್ವಾಮಿ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಮಹಂತರೆಡ್ಡಿ ಸೇರಿದಂತೆ ಕಲಾವಿದರು, ಕಲಾಭಿಮಾನಿಗಳು, ಕಲಾಪೋಷಕರು, ಸಾರ್ವಜನಿಕರು, ಪತ್ರಕರ್ತರು, ಎಸ್.ಜೆ.ಎಂ. ವಿದ್ಯಾಪೀಠದ ಶಾಲಾ ಕಾಲೇಜುಗಳ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಮಾರಂಭದ ಆರಂಭಕ್ಕೆ ಜಮುರಾ ಕಲಾವಿದರ ಉಮೇಶ್ ಪತ್ತಾರ್ ರಂಗಗೀತೆಯ ಪ್ರಾರ್ಥನೆ ಹಾಡಿದರು. ರಂಗಸಂಘಟಕ ಕೆ.ಪಿ.ಎಂ. ಗಣೇಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

