CHITRADURGA NEWS | 23 JULY 2026
ಚಿತ್ರದುರ್ಗ: ತೀವ್ರ ಮಳೆ ಅಭಾವ ಉಂಟಾಗಿರುವುದರಿಂದ ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗುತ್ತಿದ್ದು, ರೈತರು ಲಭ್ಯವಿರುವ ನೀರನ್ನು ಮಿತವಾಗಿ ಬಳಸಲು ಹನಿ ನೀರಾವರಿ ಹಾಗೂ ಪ್ಲಾಸ್ಟಿಕ್ ಹೊದಿಕೆ ಮತ್ತು ಹುಲ್ಲಿನ ಹೊದಿಕೆ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಮೊಳಕಾಲ್ಮೂರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕೃಷ್ಣಮೂರ್ತಿ ರೈತರಿಗೆ ಸಲಹೆ ನೀಡಿದರು.
ಇದನ್ನೂ ಓದಿ: ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಖಂಡನೀಯ | ಶಾಸಕ ಟಿ.ರಘುಮೂರ್ತಿ
ತೋಟಗಾರಿಕೆ ಇಲಾಖೆ ವತಿಯಿಂದ ಮೊಳಕಾಲ್ಮುರು ತಾಲೂಕಿನ ಕಸಬಾ ಹೋಬಳಿಯ ಕೋನಸಾಗರ ಹಾಗೂ ದೇವಸಮುದ್ರ ಹೋಬಳಿಯ ರಾಮಸಾಗರ ಗ್ರಾಮಗಳಲ್ಲಿ ಆಯೋಜಿಸಲಾಗಿದ್ದ ರೈತರ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಬಿ ಜಿ ರಾಮ ಜಿ ಯೋಜನೆಯಡಿ ತೋಟಗಾರಿಕೆ ಬೆಳೆಗಳಾದ ತೆಂಗು, ಹಲಸು, ಪೇರಲ, ಮಾವು, ಸಪೋಟ, ದಾಳಿಂಬೆ, ನೇರಳೆ ಮುಂತಾದ ಬೆಳೆಗಳಿಗೆ ಕೂಲಿ ವೆಚ್ಚ ಹಾಗೂ ಸಾಮಗ್ರಿ ವೆಚ್ಚದ ನೆರವು ನೀಡಲಾಗುತ್ತಿದೆ. ರೈತರು ಅಲ್ಪಾವಧಿ ಬೆಳೆ ಹಾಗೂ ಮಿಶ್ರ ಬೆಳೆಗಳನ್ನು ಬೆಳೆಯಲು ಆಸಕ್ತಿ ವಹಿಸಬೇಕು. ಬಹುವಾರ್ಷಿಕ ಬೆಳೆಗಳಲ್ಲಿ ಡಯಾಂಚ ಹಾಗೂ ಸೆಣಬಿನ ಬೀಜಗಳನ್ನು ಬಿತ್ತನೆ ಮಾಡುವುದರಿಂದ ಮಣ್ಣಿನ ಫಲವತ್ತತೆ ಮತ್ತು ಸಾಂದ್ರತೆ ಹೆಚ್ಚುತ್ತದೆ ಎಂದು ತಿಳಿಸಿದರು.
ಒಣಹವೆ ಪ್ರದೇಶಕ್ಕೆ ನೇರಳೆ, ಹುಣಸೆ, ಸೀತಾಫಲ, ಬೋರೆ (ಬಾರೆ) ಹಾಗೂ ಗೋಡಂಬಿ ಬೆಳೆಗಳು ಸೂಕ್ತವಾಗಿವೆ. 100 ಕೆ.ಜಿ. ಕೊಟ್ಟಿಗೆ ಗೊಬ್ಬರ, 10 ಕೆ.ಜಿ. ಬೇವಿನ ಹಿಂಡಿ ಹಾಗೂ ಎಂ.ಎನ್.ಸಿ., ಸುಡೋಮೋನಾಸ್, ಟ್ರೈಕೋಡರ್ಮಾ ಜೈವಿಕ ಗೊಬ್ಬರಗಳನ್ನು ಮಿಶ್ರಣ ಮಾಡಿ, ನೆರಳಿನಲ್ಲಿ 15 ದಿನಗಳಿರಿಸಿ ತೋಟಗಳಿಗೆ ಹಾಕುವುದರಿಂದ ಮಣ್ಣಿನ ಫಲವತ್ತತೆ ಹಾಗೂ ಇಳುವರಿ ಹೆಚ್ಚುತ್ತದೆ ಎಂದರು.
ಇದೇ ವೇಳೆ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಲಭ್ಯವಿರುವ ವಿಮಾ ಸೌಲಭ್ಯದ ಕುರಿತು ಮಾಹಿತಿ ನೀಡಿದ ಅವರು, ರೈತರು ಶೇ.5 ರಷ್ಟು ಪ್ರೀಮಿಯಂ ವಂತಿಗೆಯನ್ನು ಪಾವತಿಸಿ ವಿಮೆ ಪಡೆದುಕೊಳ್ಳಬಹುದು ಎಂದರು.
ಇದನ್ನೂ ಓದಿ: ನಾಯಿ ತಪ್ಪಿಸಲು ಹೋಗಿ ರಸ್ತೆ ಬದಿ ನಿಂತಿದ್ದವರಿಗೆ ಕಾರು ಡಿಕ್ಕಿ | ಸ್ಥಳದಲ್ಲೇ ಓರ್ವ ಸಾವು
ಈ ಯೋಜನೆಯಡಿ ಅಡಿಕೆ ಬೆಳೆಗೆ ಪ್ರತಿ ಹೆಕ್ಟೇರ್ಗೆ ರೂ.1,28,000 ವಿಮಾ ಮೊತ್ತವಿದ್ದು, ರೈತರು ರೂ.6,400 ಪ್ರೀಮಿಯಂ ಪಾವತಿಸಬೇಕಾಗುತ್ತದೆ. ದಾಳಿಂಬೆ ಬೆಳೆಗೆ ಪ್ರತಿ ಹೆಕ್ಟೇರ್ಗೆ ರೂ.1,27,000 ವಿಮಾ ಮೊತ್ತವಿದ್ದು, ರೂ.6,350 ಪ್ರೀಮಿಯಂ ಹಾಗೂ ಮಾವು ಬೆಳೆಗೆ ಪ್ರತಿ ಹೆಕ್ಟೇರ್ಗೆ ರೂ.80,000 ವಿಮಾ ಮೊತ್ತವಿದ್ದು, ರೂ.4,000 ಪ್ರೀಮಿಯಂ ಮೊತ್ತವನ್ನು ರೈತರು ಪಾವತಿಸಬೇಕು ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಸಹಾಯಕ ತೋಟಗಾರಿಕೆ ನಿರ್ದೇಶಕ ಜಿ.ಸುಜಯ್ ಚೌದರಿ ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ಡಿ.ಶರಣೇಶ್, ಎಂ.ತಿಪ್ಪೇಸ್ವಾಮಿ ಹಾಗೂ ರೈತರು ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

