CHITRADURGA NEWS | 11 JUNE 2026
ಚಿತ್ರದುರ್ಗ: ಚಿತ್ರದುರ್ಗದ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ 2026-27ನೇ ಸಾಲಿನ ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಡಿ ಬರುವ 2ನೇ ವರ್ಷದ / 3ನೇ ಸೆಮಿಸ್ಟರ್ ಡಿಪ್ಲೋಮಾ ತರಗತಿಗಳಿಗೆ ಲ್ಯಾಟರಲ್ ಎಂಟ್ರಿ ಸ್ಕೀಮ್ ಮೂಲಕ ಆಫ್‌ಲೈನ್ ಪ್ರವೇಶ ಪಡೆಯಲು ಐಟಿಐ ಅಥವಾ ಪಿಯುಸಿ (ತಾಂತ್ರಿಕ ವಿಷಯಗಳು) ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಇದನ್ನೂ ಓದಿ: ದೃಶ್ಯಕಲಾ ಕಾಲೇಜು ಪ್ರವೇಶಕ್ಕೆ ಅರ್ಜಿ ಆಹ್ವಾನ
ಇಲಾಖೆಯ ಅಧಿಕೃತ ವೆಬ್‌ಸೈಟ್ www.dtek.kar.nic.in ಮೂಲಕ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಯನ್ನು 20/06/2026 ರವರೆಗೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.
ಅಭ್ಯರ್ಥಿಗಳು ಕರ್ನಾಟಕದಲ್ಲಿ 02 ವರ್ಷಗಳ ಐಟಿಐ ಅಥವಾ ಪಿಯುಸಿ (ತಾಂತ್ರಿಕ ವಿಷಯಗಳು) ವ್ಯಾಸಂಗ ಮಾಡಿ ಉತ್ತೀರ್ಣರಾಗಿರುಬೇಕು. ಅರ್ಜಿ ಶುಲ್ಕವಾಗಿ ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 200 ಹಾಗೂ ಎಸ್‌ಸಿ, ಎಸ್‌ಟಿ ಮತ್ತು ಪ್ರವರ್ಗ-1 ರ ಅಭ್ಯರ್ಥಿಗಳಿಗೆ ರೂ. 100ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಮೆರಿಟ್ ಪಟ್ಟಿಯನ್ನು 23/06/2026 ರಂದು ಅಪರಾಹ್ನ 3 ಗಂಟೆಯ ನಂತರ ಸಂಸ್ಥೆಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದು. ಈ ಮೆರಿಟ್ ಪಟ್ಟಿಗೆ ಯಾವುದೇ ತಿದ್ದುಪಡಿ ಅಥವಾ ಆಕ್ಷೇಪಣೆಗಳಿದ್ದಲ್ಲಿ ಮನವಿ ಸಲ್ಲಿಸಲು 25/06/2026 ಕೊನೆಯ ದಿನವಾಗಿದೆ. ತದನಂತರ, ಅಂತಿಮ ಮೆರಿಟ್ ಪಟ್ಟಿಯನ್ನು 30/06/2026 ರಂದು ಪ್ರಕಟಿಸಲಾಗುತ್ತದೆ.
ಇದನ್ನೂ ಓದಿ: ಪ್ರಾಥಮಿಕ ಹಾಗೂ ಪ್ರೌಢ ಬಿಐಇಆರ್ ಟಿ ಹುದ್ದೆಗೆ ಅರ್ಜಿ ಅಹ್ವಾನ
ಮೆರಿಟ್ ಪ್ರಕಾರ ಸೀಟು ಆಯ್ಕೆ ಮಾಡಿಕೊಂಡು 01/07/2026 ರಿಂದ 04/07/2026 ಪ್ರವೇಶ ಪಡೆಯಕು. ಒಂದು ವೇಳೆ ಪ್ರವೇಶ ಪ್ರಕ್ರಿಯೆಯ ನಂತರವೂ ಸೀಟುಗಳು ಭರ್ತಿಯಾಗದೆ ಉಳಿದಲ್ಲಿ, ಅಂತಹ ಸೀಟುಗಳನ್ನು ‘ಮೊದಲು ಬಂದವರಿಗೆ ಮೊದಲ ಆದ್ಯತೆ’ ಆಧಾರದ ಮೇಲೆ 06/07/2026 ರಿಂದ 10/07/2026 ರವರೆಗೆ ಹಂಚಿಕೆ ಮಾಡಲಾಗುವುದು.
ಪ್ರವೇಶ ಪಡೆಯುವಾಗ ಅಭ್ಯರ್ಥಿಗಳು ತಮ್ಮ ಎಲ್ಲಾ ಮೂಲ ದಾಖಲಾತಿಗಳನ್ನು ಜೆರಾಕ್ಸ್ ಪ್ರತಿಗಳೊಂದಿಗೆ ಪರಿಶೀಲನೆಗಾಗಿ ಕಡ್ಡಾಯವಾಗಿ ಹಾಜರುಪಡಿಸಬೇಕು ಹಾಗೂ ಸ್ಥಳದಲ್ಲೇ ನಿಗದಿತ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ. ಹೆಚ್ಚಿನ ವಿವರಗಳಿಗಾಗಿ ಸಂಸ್ಥೆಯ ಸಂಪರ್ಕಿಸಲು ಪ್ರಾಂಶುಪಾಲರು ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
