CHITRADURGA NEWS | 23 September 2026
ಸಿರಿಗೆರೆ: ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ 35ನೇ ಶ್ರದ್ಧಾಂಜಲಿ ಸಮಾರಂಭದ ಅಂಗವಾಗಿ ಸಿರಿಗೆರೆ ಸಮೀಪದ ಗೌರಮ್ಮನಹಳ್ಳಿಯ ಮುಸ್ಲಿಂ ಬಾಂಧವರು ₹1 ಲಕ್ಷ ಮೌಲ್ಯದ ವಿವಿಧ ತರಕಾರಿಗಳನ್ನು ದಾಸೋಹಕ್ಕೆ ಸಮರ್ಪಿಸಿ ಭಾವೈಕ್ಯತೆ ಹಾಗೂ ಸೌಹಾರ್ದತೆಯ ಸಂದೇಶ ಸಾರಿದರು.
ಇದನ್ನೂ ಓದಿ: ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಪ್ರತಿಭಟನೆ
ಗೌರಮ್ಮನಹಳ್ಳಿಯ ಮುಸ್ಲಿಂ ಬಾಂಧವರು ಒಗ್ಗೂಡಿ ಆಲೂಗಡ್ಡೆ, ಈರುಳ್ಳಿ, ಟೊಮೆಟೊ, ಬದನೆಕಾಯಿ, ಬೆಂಡೆಕಾಯಿ, ಬೀನ್ಸ್, ಕ್ಯಾರೆಟ್, ಬೂದುಗುಂಬಳಕಾಯಿ, ಸೌತೆಕಾಯಿ, ಹಸಿಮೆಣಸಿನಕಾಯಿ, ನುಗ್ಗೆಕಾಯಿ, ಹೀರೇಕಾಯಿ, ಸೋರೆಕಾಯಿ, ಕೊತ್ತಂಬರಿ ಸೊಪ್ಪು, ಮೆಂತ್ಯೆ ಸೊಪ್ಪು ಸೇರಿದಂತೆ ವಿವಿಧ ಬಗೆಯ ತರಕಾರಿಗಳನ್ನು ಶ್ರೀಮಠದ ದಾಸೋಹ ಸೇವೆಗೆ ಅರ್ಪಿಸಿದರು.
ಶ್ರೀಮಠದ ದಾಸೋಹ ಸೇವೆಗೆ ಧರ್ಮ, ಜಾತಿ ಹಾಗೂ ಸಮುದಾಯದ ಭೇದವಿಲ್ಲದೆ ಭಕ್ತರು ಕೈಜೋಡಿಸುತ್ತಿರುವುದು ವಿಶೇಷವಾಗಿದೆ. ಗೌರಮ್ಮನಹಳ್ಳಿಯ ಮುಸ್ಲಿಂ ಬಾಂಧವರ ಈ ಸೇವಾ ಕಾರ್ಯವು ಸಹೋದರತ್ವ, ಮಾನವೀಯತೆ, ಧಾರ್ಮಿಕ ಸೌಹಾರ್ದತೆ ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ಮಾದರಿಯಾಗಿದೆ.
ಭಕ್ತರಿಂದ ಬೃಹತ್ ದಾಸೋಹ ಸಮರ್ಪಣೆ
ಶ್ರದ್ಧಾಂಜಲಿ ಸಮಾರಂಭದ ದಾಸೋಹಕ್ಕೆ ವಿವಿಧೆಡೆಯಿಂದ ಭಕ್ತರು ಸ್ವಯಂಪ್ರೇರಿತರಾಗಿ ಆಹಾರ ಸಾಮಗ್ರಿಗಳನ್ನು ಸಮರ್ಪಿಸಿದ್ದಾರೆ. ಚನ್ನಗಿರಿ ತುಮ್ಕೋಸ್ನಿಂದ 1 ಲಕ್ಷ ಲಾಡು, ಶಾಸಕ ಶಿವಗಂಗಾ ಬಸವರಾಜ್ ಅವರಿಂದ 104 ಕ್ವಿಂಟಾಲ್ ಅಕ್ಕಿ, ರಾಣೆಬೆನ್ನೂರು ಹಾಗೂ ರಟ್ಟಿಹಳ್ಳಿ ಸಾಧು ಸಮಾಜದ ಅಧ್ಯಕ್ಷರಿಂದ ತಲಾ 50 ಟಿನ್ ಅಡುಗೆ ಎಣ್ಣೆ, ಹೊನ್ನಾಳಿ ಹಾಗೂ ನ್ಯಾಮತಿ ಗ್ರಾಮಸ್ಥರಿಂದ 101 ಕ್ವಿಂಟಾಲ್ ಅಕ್ಕಿ, ಶಿವಮೊಗ್ಗ ತರಳಬಾಳು ಗ್ರಾಮಾಂತರ ಭಕ್ತಿ ಸಮರ್ಪಣ ಸೇವಾ ಸಮಿತಿಯಿಂದ 101 ಕ್ವಿಂಟಾಲ್ ಅಕ್ಕಿ ಹಾಗೂ ನಿವೃತ್ತ ಎ.ಡಿ.ಜಿ.ಪಿ. ಎನ್. ಶಿವಕುಮಾರ್ ಅವರಿಂದ 52 ಕ್ವಿಂಟಾಲ್ ಅಕ್ಕಿ ಸಮರ್ಪಿಸಲಾಗಿದೆ.
ಇದನ್ನೂ ಓದಿ: ಭದ್ರಾ ನೀರು ನಮ್ಮೂರ ಕೆರೆಗಳಿಗೂ ಹರಿಸಿ | ಕ್ಯಾದಿಗೆರೆ, ಜೆ.ಎನ್.ಕೋಟೆ ರೈತರ ಆಗ್ರಹ
ಇದಲ್ಲದೆ ಹೊಳಲ್ಕೆರೆ ಸಾಧು ಸದ್ಧರ್ಮ ಸಮಾಜದಿಂದ 60 ಕ್ವಿಂಟಾಲ್ ತೊಗರಿಬೇಳೆ, ಶಿಕಾರಿಪುರ ಸಾಧು ಲಿಂಗಾಯತ ಸಂಘದಿಂದ ಕಡಲೆಬೇಳೆ ಹಾಗೂ ಕಡ್ಲೇಕಾಳು, ದಾವಣಗೆರೆ ದಲ್ಲಾಳಿ ಮಂಡಿ ಸಂಘದಿಂದ 10 ಕ್ವಿಂಟಾಲ್ 50 ಕೆ.ಜಿ. ಗೋ ರವೆ, ಅಣ್ಣಾಪುರ ಗ್ರಾಮಸ್ಥರಿಂದ 3 ಕ್ವಿಂಟಾಲ್ ಹೆಸರುಕಾಳು, ಹುಲ್ಲೂರು ಗ್ರಾಮಸ್ಥರಿಂದ 9 ಕ್ವಿಂಟಾಲ್ ಅಕ್ಕಿ ಸೇರಿದಂತೆ ವಿವಿಧ ದಾಸೋಹ ಸಾಮಗ್ರಿಗಳನ್ನು ಭಕ್ತರು ಅರ್ಪಿಸಿದ್ದಾರೆ.
ಚಿಕ್ಕಮಗಳೂರಿನ ತಮ್ಮಯ್ಯ ಅವರಿಂದ 10 ಟನ್ ಸೌದೆ, ಭೀಮಸಮುದ್ರದ ಅನಿತ್ ಕುಮಾರ್ ಅವರಿಂದ 5 ಸಾವಿರ ಕುಡಿಯುವ ನೀರಿನ ಬಾಟಲ್, ಹನುಮನಹಳ್ಳಿ ಗ್ರಾಮಸ್ಥರಿಂದ 25 ಟಿನ್ ಅಡುಗೆ ಎಣ್ಣೆ, ಕಾಶಿ ಬಸ್ ಸಿದ್ದೇಶ್ ಅವರಿಂದ ಒಂದು ಲಾರಿ ಲೋಡ್ ಊಟದ ತಟ್ಟೆ, ಮತ್ತುಗದೂರು ಎಂ.ಬಿ. ಸಿದ್ದೇಶ್ ಅವರಿಂದ 40 ಸಾವಿರ ಅಡಿಕೆ ತಟ್ಟೆ ಸೇರಿದಂತೆ ಸಿರಿಗೆರೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ದಾಸೋಹಕ್ಕೆ ವಿವಿಧ ಸಾಮಗ್ರಿಗಳನ್ನು ಸಮರ್ಪಿಸಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

