
CHITRADURGA NEWS | 11 February 2026
ಚಿತ್ರದುರ್ಗ: ಜಿಲ್ಲೆಯ ಮಹತ್ವಾಕಾಂಕ್ಷಿ ಯೋಜನೆ ಭದ್ರಾ ಮೇಲ್ದಂಡೆಯನ್ನು ಪೂರ್ಣಗೊಳಿಸಲು ಹಾಗೂ 5,300 ಕೋಟಿ ರೂ. ಬಿಡುಗಡೆ ಆಗ್ರಹಿಸಿ ರಾಜ್ಯ ರೈತಸಂಘ ಜಿಲ್ಲೆಯಲ್ಲಿ ಗುರುವಾರ-ಶುಕ್ರವಾರ ಕೈಗೊಂಡಿರುವ ಚಳವಳಿಗೆ ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಬೆಂಬಲಿಸಲಿದೆ ಎಂದು ಸಮಿತಿ ಅಧ್ಯಕ್ಷ ಪಿ.ಕೋದಂಡರಾಮಯ್ಯ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಯಾಣಿಕರಿಗೆ ಗುಡ್ ನ್ಯೂಸ್ | ರೈಲ್ ಒನ್ ಆಪ್ ಬಿಡುಗಡೆ | ಇದರ ವಿಶೇಷತೆ ಏನು… ಇಲ್ಲಿದೆ ಮಾಹಿತಿ
ಬಯಲುಸೀಮೆ ಪ್ರದೇಶಕ್ಕೆ ಭದ್ರೆ ನೀರುಣಿಸುವ ಮಹತ್ವದ ಯೋಜನೆ ಜಾರಿಗಾಗಿ ನೀರಾವರಿ ಹೋರಾಟ ಸಮಿತಿ 1996 ರಿಂದಲೂ ನಿರಂತರವಾಗಿ ಸಭೆ, ಹೋರಾಟ, ಸಮಾವೇಶ, ರಸ್ತೆತಡೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಕೆ, ಸರಣಿ ಧರಣಿ, ಸತ್ಯಾಗ್ರಹ ಹೀಗೆ ಹೋರಾಟ ಸಮಿತಿ ಕೈಗೊಂಡ ಎಲ್ಲ ಚಟುವಟಿಕೆಯಲ್ಲಿ ರೈತಸಂಘ ಮುಂಚೂಣಿಯಲ್ಲಿ ನಿಂತು ಜಿಲ್ಲೆಯ ಹಿತಕ್ಕೆ ಶ್ರಮಿಸಿದೆ ಎಂದು ಸ್ಮರಿಸಿದ್ದಾರೆ.
ಇಂತಹ ರೈತಸಂಘ ಈಗ ಎಲ್ಲ ತಾಲ್ಲೂಕುಗಳಿಂದ ಜಿಲ್ಲಾ ಕೇಂದ್ರಕ್ಕೆ ಕಾಲ್ನಡಿಗೆ ಮೂಲಕ ಆಗಮಿಸಿ ಒನಕೆ ಓಬವ್ವ ವೃತ್ತದಲ್ಲಿ ಬಹಿರಂಗ ಸಮಾವೇಶದ ಮೂಲಕ ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.
ಈ ಚಳವಳಿಗೆ ಸಮಿತಿ ಬೆಂಬಲವಾಗಿ ನಿಲ್ಲುವುದು ಹೊಣೆಗಾರಿಕೆಯಾಗಿದ್ದು, ಜೊತೆಗೆ ಹೋರಾಟ ಸಮಿತಿ ಕೂಡ ರೈತ, ಕಾರ್ಮಿಕ, ಕನ್ನಡಪರ ಸೇರಿ ವಿವಿಧ ಸಂಘಟನೆಗಳು ಕೇಂದ್ರ ಮತ್ತು ರಾಜ್ಯಸರ್ಕಾರದ ಮೇಲೆ ಒತ್ತಡ ತರುವ ಕೆಲಸವನ್ನು ನಿರಂತರವಾಗಿ ಮಾಡಲಿದೆ ಎಂದು ಕೋದಂಡರಾಮಯ್ಯ ತಿಳಿಸಿದ್ದಾರೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಫೆಬ್ರವರಿ 11 | ಮೆಕ್ಕೆಜೋಳ ರೇಟ್ ಎಷ್ಟಿದೆ?
ಎಲ್ಲ ರಾಜಕೀಯ ಪಕ್ಷಗಳಿಗೂ ಚುನಾವಣೆ ಅಸ್ತ್ರವಾಗಿದ್ದ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ನೀರಾವರಿ ಹೋರಾಟ ಸಮಿತಿ ನಡೆಸಿದ ಚಳವಳಿಗೆ ಮಣಿದ ಆಡಳಿತ ಪಕ್ಷಗಳು, ತಮ್ಮ ಕಾಲಘಟ್ಟದಲ್ಲಿ ಕೊಡುಗೆ ನೀಡಿವೆ. ಆದರೆ, 2009ರಲ್ಲಿ ಭೂಮಿ ಪೂಜೆ ಮೂಲಕ ಆರಂಭಗೊಂಡ ಯೋಜನೆ ಇನ್ನೂ ಪೂರ್ಣಗೊಳ್ಳದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಪಿ.ಕೋದಂಡರಾಮಯ್ಯ, ಪ್ರಧಾನ ಸಂಚಾಲಕ ಡಾ.ಬಂಜಗೆರೆ ಜಯಪ್ರಕಾಶ್, ಸಂಚಾಲಕರಾದ ಜಿ.ಎಸ್.ಉಜ್ಜನಪ್ಪ, ಚಳ್ಳಕೆರೆ ಬಸವರಾಜ್, ನರೇನಹಳ್ಳಿ ಅರುಣ್‌ಕುಮಾರ್, ಜೋಗಿಮಟ್ಟಿ ಈ.ಮಹೇಶಬಾಬು, ಆರ್.ಶೇಷಣ್ಣಕುಮಾರ್, ಕೂನಿಕೆರೆ ರಾಮಣ್ಣ ರೈತ ಸಂಘದ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿ ಪ್ರಕಟಣೆ ಹೊರಡಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
