CHITRADURGA NEWS | 02 APRIL 2026
ಹೊಳಲ್ಕೆರೆ: ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲ್ಲೂಕಿನ ಅಬ್ಬಿನಹೊಳಲು ಮತ್ತು ಹೆಗಡೆಹಳ್ಳಿ, ಹೆಬ್ಬೂರು ಗ್ರಾಮಗಳಲ್ಲಿ ಭದ್ರಾ ಮೇಲ್ದಂಡೆ ಕಾಮಗಾರಿಗಳನ್ನು ರೈತ ಮುಖಂಡರುಗಳಾದ ಲವಕುಮಾರ್ ಮತ್ತು ಮಂಜಣ್ಣ ನೇತೃತ್ವದಲ್ಲಿ ಗುರುವಾರ ಶಾಸಕ ಎಂ.ಚಂದ್ರಪ್ಪ ವೀಕ್ಷಣೆ ಮಾಡಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಏಪ್ರಿಲ್ 02 | ಹತ್ತಿ ರೇಟ್ ಎಷ್ಟಿದೆ?
ಈ ವೇಳೆ ಮಾತನಾಡಿದ ಶಾಸಕರು, ಏಪ್ರಿಲ್ 30 ರೊಳಗೆ ಕೆನಾಲ್‍ನಲ್ಲಿ ಟ್ರಯಲ್ ಆಗಿ ನೀರು ಹರಿಸಬೇಕಾಗಿರುವುದರಿಂದ ಕಾಮಗಾರಿ ಜರೂರಾಗಿ ಮುಗಿಸುವಂತೆ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು.
ಐದಾರು ವರ್ಷಗಳಿಂದ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ನ್ಯಾಯಾಲಯದಲ್ಲಿರುವುದರಿಂದ ಸಾವಿರಾರು ರೈತರೊಂದಿಗೆ ಆಗಸ್ಟ್‍ನಲ್ಲಿ ವೀಕ್ಷಿಸಿದಾಗ ಅಧಿಕಾರಿಗಳು ಅನೇಕ ಸಮಸ್ಯೆಗಳನ್ನು ಹೇಳಿಕೊಂಡಿದ್ದರು.
ಆಗ ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ತಾಕೀತು ಮಾಡಿ ಮಾಹಿತಿ ಕೊಟ್ಟ ಮೇಲೆ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಧೀಶರು ಸಹಸ್ರಾರು ರೈತರಿಗೆ ಅನುಕೂಲವಾಗಲಿ ಎನ್ನುವ ಸದುದ್ದೇಶದಿಂದ ಯೋಜನೆ ಮುಂದುವರೆಸುವಂತೆ ಲೋಕ ಅದಾಲತ್‍ಗೆ ವಹಿಸಿದ ಬಳಿಕ ಆ ಭಾಗದ ರೈತರು ಅಧಿಕಾರಿಗಳನ್ನು ಕರೆಸಿ ಚರ್ಚಿಸಿ ಪರಿಹಾರ ಕೊಟ್ಟು ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದರು.
ಇದನ್ನೂ ಓದಿ: ಬಿಎಎಂಎಸ್ ವಿದ್ಯಾರ್ಥಿನಿ ಆತ್ಮಹತ್ಯೆ | ಹೊಳಲ್ಕೆರೆಯಲ್ಲಿ ಘಟನೆ
ಹೆಗಡೆಹಳ್ಳಿ ಹತ್ತಿರ ಕೆನಾಲ್‍ನಲ್ಲಿ ಬಂಡೆ ಇರುವುದರಿಂದ ಬ್ಲಾಸ್ಟ್ ಮಾಡಿ ಕ್ಲಿಯರ್ ಮಾಡಲು ಅಧಿಕಾರಿಗಳು ಹಗಲು-ರಾತ್ರಿ ಶ್ರಮಿಸುತ್ತಿದ್ದರು ಆಗಿಲ್ಲ. ದೊಡ್ಡ ಪ್ರಮಾಣದ ತಂತ್ರಗಳನ್ನು ಬಳಸಿ ಹತ್ತದಿನೈದು ದಿನಗಳಲ್ಲಿ ಮುಗಿಸುವಂತೆ ಸೂಚಿಸಿದ್ದೇನೆ. ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಎಂಬತ್ತು ಅಡಿ ಹಾಸು ಬಂಡೆಯಿರುವುದನ್ನು ತೆಗೆಯಲು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು. ಏಪ್ರಿಲ್-30 ರೊಳಗೆ ಇಲ್ಲಿಂದ ಗೋನೂರುವರೆಗೂ ನೀರು ಟ್ರಯಲ್ ಆಗಿ ಹರಿಯಬೇಕು. ಗುತ್ತಿಗೆದಾರರಿಗೆ ಪೂರ್ಣ ಪ್ರಮಾಣದಲ್ಲಿ ಪೇಮೆಂಟ್ ನೀಡಲಾಗಿದೆ. ಒಂದು ತಿಂಗಳೊಳಗೆ ನೀರು ಕೊಡಬೇಕಾಗಿರುವುದರಿಂದ ಮುತುವರ್ಜಿ ವಹಿಸಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಶಾಸಕ ಡಾ.ಎಂ.ಚಂದ್ರಪ್ಪ ಎಚ್ಚರಿಸಿದರು.
ಅಧಿಕಾರಿಗಳ ಮೇಲೆ ನನಗೆ ಸಂಪೂರ್ಣವಾಗಿ ವಿಶ್ವಾಸವಿದೆ. ತ್ವರಿತಗತಿಯಲ್ಲಿ ಕೆಲಸ ಆಗಬೇಕು. ಎಷ್ಟೆ ಸಮಸ್ಯೆಗಳಿದ್ದರೂ ಟ್ರಯಲ್ ಆಗಿ ನೀರು ಬಿಡುವ ಆಲೋಚನೆ ಮಾಡಿದ್ದೇವೆ. ನೂರಕ್ಕೆ ನೂರು ಯಶಸ್ವಿಯಾಗುತ್ತದೆಂದುಕೊಂಡಿದ್ದೇನೆ. ಅಧಿಕಾರಿಗಳು ಮಾಡುವ ಕೆಲಸ ನೋಡಿ ನನಗೂ ಖುಷಿಯಾಗಿದೆ. ಚೆನ್ನಾಗಿ ಕೆಲಸ ನಡೆದಿದೆ ಎಂದು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಜೋಗಿಮಟ್ಟಿಯಲ್ಲಿ ವಾಚ್ ಟವರ್ ನಿರ್ಮಾಣಕ್ಕೆ ಪಪ್ಪಿಸ್ ಸ್ಪೂಡೆಂಟ್ ವಿಂಗ್ ಕಾರ್ಯಕರ್ತರ ಮನವಿ
ಪರಮೇಶಣ್ಣ, ಚಂದ್ರಪ್ಪ, ಜಗದೀಶ್, ಚಂದ್ರಶೇಖರ್, ನಂದಕುಮಾರ್, ನಾಗರಾಜ್, ವಸಂತಕುಮಾರ್, ರಾಜಣ್ಣ, ಪ್ರಭಾಕರ್, ರೈತ ಸಂಘದ ಮುಖಂಡರಾದ ನಾಗರಾಜ್, ಶಿವಕುಮಾರ್, ಮಲ್ಲಿಕಾರ್ಜುನ್, ಕುರುಬ ಸಮಾಜದ ಅಧ್ಯಕ್ಷ ಹಳ್ಳಪ್ಪ ಹಾಗೂ ನೂರಾರು ರೈತರು ಕಾಮಗಾರಿ ವೀಕ್ಷಣೆ ಸಂದರ್ಭದಲ್ಲಿ ಹಾಜರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
