CHITRADURGA NEWS | 07 MAY 2026
ಹೊಸದುರ್ಗ: ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದ ಭಕ್ತಾದಿಗಳು ಸಾಣೇಹಳ್ಳಿ ಶ್ರೀಮಠದ ನಿತ್ಯ ದಾಸೋಹ ಹಾಗೂ ವಿದ್ಯಾರ್ಥಿ ನಿಲಯದ ಬಳಕೆಗಾಗಿ ವಿವಿಧ ದವಸ-ಧಾನ್ಯಗಳನ್ನು ಗುರುವಾರ ಮಠಕ್ಕೆ ಸಮರ್ಪಿಸಿದರು.
ಇದನ್ನೂ ಓದಿ: 6ನೇ ತರಗತಿ ಪ್ರವೇಶಾತಿಗೆ ಮೇ.12 ರಂದು ಅರ್ಹತಾ ಪರೀಕ್ಷೆ
ಗ್ರಾಮಸ್ಥರು ಒಟ್ಟಾಗಿ 9 ಕ್ವಿಂಟಾಲ್ ಅಕ್ಕಿ, 40 ಕೆಜಿ ಬೆಲ್ಲ, 5 ಕೆಜಿ ಒಣಮೆಣಸಿನಕಾಯಿ, 5 ಕೆಜಿ ಖಾರದ ಪುಡಿ ಸೇರಿದಂತೆ ವಿವಿಧ ದಿನಸಿ ಸಾಮಗ್ರಿಗಳನ್ನು ಶ್ರೀಮಠಕ್ಕೆ ಅರ್ಪಿಸಿ, ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಭಕ್ತಾದಿಗಳು ಕಾಯಕ ಮತ್ತು ದಾಸೋಹ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿರುವುದು ಶ್ಲಾಘನೀಯ. ಇಂತಹ ಸತ್ಕಾರ್ಯಗಳಿಂದ ಧರ್ಮದ ದಾರಿಯಲ್ಲಿ ನಡೆದು ಆದರ್ಶ ವ್ಯಕ್ತಿತ್ವ ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ. ವ್ಯಕ್ತಿ ಪರಿಶುದ್ಧವಾಗಿದ್ದರೆ ಸಮಾಜವೂ ಶುದ್ಧವಾಗುತ್ತದೆ ಎಂದರು.
ಹಿರಿಯರು ಕಿರಿಯರಿಗೆ ಮಾರ್ಗದರ್ಶಕರಾಗುವ ಮೂಲಕ ಮನಸ್ಸು, ಮನೆ ಹಾಗೂ ಸಮಾಜದ ಸುಧಾರಣೆಗೆ ಶ್ರಮಿಸಬೇಕು. ನೀವೆಲ್ಲರು ಸಂಸ್ಕೃತಿ, ಕಲೆ, ಸಾಹಿತ್ಯ ಮತ್ತು ಸಂಗೀತದ ಬಗ್ಗೆ ಒಲವು ಬೆಳೆಸಿಕೊಂಡು ಸುಸಂಸ್ಕೃತ ಜೀವನ ನಡೆಸಬೇಕು.
ಇದನ್ನೂ ಓದಿ: ಅನಧಿಕೃತ ಶಾಲೆಗಳ ವಿರುದ್ಧ ಕಾನೂನು ಕ್ರಮಕ್ಕೆ ಎನ್.ಆರ್.ಮಹೇಶ್ವರಪ್ಪ ಸೂಚನೆ
ಶಿಕ್ಷಣ ಮತ್ತು ದಾಸೋಹಕ್ಕೆ ನೀಡುವ ಈ ಸದ್ಭಾವನೆಗಳು ಇತರರಿಗೂ ಮಾದರಿಯಾಗಲಿ ಎಂದು ಶ್ರೀಗಳು ಹಾರೈಸಿದರು.
ಈ ಸಂದರ್ಭದಲ್ಲಿ ಲಿಂಗದಹಳ್ಳಿ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

