CHITRADURGA NEWS | 02 APRIL 2026
ಚಿತ್ರದುರ್ಗ: ಜೋಗಿಮಟ್ಟಿ ವನ್ಯಧಾಮದಲ್ಲಿ ಅತ್ಯಾಧುನಿಕ ವಾಚ್ ಟವರ್ ನಿರ್ಮಾಣ ಮಾಡಬೇಕು ಎಂದು ಪಪ್ಪಿ ಸ್ ಸ್ಪೂಡೆಂಟ್ ವಿಂಗ್ ಕಾರ್ಯಕರ್ತರು ಜೋಗಿಮಟ್ಟಿ ವಲಯ ಅರಣ್ಯ ಅಧಿಕಾರಿ ವಸಂತ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರಿಂದ ಸ್ವಯಂ ಗಣತಿ ದಾಖಲಾತಿ
ಜೋಗಿಮಟ್ಟಿ ವನ್ಯಜೀವಿ ಅಭಯಾರಣ್ಯವಾಗಿದ್ದು ಚಿತ್ರದುರ್ಗ ಜಿಲ್ಲೆಯ ಪ್ರಮುಖ ಪ್ರಕೃತಿ ಸೌಂದರ್ಯ ಮತ್ತು ವನ್ಯಜೀವಿ ಸಂಪತ್ತಿನ ತಾಣವಾಗಿದೆ. ಇಲ್ಲಿ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ, ಪ್ರವಾಸಿಗರಿಗೆ ಸುರಕ್ಷಿತವಾಗಿ ಹಾಗೂ ಸಮಗ್ರವಾಗಿ ವನ್ಯಜೀವಿ ವೀಕ್ಷಣೆ ಮಾಡಲು ಸೂಕ್ತ ಸೌಲಭ್ಯಗಳ ಕೊರತೆ ಇದೆ ಆದ್ದರಿಂದ, ಜೋಗಿ ಮಟ್ಟಿ ವನ್ಯಧಾಮದಲ್ಲಿ ಅತ್ಯಾಧುನಿಕ ವಾಚ್ ಟವರ್ ಅಗತ್ಯವಾಗಿ ನಿರ್ಮಾಣ ಮಾಡಬೇಕಿದೆ.
ವಾಚ್ ಟವರ್ ನಿರ್ಮಾಣ ಮಾಡುವುದರಿಂದ ಪ್ರವಾಸಿಗರಿಗೆ ಸುಲಭ ಹಾಗೂ ಸುರಕ್ಷಿತ ವನ್ಯಜೀವಿ ವೀಕ್ಷಣೆ ಅನುಕೂಲವಾಗುತ್ತದೆ ಹಾಗೂ ಪ್ರಕೃತಿ ಸೌಂದರ್ಯವನ್ನು ಎತ್ತರದಿಂದ ಆನಂದಿಸುವ ಅವಕಾಶ ಕೊಟ್ಟಂತಾಗುತ್ತದೆ.
ಪ್ರವಾಸೋದ್ಯಮವನ್ನು ಉತ್ತೇಜಿಸಿದಂತಾಗುತ್ತದೆ, ಇದರಿಂದಾಗಿ ಪ್ರವಾಸಿಗರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಪಪ್ಪಿಸ್ ಸ್ಪೂಡೆಂಟ್ ವಿಂಗ್ ಕಾರ್ಯಕರ್ತರು ಪತ್ರದ ಮುಖಾಂತರ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಜನಗಣತಿ ಸ್ವಯಂ ಪ್ರಕ್ರಿಯೆಗೆ ನ್ಯಾಯಾಧೀಶರು, ಡಿಸಿ ಚಾಲನೆ
ಈ ಸಂದರ್ಭದಲ್ಲಿ ಪಪ್ಪಿ ಸ್ ಸ್ಟೂಡೆಂಟ್ ವಿಂಗ್ ಅಧ್ಯಕ್ಷ ರವಿ, ಉಪಾಧ್ಯಕ್ಷ ಸಂದೀಪ್ ,ಕಾರ್ಯದರ್ಶಿ ಸಲೀಂ ಹಾಗೂ ಸದಸ್ಯರಾದ ದರ್ಶನ್, ನಿಜಾಂ ಇದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
