CHITRADURGA NEWS | 23 MAY 2026
ಚಿತ್ರದುರ್ಗ: ಭದ್ರಾ ನೀರನ್ನ ಗೋನೂರು ಕೆರೆಗೆ ಹರಿಸುವ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾ ಮೇಲ್ದಂಡೆ ಯೋಜನೆಯ ಮೂಲವಾದ ತುಂಗಾ ಜಲಾಶಯ ಸೇರಿದಂತೆ ವಿವಿಧ ಕಾಮಗಾರಿ ಪ್ರದೇಶಗಳನ್ನು ಶಾಸಕರಾದ ಕೆ.ಸಿ ವೀರೇಂದ್ರ ಪಪ್ಪಿ, ಗೋವಿಂದಪ್ಪ, ರಘುಮೂರ್ತಿ, ಡಾ.ಎಂ.ಚಂದ್ರಪ್ಪ ವೀಕ್ಷಣೆ ನಡೆಸಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಮೇ.23 | ಹತ್ತಿ ರೇಟ್….
ತುಂಗಾ ಜಲಾಶಯದಿಂದ ಭದ್ರಾ ಜಲಾಶಯದವರೆಗೆ ಹಾಗೂ ಅಲ್ಲಿಂದ ಚಿತ್ರದುರ್ಗ ಶಾಖಾ ಕಾಲುವೆ, ವೈ-ಜಂಕ್ಷನ್ ಮತ್ತು ತುಮಕೂರು ಕಾಲುವೆ ಜಂಕ್ಷನ್‌ಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿ, ಯೋಜನೆಯ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು.
ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ನಿಗದಿತ ಅವಧಿಯೊಳಗೆ ಭದ್ರಾ ನೀರು ಚಿತ್ರದುರ್ಗ ಸೇರಿದಂತೆ ಯೋಜನಾ ವ್ಯಾಪ್ತಿಯ ಪ್ರದೇಶಗಳಿಗೆ ತಲುಪುವಂತೆ ಸಂಬಂಧಿತ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಯಿತು.
ಶಾಸಕ ಕೆ.ಸಿ ವಿರೇಂದ್ರ ಪಪ್ಪಿ ಮಾತನಾಡಿ, ಚಿತ್ರದುರ್ಗದ ಬಹುದಿನಗಳ ಕನಸಾದ ಭದ್ರಾ ನೀರು ಕೆರೆಗಳಿಗೆ ಹರಿಸುವ ಯೋಜನೆ ಇನ್ನೇನು ಕೆಲವೇ ದಿನಗಳಲ್ಲಿ ನನಸಾಗುವುದು ಅದರ ಸಿದ್ಧತೆಯನ್ನ ಈಗಾಗಲೇ ಭದ್ರ ಮೇಲ್ದಂಡೆ ಯೋಜನೆ ಅಧಿಕಾರಿಗಳು ಬಿಡುವಿಲ್ಲದೆ ಕಾರ್ಯನರ್ಮುಖವಾಗಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ಗಣಿಬಾಧಿತ ಗ್ರಾಮಗಳ ಮಹಿಳೆಯರಿಗೆ ಹಸು, ಎಮ್ಮೆ ವಿತರಣೆಗೆ ಅರ್ಜಿ ಆಹ್ವಾನ | ಯಾವ ಊರು ಗಣಿ ಬಾಧಿತ ಪೂರ್ಣ ವಿವರಕ್ಕೆ ಕ್ಲಿಕ್ ಮಾಡಿ
ಭದ್ರಾ ನೀರು ಹರಿಯುವಿಕೆಯ ನಿರೀಕ್ಷೆಗಾಗಿ ರೈತರು ಕಾಯುತ್ತಿದ್ದಾರೆ, ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರದುರ್ಗದ ಬಹುತೇಕ ಎಲ್ಲಾ ಕೆರೆಗಳಿಗೆ ನೀರನ್ನು ಉಡಪಡಿಸಲಾಗುವುದು ಇದರಿಂದ ರೈತರ ಬದುಕು ಹಸನಾಗುವುದು ಎಂದು ತಿಳಿಸಿದರು.
ಭದ್ರಾ ಜಲಾಶಯದಿಂದ ಚಿತ್ರದುರ್ಗಕ್ಕೆ ಕಾಲವೇ ಮುಖಾಂತರ ನೀರು ಹರಿಸುವ ಯೋಜನೆ ಎಲ್ಲವೂ ಸಹ ಕುಂಠಿತವಾಗದೆ ಯಾರಿಗೂ ಕೂಡ ತೊಂದರೆ ಆಗದಂತೆ ನೀರನ್ನ ತರುವಂತಹ ಕೆಲಸವನ್ನು ಅಧಿಕಾರಿಗಳು ವಹಿಸಿಕೊಳ್ಳಬೇಕು ನಿಮ್ಮಗಳಿಗೆ ಪೂರಕವಾಗಿ ಬೆಂಬಲವಾಗಿ ಸರ್ಕಾರ ಇರುತ್ತದೆ, ರೈತರ ಅನುಕೂಲಕ್ಕಾಗಿ ಈ ಒಂದು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಹಾಗಾಗಿ ಶೀಘ್ರವೇ ತೊರೆತಗತಿಯಲ್ಲಿ ಉಳಿದಂತಹ ಕೆಲಸಗಳು ಮುಗಿಸಿ ರೈತರಿಗೆ ನೀರು ದೊರಕಿಸಿ ಕೊಡುವಂತ ಜವಾಬ್ದಾರಿಯನ್ನ ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಗಳು ಅಧಿಕಾರಿಗಳಿಗೆ ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ಮಂಡಗದ್ದೆ ಬಳಿ ಇರುವ ತುಂಗದಿಂದ ಭದ್ರಾ ಡ್ಯಾಮ್ ಗೆ ಬರುವಂತಹ ನೀರಿನ ಕಾಮಗಾರಿ ವೀಕ್ಷಣೆ ಹಾಗೂ ಭದ್ರಾವತಿ, ಲಕ್ಕವಳ್ಳಿ, ಕಡೂರು, ಅಜಾಂಪುರ ವೈ ಜಂಕ್ಷನ್, ಹೆಗಡೆಹಾಳ್, ಅಭಿನಹೊಳಲು ಶಾಖ ಕಾಲುವೆ ಬಳಿ ತೆರಳಿ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ನಿಗದಿತ ಅವಧಿಯೊಳಗೆ ಭದ್ರಾ ನೀರು ಚಿತ್ರದುರ್ಗ ಸೇರಿದಂತೆ ಯೋಜನಾ ವ್ಯಾಪ್ತಿಯ ಪ್ರದೇಶಗಳಿಗೆ ತಲುಪುವಂತೆ ಸಂಬಂಧಿತ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಯಿತು.
ಇದನ್ನೂ ಓದಿ: ಶಾಲಾ ದಾಖಲಾತಿ ಆಂದೋಲನವು ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ಸಹಕಾರಿ
ಮಾಜಿ ಸಂಸದರಾದ ಬಿ.ಎನ್. ಚಂದ್ರಪ್ಪ, ವಿಶ್ವೇಶ್ವರಯ್ಯ ಜಲ ನಿಯಮಿತ ವ್ಯವಸ್ಥಾಪಕ ನಿರ್ದೇಶಕರಾದ ಸಣ್ಣ ಚಿತ್ತಯ್ಯ, ಭದ್ರ ಮೇಲ್ದಂಡೆ ಯೋಜನೆ ಚಿತ್ರದುರ್ಗ ವಲಯ ಮುಖ್ಯ ಇಂಜಿನಿಯರ್ ಎಫ್.ಹೆಚ್.ಲಂಬಾಣಿ, ಭದ್ರಾ ಮೇಲ್ದಂಡೆ ಯೋಜನೆಯ ಅಧಿಕ್ಷಕ ಇಂಜಿನಿಯರ್ ಹರೀಶ್, ಉಪ ಮುಖ್ಯ ಅಧಿಕ್ಷಕ ಇಂಜಿನಿಯರ್ ಪುಷ್ಪಲತಾ, ಕಾರ್ಯ ಪಾಲಕ ಇಂಜಿನಿಯರ್ ಹರ್ಷ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಿರಣ್ಹಾಗೂ ಸೇರಿದಂತೆ ಭದ್ರಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳು ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

