CHITRADURGA NEWS | 02 APRIL 2026
ಚಿತ್ರದುರ್ಗ: ತಂತ್ರಜ್ಞಾನ ಎಷ್ಟು ಮುಂದುವರೆದಿದಯೋ ಅಷ್ಟೇ ಸವಾಲುಗಳು ಇರುತ್ತವೆ ಎನ್ನುವುದು ಪ್ರತಿಯೊಬ್ಬ ಇಂಜಿನಿಯರ್ಗಳ ಅನುಭವಕ್ಕೆ ಬರುತ್ತದೆ ಎಂದು ನಿವೃತ್ತಿ ಹೊಂದಿದ ಭದ್ರಾ ಮೇಲ್ದಂಡೆ ಹಿರಿಯೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಬಾರಿಕರ ಚಂದ್ರಪ್ಪ ತಿಳಿಸಿದರು.
ಇದನ್ನೂ ಓದಿ: ಚಿತ್ರದುರ್ಗ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾಗಿ ಎಂ.ಜುಂಜಣ್ಣ ಅಧಿಕಾರ ಸ್ವೀಕಾರ
ನಗರದ ವಿಶ್ವೇಶ್ವರಯ್ಯ ಜಲನಿಗಮದ ಕಚೇರಿಯಲ್ಲಿ ವಯೋ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಅಪ್ಪರ್ ಕೃಷ್ಣಾ ಯೋಜನೆಯಲ್ಲಿ ಹದಿನೆಂಟು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಇಂಜಿನಿಯರ್ಗಳ ವೃತ್ತಿಯಲ್ಲಿ ಕೆಲವೊಮ್ಮೆ ಕಷ್ಟ ಎದುರಿಸಬೇಕಾಗುತ್ತದೆ. ಕಲಿಯುವುದು ತುಂಬಾ ಇರುತ್ತದೆ. ನನ್ನ 32 ವರ್ಷಗಳ ಸೇವಾ ಅವಧಿಯಲ್ಲಿ ಮೇಲಾಧಿಕಾರಿಗಳ, ಸಹೋದ್ಯೋಗಿಗಳ ಹಾಗೂ ಸಿಬ್ಬಂದಿ ಸಹಕಾರದಿಂದ ಎಲ್ಲವನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ ಎಂದರು.
ಇಳಕಲ್, ಅಜ್ಜಂಪುರ, ತುಂಗಭದ್ರಾದಲ್ಲಿ ಕೆಲಸ ಮಾಡಿದ್ದೇನೆ. ನೀರು ನಿರ್ವಹಣೆ ದೊಡ್ಡ ಸವಾಲಿನ ಕೆಲಸ. ಭದ್ರಾ ಯೋಜನೆಯಿಂದ ಹೊಳಲ್ಕೆರೆ ತಾಲ್ಲೂಕಿನ ಮೂವತ್ತು ಕೆರೆಗಳಿಗೆ ನೀರು ಬರುವುದಿದೆ. ಬಾಗಲಕೋಟೆಯಲ್ಲಿ ನಾನು ಇಂಜಿನಿಯರಿಂಗ್ ಶಿಕ್ಷಣ ಪೂರೈಸಿದೆ. ದೇವರು ಅವಕಾಶ ಕೊಟ್ಟ. ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನನ್ನ ಜವಾಬ್ದಾರಿಯನ್ನು ನಿಭಾಯಿಸಿದೆ. 118 ವರ್ಷಗಳ ಇತಿಹಾಸವಿರುವ ವಾಣಿವಿಲಾಸ ಸಾಗರದಿಂದ 30 ಸಾವಿರ ಎಕರೆಗೆ ನೀರು ಒದಗಿಸುತ್ತಿದ್ದೇವೆ ಎಂದು ವಿವರಿಸಿದರು.
ಇದನ್ನೂ ಓದಿ: ಅಡಿಕೆ ಧಾರಣೆ | 1 ಏಪ್ರಿಲ್ | ಇಂದಿನ ಅಡಿಕೆ ಮಾರುಕಟ್ಟೆ ವಿವರ
ಸಹಾಯಕ ಇಂಜಿನಿಯರ್ ಹರ್ಷದ್ ಮಾತನಾಡಿ, 32 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಬಾರಿಕರ ಚಂದ್ರಪ್ಪ ಅವರು ಸದಾ ನಗುಮುಗದಿಂದ ಇರುತ್ತಿದ್ದರು. ಸಿಬ್ಬಂದಿಯೊಂದಿಗೆ ಎಂದಿಗೂ ಕಟುವಾಗಿ ವರ್ತಿಸಲಿಲ್ಲ. ಎಂತಹ ಸಮಸ್ಯೆಗಳಿದ್ದರು ಸಮಾಧಾನದಿಂದ ಹೇಳಿ ಕೆಲಸ ತೆಗೆದುಕೊಳ್ಳುತ್ತಿದ್ದರು. ನಿವೃತ್ತಿ ಜೀವನಕ್ಕೆ ಶುಭ ಕೋರಿದರು.
ಇಂಜಿನಿಯರ್ ಪುಷ್ಪ ಮಾತನಾಡಿ, ಸರಳ, ಸಜ್ಜನಿಕೆ, ಶಾಂತ ಸ್ವಭಾವದವರಾಗಿದ್ದ ಬಾರಿಕರ ಚಂದ್ರಪ್ಪ ನವರು ಸಿಬ್ಬಂದಿಗಳನ್ನು ಸದಾ ಗೌರವದಿಂದ ಕಾಣುತ್ತಿದ್ದರು. ಅವರ ಕೈಕೆಳಗೆ ನಾವುಗಳು ಖುಷಿಯಿಂದ ಕೆಲಸ ಮಾಡುತ್ತಿದ್ದೆವು ಎಂದು ಹೇಳಿದರು.
ಇದನ್ನೂ ಓದಿ: ಜನಗಣತಿ ಸ್ವಯಂ ಪ್ರಕ್ರಿಯೆಗೆ ನ್ಯಾಯಾಧೀಶರು, ಡಿಸಿ ಚಾಲನೆ
ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ಎಚ್.ಎಫ್.ಲಮಾಣಿ ಅವರು ನಿವೃತ್ತಿ ಹೊಂದಿದ ಬಾರಿಕರ ಚಂದ್ರಪ್ಪ ದಂಪತಿಯನ್ನು ಸನ್ಮಾನಿಸಿದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

