CHITRADURGA NEWS | 28 November 2026
ಮೇಷ: (ಚು, ಚೆ, ಚೋ, ಲಾ, ಲೀ, ಲು, ಲೆ, ಲೋ, ಆ) ಆಪ್ತರೊಂದಿಗೆ ಸೌಹಾರ್ದಯುತವಾಗಿ ವರ್ತಿಸುತ್ತಾರೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಪ್ರತಿಭೆ ಬೆಳಕಿಗೆ ಬರುತ್ತದೆ. ವ್ಯಾಪಾರಸ್ಥರಿಗೆ ಹೊಸ ಅವಕಾಶಗಳು ದೊರೆಯುತ್ತವೆ. ಸಮಾಜದಲ್ಲಿ ಗೌರವ, ಪ್ರತಿಷ್ಠೆಗಳಿಗೆ ಯಾವುದೇ ಕೊರತೆಯಿರುವುದಿಲ್ಲ. ದೀರ್ಘಕಾಲದ ಸಾಲದ ಹೊರೆಗಳಿಂದ ಮುಕ್ತಿ ದೊರೆಯುತ್ತದೆ. ಮಕ್ಕಳ ವಿದ್ಯಾಭ್ಯಾಸ ಹಾಗೂ ಉದ್ಯೋಗದ ವಿಷಯದಲ್ಲಿ ಶುಭಸುದ್ದಿಗಳು ಲಭಿಸುತ್ತವೆ. ಅದೃಷ್ಟದ ದಿಕ್ಕು:ಪಶ್ಚಿಮ, ಅದೃಷ್ಟದ ಸಂಖ್ಯೆ:8, ಅದೃಷ್ಟದ ಬಣ್ಣ:ಹಳದಿ
ವೃಷಭ: (ಇ, ಓ, ಎ, ಒ, ವಾ, ವಿ, ವು, ವೆ, ವೊ) ಉದ್ಯೋಗಿಗಳಿಗೆ ದೊರೆತ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಕುಟುಂಬ ಸದಸ್ಯರೊಂದಿಗಿನ ವಿವಾದಗಳನ್ನು ಬಗೆಹರಿಸಿಕೊಳ್ಳುತ್ತಾರೆ. ವೃತ್ತಿ, ವ್ಯಾಪಾರಗಳಲ್ಲಿ ದೃಢ ನಿರ್ಧಾರಗಳನ್ನು ಕಾರ್ಯರೂಪಕ್ಕೆ ತರುತ್ತಾರೆ. ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ನಿರೀಕ್ಷಿತ ಸಹಕಾರ ದೊರೆಯುತ್ತದೆ. ಪ್ರಮುಖ ಕಾರ್ಯಗಳಲ್ಲಿ ಸ್ವಂತ ಆಲೋಚನೆಗಳಂತೆ ಮುಂದುವರಿಯುತ್ತಾರೆ. ಅದೃಷ್ಟದ ದಿಕ್ಕು:ಉತ್ತರ, ಅದೃಷ್ಟದ ಸಂಖ್ಯೆ:4, ಅದೃಷ್ಟದ ಬಣ್ಣ:ಕೆಂಪು
ಮಿಥುನ: (ಕಾ, ಕೀ, ಕೂ, ಘ, ಛ, ಕೆ, ಕೊ, ಹ) ಧಾರ್ಮಿಕ ಸೇವಾ ಕಾರ್ಯಕ್ರಮಗಳಲ್ಲಿ ವಿಶೇಷವಾಗಿ ಪಾಲ್ಗೊಳ್ಳುತ್ತಾರೆ. ಮಕ್ಕಳೊಂದಿಗೆ ಅನಗತ್ಯ ಮನಸ್ತಾಪಗಳು ಉಂಟಾಗುತ್ತವೆ. ಸ್ಥಿರಾಸ್ತಿ ಸಂಬಂಧಿತ ಒಪ್ಪಂದಗಳು ಮುಂದೂಡಲ್ಪಡುತ್ತವೆ. ವೃತ್ತಿ, ಉದ್ಯೋಗಗಳಲ್ಲಿ ಸಮಸ್ಯಾತ್ಮಕ ವಾತಾವರಣ ಎದುರಾಗುತ್ತದೆ. ಸಾಲದ ಒತ್ತಡದಿಂದ ಮಾನಸಿಕ ಒತ್ತಡ ಹಾಗೂ ತಲೆನೋವು ಉಂಟಾಗಬಹುದು. ಹೆಚ್ಚಿನ ಶ್ರಮದೊಂದಿಗೆ ದೂರ ಪ್ರಯಾಣ ಮಾಡಬೇಕಾಗುತ್ತದೆ. ಅದೃಷ್ಟದ ದಿಕ್ಕು:ದಕ್ಷಿಣ, ಅದೃಷ್ಟದ ಸಂಖ್ಯೆ:7, ಅದೃಷ್ಟದ ಬಣ್ಣ:ನೀಲಿ
ಕರ್ಕ: (ದಾ, ದೇ, ದು, ದೇ, ದೋ, ಹೂ, ಹೆ, ಹೋ) ಸ್ನೇಹಿತರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳುತ್ತೀರಿ. ಅಂದುಕೊಂಡ ಸಮಯಕ್ಕೆ ಕಾರ್ಯಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಬಾಧಿಸುತ್ತವೆ. ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ವಿವಾದಗಳು ಉಂಟಾಗುತ್ತವೆ. ಉದ್ಯೋಗದಲ್ಲಿ ಮೇಲಧಿಕಾರಿಗಳ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ವ್ಯಾಪಾರಗಳು ಮಂದಗತಿಯಲ್ಲಿ ಸಾಗುತ್ತವೆ. ಅದೃಷ್ಟದ ದಿಕ್ಕು:ನೈಋತ್ಯ, ಅದೃಷ್ಟದ ಸಂಖ್ಯೆ:3, ಅದೃಷ್ಟದ ಬಣ್ಣ:ಹಳದಿ
ಸಿಂಹ: (ಮಾ, ಮೀ, ಮೂ, ಮೊ, ಟಾ, ಟೀ, ಟೂ, ಟೆ) ಎಲ್ಲರೊಂದಿಗೆ ಸೌಹಾರ್ದಯುತವಾಗಿ ವರ್ತಿಸಿ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ನೂತನ ವಾಹನ ಖರೀದಿಸುವ ಯೋಗವಿದೆ. ಸಮಾಜದಲ್ಲಿ ಕೀರ್ತಿ, ಪ್ರತಿಷ್ಠೆಗಳು ಹೆಚ್ಚಾಗುತ್ತವೆ. ಜೀವನ ಸಂಗಾತಿಯೊಂದಿಗೆ ಪುಣ್ಯಕ್ಷೇತ್ರಗಳ ದರ್ಶನ ಮಾಡುತ್ತಾರೆ. ಹಣಕಾಸಿನ ವಿಚಾರದಲ್ಲಿ ಮಾಡುವ ಪ್ರಯತ್ನಗಳು ಅನುಕೂಲಕರ ಫಲಿತಾಂಶಗಳನ್ನು ನೀಡುತ್ತವೆ. ಬಂಧುಮಿತ್ರರ ಸಮಾಗಮ ಸಂತೋಷವನ್ನು ಉಂಟುಮಾಡುತ್ತದೆ. ಅದೃಷ್ಟದ ದಿಕ್ಕು:ಪಶ್ಚಿಮ, ಅದೃಷ್ಟದ ಸಂಖ್ಯೆ:8, ಅದೃಷ್ಟದ ಬಣ್ಣ:ಕೆಂಪು
ಕನ್ಯಾ: (ಪಾ, ಪೀ, ಪೂ, ಷ, ಣ , ಪೆ , ಪೊ) ಬಂಧುಮಿತ್ರರಿಂದ ಸಹಾಯ, ಸಹಕಾರ ದೊರೆಯುತ್ತದೆ. ವ್ಯಾಪಾರಗಳು ಹೆಚ್ಚಿನ ಉತ್ಸಾಹದಿಂದ ಸಾಗುತ್ತವೆ. ನಿರುದ್ಯೋಗಿಗಳ ಉದ್ಯೋಗ ಪ್ರಯತ್ನಗಳು ಫಲ ನೀಡುತ್ತವೆ. ದೀರ್ಘಕಾಲದ ಅನಾರೋಗ್ಯ ಸಮಸ್ಯೆಗಳಿಂದ ಉಪಶಮನ ದೊರೆಯುತ್ತದೆ. ವೃತ್ತಿ, ಉದ್ಯೋಗಗಳಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ ಪಡೆಯುತ್ತಾರೆ. ಅನಿರೀಕ್ಷಿತ ಧನಲಾಭದ ಸೂಚನೆಗಳಿವೆ. ಅದೃಷ್ಟದ ದಿಕ್ಕು:ಪೂರ್ವ, ಅದೃಷ್ಟದ ಸಂಖ್ಯೆ:6, ಅದೃಷ್ಟದ ಬಣ್ಣ:ಬಿಳಿ
ತುಲಾ: (ರಾ, ರೀ, ರೂ, ರೆ, ರೊ, ತಾ, ತೀ, ತೂ, ತೆ) ಉದ್ಯೋಗದಲ್ಲಿ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಕೈಗೊಂಡ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತವೆ. ಕೆಲವರ ವರ್ತನೆಯಿಂದ ಮಾನಸಿಕವಾಗಿ ನೋವುಂಟಾಗುತ್ತದೆ. ಕುಟುಂಬ ವ್ಯವಹಾರಗಳಿಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ಸ್ಥಿರತೆ ಇರುವುದಿಲ್ಲ. ಬೆಲೆಬಾಳುವ ವಸ್ತುಗಳ ವಿಷಯದಲ್ಲಿ ಎಚ್ಚರಿಕೆಯಿಂದ ವರ್ತಿಸಬೇಕು. ವ್ಯಾಪಾರದಲ್ಲಿ ಕೈಗೊಂಡ ನಿರ್ಧಾರಗಳು ನಿರೀಕ್ಷಿತ ಫಲ ನೀಡುವುದಿಲ್ಲ. ಅದೃಷ್ಟದ ದಿಕ್ಕು:ಉತ್ತರ, ಅದೃಷ್ಟದ ಸಂಖ್ಯೆ:5, ಅದೃಷ್ಟದ ಬಣ್ಣ:ಬೂದು
ವೃಶ್ಚಿಕ: (ತೊ, ನಾ, ನೀ, ತೊ, ನಾ, ನೀ, ನೆ, ನೊ, ಯಾ, ಯೀ, ಯೂ) ಅಗತ್ಯ ಸಮಯದಲ್ಲಿ ಕೈಯಲ್ಲಿ ಹಣದ ಕೊರತೆ ಎದುರಾಗುತ್ತದೆ. ಬಂಧುಮಿತ್ರರೊಂದಿಗೆ ಮಾತಿನ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ಕೈಗೊಂಡ ಕಾರ್ಯಗಳಲ್ಲಿ ವಿಳಂಬ ಉಂಟಾಗುತ್ತದೆ. ವೃತ್ತಿ, ವ್ಯಾಪಾರಗಳು ಸಾಧಾರಣವಾಗಿ ಸಾಗುತ್ತವೆ. ನೂತನ ವಾಹನ ಖರೀದಿಯ ಪ್ರಯತ್ನಗಳು ಮಂದಗತಿಯಲ್ಲಿ ಸಾಗುತ್ತವೆ. ಕುಟುಂಬದ ಹಿರಿಯರ ಆರೋಗ್ಯದ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು. ಅದೃಷ್ಟದ ದಿಕ್ಕು:ಪಶ್ಚಿಮ, ಅದೃಷ್ಟದ ಸಂಖ್ಯೆ:3, ಅದೃಷ್ಟದ ಬಣ್ಣ:ನೇರಳೆ
ಧನು: (ಥೆ, ಯೊ, ಭಾ, ಭೀ, ಭೂ, ಧಾ, ಫಾ, ಢಾ, ಭೆ)bಎಲ್ಲ ಕಡೆಯಿಂದಲೂ ಅನುಕೂಲಕರ ವಾತಾವರಣವಿರುತ್ತದೆ. ಪ್ರಮುಖ ಕಾರ್ಯಗಳಲ್ಲಿ ಧೈರ್ಯದಿಂದ ನಿರ್ಧಾರಗಳನ್ನು ಕೈಗೊಂಡು ಲಾಭಗಳನ್ನು ಗಳಿಸುತ್ತಾರೆ. ನೂತನ ವಸ್ತ್ರಾಭರಣಗಳನ್ನು ಖರೀದಿಸುತ್ತಾರೆ. ಹೊಸ ವ್ಯಾಪಾರ ಆರಂಭಿಸಲು ಇದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ಸಹೋದರರಿಂದ ಅನಿರೀಕ್ಷಿತ ಆರ್ಥಿಕ ಸಹಾಯ ದೊರೆಯುತ್ತದೆ. ಅದೃಷ್ಟದ ದಿಕ್ಕು:ಆಗ್ನೇಯ, ಅದೃಷ್ಟದ ಸಂಖ್ಯೆ:6, ಅದೃಷ್ಟದ ಬಣ್ಣ:ಹಸಿರು
ಮಕರ: (ಭೊ, ಜಾ, ಜೀ, ಖೀ, ಖೂ, ಖೆ, ಖೊ, ಗಾ, ಗೀ) ಉದ್ಯೋಗದಲ್ಲಿ ನಿರುತ್ಸಾಹದ ವಾತಾವರಣವಿರುತ್ತದೆ. ಆರ್ಥಿಕವಾಗಿ ಪ್ರತಿಕೂಲ ಪರಿಸ್ಥಿತಿಗಳು ಎದುರಾಗುತ್ತವೆ. ಇತರರಿಂದ ಅನಿರೀಕ್ಷಿತ ಟೀಕೆಗಳನ್ನು ಎದುರಿಸಬೇಕಾಗುತ್ತದೆ. ವೃತ್ತಿ ಹಾಗೂ ಬಂಧುಮಿತ್ರರೊಂದಿಗೆ ಮಾತಿನ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ಅನಗತ್ಯ ವಸ್ತುಗಳ ಮೇಲೆ ಹಣ ಖರ್ಚು ಮಾಡುತ್ತಾರೆ. ಕಣ್ಣಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಬಾಧಿಸುತ್ತವೆ. ಅದೃಷ್ಟದ ದಿಕ್ಕು:ದಕ್ಷಿಣ, ಅದೃಷ್ಟದ ಸಂಖ್ಯೆ:7, ಅದೃಷ್ಟದ ಬಣ್ಣ:ಕಂದು
ಕುಂಭ: (ಗೂ, ಗೆ, ಗೊ, ಸಾ, ಸೀ, ಸೂ, ಸೊ, ದಾ) ಸಮಾಜದಲ್ಲಿ ಗೌರವ, ಪ್ರತಿಷ್ಠೆಗಳು ಹೆಚ್ಚಾಗುತ್ತವೆ. ಬಂಧುಮಿತ್ರರಿಂದ ಬೆಲೆಬಾಳುವ ವಸ್ತುಗಳು ಹಾಗೂ ಉಡುಗೊರೆಗಳು ದೊರೆಯುತ್ತವೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ಲಭಿಸುತ್ತವೆ. ಮಕ್ಕಳ ವಿದ್ಯಾಭ್ಯಾಸ ತೃಪ್ತಿಕರವಾಗಿ ಸಾಗುತ್ತದೆ. ಸ್ನೇಹಿತರೊಂದಿಗೆ ಔತಣಕೂಟ ಹಾಗೂ ಮನರಂಜನಾ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಅದೃಷ್ಟದ ದಿಕ್ಕು:ಪಶ್ಚಿಮ, ಅದೃಷ್ಟದ ಸಂಖ್ಯೆ:8, ಅದೃಷ್ಟದ ಬಣ್ಣ:ಹಳದಿ
ಮೀನ: (ದೀ, ದೂ, ಥ, ಝ, ದೆ, ದೊ, ಚಾ, ಚೀ) ಮನೆಯಲ್ಲಿ ಹಾಗೂ ಹೊರಗೆ ಕೆಲವು ವಿಚಾರಗಳಲ್ಲಿ ಎಚ್ಚರಿಕೆಯಿಂದ ವರ್ತಿಸಬೇಕು. ಅನಗತ್ಯ ಖರ್ಚುಗಳು ಹೆಚ್ಚಾಗುತ್ತವೆ. ವೃತ್ತಿ, ಉದ್ಯೋಗಗಳಲ್ಲಿ ಸ್ಥಳ ಬದಲಾವಣೆಯ ಸೂಚನೆಗಳಿವೆ. ಇತರರೊಂದಿಗೆ ವಿವಾದಗಳಿಗೆ ದೂರವಿರುವುದು ಉತ್ತಮ. ಪ್ರಯಾಣಗಳಲ್ಲಿ ಮಾರ್ಗಮಧ್ಯೆ ಅಡೆತಡೆಗಳು ಎದುರಾಗುತ್ತವೆ. ಆರ್ಥಿಕ ವ್ಯವಹಾರಗಳಲ್ಲಿ ಆತುರದ ನಿರ್ಧಾರಗಳನ್ನು ಕೈಗೊಳ್ಳುವುದು ಸೂಕ್ತವಲ್ಲ. ಅದೃಷ್ಟದ ದಿಕ್ಕು:ಉತ್ತರ, ಅದೃಷ್ಟದ ಸಂಖ್ಯೆ:4, ಅದೃಷ್ಟದ ಬಣ್ಣ:ಹಳದಿ
