CHITRADURGA NEWS | 20 NOVEMBER 2026
ಚಿತ್ರದುರ್ಗ: ಹಿರಿಯೂರು ಉಪಚುನಾವಣೆ ವಿಚಾರದಲ್ಲಿ ಬಿಜೆಪಿ, ಜೆಡಿಎಸ್ ಎಂದು ಗೊಂದಲ ಮಾಡಿಕೊಲ್ಳುವುದಿಲ್ಲ. ಎನ್ಡಿಎ ಅಭ್ಯರ್ಥಿಯಾಗಿ ನಾವು ಸ್ಪರ್ಧೆ ಮಾಡಲಿದ್ದೇವೆ ಎಂದು ಬಿಜೆಪಿ ಮುಖಂಡ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಹಿರಿಯೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ ಇಲ್ಲ. ಯಾರಿಗೆ ಟಿಕೇಟ್ ಕೊಟ್ಟರೂ ಒಟ್ಟಿಗೆ ಕೆಲಸ ಮಾಡುತ್ತೇವೆ. ಕ್ಷೇತ್ರದ ಜನರ ಅಭಿಪ್ರಾಯ ಹಾಗೂ ಎರಡೂ ಪಕ್ಷಗಳ ಸಮನ್ವಯದಿಂದ ಕೆಲಸ ಮಾಡುತ್ತೇವೆ. ಎಂದರು.
ಇದನ್ನೂ ಓದಿ:ಚನ್ನಗಿರಿ, ತೀರ್ಥಹಳ್ಳಿ, ಶಿವಮೊಗ್ಗ ಸೇರಿ ರಾಜ್ಯದ ಅಡಿಕೆ ಧಾರಣೆ
ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ಸಿಲುಕಿ ಪರಿತಪಿಸುತ್ತಿದ್ದಾರೆ, ಬರಗಾಲದಲ್ಲಿ ಸುಲಿಗೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಹಣ ಹೊಡೆಯುವುದು ಮಾತ್ರ ಈ ಸರ್ಕಾರದ ಆಧ್ಯತೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಸಂದೇಶ ಕೊಡಬೇಕಾಗಿರುವುದರಿಂದ ಎನ್ಡಿಎ ಗೆಲ್ಲಬೇಕಾಗಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಬ್ಬು ಬೆಳರಗಾರರಿಗೆ ಜೇಬು ಖಾಲಿ ಇದೆ ಎಂದು ಹೇಳಿದ್ದಾರೆ. ಹಿರಿಯೂರು ಕ್ಷೇತ್ರಕ್ಕೆ ಬಂದು 2300 ಕೋಟಿ ರೂ. ಘೋಷಣೆ ಮಾಡುತ್ತಾರೆ. ಖಾಲಿ ಜೇಬು ಇಟ್ಟುಕೊಂಡು ಇಲ್ಲಿ ಹೇಗೆ ಅಭಿವೃದ್ಧಿ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಜಿಲ್ಲೆಯಲ್ಲಿ 6 ಹೊಸ ಮತಗಟ್ಟೆ ಆರಂಭಕ್ಕೆ ಪ್ರಸ್ತಾವನೆ | ಜಿಲ್ಲಾಧಿಕಾರಿ ಎಸ್.ರಮ್ಯಾ ಅಧ್ಯಕ್ಷತೆಯಲ್ಲಿ ನಡೆದ ಸಭೆ
ಬಾಯಿ ಮಾತಿನಲ್ಲಿ ಮಾತ್ರ ಅಭಿವೃದ್ಧಿ ಬಗ್ಗೆ ಹೇಳಿ ಹೋಗಿದ್ದಾರೆ. ಸರ್ಕಾರ್ ಜೇಬು ಖಾಲಿಯಾಗಿದೆ. ಆದರೆ, ಡಿ.ಕೆ.ಶಿವಕುಮಾರ್ ಖಜಾನೆ ಅಲ್ಲ, ಅವರದ್ದು ಭರ್ತಿಯಾಗಿದೆ. ಲೂಟಿ ಮಾಡಿರುವ ಹಣ ಇದೆ ಎಂದು ಚುನಾವಣೆಗೆ ಬರುತ್ತಿದ್ದಾರೆ. ಆದರೆ, ಹಿರಿಯೂರು ಜನ ಮಾರಾಟದ ವಸ್ತುಗಳಲ್ಲ, ನಾವು ಸ್ವಾಭಿಮಾನಿಗಳು ಎಂಬ ಸಂದೇಶ ಕೊಡಬೇಕು ಎಂದರು.
ಹಿರಿಯೂರು ಉಪಚುನಾವಣೆ ಲೂಟಿಕೋರರು ಹಾಗೂ ಹಿರಿಯೂರು ಜನರ ಸ್ವಾಭಿಮಾನದ ನಡುವಿನ ಕದನವಾಗಿದೆ. ಹಣದಲ್ಲಿ ಎಲ್ಲವನ್ನೂ ಕೊಂಡುಕೊಳ್ಳುವ ಭ್ರಮೆಯನ್ನು ಸೋಲಿಸಬೇಕಾಗಿದೆ ಎಂದು ತಿಳಿಸಿದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

