CHITRADURGA NEWS | 25 JULY 2026
ಚಿತ್ರದುರ್ಗ: ರಾಜ್ಯದಲ್ಲಿ ತಾಂಡವಾಡಿತ್ತಿರುವ ತೀವ್ರ ಬರದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಿತ್ರದುರ್ಗ ಜಿಲ್ಲೆಯಲ್ಲಿ ಮೊದಲ ಬರ ಅಧ್ಯಯನ ಪ್ರವಾಸ ಮಾಡಿದರು.
ಇದನ್ನೂ ಓದಿ: ಚಿತ್ರದುರ್ಗಕ್ಕೆ ಸಿಎಂ ಡಿಕೆಶಿ | ಎಲ್ಲೆಲ್ಲಿ ಯಾವ ಕಾರ್ಯಕ್ರಮದಲ್ಲಿ ಭಾಗೀ ಆಗ್ತಾರೆ ಪೂರ್ಣ ಮಾಹಿತಿ…
ಹಿರಿಯೂರು ತಾಲೂಕಿನ ಐಮಂಗಲ ಹೋಬಳಿ ವ್ಯಾಪ್ತಿಯ ಯರಬಳ್ಳಿ, ತಾಳವಟ್ಟಿ ವದ್ದಿಕೆರೆ, ಮರಡಿಹಳ್ಳಿಯ ವಿವಿಧ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿ ವೀಕ್ಷಿಸುತ್ತಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆಗೆ ಡಿಸಿಎಂ ಡಾ.ಜಿ.ಪರಮೇಶ್ವರ, ಈಶ್ವರ ಖಂಡ್ರೆ, ಜಿಲ್ಲೆಯ ಶಾಸಕರಾದ ಬಿ.ಜಿ.ಗೋವಿಂದಪ್ಪ, ಟಿ.ರಘುಮೂರ್ತಿ, ಕೆ.ಸಿ.ವೀರೇಂದ್ರ(ಪಪ್ಪಿ), ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಇತರರಿದ್ದಾರೆ.
ಸಿಎಂ ಭೇಟಿ ನೀಡಲಿರುವ ಜಮೀನು ವಿವರ:
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿಗೆ 3 ಗ್ರಾಮಗಳ ರೈತರ ಬೆಳೆ ವಿಮೆ ವಿವರ ಸಿದ್ಧಪಡಿಸಿದ್ದು, ಐಮಂಗಲ, ವದ್ದೀಕೆರೆ, ಯರಬಳ್ಳಿ ರೈತರ ಜಮೀನುಗಳಿಗೆ ಭೇಟಿನೀಡುತ್ತಿದ್ದಾರೆ.
ಗ್ರಾಮವಾರು ವಿವರ ಹೀಗಿದೆ:
1. ಐಮಂಗಲ ಗ್ರಾಮ
ರೈತ ಎಂ.ಆರ್. ರವಿ ಬಿನ್ ರಂಗಸ್ವಾಮಿ ಮತ್ತು ಶ್ರೀ ಎಂ.ಆರ್. ರಾಮಲಿಂಗಯ್ಯ ಬಿನ್ ರಂಗಸ್ವಾಮಿ.
ಬೆಳೆ: ಸೂರ್ಯಕಾಂತಿ (ಮಳೆ ಆಶ್ರಿತ)
ಗ್ರಾಮದ ವಿಸ್ತೀರ್ಣ: 4191.08 ಎಕರೆ. ಸಾಗುವಳಿ: 3882.38 ಎಕರೆ.
ಬಿತ್ತಿದ ಪ್ರದೇಶ: 3700 ಎಕರೆ. ಇದರಲ್ಲಿ 1400-1500 ಎಕರೆಗೆ ವಿಮೆ, 2200-2300 ಎಕರೆ ಬಿತ್ತನೆಯಾಗಿದೆ.
ಭೂಹಿಡುವಳಿದಾರರ ಸಂಖ್ಯೆ:
704- ವಿಮೆಗೆ ನೋಂದಾಯಿಸಿದ ಪ್ರಸ್ತಾವನೆ: 119 (ವಿಸ್ತೀರ್ಣ 171.36 ಹೆಕ್ಟೇರ್)
2. ವದ್ದೀಕೆರೆ ಗ್ರಾಮ
ರೈತರು: ಪಿ.ಕೆ.ಪಾಂಡುರಂಗರೆಡ್ಡಿ ಬಿನ್ ಪಿ. ಕೃಷ್ಣಪ್ಪ.
ಬೆಳೆ: ಸೂರ್ಯಕಾಂತಿ (ಮಳೆ ಆಶ್ರಿತ)
ಗ್ರಾಮದ ವಿಸ್ತೀರ್ಣ: 2899.29 ಎಕರೆ. ಸಾಗುವಳಿ: 2769.26 ಎಕರೆ.
ಬಿತ್ತಿದ ಪ್ರದೇಶ: 2750 ಎಕರೆ. ಇದರಲ್ಲಿ 1300-1400 ಎಕರೆಗೆ ವಿಮೆ, 1350-1450 ಎಕರೆ ಬಿತ್ತನೆಯಾಗಿದೆ.
ಭೂಹಿಡುವಳಿದಾರರ ಸಂಖ್ಯೆ: 350
ವಿಮೆಗೆ ನೋಂದಾಯಿಸಿದ ಪ್ರಸ್ತಾವನೆ: 272 (ವಿಸ್ತೀರ್ಣ 391.68 ಹೆಕ್ಟೇರ್)
3. ಯರಬಳ್ಳಿ ಗ್ರಾಮ
ರೈತರು: ಮಹಾಲಿಂಗಯ್ಯ ಬಿನ್ ತಮ್ಮಯ್ಯ ಮತ್ತು ರಾಮಚಂದ್ರಪ್ಪ ಬಿನ್ ತಮ್ಮಯ್ಯ
ಬೆಳೆ: ಪಾಳು (ಶೇಂಗಾ)
ಗ್ರಾಮದ ವಿಸ್ತೀರ್ಣ: 3975.32 ಎಕರೆ. ಸಾಗುವಳಿ: 3705.91 ಎಕರೆ.
ಬಿತ್ತಿದ ಪ್ರದೇಶ: 3450 ಎಕರೆ. ಇದರಲ್ಲಿ 350-400 ಎಕರೆಗೆ ವಿಮೆ, 3050-3100 ಎಕರೆ ಬಿತ್ತನೆಯಾಗಿದೆ.
ಭೂಹಿಡುವಳಿದಾರರ ಸಂಖ್ಯೆ: 812
ವಿಮೆಗೆ ನೋಂದಾಯಿಸಿದ ಪ್ರಸ್ತಾವನೆ: 1106 (ವಿಸ್ತೀರ್ಣ 1592.64 ಹೆಕ್ಟೇರ್)
ಪ್ರಮುಖ ಬೆಳೆಗಳ ವಿಮೆ ಮೊತ್ತ:
ಶೇಂಗಾ ₹26,160 ₹523.2
ಸೂರ್ಯಕಾಂತಿ ₹19,280 ₹386
ಮುಸುಕಿನ ಜೋಳ ₹27,000 ₹540
ತೊಗರಿ ₹23,040 ₹461
ಮೂರು ಗ್ರಾಮಗಳಲ್ಲೂ ಪ್ರಮುಖ ಬೆಳೆಗಳಾಗಿ ಸೂರ್ಯಕಾಂತಿ, ಶೇಂಗಾ, ಕಡಲೆ, ಈರುಳ್ಳಿ, ಮೆಕ್ಕೆಜೋಳ, ತೊಗರಿ, ಹತ್ತಿ ಬೆಳೆಯಲಾಗುತ್ತಿದೆ.
ಇದನ್ನೂ ಓದಿ: ಬಾಲ್ಯ ವಿವಾಹ, ಬಲವಂತದ ಅತ್ಯಾಚಾರ | ಆರೋಪಿಗೆ 20 ವರ್ಷ ಜೈಲು ಶಿಕ್ಷೆ
ಮುಖ್ಯಮಂತ್ರಿಗಳ ಭೇಟಿಯ ಸಂದರ್ಭದಲ್ಲಿ ಈ ಗ್ರಾಮಗಳ ರೈತರ ಸಮಸ್ಯೆ, ಬೆಳೆ ವಿಮೆ ಕಂತು ಪಾವತಿ ಮತ್ತು ಪರಿಹಾರ ವಿತರಣೆ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಈ ವರ್ಷ ಮಳೆ ಆಶ್ರಿತ ಬೆಳೆಗಳಿಗೆ ಹೆಚ್ಚಿನ ಒತ್ತು. ವಿಮೆ ನೋಂದಣಿ ಅಂತಿಮ ಹಂತದಲ್ಲಿದೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

