CHITRADURGA NEWS | 20 NOVEMBER 2026
ಚಿತ್ರದುರ್ಗ: ಮತದಾರರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಂತರ ಚಿತ್ರದುರ್ಗ ಜಿಲ್ಲೆಯಲ್ಲಿ 6 ಹೊಸ ಮತಗಟ್ಟೆಗಳನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ.
ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್ಎಸ್ಆರ್)-2027ಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಮತಗಟ್ಟೆಗಳ ಪುನರ್ವಿಂಗಡಣೆ (Rationalization) ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ 6 ಹೊಸ ಮತಗಟ್ಟೆಗಳ ಸೃಜನೆಗೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಯಿತು.
ಇದನ್ನೂ ಓದಿ:ಮಾರುಕಟ್ಟೆ ಧಾರಣೆ | ನವೆಂಬರ್ 20 | ರಾಗಿ, ಸೂರ್ಯಕಾಂತಿ, ಕಡಲೆಕಾಳು ರೇಟ್ ಎಷ್ಟಿದೆ?
ಜಿಲ್ಲಾಧಿಕಾರಿ ಎಸ್.ರಮ್ಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ನೈಸರ್ಗಿಕ ವಿಕೋಪ, ಕಟ್ಟಡಗಳ ದುಸ್ಥಿತಿ, ಮತದಾರರ ಸಂಖ್ಯೆ ಹೆಚ್ಚಳ ಹಾಗೂ ಮತಗಟ್ಟೆಗಳ ದೂರದ ಆಧಾರದ ಮೇಲೆ ಮತಗಟ್ಟೆಗಳ ಪುನರ್ವಿಂಗಡಭೆ ಪ್ರಕ್ರಿಯೆ ಮತ್ತು ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚಿಸಿ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸುವ ವಿಧಾನದ ಕುರಿತು ವಿವರಿಸಲಾಯಿತು.
ಎಲ್ಲೆಲ್ಲಿ ಹೊಸ ಮತಟ್ಟೆಗಳು
- ಮೊಳಕಾಲ್ಮುರು ಕ್ಷೇತ್ರದ ಮಲ್ಲೂರಹಳ್ಳಿ
- ಚಳ್ಳಕೆರೆ ಕ್ಷೇತ್ರದ ಬೊಗಳೇರಹಟ್ಟಿ
- ಚಿತ್ರದುರ್ಗ ಕ್ಷೇತ್ರದ ಕಳ್ಳಿಹಟ್ಟಿ (ಹೆಚ್) ಮಾನಂಗಿ
- ಹಿರಿಯೂರು ಕ್ಷೇತ್ರದ ಬ್ಯಾಡರಹಳ್ಳಿಯ ಮತಗಟ್ಟೆ 103ರ ವಿಭಜನೆಯಿಂದ 103ಎ.
- ಉಡುವಳ್ಳಿ ಮತಗಟ್ಟೆ 258 ರಿಂದ ವಸಂತನಗರಕ್ಕೆ 258ಎ.
- ಪರಮೇನಹಳ್ಳಿ ಮತಗಟ್ಟೆ 260 ರಿಂದ ಕಾತ್ರಿಕೆನಹಳ್ಳಿ
ಪ್ರಸ್ತುತ ಜಿಲ್ಲೆಯಲ್ಲಿ 1,764 ಮತಗಟ್ಟೆಗಳಿದ್ದು, ಹೊಸದಾಗಿ 6 ಮತಗಟ್ಟೆಗಳ ಸೇರ್ಪಡೆಯಿಂದ ಒಟ್ಟು ಮತಗಟ್ಟೆಗಳ ಸಂಖ್ಯೆ 1,770ಕ್ಕೆ ಏರಲಿದೆ. ಯಾವುದೇ ಮತಗಟ್ಟೆಯ ಸ್ಥಳಾಂತರ ಅಥವಾ ಹೆಸರು ಬದಲಾವಣೆ ಪ್ರಸ್ತಾವನೆ ಇಲ್ಲ ಎಂದು ಸಭೆಯಲ್ಲಿ ತಿಳಿಸಲಾಯಿತು.
ಇದನ್ನೂ ಓದಿ:ಬೋರ್ ವೆಲ್ ಕೊರೆಯುವ ದರ ಇಳಿಕೆಗೆ ರೈತರ ಒತ್ತಾಯ | ಏಕಾಏಕಿ ಅಡಿಗೆ 30 ರೂ. ಹೆಚ್ಚಳ
ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಮಲ್ಲೂರಹಳ್ಳಿಯ ಮತಗಟ್ಟೆ ಸಂಖ್ಯೆ 154ರ ವಿಭಜನೆಯಿಂದ 154ಎ ಹೊಸ ಮತಗಟ್ಟೆ ಸೃಜನೆಯಾಗಲಿದ್ದು, ಒಟ್ಟು ಮತಗಟ್ಟೆಗಳ ಸಂಖ್ಯೆ 311ರಿಂದ 312ಕ್ಕೆ ಏರಿಕೆಯಾಗಲಿದೆ. ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಬೊಗಳೇರಹಟ್ಟಿಯ ಮತಗಟ್ಟೆ ಸಂಖ್ಯೆ 3ರ ವಿಭಜನೆಯಿಂದ 3ಎ ಹೊಸ ಮತಗಟ್ಟೆ ರಚನೆಯಾಗಲಿದ್ದು, ಒಟ್ಟು ಮತಗಟ್ಟೆಗಳು 278ರಿಂದ 279ಕ್ಕೆ ಹೆಚ್ಚಳವಾಗಲಿವೆ.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಳ್ಳಿಹಟ್ಟಿ (ಹೆಚ್) ಮಾನಂಗಿಯ ಮತಗಟ್ಟೆ ಸಂಖ್ಯೆ 102ರ ವಿಭಜನೆಯಿಂದ 102ಎ ಹೊಸ ಮತಗಟ್ಟೆ ಸೃಜನೆಯಾಗಲಿದ್ದು, ಒಟ್ಟು ಸಂಖ್ಯೆ 302ರಿಂದ 303ಕ್ಕೆ ಏರಲಿದೆ. ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ 3 ಹೊಸ ಮತಗಟ್ಟೆಗಳು ಸೇರ್ಪಡೆಯಾಗಲಿದ್ದು, ಒಟ್ಟು ಸಂಖ್ಯೆ 300ರಿಂದ 303ಕ್ಕೆ ಏರಲಿದೆ. ಇಲ್ಲಿ ಬ್ಯಾಡರಹಳ್ಳಿಯ ಮತಗಟ್ಟೆ 103ರ ವಿಭಜನೆಯಿಂದ 103ಎ, ಉಡುವಳ್ಳಿ ಮತಗಟ್ಟೆ 258ರಿಂದ 3 ಕಿ.ಮೀ.ಗಿಂತ ಹೆಚ್ಚಿನ ದೂರದಲ್ಲಿರುವ ವಸಂತನಗರಕ್ಕೆ 258ಎ ಹಾಗೂ ಪರಮೇನಹಳ್ಳಿ ಮತಗಟ್ಟೆ 260 ರಿಂದ ದೂರವಿರುವ ಕತ್ರಿಕೆನಹಳ್ಳಿಗೆ ಹೊಸ ಮತಗಟ್ಟೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಇದನ್ನೂ ಓದಿ:ಕುಡಿಯುವ ನೀರಿನ ಕಾಮಗಾರಿಗಳ ನಿರ್ವಹಣೆ ಇನ್ಮುಂದೆ ಗ್ರಾಮ ಸಮಿತಿಗಳ ಕೈಗೆ!
ಹೊಸದುರ್ಗ ಮತ್ತು ಹೊಳಲ್ಕೆರೆ ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದೇ ಹೊಸ ಮತಗಟ್ಟೆಗಳ ಪುನರ್ವಿಂಗಡಣೆ ಪ್ರಸ್ತಾವನೆ ಇಲ್ಲ. ಕ್ರಮವಾಗಿ 258 ಮತ್ತು 315 ಮತಗಟ್ಟೆಗಳೇ ಮುಂದುವರಿಯಲಿವೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿದ ಬಳಿಕ, ಈ ಪ್ರಸ್ತಾವನೆಗಳನ್ನು ಚುನಾವಣಾ ಆಯೋಗದ ಅನುಮೋದನೆಗಾಗಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಸಂಬಂಧಿಸಿದಂತೆ 2026ರ ಡಿಸೆಂಬರ್ 01ರಂದು ಸಮಗ್ರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಮತಗಟ್ಟೆಗಳ ತರ್ಕಬದ್ಧಗೊಳಿಸುವಿಕೆ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ.
ಡಿಸೆಂಬರ್ 01 ರಿಂದ 31 ರವರೆಗೆ ಸಾರ್ವಜನಿಕರು ಆಕ್ಷೇಪಣೆಗಳು ಹಾಗೂ ಹಕ್ಕುಗಳನ್ನು ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗುವುದು. ಸ್ವೀಕೃತವಾದ ಆಕ್ಷೇಪಣೆಗಳನ್ನು 2027ರ ಜನವರಿ 14ರೊಳಗೆ ವಿಲೇವಾರಿ ಮಾಡಲಾಗುವುದು. ಬಳಿಕ ಜನವರಿ 20ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದರು.
ಇದನ್ನೂ ಓದಿ:ಹಿರಿಯೂರು ಉಪಚುನಾವಣೆಗೆ ರೈತ ಸಂಘದ ಅಭ್ಯರ್ಥಿ ಕಣಕ್ಕೆ
ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ನಮೂನೆ-6, ಹೆಸರು ತೆಗೆದುಹಾಕಲು ನಮೂನೆ-7 ಹಾಗೂ ವಿಳಾಸ ಬದಲಾವಣೆ ಮತ್ತು ತಿದ್ದುಪಡಿಗಾಗಿ ನಮೂನೆ-8 ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಬೂತ್ ಮಟ್ಟದ ಏಜೆಂಟರ ಮೂಲಕ ಅರ್ಹ ಮತದಾರರ ಹೆಸರು ಸೇರ್ಪಡೆಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ರಮ್ಯಾ ಮನವಿ ಮಾಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಚುನಾವಣಾ ತಹಶೀಲ್ದಾರ್ ಬೀಬೀ ಫಾತಿಮಾ, ಜಿಲ್ಲಾ ವಾರ್ತಾಧಿಕಾರಿ ಎಂ.ಜುಂಜಣ್ಣ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಡಿ.ಎನ್.ಮೈಲಾರಪ್ಪ, ಕೆ.ಪಿ.ಸಂಪತ್ ಕುಮಾರ್, ಜಿಲ್ಲಾ ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಟಿ.ಯಶವಂತ್ ಕುಮಾರ್, ಬಿಎಸ್ಪಿ ಜಿಲ್ಲಾಧ್ಯಕ್ಷ ಎನ್.ಪ್ರಕಾಶ್, ಸಿಪಿಐ(ಎಂ) ಡಿಒಸಿ ಸಿ.ಕೆ.ಗೌಸ್ಪೀರ್ ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

