CHITRADURGA NEWS | 11 MAY 2026
ಹೊಸದುರ್ಗ: ವಿಶ್ವ ತಾಯಂದಿರ ದಿನಾಚರಣೆಯ ಅಂಗವಾಗಿ 23ನೇ ವರ್ಷದ 5ನೇ ತಿಂಗಳ ಸುಜ್ಞಾನ ಸಂಗಮ ಕಾರ್ಯಕ್ರಮವು ಭಕ್ತಿಭಾವ ಹಾಗೂ ಆತ್ಮೀಯತೆಯ ವಾತಾವರಣದಲ್ಲಿ ಹೊಸದುರ್ಗದಲ್ಲಿ ಯಶಸ್ವಿಯಾಗಿ ನೆರವೇರಿತು.
ಇದನ್ನೂ ಓದಿ: ಸುಧಾಕರ್ ಅಂತಿಮ ದರ್ಶನ ಪಡೆದ ಡಿಕೆಶಿ ಭಾವುಕ ನುಡಿ
ಸಮಾಜದಲ್ಲಿ ತಾಯಂದಿರ ಮಹತ್ವ, ಅವರ ತ್ಯಾಗ, ಕುಟುಂಬ ಮತ್ತು ಸಮಾಜ ನಿರ್ಮಾಣದಲ್ಲಿ ಅವರ ಪಾತ್ರವನ್ನು ಸ್ಮರಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮವು ವಿಶೇಷ ಅರ್ಥಪೂರ್ಣತೆಯನ್ನು ಪಡೆದುಕೊಂಡಿತು. ಕಾರ್ಯಕ್ರಮವು ಕುಂಚಟಿಗ ಮಹಾಸಂಸ್ಥಾನ ಮಠ ಆಶ್ರಯದಲ್ಲಿ ನಡೆಯಿತು.
ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಶಾಂತವೀರ ಸ್ವಾಮೀಜಿ ಆಶೀರ್ವಚನ ನೀಡಿ, ತಾಯಿಯ ಮಮತೆ, ಸಹನೆ ಮತ್ತು ಜೀವನ ಮೌಲ್ಯಗಳ ಕುರಿತು ಮಾತನಾಡಿದ ಸ್ವಾಮೀಜಿಯವರು, “ತಾಯಿ ಎಂಬುದು ಕೇವಲ ಒಂದು ಪದವಲ್ಲ; ಅದು ಪ್ರೀತಿ, ತ್ಯಾಗ ಮತ್ತು ಕರ್ತವ್ಯದ ಪ್ರತಿರೂಪ. ತಾಯಂದಿರ ಸೇವೆಯನ್ನು ಗೌರವಿಸುವ ಸಮಾಜವೇ ಸತ್ಪಥದಲ್ಲಿ ಸಾಗುತ್ತದೆ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾ ಜಯಪ್ಪ, ಇಂದಿನ ಯುಗದಲ್ಲಿ ಕುಟುಂಬದ ಬಲವಾಗಿರುವ ತಾಯಂದಿರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಡಾ.ಚಾಂದಿನಿ ಖಲೀದ್ ಅವರ ಒಂದು ಬೊಗಸೆ ಪ್ರೀತಿ ಕವನ ಸಂಕಲನ ಬಿಡುಗಡೆ
ಮಹಿಳೆಯರ ಆತ್ಮವಿಶ್ವಾಸ ಮತ್ತು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ ಎಂದು ಅವರು ತಾಯಿಯನ್ನು ಗೌರವಿಸುವ ಮೂಲಕ ಆರೈಕೆ ಮಾಡುವ ಮೂಲಕ ಋಣವನ್ನು ತೀರಿಸಬೇಕೇ ವಿನಹ ಶಬ್ದಗಳಿಂದ ವರ್ಣಿಸುವುದು ಅಥವಾ ವರ್ಷಕ್ಕೊಮ್ಮೆ ಸ್ಟೇಟಸ್ ಗೆ ಹಾಕುವುದು ತಾಯಿಗೆ ಗೌರವ ತರುವುದಿಲ್ಲ.
ತಾಯಿ ಗೌರವದಿಂದ ಮತ್ತು ಗರ್ವದಿಂದ ನನ್ನ ಮಗ ಎಂದು ಹೇಳಿಕೊಳ್ಳುವ ದಾರಿಯಲ್ಲಿ ಸಾಗಿದಾಗ ತಾಯಂದಿರಿಗೆ ನಿಜವಾದ ಗೌರವ ಸಮರ್ಪಣೆ ಆಗುತ್ತದೆ. ಮಕ್ಕಳು ದುರಭ್ಯಾಸ ದುಶ್ಚಟಕ್ಕೆ ಕಲಿತಾಗ ಅವಳ ನರಳ ಆಟ ತೊಳಲಾಟ ಅಷ್ಟಿಷ್ಟಲ್ಲ, ಇದನ್ನು ಅರಿತು ಇಂದಿನ ಯುವ ಪೀಳಿಗೆ ಸರಿಯಾದ ದಾರಿಯಲ್ಲಿ ತಂದೆ ತಾಯಿಗೆ ಗೌರವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಶಿಕ್ಷಕಿ ಚಂದ್ರಿಕಾ ಮಹೇಶ್ವರಪ್ಪ ಮಾತನಾಡಿ, ಶಿಕ್ಷಣ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ತಾಯಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ತಿಳಿಸಿದರು. ಕುಟುಂಬದ ನೆಮ್ಮದಿ ಮತ್ತು ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಾಯಿಯ ಕೊಡುಗೆ ಅಪಾರವಾಗಿದೆ ಸಮಾಜಕ್ಕೆ ಗುರುತಾಯಿಯಾಗಿ ಶಾಂತವೀರ ಶ್ರೀಗಳು ಮುನ್ನಡೆಸುತ್ತಿದ್ದು ಅವರ ಕರುಣೆ ಮಮತೆ ಮತ್ತು ಸರ್ವ ಸಮಾಜವನ್ನು ಒಪ್ಪಿಕೊಳ್ಳುವ ಪರ ಮನೋಭಾವ ನಮಗೆಲ್ಲ ಪ್ರಯಾಣದಾಯಕವಾಗಿದೆ ಎಂದರು.
ಇದನ್ನೂ ಓದಿ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಡಿ.ಸುಧಾಕರ್ ಗೆ ಸಂತಾಪ
ಡಾ.ಮೇಘ ಎಂ. ಕಟ್ಟೆ ಸ್ವಹಾರೈಕೆ ಮತ್ತು ಪೋಷಣೆ – ತಾಯಂದಿರ ಯೋಗಕ್ಷೇಮದ ಅಡಿಪಾಯ ಎಂಬ ವಿಷಯದ ಕುರಿತು ಮಾತನಾಡಿದ ಅವರು, ಮಹಿಳೆಯರು ತಮ್ಮ ಆರೋಗ್ಯದ ಕಡೆ ನಿರ್ಲಕ್ಷ್ಯ ತೋರದೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಯಂದಿರ ಆರೋಗ್ಯ ಉತ್ತಮವಾಗಿದ್ದರೆ ಕುಟುಂಬದ ಆರೋಗ್ಯ ಉತ್ತಮವಾಗಿರುತ್ತದೆ ಹಾಗಾಗಿ ಪುರುಷರ ಸಹಾಯವನ್ನು ಪಡೆದು ಕರ್ತವ್ಯ ನಿರ್ವಹಿಸಿ ತಾವೇ ಮಾಡುತ್ತೇವೆಂಬ ಒತ್ತಡವನ್ನು ಸಹಿಸಿಕೊಂಡರೆ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ. ಬದುಕಿಗೆ ವಾಯುವಿಹಾರ ವಿಶ್ರಾಂತಿ ಯೋಗ ಧ್ಯಾನ ಆಧ್ಯಾತ್ಮ ಅತ್ಯವಶ್ಯವಾಗಿ ಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಚೇತನ ಜಗದೀಶ್ ಪ್ರಸಾದ್ ಗುಡ್ಡದ ನೇರಲಕೆರೆ ಭಾಗವಹಿಸಿದ್ದರು.
ಇದನ್ನೂ ಓದಿ: ಡಿ.ಸುಧಾಕರ್ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ
ಕೆಂಚಮ್ಮ ಬಸವಲಿಂಗಪ್ಪ, ರಾದ ಮಹೇಂದ್ರ, ಯಶೋಧ ಅನಂತ್, ನಾಗರತ್ನ ತಮ್ಮಣ್ಣ, ವನಜಾಕ್ಷಮ್ಮ ಹನುಮಂತಪ್ಪ, ನಳಿನಮ್ಮ ಚಂದ್ರಪ್ಪ, ಜಯಮ್ಮ ಕದುರಪ್ಪ, ಸಾವಿತ್ರಮ್ಮ ಸಿದ್ದಪ್ಪ, ಗೌರಮ್ಮ ಸಂಕಪ್ಪ, ಗಿರಿಜಮ್ಮ ಕೆಂಚದ್ಯಾಮಪ್ಪ, ಪ್ರಭಾ ಭೈರಪ್ಪ, ಗೌರಮ್ಮ ಮಂಜಪ್ಪ, ಕರಿಯಮ್ಮ ಶಿವಪ್ಪ ಹಾಗೂ ಕುಂಚಶ್ರೀ ಸಂಗಮೇಶ್ವರ ಭಜನಾ ಮಂಡಳಿಯ ಮಹಿಳೆಯರನ್ನು ಸನ್ಮಾನಿಸಲಾಯಿತು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

