
CHITRADURGA NEWS | 05 FEBRUARY 2026
ಚಿತ್ರದುರ್ಗ: ಹಿರಿಯೂರಿನ ಆದಿಜಾಂಬವ ಮಠದ ಹೆಸರಿನಲ್ಲಿ ದಾವಣಗೆರೆಯಲ್ಲಿ ಕರೆದಿರುವ ಸಮುದಾಯದ ಸಮಾಲೋಚನಾ ಸಭೆಗೆ ನಮ್ಮ ಸಮ್ಮತಿ ಇಲ್ಲ ಎಂದು ಶ್ರೀ ಷಡಾಕ್ಷರಮುನಿ ಸ್ವಾಮೀಜಿ ಪ್ರಕರಣೆಯಲ್ಲಿ ತಿಳಿಸಿದ್ದಾರೆ.
ಫೆಬ್ರವರಿ 14 ರಂದು ಆದಿಜಾಂಬವ ಮಹಾ ಸಂಸ್ಥಾನ ಶಾಖಾಮಠದ ಸ್ಥಾಪನೆ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಸಮುದಾಯದ ಸಮಾಲೋಚನೆ ಸಭೆ ಕರೆಯಲಾಗಿದೆ ಎಂಬ ವಿಷಯ ತಿಳಿದುಬಂದಿದೆ. ಈ ಸಭೆ ನಮ್ಮ ಆದೇಶದ ಮೇರೆಗೆ ನಡೆಯುತ್ತಿದೆ ಎಂದು ಕರಪತ್ರದಲ್ಲಿ ತಿಳಿಸಿರುವುದು ನಮ್ಮ ಗಮನಕ್ಕೆ ಬಂದಿರುವುದಿಲ್ಲ ಹಾಗೂ ಈ ಸಭೆಗೆ ನಮ್ಮ ಒಪ್ಪಿಗೆ ಇದೆಯೆಂದು ತಿಳಿಯಬಾರದು ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಅಡಿಕೆ ಧಾರಣೆ | 4 ಫೆಬ್ರವರಿ | ಯಾವ ಅಡಿಕೆ ಎಷ್ಟಿದೆ ರೇಟ್
ಮಾದಿಗ ಸಮುದಾಯದ ಸಮಾಲೋಚನೆ ಸಭೆ ನಡೆಸುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಆದಿ ಜಾಂಬವ ಮಹಾ ಸಂಸ್ಥಾನ ಶಾಖಾ ಮಠದ ಹೆಸರಿನಲ್ಲಿ ಕರೆದಿರುವ ಸಭೆಗೆ ಮಾತ್ರ ನಮ್ಮ ಅನುಮತಿಯನ್ನು ಪಡೆದಿರುವುದಿಲ್ಲ.
ಈ ಸಭೆಯಲ್ಲಿ ಅನೇಕ ಗಣ್ಯಮಾನ್ಯರ ಹೆಸರುಗಳನ್ನು ಪ್ರಕಟಿಸಲಾಗಿದೆ. ಸಾರ್ವಜನಿಕರಿಗೆ ಆಹ್ವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಕ್ತರಿಗೆ ಸ್ಪಷ್ಟೀಕರಣ ನೀಡಬೇಕಾಗಿದೆ.
ಇದನ್ನೂ ಓದಿ: ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ | ಇಂಡಿಯನ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಉದ್ಯೋಗಾವಕಾಶ
ಆದಿ ಜಾಂಬವ ಮಹಾಸಂಸ್ಥಾನ ಮಠ ಪುರಾತನವಾಗಿದ್ದು,ಮಾದಿಗರಿಗೆ ಮೂಲ ಮಠವಾಗಿದೆ. ಕರಪತ್ರದಲ್ಲಿ ತಿಳಿಸಿರುವವಂತೆ, ಹಿರಿಯ ಶ್ರೀಗಳ ನಿಧನಾನಂತರ, ಕೋಡಿಹಳ್ಳಿ ಮತ್ತು ಶಾಖಾ ಮಠದಲ್ಲಿ ವಾರಸುದಾರರಿಲ್ಲದೆ ಭಕ್ತರು ಒಂದು ರೀತಿಯಲ್ಲಿ ಅನಾಥರಾಗಿದ್ದಾರೆ ಎಂಬುದು, ಮಠದ ಪರಂಪರೆಗೆ ಮಸುಕು ಕವಿದಿದೆ ಎನ್ನುವುದು, ಮಠದ ಗುರುವರ್ಗ ಶ್ರೀಗಳ ಪೂಜಾ ಕೈಂಕರ್ಯಗಳಿಗಾಗಿ ಹುಡುಕಾಡುವಂತಹ ಸ್ಥಿತಿ ಇದೆ ಎನ್ನುವ ಅಭಿಪ್ರಾಯ ಸತ್ಯಕ್ಕೆ ದೂರವಾದ ಸಂಗತಿ ಎಂದಿದ್ದಾರೆ.
ಆದಿ ಜಾಂಬವ ಮಠದ ಈಗಿನ ಸ್ವಾಮೀಜಿಗಳು ರಾಜ್ಯದಾದ್ಯಂತ ಸಂಚರಿಸುವ ಮೂಲಕ ಭಕ್ತರ ಸಂಪರ್ಕ ಇಟ್ಟುಕೊಂಡು, ಮಠದ ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅಲ್ಲದೆ ಆದಿ ಜಾಂಬವ ಮಹಾ ಸಂಸ್ಥಾನ ಮಠ ಪುರಾತನ ವಾಗಿದ್ದು ಮಾದಿಗರಿಗೆ ಮೂಲ ಮಠವಾಗಿದೆ.ಆರ್ಥಿಕವಾಗಿ ಏರುಪೇರುಗಳನ್ನು ಕಂಡರೂ ಕೂಡ ಹಿರಿಯ ಜಗದ್ಗುರುಗಳವರ ಆಶೀರ್ವಾದದಲ್ಲಿ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲಾಗುತ್ತದೆ.
ಇದನ್ನೂ ಓದಿ: ಅಮೃತಬಳ್ಳಿಯನ್ನು ಹಸಿಯಾಗಿ ತಿಂದರೆ ಏನಾಗುತ್ತದೆ ಗೊತ್ತಾ?
ದಾವಣಗೆರೆಯ ಕೆಲವು ಭಕ್ತರು ಮಠದ ಹೆಸರಿನಲ್ಲಿ, ಆದಿಜಾಂಬವ ಶಾಖಾ ಮಠದ ಸ್ಥಾಪನೆ ಬಗ್ಗೆ ಸಮಾಲೋಚನ ಸಭೆ ಕರೆದಿರುವುದು ನಮ್ಮ ಗಮನಕ್ಕೆ ಬಂಧಿರುವುದಿಲ್ಲ,ನಾವು ಕರಪತ್ರ ನೋಡಿದ ನಂತರ ಈ ಸ್ಪಷ್ಟೀಕರಣ ನೀಡುತ್ತಿದ್ದೇವೆ. ಭಕ್ತರು ಗೊಂದಲಕ್ಕೆ ಈಡಾಗಬಾರದು.
| ಶ್ರೀ ಷಡಕ್ಷರಮುನಿ ಸ್ವಾಮೀಜಿ, ಹಿರಿಯೂರು ತಾಲೂಕು ಕೋಡಿಹಳ್ಳಿ ಆದಿಜಾಂಬವ ಮಠ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

