CHITRADURGA NEWS | 29 MAY 2026
ಚಿತ್ರದುರ್ಗ: ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠ, ಎಸ್.ಜೆ.ಎಂ. ವಿದ್ಯಾಪೀಠ, ಎಸ್.ಜೆ.ಎಂ. ಯುನಿವರ್ಸಿಟಿ ಹಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಿಶ್ವ ಪರಿಸರ ದಿನದ ಅಂಗವಾಗಿ ಮೇ.30 ರಿಂದ ಜೂನ್ 5ರವರೆಗೆ 7 ದಿನಗಳ ಕಾಲ, ಪ್ರತಿದಿನ ಬೆಳಗ್ಗೆ 7 ಗಂಟೆಗೆ ಚಿತ್ರದುರ್ಗ ನಗರ ಹಾಗೂ ಸುತ್ತಮುತ್ತಲಿನ ಆಯ್ದ ಸ್ಥಳಗಳಲ್ಲಿ ಸಸಿ ನಡೆವ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ: ವಸತಿ ಯೋಜನೆಗೆ ಅರ್ಜಿ ಆಹ್ವಾನ
ಮೇ. 30 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ, ಲಕ್ಷ್ಮಿಸಾಗರ ಇಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೀರು ಮತ್ತು ಪರಿಸರ ವಿಷಯ ಕುರಿತು ಚಿಂತನೆ ನಂತರ ಸಸಿ ನೆಡುವ ಕಾರ್ಯಕ್ರಮ. ಮೇ.31 ರಂದು ನಗರದ ಜೋಗಿಮಟ್ಟಿ ಗೇಟ್ ಬಳಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪರಿಸರಕ್ಕಾಗಿ ಜೀವನಶೈಲಿ ಬದಲಾವಣೆ ವಿಷಯ ಚಿಂತನೆ ಹಾಗೂ ಸಸಿಗಳನ್ನು ನೆಡಲಾಗುವುದು.
ಜೂನ್ 01 ರಂದು ಬಾಪೂಜಿ ಸಮನ್ವಯ ಪ್ರೌಢಶಾಲೆ, ಮಲ್ಲಾಪುರ, ಎನ್.ಹೆಚ್. 50, ಚಿತ್ರದುರ್ಗ ಇಲ್ಲಿ ನಡೆಯಲಿದ್ದು, ವಾಯು ಮಾಲಿನ್ಯ ಕುರಿತು ವಿಷಯ ಚಿಂತನೆ ನಂತರ ಗಿಡಗಳನ್ನು ನೆಡಲಾಗುವುದು.
ಜೂನ್ 02 ರಂದು ಪ್ಲಾಸ್ಟಿಕ್‌ನ ದುಷ್ಪರಿಣಾಮಗಳು ವಿಷಯ ಕುರಿತು ಚಿಂತನೆ ಮತ್ತು ಗಿಡ ನೆಡುವ ಕಾರ್ಯಕ್ರಮ ಕೆ.ಪಿ.ಟಿ.ಸಿ.ಎಲ್. ವಿದ್ಯುತ್ ವಿತರಣಾ ಕೇಂದ್ರ, ಜಾನುಕೊಂಡ ಇಲ್ಲಿ ನಡೆಯಲಿದೆ.
ಇದನ್ನೂ ಓದಿ: ಡಯಟ್ ನಲ್ಲಿ ತಾಲೂಕು ಹಂತದ ಎಂ.ಆರ್.ಪಿಗಳಿಗೆ TRANSITION ಮಾಡ್ಯೂಲ್ ತರಬೇತಿ ಕಾರ್ಯಾಗಾರ
ಜೂನ್ 03 ರಂದು ಜೋಗಿಮಟ್ಟಿ ರಸ್ತೆಯ ಅನ್ನಪೂರ್ಣೇಶ್ವರಿ ದೇವಾಲಯ ಹತ್ತಿರ ಗಿಡ ನೆಡುವ ಮತ್ತು ಪರಿಸರ ಸಂರಕ್ಷಣೆಯಲ್ಲಿ ಸಂಘ-ಸಂಸ್ಥೆಗಳ ಪಾತ್ರ ಕುರಿತು ಚಿಂತನೆ ನಡೆಯಲಿದೆ.
ಜೂನ್ 04 ರಂದು ಶ್ರೀ ಸಾಯಿ ಲೇಔಟ್, ಕವಾಡಿಗರಹಟ್ಟಿ, ರಾಜೀವಗಾಂಧಿ ಆಶ್ರಯ ಬಡಾವಣೆ, ಪಂಚಭೂತಗಳು ಹಾಗೂ ಪರಿಸರ ವಿಷಯ ಚಿಂತನೆ ಮತ್ತು ಗಿಡ ನೆಡುವ ಕಾರ್ಯಕ್ರಮ ಆಯೋಜಿಸಲಾಗಿದೆ.
ಜೂನ್ 05 ರಂದು ಸೀಬಾರದ ಶ್ರೀ ಜಗದ್ಗುರು ಗುರುಪಾದ ಮುರುಘರಾಜೇಂದ್ರ ಸ್ವಾಮಿಗಳವರ ಸ್ಮರಣಾರ್ಥ ನಡೆಯುವ ಜಾತ್ರಾ ಪ್ರದೇಶದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಮಣ್ಣಿನ ಉಳಿವು ವಿಷಯ ಚಿಂತನೆ ಹಾಗೂ ಗಿಡ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಇದನ್ನೂ ಓದಿ: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ | ಬಳಿಕ PRESS MEET | ಸಂವಿಧಾನವೇ ಧರ್ಮ | ಮತದಾರರೇ ದೇವರು ಎಂದು ಭಾವುಕ
ಈ ಎಲ್ಲ ಕಾರ್ಯಕ್ರಮಗಳಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು, ವಿಷಯ ಚಿಂತಕರು, ವಿವಿಧ ಸಮಾಜ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸುವರು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
