CHITRADURGA NEWS | 12 JUNE 2026
ಚಿತ್ರದುರ್ಗ: ತುರುವನೂರಿನ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಗಣೇಕಲ್ ಸಹೋದರರ ನೆನಪಿಗಾಗಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಇದನ್ನೂ ಓದಿ: ಕಣಿವೆಮಾರಮ್ಮನ ಹರಕೆ ತೀರಿಸದ ಕಾಂಗ್ರೆಸ್ ಕಾರ್ಯಕರ್ತರು
ಡಾ.ಶೀತಲ್ ಪ್ರಶಾಂತ ಗಿಡ ನೆಟ್ಟು ಮಾತನಾಡಿ, ಇಡೀ ಸಕಲ ಜೀವ ರಾಶಿಗಳಿಗೆ ಗಿಡ ಮರಗಳು ನೀಡುತ್ತಿರುವ ಕೊಡುವ ಅನನ್ಯವಾದುದು. ಮಾನವನ ದುರಾಸೆಗೆ ಗಿಡ ಮರಗಳು ನಾಶವಾಗುತ್ತಿದ್ದು, ಬಿಸಿಲಿನ ತಾಪಮಾನ ಜಾಸ್ತಿಯಾಗತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಒಂದೊಂದು ಗಿಡ ನೆಟ್ಟು ಪೋಷಿಸಿ ದೊಡ್ಡ ಮರವನ್ನಾಗಿ ಬೆಳೆಸಿದರೆ ಪರಿಸರಕ್ಕೆ ನೀಡುವ ಅದುವೆ ಬಹುದೊಡ್ಡ ಕೊಡುಗೆ ಎಂದು ಹೇಳಿದರು.
ರಾಮಲಿಂಗಪ್ಪ ಕಲ್ಯಾಣ ಮಂಟಪದ ಅಧ್ಯಕ್ಷ ಜಿ.ಚಿದಾನಂದಪ್ಪ ಮಾತನಾಡಿ ಮಾನವನ ಉಸಿರಾಟಕ್ಕೆ ಶುದ್ದ ಆಮ್ಲಜನಕವನ್ನು ನೀಡುವ ಗಿಡ-ಮರಗಳನ್ನು ಕಡಿಯದಂತೆ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸಿರು ಪರಿಸರವನ್ನು ಉಳಿಸಬೇಕಾಗಿರುವುದರಿಂದ ಎಲ್ಲೆಲ್ಲಿ ಖಾಲಿ ಜಾಗವಿದೆಯೋ ಅಲ್ಲೆಲ್ಲಾ ಗಿಡಗಳನ್ನು ನೆಟ್ಟು ನೀರುಣಿಸಿ ಪೋಷಿಸಬೇಕೆಂದು ಜನತೆಯಲ್ಲಿ ಮನವಿ ಮಾಡಿದರು.
ಇದನ್ನೂ ಓದಿ: ಹಿರಿಯೂರು ನಗರಸಭೆ | ವಿವಿಧ ಯೋಜನೆಗಳಿಗೆ ಅರ್ಜಿ ಅಹ್ವಾನ
ತುರುವನೂರು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೃಷ್ಣಪ್ಪ ಬಿ, ಉಪ ಪ್ರಾಚಾರ್ಯರಾದ ಕಿರಣ್ ಮಜಾಯ್ ಬಂಡಿಗಡ್, ಉಪನ್ಯಾಸಕರುಗಳಾದ ಕೃಷ್ಣಮೂರ್ತಿ ಸಿ, ಓಬಳೇಶ್ ಎಂ.ಪಿ, ನಾಗೇಂದ್ರ ಚೌದರಿ, ವಿಜ್ಞಾನ ಶಿಕ್ಷಕ ರಾಜೇಶ್ ಎಲ್.ಎಂ, ವಿವೇಕಾನಂದಪ್ಪ, ಎಂ.ತಿಪ್ಪೇಸ್ವಾಮಿ, ಟಿ.ವಿ.ದಿನೇಶ್‍ಕುಮಾರ್ ಎಲ್.ವಿ.ಉಮೇಶ್ ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

