Connect with us

    Best School Award; ವಿಶ್ವಮಾನವ ವಿದ್ಯಾಸಂಸ್ಥೆಗೆ ಅತ್ಯುತ್ತಮ ಶಾಲೆ ಪ್ರಶಸ್ತಿ

    ವಿಶ್ವಮಾನವ ವಿದ್ಯಾಸಂಸ್ಥೆಗೆ ಅತ್ಯುತ್ತಮ ಶಾಲೆ ಪ್ರಶಸ್ತಿ

    ಮುಖ್ಯ ಸುದ್ದಿ

    Best School Award; ವಿಶ್ವಮಾನವ ವಿದ್ಯಾಸಂಸ್ಥೆಗೆ ಅತ್ಯುತ್ತಮ ಶಾಲೆ ಪ್ರಶಸ್ತಿ

    https://chat.whatsapp.com/Jhg5KALiCFpDwME3sTUl7x

    CHITRADURGA  NEWS | 22 SEPTEMBER 2024

    ಚಿತ್ರದುರ್ಗ: ತಾಲೂಕಿನ ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆಗೆ 2024-25ನೇ ಸಾಲಿನ ಅತ್ಯುತ್ತಮ ಶಾಲೆ ಎಂಬ ಪ್ರಶಸ್ತಿ(Best School Award) ದೊರಕಿದೆ.

    ಕ್ಲಿಕ್ ಮಾಡಿ ಓದಿ: Kannada novel: 4. ಮೈಲಾರಲಿಂಗಸ್ವಾಮಿ ಗುಡಿ ನಿರ್ಮಾಣ

    ಬೆಂಗಳೂರಿನ ಅರಮನೆ ರಸ್ತೆಯ ಬಳಿ ಇರುವ ಭಾರತೀಯ ಸ್ಕೌಟ್ಸ್ ಗೈಡ್ಸ್ ಸಭಾಂಗಣದಲ್ಲಿ ಕರ್ನಾಟಕ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ ಬೆಂಗಳೂರು ಇವರಿಂದ ಕರ್ನಾಟಕದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುದಾನರಹಿತ ಶಾಲೆಗಳ ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆಯನ್ನು ಗುರುತಿಸಿ ಅತ್ಯುತ್ತಮ ಶಾಲೆ ಎಂಬ ಪ್ರಶಸ್ತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

    ಅತ್ಯುತ್ತಮ ಪ್ರಶಸ್ತಿಗೆ ಚಿತ್ರದುರ್ಗ ಜಿಲ್ಲೆಯಿಂದ ಭಾಗವಹಿಸಿದ್ದ ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆಗೆ ಪ್ರಶಸ್ತಿ ದೊರೆತಿದೆ.

    ಸುಮಾರು 25 ವರ್ಷಗಳಿಂದ ನಮ್ಮ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು ಬಡವರ, ಹಿಂದುಳಿದ ವರ್ಗಗಳ ಹಾಗೂ ಮುಖ್ಯವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮರಿಚಿಕೆಯಾಗಿದ್ದಂತಹ ಉತ್ತಮ ಗುಣಮಟ್ಟದ ವಸತಿಸಹಿತ ಶಿಕ್ಷಣ ನೀಡುವ ಕಾರ್ಯ ಮಾಡುತ್ತಿದ್ದು ಅದನ್ನು ಗುರುತಿಸಿ ರಾಜ್ಯ ಮಟ್ಟದಲ್ಲಿ ಈ ಪ್ರಶಸ್ತಿ ಲಭಿಸಿರುವುದು ಇನ್ನೂ ಹೆಚ್ಚಿನ ಶೈಕ್ಷಣಿಕ ಸೇವೆ ನೀಡಲು ಮುನ್ನುಡಿಯಾಗಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಎಂ.ನೀಲಕಂಠ ದೇವರು ತಿಳಿಸಿದರು.

    ಕ್ಲಿಕ್ ಮಾಡಿ ಓದಿ: Taralabalu mata sirigere: ತರಳಬಾಳು ಮಠ ಸರ್ವಜನಾಂಗದ ಶಾಂತಿಯ ತೋಟ | ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

    ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಂಸ್ಥೆಯ ಅದ್ಯಕ್ಷ ಟಿ.ಹೆಚ್.ಬುಡೇನ್ ಸಾಬ್ ರವರು ಭಾಗಿಯಾಗಿ ಪ್ರಶಸ್ತಿ ಸ್ವೀಕರಿಸಿದರು.

    ಸಂಸ್ಥೆಯ ಅಡಳಿತ ಮಂಡಳಿಯ ಸದಸ್ಯರುಗಳಾದ ಮೌಲಾನ್ ಸಾಬ್, ಮಹಮ್ಮದ್ ಮಿರ್ಜಾ ಸಾಬ್ ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top