
CHITRADURGA NEWS | 31 MAY 2026
ಚಿತ್ರದುರ್ಗ: ಇತ್ತೀಚೆಗೆ ನಿಧನರಾದ ವೀರಶೈವ ಸಮಾಜದ ಮಾಜಿ ಅಧ್ಯಕ್ಷರು, ಜಯಪದ್ಮ ಮೋಟಾರ್ ಸರ್ವಿಸ್ ಮಾಲಿಕರಾದ ಕೆ.ಆರ್. ಶಿವಪ್ರಕಾಶ್ ಅವರ ಸ್ಮರಣೆ ಕಾರ್ಯಕ್ರಮವನ್ನು ಭಾನುವಾರ ನಗರದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಭಾಗವಹಿಸಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಇದನ್ನೂ ಓದಿ: ಡೆಂಗ್ಯೂ ನಿಯಂತ್ರಣಕ್ಕೆ ಜಾಗೃತಿ ಅಗತ್ಯ | ಕೀಟ ಚಿಕ್ಕದಾದರೂ ಅದರ ಕಾಟ ದೊಡ್ಡದು
ಈ ವೇಳೆ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ಇಂದಿನ ದಿನಮಾನದಲ್ಲಿ ಅಪ್ಪ, ಅಣ್ಣ, ತಮ್ಮ, ಅಮ್ಮ, ಅಕ್ಕ ಶಾಸಕರು, ಮಂತ್ರಿಗಳಾದರೆ ಅವರ ಸಂಭಂಧಿಕರು ಅವರ ಹೆಸರನ್ನು ಹೇಳಿಕೊಂಡು ತಮ್ಮ ಕೆಲಸವನ್ನು ಮಾಡಿಸಿಕೊಳ್ಳುತ್ತಾರೆ, ಆದರೆ ಶಿವಪ್ರಕಾಶ್ ರವರು ತಮ್ಮ ಮಗ ಶಾಸಕರಾದರೂ ಸಹಾ ಅವರ ಹೆಸರನ್ನು ಎಲ್ಲಿಯೂ ಸಹಾ ಎತ್ತದೆ, ತಮ್ಮ ಪಾಲಿನ ಕೆಲಸವನ್ನು ಸಮಾಜ ಮುಖಿಯಾಗಿ ಮಾಡುತ್ತಾ ಜೀವನವನ್ನು ಸಾಗಿಸಿದ್ದಾರೆ ಎಂದು ತಿಳಿಸಿದರು.
ಶಿವಪ್ರಕಾಶ್ ರವರ ಜೊತೆಯಲ್ಲಿ ಅಷ್ಠಾಗಿ ನಮಗೆ ಒಡನಾಟ ಇಲ್ಲ ಅವರಿಗೂ ನಮಗೂ ವ್ಯಯಸ್ಸಿನ ಅಂತರ ಇದೆ. ನವೀನ್ ರವರ ತಂದೆ ಎಂದು ಮಾತ್ರ ಗೊತ್ತು. ಸರಳ, ಸಜ್ಜನಿಕ ವ್ಯಕ್ತಿಯಾಗಿ ಶಿವಪ್ರಕಾಶ ಇದ್ದರೂ, ಬೇರೆಯವರಿಗೆ ನೆರವನ್ನು ನೀಡುವಂತ ಗುಣವನ್ನು ಹೊಂದಿದವರಾಗಿದ್ದರು. ಯಾರಿಗೂ ಸಹಾ ಕೆಟ್ಟದ್ದನ್ನು ಬಯಸದೇ ಸದಾ ಒಳಿತನ್ನು ಬಯಸುತ್ತಿದ್ದರು, ಅವರ ಆದರ್ಶಗಳನ್ನು ಅವರ ಕುಟುಂಬ ಪಾಲಿಸುವುದರ ಮೂಲಕ ಅವರ ಆತ್ಮಕ್ಕೆ ಶಾಂತಿ ನೀಡಬೇಕಿದೆ ಎಂದರು.
ಶ್ರೀ ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ಶಿವಪ್ರಕಾಶ್ ರವರು ನಮ್ಮ ಆಶ್ರಮದ ಪರಮ ಭಕ್ತರಾಗಿದ್ದರು, ಮಗನನ್ನು ಎಂಎಲ್.ಸಿ.ಯನ್ನಾಗಿ ಮಾಡುವ ಕನಸನ್ನು ಕಂಡಿದ್ದರು ಅದರಂತೆ ಛಲ ಬಿಡದೆ ಮಗನನ್ನು ಶಾಸಕನನ್ನಾಗಿ ಮಾಡಿದರು. ತಂದೆಯ ರೀತಿಯಲ್ಲಿ ಮಗನು ಸಹಾ ನಡೆಸುಕೊಳ್ಳುತ್ತಿದ್ದಾರೆ. ನಗರದ ನೀಲಕಂಠೇಶ್ವರ ದೇವಾಲಯದ ಅಭಿವೃದ್ಧಿಯಲ್ಲಿ ಇವರ ಪಾತ್ರ ಇದೆ. ಇದ್ದಲ್ಲದೆ ಪಂಚಾಚಾರ್ಯ ಕಲ್ಯಾಣ ಮಂಟಪ ನಿರ್ಮಾಣದಲ್ಲಿಯೂ ಸಹಾ ಇವರು ಇದ್ದಾರೆ.
ಇದನ್ನೂ ಓದಿ: ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಧ್ಯಕ್ಷತೆಯಲ್ಲಿ ಜೂನ್ 04 ರಂದು ಕೆ.ಡಿ.ಪಿ ಸಭೆ
ಶಿವಪ್ರಕಾಶ್ ರವರ ಸಮಾಜ ಮುಖಿಯಾದ ಕೆಲಸಗಳನ್ನು ಮಾಡುತ್ತಿದ್ದಾರು ಇದರಿಂದ ಯಾವುದೇ ರೀತಿಯ ಪ್ರಚಾರವನ್ನು ಬಯಸಿರಲಿಲ್ಲ, ಹುಟ್ಟು ಸಾವು ಸಾಮಾನ್ಯ, ಇದರ ಮಧ್ಯದಲ್ಲಿ ಬದುಕಿದ್ದಾಗ ಏನಾದರೂ ಸಾಧನೆಯನ್ನು ಮಾಡಿ ತೋರಿಸಬೇಕು.
ಶಿವಪ್ರಕಾಶ್ ಭೌತಿಕವಾಗಿ ನಮ್ಮ ಜೊತೆಯಲ್ಲಿ ಇಲ್ಲವಾದರೂ ಸಹಾ ಮಾನಸಿಕವಾಗಿ ನಮ್ಮ ಜೊತೆಯಲ್ಲಿ ಇದ್ದಾರೆ, ಅವರ ಮಾಡುತ್ತಿದ್ದ ಕೆಲಸಗಳನ್ನು ಅವರ ಮಗನಾದ ನವೀನ್ ರವರು ಮುಂದುವರೆಸಿಕೊಂಡು ಹೋಗಬೇಕಿದೆ ಎಂದರು.
ದಾವಣಗೆರೆಯ ವಿರಕ್ತಮಠದ ಶ್ರೀ ಡಾ.ಬಸವಪ್ರಭು ಸ್ವಾಮೀಜಿ ಮಾತನಾಡಿ, ಶಿವಪ್ರಕಾಶ್ ರವರ ಮುರುಘಾ ಮಠದೊಂದಿಗೆ ಉತ್ತಮವಾದ ಭಾಂಧವ್ಯ ಹೊಂದಿದ್ದರು. ಆಧಾತ್ಮಿಕ ಚಿಂತನೆ, ಕಾಯಕ ನಿರ್ವಹಣೆ ಹಾಗೂ ಪರೋಪಕಾರದ ವರ್ತನೆಯನ್ನು ಹೊಂದಿದ್ದರು. ಮಠದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಇಂದಿನ ದಿನಮಾನದಲ್ಲಿ ಪ್ರತಿ ಮನೆಯಲ್ಲಿಯೂ ಸಹಾ ಉಪ್ಪು-ಕಾರ ಸಿಗುತ್ತದೆ, ಆದೆರೆ ಪರೋಪಕಾರ ಮಾಡುವವರ ಸಂಖ್ಯೆ ಕಡಿಮೆ ಇದೆ. ಶಿವಪ್ರಕಾಶರವರು ಸಮಾಜಕ್ಕೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ ಎಂದರು.
ಇದನ್ನೂ ಓದಿ: ವಿದ್ಯಾರ್ಥಿ ಬಸ್ ಪಾಸ್‍ಗೆ ಅರ್ಜಿ ಆಹ್ವಾನ | ಯಾವರೀತಿ ಅರ್ಜಿ ಸಲ್ಲಿಸುವುದು..ಇಲ್ಲಿದೆ ಮಾಹಿತಿ
ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಶಿವಪ್ರಕಾಶ್ ರವರ ಉತ್ತಮವಾದ ಸಮಾಜದಲ್ಲಿ ಮೌಲ್ಯಗಳನ್ನು ಬಿತ್ತಿದ್ದಾರೆ. ಅವುಗಳನ್ನು ಮುನ್ನಡೆಸುವ ಕಾರ್ಯವನ್ನು ಈಗ ಅವರ ಕುಟುಂಬದವರು ಮಾಡಬೇಕಿದೆ. ಶ್ರೀ ಮಠದ ಜೊತೆಯಲ್ಲಿ ಶಿವಪ್ರಕಾಶ್ ರವರ ಉತ್ತಮವಾದ ಒಡನಾಟ ಇತ್ತು, ನವೀನ್ ರವರು ಯುವ ನಾಯಕರಾಗಿ ರಾಜಕೀಯದಲ್ಲಿ ಉತ್ತಮವಾಗಿ ಬೆಳೆಯುತ್ತಿದ್ದಾರೆ, ಜನತೆಯ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ ಎಂದರು.
ಸಂಸದರಾದ ಗೋವಿಂದ ಕಾರಜೋಳ ಮಾತನಾಡಿ, ಹುಟ್ಟಿದ ಮಾನವ ಸಾಯಲೇಬೇಕು ಈ ಸಾಯುವುದರೊಳಗೆ ಉತ್ತಮವಾದ ಕೆಲಸವನ್ನು ಮಾಡಿ ಸಾಯಬೇಕು. ನಾವು ಸತ್ತಾಗ ಜನತೆ ನಮ್ಮನ್ನು ಬೈಯಬಾರದು ನೆನೆಯುವಂತೆ ಮಾಡಬೇಕಿದೆ. ಶಿವಪ್ರಕಾಶ್ ರವರ ಇದೆ ಕೆಲಸವನ್ನು ಮಾಡಿದ್ದಾರೆ. ಬದುಕಿದ್ದಾಗ ಉತ್ತಮವಾದ ಕಾರ್ಯವನ್ನು ಮಾಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸದ್ದ ಮಾಜಿ ಸಚಿವ ಹೆಚ್.ಏಕಾಂತಯ್ಯ ಮಾತನಾಡಿ, ಬಸವಣ್ಣರವರ ವಚನಗಳನ್ನು ಎಲ್ಲರು ಹೇಳುತ್ತಾರೆ ಆದರೆ ಅದನ್ನು ಅಳವಡಿಸುವಲ್ಲಿ ಮಾತ್ರ ಹಿಂದೆ ಬೀಳುತ್ತಾರೆ. ನುಡಿದಂತೆ ನಡೆಯುವ ಹಾದಿ ನಮ್ಮದಾಗಬೇಕು, ಆಗ ಮಾತ್ರ ಕಲ್ಯಾಣ ರಾಜ್ಯ ನಿರ್ಮಾಣವಾಗಲು ಸಾಧ್ಯವಿದೆ.
ಇದನ್ನೂ ಓದಿ: ಪ್ರತಿದಿನ ಗಸಗಸೆ ಸೇವಿಸಿ ಈ ಪ್ರಯೋಜನ ಪಡೆಯಿರಿ
ಸಮಾಜವನ್ನು ಒಂದುಗೂಡಿಸುವ ಕಾರ್ಯವಾಗಬೇಕಿದೆ. ಮೈ ಮೇಲೆ ಲಿಂಗವನ್ನು ಕಟ್ಟಿಕೊಂಡವನೆ ಲಿಂಗಾಯತ ಆದರೆ ಇಂದಿನ ದಿನಮಾನದಲ್ಲಿ ಲಿಂಗವನ್ನು ಕಟ್ಟಿಕೊಳ್ಳುವವರವ ಸಂಖ್ಯೆ ಕಡಿಮೆ ಇದೆ. ಇಂದಿನ ದಿನದಲ್ಲಿ ದೌರ್ಜನ್ಯಕ್ಕೆ ಒಳಗಾದವರ ಬಗ್ಗೆ ಯಾರು ಸಹಾ ಮಾತನಾಡುವುದಿಲ್ಲ ಎಲ್ಲರು ಉಳ್ಳವರ ಪರವಾಗಿಯೇ ಇದ್ದಾರೆ. ನೊಂದವರ, ಬಡವರ, ಧ್ವನಿ ಇಲ್ಲದವರ ಬಗ್ಗೆ ಯಾರೂ ಸಹಾ ಧ್ವನಿ ಎತ್ತುವುದಿಲ್ಲ ಎಂದರು.
ದಿವ್ಯ ಸಾನಿಧ್ಯವನ್ನು ಶ್ರೀ ಡಾ.ಶಾಂತವೀರ ಸ್ವಾಮೀಜಿ , ಭೋವಿ ಗುರು ಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಹರಿಹರದ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಮಡಿವಾಳ ಗುರುಪೀಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ, ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಕೇತೇಶ್ವರ ಗುರುಪೀಠದ ಶ್ರೀ ಬಸವ ಇಮ್ಮಡಿ ಕೇತೇಶ್ವರ ಸ್ವಾಮೀಜಿ ವಹಿಸಿದ್ದರು.
ಇದನ್ನೂ ಓದಿ: ನೀರು ಸರಬರಾಜಿನಲ್ಲಿ ವ್ಯತ್ಯಯ | ಶಾಂತಿಸಾಗರದಿಂದ ಚಿತ್ರದುರ್ಗಕ್ಕೆ ಸರಬರಾಜಾಗುವ ನೀರು
ಹಿರಿಯ ಪತ್ರಕರ್ತರಾದ ಜಿ.ಎಸ್.ಉಜ್ಜನಪ್ಪ, ಮಾಜಿ ಕೇಂದ್ರ ಸಚಿವರಾದ ಜಿ.ಎಂ. ಸಿದ್ದೇಶ್ವರ, ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್, ಮನೋಹರ ಮಸ್ಕಿ ಭಾಗವಹಿಸಿದ್ದರು. ತೋಟಂಪ್ಪ ಉತ್ತಂಗಿ ಹಾಗೂ ಕೋಕಿಲ ಪ್ರಾರ್ಥಿಸಿದರು. ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಸ್ವಾಗತಿಸಿದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

