
CHITRADURGA NEWS | 06 SEPTEMBER 2026
ಚಿತ್ರದುರ್ಗ: ಭಾರತೀಯ ಅಂಚೆ ಇಲಾಖೆಯು DHAI AKHAR ಅಭಿಯಾನದಡಿ ರಾಷ್ಟ್ರಮಟ್ಟದ ಪತ್ರ ಬರವಣಿಗೆ ಸ್ಪರ್ಧೆಯನ್ನು ಆಯೋಜಿಸಿದೆ.
ಇದನ್ನೂ ಓದಿ: ಚಿತ್ರದುರ್ಗದ ಪಾಲಿಗೆ ಐತಿಹಾಸಿಕ ಕ್ಷಣ | ಬರದ ನಾಡಿನ ಬಾಯಾರಿಕೆ ತಣಿಸಲು ಹರಿದು ಬರುವಳು ಭದ್ರೆ
ಆಗಸ್ಟ್ 1 ರಿಂದ ಅಕ್ಟೋಬರ್ 31ರವರೆಗೆ ಈ ಸ್ಪರ್ಧೆ ನಡೆಯಲಿದ್ದು, ‘ಪ್ರಕೃತಿಯನ್ನು ರಕ್ಷಿಸುವುದು ನನ್ನ ಭರವಸೆ: ಭೂತಾಯಿಗೆ ಒಂದು ಪತ್ರ’ (A letter to Mother Earth: My Promise to Protect Nature) ಎಂಬ ವಿಷಯದ ಮೇಲೆ ಪತ್ರ ಬರೆಯಬೇಕಾಗಿದೆ.
ಈ ಸ್ಪರ್ಧೆಯನ್ನು 18 ವರ್ಷದೊಳಗಿನವರು ಹಾಗೂ 18 ವರ್ಷ ಮೇಲ್ಪಟ್ಟವರು ಎಂಬ ಎರಡು ವಿಭಾಗಗಳಲ್ಲಿ ಆಯೋಜಿಸಲಾಗಿದೆ. ಭಾಗವಹಿಸುವವರು ಇನ್ಲ್ಯಾಂಡ್ ಲೆಟರ್ ಕಾರ್ಡ್‍ನಲ್ಲಿ ಗರಿಷ್ಠ 500 ಪದಗಳು ಅಥವಾ ಲಕೋಟೆ (ಎನ್‍ವಲಪ್ ಕವರ್) ಬಳಸಿ ಗರಿಷ್ಠ 1,000 ಪದಗಳಿಗೆ ಮಿರದಂತೆ ಕನ್ನಡ, ಇಂಗ್ಲಿಷ್ ಅಥವಾ ಹಿಂದಿ ಭಾμÉಯಲ್ಲಿ ಪತ್ರ ಬರೆಯಬಹುದು.
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ರೂ.25,000, ದ್ವಿತೀಯ ರೂ.10,000 ಹಾಗೂ ತೃತೀಯ ರೂ.5,000 ಬಹುಮಾನ ನೀಡಲಾಗುತ್ತದೆ. ರಾಷ್ಟ್ರಮಟ್ಟದಲ್ಲಿ ಪ್ರಥಮ ರೂ.50,000, ದ್ವಿತೀಯ ರೂ.25,000 ಹಾಗೂ ತೃತೀಯ ರೂ.10,000 ನಗದು ಬಹುಮಾನ ಇರಲಿದೆ.
ಇದನ್ನೂ ಓದಿ: ಚಿತ್ರದುರ್ಗ ರೈತರ ದಶಕಗಳ ಕನಸು ನನಸು | ಚಿತ್ರದುರ್ಗದತ್ತ ಮುಖ ಮಾಡಿದ ಭದ್ರೆ
ಆಸಕ್ತರು ತಮ್ಮ ಪತ್ರಗಳನ್ನು ಅಂಚೆ ಅಧೀಕ್ಷಕರು, ಚಿತ್ರದುರ್ಗ ಅಂಚೆ ವಿಭಾಗ, ಚಿತ್ರದುರ್ಗ – 577501‘ ಈ ವಿಳಾಸಕ್ಕೆ ಕಳುಹಿಸಬೇಕು ಎಂದು ಚಿತ್ರದುರ್ಗ ಅಂಚೆ ವಿಭಾಗದ ಅಂಚೆ ಅಧೀಕ್ಷಕಿ ಕೆ.ಆರ್.ಉಷಾ ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ಕಚೇರಿ ಸಹಾಯಕ ಸಂತೋಷ್ ಅವರ ಮೊಬೈಲ್ 9164243697 ಗೆ ಸಂಪರ್ಕಿಸಬಹುದು ಪ್ರಕಟಣೆ ತಿಳಿಸಿದೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

