
CHITRADURGA NEWS | 06 SEPTEMBER 2026
ಚಿತ್ರದುರ್ಗ: ಜಿಲ್ಲೆಯ ಗಣಿಬಾಧಿತ ಹಾಗೂ ಪ್ರಭಾವಕ್ಕೊಳಗಾದ ಪ್ರದೇಶಗಳ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಹೈನುರಾಸು ನೀಡುವ ಯೋಜನೆಯಡಿ ಆಯ್ಕೆಯಾದ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಸೆಪ್ಟೆಂಬರ್ 15 ರೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಬಯಲುಸೀಮೆಯ ಬರದ ಹಣೆಪಟ್ಟಿ ಅಳಿಸುವತ್ತ ಭದ್ರೆ ಹೆಜ್ಜೆ
ಗಣಿಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿ (CEPMIZ) ಯೋಜನೆಯಡಿ ಚಿತ್ರದುರ್ಗ, ಹೊಳಲ್ಕೆರೆ ಮತ್ತು ಹೊಸದುರ್ಗ ತಾಲೂಕುಗಳ 39 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ GPLF ಸದಸ್ಯತ್ವ ಪಡೆದಿರುವ ಸ್ವಸಹಾಯ ಗುಂಪಿನ ಒಟ್ಟು 3,179 ಮಹಿಳಾ ಫಲಾನುಭವಿಗಳಿಗೆ ಹೈನುರಾಸು ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
2026ರ ಮೇ 22ರಂದು ಹೊರಡಿಸಲಾದ ಪತ್ರಿಕಾ ಪ್ರಕಟಣೆ ಆಧರಿಸಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ 3,039 ಅರ್ಹ ಫಲಾನುಭವಿಗಳನ್ನು ಜಿಲ್ಲಾ ಮಟ್ಟದ ಸಮಿತಿಯು 2026ರ ಆಗಸ್ಟ್ 28ರಂದು ನಿಯಮಾನುಸಾರ ಆಯ್ಕೆ ಮಾಡಿದೆ.
ತಾಲೂಕುವಾರು ವಿವರ ಇಂತಿದೆ. ಚಿತ್ರದುರ್ಗ ತಾಲೂಕಿನಲ್ಲಿ 1,364 (ಪ.ಜಾತಿ 406, ಪ.ಪಂ 256, ಸಾಮಾನ್ಯ 702), ಹೊಳಲ್ಕೆರೆ ತಾಲೂಕಿನಲ್ಲಿ 598 (ಪ.ಜಾತಿ 103, ಪ.ಪಂ 43, ಸಾಮಾನ್ಯ 452) ಹಾಗೂ ಹೊಸದುರ್ಗ ತಾಲೂಕಿನಲ್ಲಿ 1,077 (ಪ.ಜಾತಿ 145, ಪ.ಪಂ 81, ಸಾಮಾನ್ಯ 851) ಸೇರಿದಂತೆ ಒಟ್ಟು 3,039 ಫಲಾನುಭವಿಗಳು ಆಯ್ಕೆಯಾಗಿದ್ದಾರೆ.
ಚಿತ್ರದುರ್ಗ ತಾಲೂಕಿನ ಆಳಗವಾಡಿ, ಆಲಘಟ್ಟ, ಬೊಮ್ಮೆನಹಳ್ಳಿ, ಅನ್ನೇಹಾಳ್, ಭೀಮಸಮುದ್ರ, ಗೊಡಬನಾಳು, ಸೊಂಡೆಕೋಳ, ಸಿರಿಗೆರೆ, ಹಿರೇಗುಂಟನೂರು, ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು, ಆಡನೂರು, ಉಪ್ಪರಿಗೇನಹಳ್ಳಿ, ಗುಂಜಿಗನೂರು, ಚಿತ್ರಹಳ್ಳಿ, ಟಿ. ನುಲೇನೂರು, ತಾಳ್ಯ, ತೇಕಲವಟ್ಟಿ, ಬಿ. ದುರ್ಗ, ಮುತ್ತಗದೂರು, ಶಿವಗಂಗಾ, ಹಿರೇಎಮ್ಮಿಗನೂರು, ಹೆಚ್. ಡಿ. ಪುರ ಹಾಗೂ ಹೊಸದುರ್ಗ ತಾಲೂಕಿನ ಲಕ್ಕಿಹಳ್ಳಿ, ದೊಡ್ಡಕಿಟ್ಟದಹಳ್ಳಿ, ಮಾಡದಕೆರೆ, ಅತ್ತಿಮಗ್ಗೆ, ಜಾನಕಲ್, ಚಿಕ್ಕಬ್ಯಾಲದಕೆರೆ, ಕಂಚಿಪುರ, ಗುಡ್ಡದನೇರಲಕೆರೆ, ದೊಡ್ಡತೇಕಲವಟ್ಟಿ, ಕೈನಡು, ಹೆಗ್ಗೆರೆ, ಎಸ್. ನೇರಲಕೆರೆ, ಶ್ರೀರಾಂಪುರ, ಕಾರೇಹಳ್ಳಿ, ಮತ್ತೋಡು, ದೊಡ್ಡಘಟ್ಟ ಮತ್ತು ಹುಣವಿನಡು ಗ್ರಾಮಗಳು ಈ ಯೋಜನೆಗೆ ಒಳಪಟ್ಟಿವೆ.
ಇದನ್ನೂ ಓದಿ: ಚಿತ್ರದುರ್ಗ ರೈತರ ದಶಕಗಳ ಕನಸು ನನಸು | ಚಿತ್ರದುರ್ಗದತ್ತ ಮುಖ ಮಾಡಿದ ಭದ್ರೆ
ಆಯ್ಕೆಯಾದ ಫಲಾನುಭವಿಗಳ ಪಟ್ಟಿಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯತಿ, ಪಶು ವೈದ್ಯಕೀಯ ಚಿಕಿತ್ಸಾ ಕೇಂದ್ರಗಳ ನೋಟೀಸ್ ಬೋರ್ಡ್ ಹಾಗೂ ಜಿಲ್ಲೆಯ ವೆಬ್ಸೈಟ್ https://chitradurga.nic.in ನಲ್ಲಿ ಪ್ರಕಟಿಸಲಾಗಿದೆ.
ಈ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಸೂಕ್ತ ಸಕಾರಣದೊಂದಿಗೆ ಇದೇ ಸೆಪ್ಟೆಂಬರ್ 15 ರೊಳಗಾಗಿ ಸಂಬಂಧಪಟ್ಟ ಗ್ರಾಮ ಪಂಚಾಯತಿ ಅಥವಾ ಪಶು ವೈದ್ಯಕೀಯ ಚಿಕಿತ್ಸಾ ಕೇಂದ್ರಗಳಲ್ಲಿ ಸಲ್ಲಿಸಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ತಿಪ್ಪೇಸ್ವಾಮಿ ತಿಳಿಸಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

