
CHITRADURGA NEWS | 06 SEPTEMBER 2026
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಜನರ ಹಾಗೂ ರೈತರ ದಶಕಗಳ ಬಾಗಿನ ಕನಸು ಕೊನೆಗೂ ನನಸಾಗುವ ಹಂತಕ್ಕೆ ತಲುಪಿದೆ. ಭದ್ರಾ ಮೇಲ್ದಂಡೆ ಯೋಜನೆಯ ಬಹುನಿರೀಕ್ಷಿತ ಟ್ರಯಲ್ ರನ್‌ಗೆ ಚಾಲನೆ ನೀಡಲಾಗಿದ್ದು, ಭದ್ರಾ ಜಲಾಶಯದಿಂದ ಚಿತ್ರದುರ್ಗದತ್ತ ಜೀವಜಲ ಹರಿಯಲು ಆರಂಭಿಸಿದೆ.

ಇದನ್ನೂ ಓದಿ: ಚಿತ್ರದುರ್ಗದ ಪಾಲಿಗೆ ಐತಿಹಾಸಿಕ ಕ್ಷಣ | ಬರದ ನಾಡಿನ ಬಾಯಾರಿಕೆ ತಣಿಸಲು ಹರಿದು ಬರುವಳು ಭದ್ರೆ
ಯೋಜನೆಯ ಇಂಟೇಕ್ ಪಾಯಿಂಟ್‌ನಿಂದ ಕಾಲುವೆಗೆ ನೀರು ಹರಿಸುವ ಮೂಲಕ ಸಚಿವ ಟಿ.ರಘುಮೂರ್ತಿ ಅವರು ಭದ್ರಾ ನದಿಗೆ ವಿಶೇಷ ಪೂಜೆ ಸಲ್ಲಿಸಿ, ಟ್ರಯಲ್ ರನ್‌ಗೆ ಅದ್ಧೂರಿ ಚಾಲನೆ ನೀಡಿದರು. ಭದ್ರಾ ಜಲಾಶಯದಿಂದ ಬಿಟ್ಟ ನೀರು ಚಿತ್ರದುರ್ಗದ ಗೋನೂರು ಕೆರೆಯವರೆಗೆ ಹರಿದು ಬರಲಿದೆ.
ಈ ಐತಿಹಾಸಿಕ ಕ್ಷಣಕ್ಕೆ ಜಿಲ್ಲೆಯಾದ್ಯಂತ ಹರ್ಷಚಿತ್ತರಾದ ರೈತರು:
ಬರಪೀಡಿತ ಚಿತ್ರದುರ್ಗ ಜಿಲ್ಲೆಗೆ ಭದ್ರಾ ನೀರು ತಲುಪುತ್ತಿರುವುದನ್ನು ಕಂಡು ಜಿಲ್ಲೆಯ ರೈತ ಸಮುದಾಯದಲ್ಲಿ ಸಂತಸದ ಹೊನಲು ಹರಿದಿದೆ. ದಶಕಗಳಿಂದ ಕೇವಲ ಭರವಸೆಯಾಗಿಯೇ ಉಳಿದಿದ್ದ ಯೋಜನೆಯು ಈಗ ಸಾಕಾರಗೊಳ್ಳುತ್ತಿದ್ದು, ತಮ್ಮ ಭೂಮಿ ಹಸಿರಾಗುವ ಭರವಸೆಯಲ್ಲಿ ರೈತರು ಸಂಭ್ರಮಿಸುತ್ತಿದ್ದಾರೆ.

ಇದನ್ನೂ ಓದಿ: ಗುರು ಸ್ಥಾನ ಪರಮ ಪವಿತ್ರ | ಮಕ್ಕಳ ಭವಿಷ್ಯ ರೂಪಿಸುವ ಹೊಣೆ ಶಿಕ್ಷಕರದ್ದು
ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ, ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ತರೀಕೆರೆ ಶಾಸಕ ಶ್ರೀನಿವಾಸ, ಶಿರಾ ಶಾಸಕ ಟಿ.ಬಿ.ಜಯಚಂದ್ರ ಸೇರಿದಂತೆ ಮತ್ತಿತರರು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

