CHITRADURGA NEWS | 06 SEPTEMBER 2026
ಚಿತ್ರದುರ್ಗ: ತಮ್ಮ ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮನವಿ ಮಾಡಲು ಬಂದ ಪೌರಕಾರ್ಮಿಕರನ್ನು ಉದ್ದೇಶಿಸಿ, ನಿಮ್ಮನ್ನು ಯಾಕೆ ಖಾಯಂ ಮಾಡಬೇಕು ಎಂಬ ರೀತಿಯಲ್ಲಿ ಸಚಿವ ಕೃಷ್ಣಬೈರೇಗೌಡರು ಪ್ರಶ್ನಿಸಿರುವುದನ್ನು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಚ್. ಮೋಹನ್ ಕುಮಾರ್ ಖಂಡಿಸಿದ್ದಾರೆ.
ಇದನ್ನೂ ಓದಿ: ಅರಿವು ಶೈಕ್ಷಣಿಕ ಸಾಲ | ಅರ್ಜಿ ಅಹ್ವಾನ
ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ಪೌರ ಕಾರ್ಮಿಕರನ್ನು ಶೇ.30 ರಷ್ಟು ಗೈರಯ ಹಾಜರಾಗುತ್ತೀರಿ, ನಿಮ್ಮನ್ನು ಯಾಕೆ ಖಾಯಾಂ ಮಾಡಬೇಕು ಎಂದು ಪ್ರಶ್ನಿಸಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಕರ್ನಾಟಕದ ನಗರಗಳನ್ನು ಸ್ವಚ್ಛವಾಗಿಡುವ ಪೌರ ಕಾರ್ಮಿಕರು ಹಲವು ವರ್ಷಗಳಿಂದ ಉದ್ಯೋಗ ಭದ್ರತೆ, ಸಮರ್ಪಕ ವೇತನ ಪಿಎಫ್ ಮತ್ತು ಇಎಸ್ಐ ಆರೋಗ್ಯ ರಕ್ಷಣೆ ಹಾಗೂ ಸುರಕ್ಷತಾ ಸೌಲಭ್ಯಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಗುತ್ತಿಗೆ ಪದ್ಧತಿ, ವೇತನ ವಿಳಂಬ, ಸಾಮಾಜಿಕ ಭದ್ರತೆಯ ಕೊರತೆ, ಆರೋಗ್ಯ ಸಮಸ್ಯೆಗಳು ಹಾಗೂ ಕೆಲಸದ ವೇಳೆ ಎದುರಾಗುವ ಅಪಾಯಗಳು ಇನ್ನೂ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ.
ಪ್ರತಿದಿನ ಕಸ, ಧೂಳು, ವಿಷಕಾರಿ ತ್ಯಾಜ್ಯ, ಒಳಚರಂಡಿ ಹಾಗೂ ಅಪಾಯಕಾರಿ ಪರಿಸ್ಥಿತಿಗಳ ನಡುವೆ ದುಡಿಯುವ ಪೌರಕಾರ್ಮಿಕರಿಗೆ ಗುಣಮಟ್ಟದ ಬ್ರೌಸ್, ಮಾಸ್ಕ್, ಗಮ್ಬಬೂಟ್, ಸುರಕ್ಷತಾ ಉಡುಪು, ಆರೋಗ್ಯ ತಪಾಸಣೆ ಮತ್ತು ವಿಮಾ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಹೈನುರಾಸು ಯೋಜನೆ | 3,039 ಫಲಾನುಭವಿಗಳ ಪಟ್ಟಿ ಪ್ರಕಟ | ಸೆ.15ರೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ
ಮ್ಯಾನ್ಹೋಲ್ ಮತ್ತು ಸೆಪ್ಟಿಕ್ ಟ್ಯಾಂಕ್ ಸ್ವಚ್ಛತೆಯನ್ನು ಸಂಪೂರ್ಣ ಯಾಂತ್ರೀಕರಣಗೊಳಿಸಿ, ಮಾನವ ಜೀವವನ್ನು ಅಪಾಯಕ್ಕೆ ತಳ್ಳುವ ಪದ್ಧತಿಗೆ ಶಾಶ್ವತ ಅಂತ್ಯ ಹಾಡಬೇಕು. ಇಂತಹ ಗಂಭೀರ ಸಮಸ್ಯೆಗಳ ನಡುವೆ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮನವಿ ಮಾಡಲು ಬಂದ ಪೌರಕಾರ್ಮಿಕರನ್ನು ಸಚಿವರು ಪ್ರಶ್ನಿಸಿದ್ದಾರೆ. ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಬೇಕಾದ ಸಚಿವರು, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿದ ಕಾರ್ಮಿಕರನ್ನೇ ಅವಮಾನಿಸುವುದು ಅಧಿಕಾರದ ದರ್ಪವನ್ನು ತೋರಿಸುತ್ತದೆ ಎಂದು ದೂರಿದ್ದಾರೆ.
ಪೌರಕಾರ್ಮಿಕರು ಕೇವಲ ಕಸ ಎತ್ತುವ ಕಾರ್ಮಿಕರಲ್ಲ; ಅವರು ಸಾರ್ವಜನಿಕ ಆರೋಗ್ಯ ಮತ್ತು ಸ್ವಚ್ಛತೆಯ ಮುಂಚೂಣಿ ಸೇವಕರು. ಅವರ ಶ್ರಮದಿಂದಲೇ ನಮ್ಮ ನಗರಗಳು ಸ್ವಚ್ಛವಾಗಿರುತ್ತವೆ. ಆದ್ದರಿಂದ ಸಚಿವ ಕೃಷ್ಣ ಬೈರೇಗೌಡರು ತಮ್ಮ ಹೇಳಿಕೆಯನ್ನು ಹಿಂಪಡೆದು ಪೌರಕಾರ್ಮಿಕರಲ್ಲಿ ಬಹಿರಂಗ ಕ್ಷಮೆಯಾಚಿಸಬೇಕು.
ಇದನ್ನೂ ಓದಿ: ಬಯಲುಸೀಮೆಯ ಬರದ ಹಣೆಪಟ್ಟಿ ಅಳಿಸುವತ್ತ ಭದ್ರೆ ಹೆಜ್ಜೆ
ಜೊತೆಗೆ ಉದ್ಯೋಗ ಖಾಯಂ, ಸಮಯಕ್ಕೆ ಸರಿಯಾದ ವೇತನ, ಪಿಎಫ್ ಮತ್ತು ಇಎಸ್ಐ ಆರೋಗ್ಯ ರಕ್ಷಣೆ, ಸುರಕ್ಷತಾ ಸಾಧನಗಳು ಹಾಗೂ ಗೌರವಯುತ ಕೆಲಸದ ವಾತಾವರಣವನ್ನು ಸರ್ಕಾರ ಖಾತ್ರಿಪಡಿಸಬೇಕು. ಸಚಿವರು ಕ್ಷಮೆಯಾಚಿಸದಿದ್ದರೆ, ಪೌರಕಾರ್ಮಿಕರ ಆತ್ಮಗೌರವ ಮತ್ತು ನ್ಯಾಯಯುತ ಹಕ್ಕುಗಳಿಗೆ ಬೆಂಬಲವಾಗಿ ಕಪ್ಪು ಬಟ್ಟೆ ಪ್ರದರ್ಶನದ ಮೂಲಕ ಪ್ರತಿಭಟನೆಯ ಎಚ್ಚರಿಕೆಯನ್ನು ಜಿ.ಎಚ್.ಮೋಹನ್ ನೀಡಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

