ಹೊಸದುರ್ಗ
Stone Gate: ಏಕಾಏಕಿ ಕುಸಿದ ಕಲ್ಲಿನ ದ್ವಾರ | ನೀರುಗಂಟಿ ಮೇಲೆ ಬಿದ್ದ ಕಲ್ಲು

Published on
CHITRADURGA NEWS | 22 SEPTEMBER 2024
ಚಿತ್ರದುರ್ಗ: ದ್ವಾರಬಾಗಿಲು ಏಕಾಏಕಿ ಕುಸಿದು ಬಿದ್ದ ಪರಿಣಾಮ ವ್ಯಕ್ತಿ ತೀವ್ರ ಗಾಯಗೊಂಡಿರುವ ಘಟನೆ ಹೊಸದುರ್ಗದ ಶ್ರೀರಂಗಪುರ ಗ್ರಾಮದಲ್ಲಿ ನಡೆದಿದೆ.
ಹೊಸದುರ್ಗ ತಾಲ್ಲೂಕಿನ ಕಸಬಾ ಹೋಬಳಿಯ ಶ್ರೀರಂಗಪುರ ಗ್ರಾಮದಲ್ಲಿನ ಕಲ್ಲಿನ ದ್ವಾರ ನಿರ್ಮಿಸಲಾಗಿದೆ. ಆದರೆ ಶನಿವಾರ ಏಕಾಏಕಿ ಮುರಿದು ಬಿದ್ದ ಪರಿಣಾಮ ನೀರುಗಂಟಿ ಬಸವರಾಜ್ ತೀವ್ರ ಗಾಯಗೊಂಡಿದ್ದಾರೆ.
ಕ್ಲಿಕ್ ಮಾಡಿ ಓದಿ: ಅತ್ತೆ, ಮಾವನ ಕೊಲೆ ಪ್ರಕರಣ | ಅಳಿಯ ಎಸ್ಕೇಪ್ | ಇಬ್ಬರ ಬಂಧನ

ಜೆಸಿಬಿ ಯಂತ್ರದ ಸಹಾಯದಿಂದ ಅವರ ಮೇಲೆ ಬಿದ್ದಿದ್ದ ಕಲ್ಲುಗಳನ್ನು ತೆರವುಗೊಳಿಸಿ ರಕ್ಷಿಸಲಾಗಿದೆ. ಅವರ ಕೈ ಮತ್ತು ಕಾಲು ಮುರಿದು ಹೋಗಿದ್ದು, ಹೆಚ್ಚಿನ ಚಿಕಿತ್ಸೆಗೆ ಹೊಸದುರ್ಗ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
Continue Reading
Related Topics:construction, Hosdurga, Hospital, JCB, Neeruganti, Stone Gate, suddenly, ಆಸ್ಪತ್ರೆ, ಏಕಾಏಕಿ, ಕಲ್ಲಿನ ದ್ವಾರ, ಜೆಸಿಬಿ, ನಿರ್ಮಾಣ, ನೀರುಗಂಟಿ, ಹೊಸದುರ್ಗ

Click to comment