
CHITRADURGA NEWS | 22 SEPTEMBER 2024
ಚಿತ್ರದುರ್ಗ: ನಾಡ ಹಬ್ಬ ದಸರಾ ಹಬ್ಬಕ್ಕೆ ರಾಜ್ಯ ಸರ್ಕಾರ ಅದ್ಧೂರಿ ಸಿದ್ದತೆ ನಡೆಸುತ್ತಿದೆ. ಈ ನಡುವೆ ಸಾರ್ವಜನಿಕ ಶಿಕ್ಷಣ ಇಲಾಖೆ ಸರ್ಕಾರಿ-ಖಾಸಗಿ ಶಾಲಾ ಮಕ್ಕಳಿಗೆ ಅಕ್ಟೋಬರ್ 3 ರಿಂದ 20 ತನಕ ದಸರಾ ರಜೆ ಘೋಷಿಸಿದೆ. ಇಡೀ ಕರ್ನಾಟಕದ ಶಾಲೆಗಳಿಗೆ ಒಂದೇ ಮಾರ್ಗದರ್ಶಿ ರೂಪಿಸಿದೆ.
ಈ ಹಿಂದೆ ಮಂಗಳೂರಿನ ಭಾಗದಲ್ಲಿ ವಿದ್ಯಾರ್ಥಿಗಳ ದಸರಾ ರಜೆಯಲ್ಲಿ ಕೊಂಚ ಮಾರ್ಪಾಡು ಆಗುತ್ತಿತ್ತು. ಆದರೆ, ಈ ಬಾರಿ ಯಾವುದೇ ಮಾರ್ಪಾಡು ಆಗಿಲ್ಲ. ಇಡೀ ಕರ್ನಾಟಕದ ಶಾಲೆಗಳಿಗೆ ಒಂದೇ ಮಾರ್ಗದರ್ಶಿ ರೂಪಿಸಿದೆ.
ಕ್ಲಿಕ್ ಮಾಡಿ ಓದಿ: ಏಕಾಏಕಿ ಕುಸಿದ ಕಲ್ಲಿನ ದ್ವಾರ | ನೀರುಗಂಟಿ ಮೇಲೆ ಮೇಲೆ ಬಿದ್ದ ಕಲ್ಲು

ಅಕ್ಟೋಬರ್ 2ರಂದು ಎಲ್ಲಾ ಶಾಲೆಗಳಲ್ಲೂ ಗಾಂಧಿ ಜಯಂತಿ ಆಚರಿಸಿದ ಮರು ದಿನದಿಂದ ಶಾಲಾ ಮಕ್ಕಳು ರಜೆಯ ಮಜಾ ಕಳೆಯಲಿದ್ದಾರೆ. ಅಕ್ಟೋಬರ್ 3 ರಿಂದ 20ರ ತನಕ ಅಂದರೆ 17 ದಿನಗಳ ಕಾಲ ರಜೆ ಸಿಗಲಿದೆ.
ಕ್ಲಿಕ್ ಮಾಡಿ ಓದಿ: ಅತ್ತೆ, ಮಾವನ ಕೊಲೆ ಪ್ರಕರಣ | ಅಳಿಯ ಎಸ್ಕೇಪ್ | ಇಬ್ಬರ ಬಂಧನ
ಅಕ್ಟೋಬರ್ 21ರಿಂದ 2ನೇ ಅವಧಿಯು ಪ್ರಾರಂಭವಾಗಲಿದ್ದು, 2025ರ ಏಪ್ರಿಲ್ 10 ರ ತನಕ ನಡೆಯಲಿದೆ. 2024-2025ರ ಶೈಕ್ಷಣಿಕ ವರ್ಷದ ಶಾಲಾ ಅವಧಿಯ ಮಾರ್ಗದರ್ಶಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಲೆಗಳು ಆರಂಭಕ್ಕೂ ಮುನ್ನ ಪ್ರಕಟಣೆ ಹೊರಡಿಸಿತ್ತು. ಅದರ ನಿಯಮಾನುಸಾರದಂತೆ ರಜೆಗಳು ಘೋಷಣೆಯಾಗಿವೆ. ಅಕ್ಟೋಬರ್‌ನಲ್ಲಿ ಕೇವಲ 11 ದಿನಗಳು ತರಗತಿಗಳು ನಡೆಯಲಿವೆ.

ದಸರಾ ರಜೆಯ ದಿನಗಳನ್ನು ಫೋಷಕರು ಪರಿಗಣಿಸಿ, ಮಕ್ಕಳ ಕಲಿಕೆಗೆ, ಪಠ್ಯೇತರ ಚಟವಟಿಕೆಗಳಲ್ಲಿ ತೊಡಗಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ. ನಗರ ಪ್ರದೇಶಗಳ ಫೋಷಕರು ತಮ್ಮ ಮಕ್ಕಳಿಗೆ ಇಷ್ಟವಾದ ಪ್ರವಾಸ ಕೈಗೊಳ್ಳಬಹುದು. ಅಥವಾ ಕ್ರೀಡೆಗಳು ಸೇರಿದಂತೆ ಇನ್ನಿತರ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ವ್ಯವಸ್ಥೆ ಮಾಡಬಹುದು. ಆದರೆ ಈ ರಜೆಗಳ ಅವಧಿಯಲ್ಲಿ ಮಕ್ಕಳಿಗೆ ಮಾನಸಿಕ ಹೆಚ್ಚು ಆರೋಗ್ಯವಾಗಿ ನೋಡಿಕೊಳ್ಳುವುದು ಉತ್ತಮ.
ಗ್ರಾಮದಿಂದ ನಗರಕ್ಕೆ ಬಂದು ವಾಸಿಸುತ್ತಿರುವ ಪೋಷಕರು ಮಕ್ಕಳನ್ನು ತಮ್ಮ ಮಕ್ಕಳನ್ನು ಊರುಗಳಿಗೆ ಕಳುಹಿಸಲು ಸಜ್ಜಾಗಿದ್ದಾರೆ. ಮಕ್ಕಳು ಸಹ ತಮ್ಮ ತಾತ ಮತ್ತು ಅಜ್ಜಿ ಇರುವ ಊರಿಗೆ ಹಾಗೂ ನೆಂಟರ ಊರುಗಳಿಗೆ ಹೋಗಲು ತಯಾರಿ ನಡೆಸಿದ್ದಾರೆ. ಇನ್ನು ಕೆಲವು ಪೋಷಕರು ತಮ್ಮ ಮಕ್ಕಳೊಂದಿಗೆ ಪ್ರವಾಸ ಕೈಗೊಳ್ಳಲು ಚಿಂತನೆ ನಡೆಸಿದ್ದಾರೆ. ಇದರ ನಡುವೆ ಮಕ್ಕಳ ಆರೋಗ್ಯದ ಕಡೆಗೂ ಹೆಚ್ಚಿನ ಕಾಳಜಿವಹಿಸುವ ಅವಶ್ಯತೆಯಿದೆ. ಇಲ್ಲವಾದರೆ ರಜೆ ಪೂರ್ತಿ ಆಸ್ಪತ್ರೆ, ಚಿಕಿತ್ಸೆಯಲ್ಲೇ ಕಳೆಯಬೇಕಾಗುತ್ತದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
