ಹೊಸದುರ್ಗ
ಸಾಣೇಹಳ್ಳಿ ರಂಗಕರ್ಮಿ ಬಿ.ರಾಜು ‘ರಂಗ ಆರಾಧಕ’ | ಪರಸಗಡ ನಾಟಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ

CHITRADURGA NEWS | 20 JANUARY 2024
ಚಿತ್ರದುರ್ಗ (CHITRADURGA): ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಹಿರಿಯ ವಕೀಲ ವಿ.ಆರ್.ಕಾರದಗಿ ಸ್ಮರಣಾರ್ಥ ನೀಡುವ ‘ರಂಗ ಆರಾಧಕ’ ಪ್ರಶಸ್ತಿ ಗೌರವಕ್ಕೆ ಸಾಣೇಹಳ್ಳಿಯ ರಂಗಕರ್ಮಿ ಬಿ. ರಾಜು ಪಾತ್ರರಾಗಿದ್ದಾರೆ.
ಇದನ್ನೂ ಓದಿ: ದೇವರ ಎತ್ತುಗಳಿಗೆ 9 ಟನ್ ಮೇವು ವಿತರಿಸಿದ ಶಾಸಕ ಟಿ.ರಘುಮೂರ್ತಿ| ಶಾಶ್ವತ ಶೆಡ್ ನಿರ್ಮಿಸಲು ಸೂಚನೆ
ಬೆಳಗಾವಿಯ ಸವದತ್ತಿ ಕೋಟೆ ಆವರಣದಲ್ಲಿ ಜ.27 ರಿಂದ ಫೆ.4ರ ವರಗೆ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯಿಂದ 27ನೇ ಪರಸಗಡ ನಾಟಕೋತ್ಸವ ನಡೆಯಲಿದೆ. ಈ ಉತ್ಸವದಲ್ಲಿ ರಂಗ ಕ್ಷೇತ್ರದಲ್ಲಿ ಸಾಧನೆಗೈದ ರಂಗಕರ್ಮಿಗಳಿಗೆ ‘ರಂಗ ಆರಾಧಕ’, ‘ರಂಗಚಂದ್ರ’ ಪ್ರಶಸ್ತಿ ಪ್ರಕಟಿಸಲಾಗಿದೆ ಎಂದು ಸಂಸ್ಥೆಯ ಪ್ರಮುಖ ಜಾಕೀರ ನದಾಫ ತಿಳಿಸಿದ್ದಾರೆ.
ಇದನ್ನೂ ಓದಿ: ಮಠದ ಆವರಣದಲ್ಲಿ ಕರಡಿಯ ಸಂಚಾರ
ರುದ್ರಪ್ಪ ಶಿಂಧೆ ಅವರಿಂದ ಕೊಡಮಾಡುವ ‘ರಂಗ ಆರಾಧಕ’ ಪ್ರಶಸ್ತಿಯನ್ನು ಧಾರವಾಡದ ಖ್ಯಾತ ಪ್ರಸಾದನಕಾರ ಸಂತೋಷ ಗಜಾನನ ಮಹಾಲೆ ಮತ್ತು ಹಿರಿಯ ವಕೀಲ ವಿ.ಆರ್. ಕಾರದಗಿ ಸ್ಮರಣಾರ್ಥ ನೀಡುವ ‘ರಂಗ ಆರಾಧಕ’ ಪ್ರಶಸ್ತಿಯನ್ನು ಸಾಣೇಹಳ್ಳಿಯ ರಂಗಕರ್ಮಿ ಬಿ. ರಾಜು ಹಾಗೂ ಚಂದ್ರಕಾಂತ್ ಸುಳ್ಳದ್ ಸ್ಮರಣಾರ್ಥ ನೀಡುವ ‘ರಂಗಚಂದ್ರ’ ಪ್ರಶಸ್ತಿಯನ್ನು ಬೆಳಗಾವಿಯ ರಂಗ ನಿರ್ದೇಶಕ ಬಾಬಾ ಸಾಹೇಬ್ ಕಾಂಬಳೆ ಅವರಿಗೆ ನಾಟಕೋತ್ಸವದ ಉದ್ಘಾಟನೆಯಲ್ಲಿ ಪ್ರದಾನ ಮಾಡಲಾಗುತ್ತದೆ.
ಇದನ್ನೂ ಓದಿ: ಕಾರಿನ ಟೈಯರ್ ಬ್ಲಾಸ್ಟ್ | ಅಜ್ಜಿಯ ಶವ ಸಂಸ್ಕಾರಕ್ಕೆ ಹೋಗುತ್ತಿದ್ದ ಮೂವರು ಮೃತ
ನಾಟಕೋತ್ಸವದಲ್ಲಿ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯಿಂದ ಎರಡು, ಸಾಣೇಹಳ್ಳಿಯ ಶಿವ ಸಂಚಾರ, ಧಾರವಾಡದ ಸಮುದಾಯ, ಬೆಳಗಾವಿಯ ರಂಗ ಸೃಷ್ಟಿಯ ನಾಟಕಗಳು ಹಾಗೂ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಬೆಂಗಳೂರಿನ ರಂಗಾಸ್ತೆ ತಂಡಗಳಿಂದ ತಲಾ ಎರಡು ನಾಟಕ ಪ್ರದರ್ಶನಗೊಳ್ಳಲಿವೆ.
