
CHITRADURGA NEWS | 07 JUNE 2026
ಚಿತ್ರದುರ್ಗ: ಇಂದಿನ ಆಧುನಿಕ ಯುಗದಲ್ಲಿ ವೈದ್ಯಕೀಯ ವಿಜ್ಞಾನವು ತಂತ್ರಜ್ಞಾನದೊಂದಿಗೆ ಹೆಜ್ಜೆ ಇಡುತ್ತಿದ್ದು, ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ತಂತ್ರಜ್ಞಾನಗಳ ಬಳಕೆ ಅತ್ಯಂತ ಪ್ರಮುಖವಾಗಿದೆ.
ಇದನ್ನೂ ಓದಿ: ರುಡ್‍ಸೆಟ್ | ಉಚಿತ ಸಮಗ್ರ ಕೃಷಿ ತರಬೇತಿ
ಇದಕ್ಕೆ ಪೂರಕವಾಗಿ ಗುಡ್ಡದ ರಂಗವ್ವನಹಳ್ಳಿ ವಿ.ವಿ.ಸ್ನಾತಕೋತ್ತರ ಕೇಂದ್ರದಲ್ಲಿರುವ ಸರ್ಕಾರಿ ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಲಾದ “ಡಿಜಿಟಲ್ ಡೆಮಾಗ್ರಫಿ, ಸೆನ್ಸಸ್, ಪಾಪ್ಯುಲೇಷನ್ ಸೈನ್ಸ್ ಮತ್ತು ಆರ್ಟಿಫಿಷಿಯಲ್ ಇನ್‌ಟೆಲಿಜನ್ಸ್ ಇನ್ ಪಬ್ಲಿಕ್ ಹೆಲ್ತ್” (ಸಾರ್ವಜನಿಕ ಆರೋಗ್ಯದಲ್ಲಿ ಡಿಜಿಟಲ್ ಜನಸಂಖ್ಯಾಶಾಸ್ತ್ರ, ಜನಗಣತಿ, ಜನಸಂಖ್ಯಾ ವಿಜ್ಞಾನ ಮತ್ತು ಕೃತಕ ಬುದ್ಧಿಮತ್ತೆ) ಕುರಿತು ಅರ್ಥಪೂರ್ಣ ಕಾರ್ಯಾಗಾರವು ಯಶಸ್ವಿಯಾತು.
ಭವ್ಯ ಉದ್ಘಾಟನೆ ಮತ್ತು ಗಣ್ಯರ ಸಂದೇಶ:
ಕಾರ್ಯಾಗಾರವನ್ನು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ವಿಭಾಗದ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ, ಬಸವೇಶ್ವರ ಮೆಡಿಕಲ್ ಕಾಲೇಜಿನ ಡೀನ್ ಮತ್ತು ನಿರ್ದೇಶಕರಾದ ಡಾ. ರಾಜೇಶ್ ಎಂ.ಎಸ್., ಸಿಎಂಸಿಆರ್‌ಐ ಡೀನ್ ಹಾಗೂ ನಿರ್ದೇಶಕರಾದ ಡಾ. ಬಿ.ವೈ. ಯುವರಾಜ್ ಮತ್ತು ವಿವಿಧ ಕಾಲೇಜುಗಳ ತಜ್ಞ ವೈದ್ಯರು ದೀಪ ಬೆಳಗುವುದರ ಮೂಲಕ ವಿಧ್ಯುಕ್ತವಾಗಿ ಉದ್ಘಾಟಿಸಿದರು.
ರಾಷ್ಟ್ರಕವಿ ಕುವೆಂಪು ರವರ “ಜೈ ಭಾರತ ಜನನಿಯ ತನುಜಾತೆ” ನಾಡಗೀತೆ ಹಾಗೂ ವೈದ್ಯ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಇದನ್ನೂ ಓದಿ: ಜಿಲ್ಲಾಸ್ಪತ್ರೆ | ಜೂನ್ 09ರಂದು ಉಚಿತ ಗ್ಯಾಸ್ಟ್ರೋ ಶಿಬಿರ
ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಅಲ್ಲಮಪ್ರಭುವಿನ ವಚನವನ್ನು ಸ್ಮರಿಸುತ್ತಾ, ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿದ್ದು, ವೈದ್ಯ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಸವೇಶ್ವರ ಮೆಡಿಕಲ್ ಕಾಲೇಜಿನ ಡೀನ್ ಡಾ. ರಾಜೇಶ್ ಎಂ.ಎಸ್. ಅವರು ಮಾತನಾಡುತ್ತಾ, “ಎಂಪತಿ ಇಸ್ ನಾಟ್ ಫ್ರಮ್ ದಿ ಮೆಡಿಸಿನ್, ಇಟ್ ಕಮ್ಸ್ ಫ್ರಮ್ ಹ್ಯೂಮನ್ ಬೀಯಿಂಗ್ಸ್” (ಸಹಾನುಭೂತಿ ಎಂಬುದು ಔಷಧಿಯಿಂದ ಬರುವುದಿಲ್ಲ, ಅದು ಮನುಷ್ಯತ್ವದಿಂದ ಬರುತ್ತದೆ) ಎಂದು ಹೇಳುವ ಮೂಲಕ ವೈದ್ಯಕೀಯ ವೃತ್ತಿಯಲ್ಲಿ ಮಾನವೀಯತೆಯ ಮಹತ್ವವನ್ನು ಸಾರಿದರು.
ತಜ್ಞರಿಂದ ವಿಷಯ ಮಂಡನೆ ಮತ್ತು ಸಂವಾದ:
ಕಾರ್ಯಾಗಾರದ ಆರಂಭಕ್ಕೆ ಸಿಎಂಸಿಆರ್‌ಐ ಡೀನ್ ಡಾ. ಬಿ.ವೈ. ಯುವರಾಜ್ ಅವರು ಹಸಿರು ನಿಶಾನೆ ತೋರಿಸಿದರು.
ಇದನ್ನೂ ಓದಿ: SJM ಫಿಸಿಯೋಥೆರಪಿ ಕಾಲೇಜಿನಲ್ಲಿ ಪರಿಸರ ದಿನಾಚರಣೆ
ಮಂಗಳೂರು ಯೆನೆಪೋಯ ವೈದ್ಯಕೀಯ ಕಾಲೇಜು ಪ್ರಾಧ್ಯಾಪಕ ಡಾ.ರಾಮದಾಸ್ ಪಾಂಡುರಂಗ ಪೈ ಇವರು ಸಾರ್ವಜನಿಕ ಆರೋಗ್ಯದಲ್ಲಿ ಡಿಜಿಟಲ್ ಜನಸಂಖ್ಯಾಶಾಸ್ತ್ರ, ಜನಗಣತಿ, ಜನಸಂಖ್ಯಾ ವಿಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಮಹತ್ವದ ಕುರಿತು ಸವಿಸ್ತಾರವಾಗಿ ಮುಖ್ಯ ವಿಷಯ ಮಂಡನೆ ಮಾಡಿದರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಹ ಪ್ರಾಧ್ಯಾಪಕಿ ಡಾ.ಅಮೃತಾ ಎಂ.ಎ ಇವರು “ಜನಸಂಖ್ಯಾಶಾಸ್ತ್ರ ಮತ್ತು ಜನಸಂಖ್ಯೆಯ ಮೂಲಭೂತ ಅಂಶಗಳು” ಎಂಬ ವಿಷಯದ ಕುರಿತು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ, ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು.
ಗಣ್ಯರ ಉಪಸ್ಥಿತಿ ಮತ್ತು ಶ್ಲಾಘನೆ:
ಕಾರ್ಯಕ್ರಮದಲ್ಲಿ ದಾವಣಗೆರೆ ಜೆಜೆಎಂ ಮೆಡಿಕಲ್ ಕಾಲೇಜಿನ ಡಾ. ರೋಹಿತ್ ಎ., ಕಾರವಾರ ಮೆಡಿಕಲ್ ಕಾಲೇಜಿನ ಡಾ. ಹೇಮಗಿರಿ ಕೆ., ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಡಾ. ಬಾಲು ಪಿ.ಎಸ್. ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಇದನ್ನೂ ಓದಿ: ಸಾವಯುವ ಕೃಷಿ ಪದ್ದತಿಯಿಂದ ಮುಂದಿನ ಪೀಳಿಗೆ ದಾರಿದೀಪ
ಸಿಎಂಸಿಆರ್‌ಐನ ಸಮುದಾಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಅಶ್ವಿನಿ ಎಲ್.ಎಚ್. ಅವರು ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿದ್ದರು.
ಡೀನ್ ಡಾ. ಬಿ.ವೈ. ಯುವರಾಜ್ ಅವರು ಕಾರ್ಯಾಗಾರದ ಯಶಸ್ಸಿಗೆ ಕಾರಣರಾದ ಡಾ. ಅಶ್ವಿನಿ ಹಾಗೂ ಇಡೀ ಸಮುದಾಯ ಶಾಸ್ತ್ರ ವಿಭಾಗ ಮತ್ತು ಬೋಧಕ/ಬೋಧಕೇತರ ಸಿಬ್ಬಂದಿಯನ್ನು ಅಭಿನಂದಿಸಿದರು.
ಮುಂಬರುವ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ವಿವಿಧ ವೈದ್ಯಕೀಯ ಕಾಲೇಜುಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಈ ಕಾರ್ಯಾಗಾರದಲ್ಲಿ ವಿವಿಧ ವೈದ್ಯಕೀಯ ಕಾಲೇಜುಗಳ ನೂರಾರು ಪ್ರತಿನಿಧಿಗಳು, ವೈದ್ಯಕೀಯ ಅಧೀಕ್ಷಕರು, ರಿಜಿಸ್ಟಾರ್‌ಗಳು, ಪ್ರಾಧ್ಯಾಪಕರು ಹಾಗೂ ಸಿಎಂಸಿಆರ್‌ಐನ ವೈದ್ಯಕೀಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಮುಂದಿನ ಪೀಳಿಗೆ ನಾವು ಹಾಕಿದ ಮರದ ನೆರಳನ್ನು ಪಡೆಯಬೇಕು
ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ ಎಲ್ಲಾ ಪ್ರತಿನಿಧಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
