CHITRADURGA NEWS | 25 July 2026
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯಡಿ, ಚಿತ್ರದುರ್ಗ ತಾಲ್ಲೂಕಿನ 08 ಕೆರೆಗಳು ಕೈಬಿಟ್ಟುಹೋಗಿವೆ. ಆದ್ದರಿಂದ 08 ಕೆರೆಗಳನ್ನು ಸೇರಿಸಿ, ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಬೇಕು ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮನವಿ ಮಾಡಿದರು.
ಇದನ್ನೂ ಓದಿ: ರೈತರ ನೆಲಕ್ಕೆ ಕಾಲಿಟ್ಟು ಒಣಗಿದ ಬೆಳೆ ವೀಕ್ಷಿಸಿದ ನಾಡದೊರೆ
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಬೆಂಗಳೂರು ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಚಿತ್ರದುರ್ಗ ಜಿಲ್ಲೆ ಕಳೆದ 80 ವರ್ಷಗಳಲ್ಲಿ 60 ವರ್ಷ ಬರಗಾಲ ಕಂಡಿದೆ. ಹೀಗಾಗಿ ಇಲ್ಲಿನ ಜನರ ಬದುಕು ಹಸನಾಗಿಸಲು, ಚಿತ್ರದುರ್ಗ ನಗರ ದಿನೇ ದಿನೇ ಬೆಳೆಯುತ್ತಿದ್ದು ವಿ.ವಿ.ಸಾಗರದಿಂದ ಮತ್ತೊಂದು ಹೊಸ ಪೈಪ್ ಲೈನ್ ಮೂಲಕ ಕುಡಿಯುವ ನೀರು ಪೂರೈಸುವ ಯೋಜನೆ ಮಂಜೂರು ಮಾಡಿ, ಅನುಮೋದನೆ ನೀಡಲು ಕೋರಿದರು.
ಇದನ್ನೂ ಓದಿ: ಪ್ರಜಾಸೇವೆ ನೂತನ ಇಲಾಖೆ ಪ್ರಾರಂಭ | ಸಿಎಂ ಡಿಕೆಶಿ
ಹಾವೇರಿಯಲ್ಲಿ ಮೋಡಬಿತ್ತನೆ ಮಾಡಿದ್ದು, ಯಶಸ್ವಿಯಾಗಿದೆ. ಅದೇ ರೀತಿ ಚಿತ್ರದುರ್ಗ ಜಿಲ್ಲೆಯಲ್ಲಿಯೂ ಮೋಡ ಬಿತ್ತನೆ ಮಾಡಲು ಕ್ರಮ ವಹಿಸುವಂತೆ ಹೇಳಿದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

