By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಿದ್ಧತಾ ಸಭೆ
    ಗೌರಿ-ಗಣೇಶ ಹಬ್ಬ | ಶಾಂತಿ-ಸುವ್ಯವಸ್ಥೆಗೆ ಜಿಲ್ಲಾಡಳಿತ ಕಟ್ಟೆಚ್ಚರ
    4 hours ago
    ಅರ್ಜಿ ಅಹ್ವಾನ
    ಸಹಾಯಧನ, ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
    16 hours ago
    ಯಂಗ್ ಇಂಡಿಯಾ ಸ್ಪೋಟ್ರ್ಸ್ ಫೆಲೋಷಿಪ್‍ಗೆ ಅರ್ಜಿ ಆಹ್ವಾನ
    16 hours ago
    jobs in chitradurga news
    ಇಸ್ರೋದಲ್ಲಿ ಉದ್ಯೋಗಾವಕಾಶ | ಮಾಜಿ ಸೈನಿಕರಿಂದ ಅರ್ಜಿ ಅಹ್ವಾನ 
    16 hours ago
    Bhadra water flow
    ಭದ್ರಾ ನೀರು ಇನ್ನೆಷ್ಟು ದಿನ ಹರಿಯುತ್ತೆ ? | ಕೆರೆಗಳಿಗೆ ತುಂಬುತ್ತಾ ? | ಮುಖ್ಯ ಇಂಜಿನಿಯರ್‌ ರವಿಶಂಕರ್‌ ಉತ್ತರ ಏನು ?
    18 hours ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    ಖಾಸಗಿ ಬಸ್ ಪಲ್ಟಿ | ಸ್ಥಳದಲ್ಲೇ ಮೂವರ ಸಾವು | 15ಕ್ಕೂ ಹೆಚ್ಚು ಮಂದಿಗೆ ಗಾಯ
    3 weeks ago
    ಚಲಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಲಾರಿ ಡಿಕ್ಕಿ | ಇಬ್ಬರು ಸಾವು
    4 weeks ago
    ನಾಯಿ ತಪ್ಪಿಸಲು ಹೋಗಿ ರಸ್ತೆ ಬದಿ ನಿಂತಿದ್ದವರಿಗೆ ಕಾರು ಡಿಕ್ಕಿ | ಸ್ಥಳದಲ್ಲೇ ಓರ್ವ ಸಾವು
    2 months ago
    LOHITH NITHYASHREE
    ಭೀಕರ ಅಪಘಾತ ಮಾರುತಿ ಗ್ಯಾಸ್‌ನ ಲೋಹಿತ್‌ ಪ್ರಸಾದ್‌ ದಂಪತಿ ಸಾವು | ಹೊಳಲ್ಕೆರೆ ಕಣಿವೆ ಬಳಿ ಕಾರು ಲಾರಿ ನಡುವೆ ಅಪಘಾತ
    2 months ago
    ಲಾರಿ-ಬಸ್ ನಡುವೆ ಭೀಕರ ಅಪಘಾತ | 12ಕ್ಕೂ ಹೆಚ್ಚು ಮಂದಿಗೆ ಗಾಯ
    2 months ago
  • ತಾಲೂಕು
    ತಾಲೂಕುShow More
    ಮಾರಿಕಾಂಭ ದೇವಿಯ ಪರವು ಆಚರಣೆ
    ಮಾರಿಕಾಂಭ ದೇವಿಯ ಪರವು ಆಚರಣೆ | ಶತಮಾನದ ಪರಂಪರೆ ಮುಂದುವರಿಕೆ
    7 days ago
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    3 weeks ago
    ವಿದ್ಯುತ್ ಸ್ಪರ್ಶಿಸಿ ನವಿಲು, ಚಿರತೆ ಸಾವು
    1 month ago
    ಸಾಣೇಹಳ್ಳಿ ಶ್ರೀಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ
    ಬದುಕು ಬದಲಿಸುವ ಶಕ್ತಿ ಇಷ್ಟಲಿಂಗ ದೀಕ್ಷೆಗಿದೆ | ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ
    1 month ago
    ಚಳ್ಳಕೆರೆ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ
    ಜವಾಬ್ದಾರಿ ಅರಿತವರು ಮಾತ್ರ ಪತ್ರಕರ್ತರಾಗಲು ಸಾಧ್ಯ | ಶಾಸಕ ಟಿ.ರಘುಮೂರ್ತಿ
    2 months ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    arecanut price list
    ಅಡಿಕೆ ಧಾರಣೆ | 7 ಸೆಪ್ಟಂಬರ್‌ | ಇಂದಿನ ಅಡಿಕೆ ರೇಟ್‌
    3 days ago
    arecanut price list
    ಅಡಿಕೆ ಧಾರಣೆ | ಸೆಪ್ಟಂಬರ್‌ 4 | ಯಾವ ಅಡಿಕೆಗೆ ಎಷ್ಟು ರೇಟ್‌
    6 days ago
    arecanut price list
    ಅಡಿಕೆ ಧಾರಣೆ | ಸೆ.3 | ಚನ್ನಗಿರಿ, ತೀರ್ಥಹಳ್ಳಿ ಸೇರಿ ರಾಜ್ಯದ ಅಡಿಕೆ ವಹಿವಾಟು
    1 week ago
    arecanut price list
    ಅಡಿಕೆ ಧಾರಣೆ | ಅಡಿಕೆ ಬೆಲೆಯಲ್ಲಿ ಕುಸಿತ
    2 months ago
    ARECANUT RATE
    ಅಡಿಕೆ ಧಾರಣೆ | 8 ಜೂನ್‌ | ಇಂದಿನ ಅಡಿಕೆ ರೇಟ್‌
    3 months ago
  • Dina Bhavishya
    Dina BhavishyaShow More
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 10 | ದೂರ ಪ್ರಯಾಣದ ಸೂಚನೆ, ಆರೋಗ್ಯದಲ್ಲಿ ಎಚ್ಚರ
    17 hours ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 09 | ಕೈಗೆತ್ತಿಕೊಂಡ ಕೆಲಸಗಳು ಯಶಸ್ವಿ, ಆರ್ಥಿಕ ಪ್ರಗತಿ
    2 days ago
    ದಿನ ಭವಿಷ್ಯ
    ದಿನ ಭವಿಷ್ಯ | ಸೆಪ್ಟೆಂಬರ್ 08 | ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು, ಹಠಾತ್ ಆರ್ಥಿಕ ಲಾಭ
    3 days ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 07 | ಉದ್ಯೋಗದಲ್ಲಿ ಅಧಿಕಾರಿಗಳಿಂದ ಬೆಂಬಲ, ಅರೋಗ್ಯದಲ್ಲಿ ಎಚ್ಚರ
    4 days ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 06 | ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬ, ಹಠಾತ್ ಆರ್ಥಿಕ ಲಾಭದ ಸೂಚನೆ
    5 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 10 | ಹತ್ತಿ ರೇಟ್…
    10 hours ago
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 09 | ಮೆಕ್ಕೆಜೋಳ, ಸೂರ್ಯಕಾಂತಿ ರೇಟ್..
    1 day ago
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 08 | ಹತ್ತಿ ರೇಟ್ ಎಷ್ಟಿದೆ?
    2 days ago
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 07 | ಮೆಕ್ಕೆಜೋಳ, ರಾಗಿ, ಶೇಂಗಾ ರೇಟ್ ಎಷ್ಟಿದೆ?
    3 days ago
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 05 | ಹತ್ತಿ ರೇಟ್ ಎಷ್ಟಿದೆ?
    5 days ago
  • ಹೊಳಲ್ಕೆರೆ
    ಹೊಳಲ್ಕೆರೆShow More
    Inauguration of Teachers' Day Celebrations
    ಗುರು ಸ್ಥಾನ ಪರಮ ಪವಿತ್ರ | ಮಕ್ಕಳ ಭವಿಷ್ಯ ರೂಪಿಸುವ ಹೊಣೆ ಶಿಕ್ಷಕರದ್ದು | ಶಾಸಕ ಎಂ.ಚಂದ್ರಪ್ಪ
    5 days ago
    Inauguration of the Public Service Movement meeting
    ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ | ಶಾಸಕ ಚಂದ್ರಪ್ಪ
    5 days ago
    ತಾಳಿಕಟ್ಟೆ–ದೊಗ್ಗನಾಳ್ ರಸ್ತೆ ಅಭಿವೃದ್ಧಿಗೆ ₹12 ಕೋಟಿ | ಶಾಸಕ ಎಂ.ಚಂದ್ರಪ್ಪ
    1 week ago
    ಹೊಳಲ್ಕೆರೆ ಪಟ್ಟಣದ ಕ್ರೀಡಾಂಗಣದಲ್ಲಿ 80ನೇ ಸ್ವಾತಂತ್ರ್ಯೋತ್ಸವ
    ಹಿರಿಯರ ತ್ಯಾಗದ ಮಾರ್ಗದರ್ಶನದಲ್ಲಿ ಮುನ್ನಡೆಯೋಣ | ಶಾಸಕ ಡಾ.ಎಂ.ಚಂದ್ರಪ್ಪ
    4 weeks ago
    ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ
    ಮನೆ ಮನೆಗೆ ಶುದ್ಧ ಕುಡಿಯುವ ನೀರು, ಮಕ್ಕಳಿಗೆ ಉಚಿತ ಶಿಕ್ಷಣ–ಸೌಲಭ್ಯ | ಶಾಸಕ ಚಂದ್ರಪ್ಪ
    1 month ago
  • ಹಿರಿಯೂರು
    ಹಿರಿಯೂರುShow More
    Power outage on May 1
    ಜೂನ್ 23 ರಂದು ಹಿರಿಯೂರು ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯ
    3 months ago
    ವೈಷ್ಣವ
    ನಾಲ್ಕು ವರ್ಷದ ಬಾಲಕ ಸಾವು | ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಪುತ್ರ
    3 months ago
    Babburu Horticulture college
    ಕೃಷಿ ಪ್ರಾಯೋಗಿಕ ಮರು ಪರೀಕ್ಷೆ ಜೂನ್ 1ಕ್ಕೆ ನಿಗದಿ
    4 months ago
    ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಪ್ರತಿಭಟನೆ
    ಹಿರಿಯೂರು | ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಒತ್ತಾಯ 
    5 months ago
    VaniVilasa sagara dam
    ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು | ಒಂದು ತಿಂಗಳು ನಾಲೆಗೆ ನೀರಿನ ಹರಿವು
    7 months ago
  • ಹೊಸದುರ್ಗ
    ಹೊಸದುರ್ಗShow More
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    3 weeks ago
    ವಿದ್ಯುತ್ ಸ್ಪರ್ಶಿಸಿ ನವಿಲು, ಚಿರತೆ ಸಾವು
    1 month ago
    ಸಾಣೇಹಳ್ಳಿ ಶ್ರೀಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ
    ಬದುಕು ಬದಲಿಸುವ ಶಕ್ತಿ ಇಷ್ಟಲಿಂಗ ದೀಕ್ಷೆಗಿದೆ | ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ
    1 month ago
    ಉಪನ್ಯಾಸ ಹಾಗೂ ಸ್ವಾಗತ ಸಮಾರಂಭ
    ಬಡತನ ನಿರ್ಮೂಲನೆಗೆ ಶಿಕ್ಷಣವೇ ಬ್ರಹ್ಮಾಸ್ತ್ರ | ಶಾಂತವೀರ ಶ್ರೀ
    2 months ago
    ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ | 4 ಬೈಕುಗಳು ವಶಕ್ಕೆ
    3 months ago
  • Life Style
    Life StyleShow More
    Body inflammation
    ದೇಹದ ಉರಿಯೂತವನ್ನು ನಿವಾರಿಸಿಕೊಳ್ಳಲು ನಿಮ್ಮ ಆಹಾರದಲ್ಲಿ ಈ ಸೂಪರ್‌ಫುಡ್‌ಗಳನ್ನು ಸೇರಿಸಿಕೊಳ್ಳಿ
    16 hours ago
    Taking deep breaths
    ಆಳವಾದ ಉಸಿರನ್ನು ತೆಗೆದುಕೊಳ್ಳುವುದರಿಂದ ದೇಹಕ್ಕೆ ಈ ಪ್ರಯೋಜನಗಳು ದೊರೆಯುತ್ತದೆಯಂತೆ
    17 hours ago
    eyebrows
    ತೆಳ್ಳಗಿನ ಹುಬ್ಬುಗಳನ್ನು ದಪ್ಪವಾಗಿಸಲು ಮನೆಯಲ್ಲಿಯೇ ಈ ಜೆಲ್ ತಯಾರಿಸಿ ಬಳಸಿ
    2 days ago
    Neck crease
    ಕುತ್ತಿಗೆ ಮೇಲಿನ ನೆರಿಗೆಗಳನ್ನು ನಿವಾರಿಸಲು ಈ ವ್ಯಾಯಾಮಗಳನ್ನು ಪ್ರತಿದಿನ ಅಭ್ಯಾಸ ಮಾಡಿ 
    2 days ago
    H1N1
    ಹಂದಿ ಜ್ವರ (ಪ್ಲೂ)ಬಂದರೆ ಏನು ತಿನ್ನಬೇಕು? ತಿಳಿಯಿರಿ
    3 days ago
Reading: ಕಣ್ಣೀರಿನ ನಡುವೆ ಕೈಲಾಸ ಪ್ರಾರ್ಥನೆ | ಲೋಹಿತ್ ಪ್ರಸಾದ್, ನಿತ್ಯಶ್ರೀ ದಂಪತಿ ಅಗಲಿಕೆಗೆ ಕಂಬನಿ | ಸಿರಿಗೆರೆ ಶ್ರೀ ಭಾಗೀ
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಮುಖ್ಯ ಸುದ್ದಿ

ಕಣ್ಣೀರಿನ ನಡುವೆ ಕೈಲಾಸ ಪ್ರಾರ್ಥನೆ | ಲೋಹಿತ್ ಪ್ರಸಾದ್, ನಿತ್ಯಶ್ರೀ ದಂಪತಿ ಅಗಲಿಕೆಗೆ ಕಂಬನಿ | ಸಿರಿಗೆರೆ ಶ್ರೀ ಭಾಗೀ

News Desk Chitradurga News
Last updated: 26 July 2026 10:38
News Desk Chitradurga News
2 months ago
Share
ಲಿಂಗೈಕ್ಯರಾದ ಲೋಹಿತ್ ಪ್ರಸಾದ್, ನಿತ್ಯಶ್ರೀ ಕೈಲಾಸ ಶಿವಗಣಾರಾಧನೆ ಕಾರ್ಯಕ್ರಮ
ಲಿಂಗೈಕ್ಯರಾದ ಲೋಹಿತ್ ಪ್ರಸಾದ್, ನಿತ್ಯಶ್ರೀ ಕೈಲಾಸ ಶಿವಗಣಾರಾಧನೆ ಕಾರ್ಯಕ್ರಮ
SHARE

CHITRADURGA NEWS | 26 JULY 2026

ಚಿತ್ರದುರ್ಗ: ವಿಧಿಯೊಂದು ಕೆಲವೊಮ್ಮೆ ಬರೆಯುವ ಸಾಲುಗಳು ಮನುಷ್ಯನ ಕಲ್ಪನೆಗೂ ನಿಲುಕುವುದಿಲ್ಲ. ನಾಳೆಗಳ ಸಾವಿರ ಕನಸುಗಳನ್ನು ಹೊತ್ತು ಬದುಕಿನ ಪಯಣವನ್ನು ಸಂಭ್ರಮದಿಂದ ಸಾಗಿಸಬೇಕಿದ್ದ ಯುವ ದಂಪತಿಯ ಬದುಕು, ಒಂದೇ ಕ್ಷಣದಲ್ಲಿ ಅಂತ್ಯಗೊಂಡಾಗ ಆ ನೋವನ್ನು ಪದಗಳಲ್ಲಿ ಕಟ್ಟಿಕೊಡುವುದು ಅಸಾಧ್ಯ.

ಇದನ್ನೂ ಓದಿ: ಮೊಳಕೆ ಕಾಳುಗಳಿಗೆ ಉಪ್ಪು ಮತ್ತು ನಿಂಬೆ ಬೆರೆಸಿ ತಿನ್ನುವುದು ಒಳ್ಳೆಯದೇ?

ಲಿಂಗೈಕ್ಯರಾದ ಎಸ್.ಪಿ.ಲೋಹಿತ್ ಪ್ರಸಾದ್ ಹಾಗೂ ಹೆಚ್.ವಿ. ನಿತ್ಯಶ್ರೀ ಅವರ ಅಕಾಲಿಕ ಅಗಲಿಕೆಯು ಚಿತ್ರದುರ್ಗದ ಜನತೆಯನ್ನು ಮಾತ್ರವಲ್ಲದೆ, ಅವರನ್ನು ಅರಿತ ಪ್ರತಿಯೊಂದು ಹೃದಯವನ್ನೂ ತೀವ್ರ ದುಃಖದಲ್ಲಿ ಮುಳುಗಿಸಿದೆ.

ಅವರ ಸ್ಮರಣಾರ್ಥ ಆಯೋಜಿಸಿಲಾಗಿದ್ದ ಕೈಲಾಸ ಶಿವಗಣಾರಾಧನೆ ಕಾರ್ಯಕ್ರಮವು ಚಿತ್ರದುರ್ಗದ ಶ್ರೀ ರಾಮ ಕಲ್ಯಾಣ ಮಂಟಪದಲ್ಲಿ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಸಾನ್ನಿಧ್ಯದಲ್ಲಿ ಶನಿವಾರ ಭಾವಪೂರ್ಣವಾಗಿ ನೆರವೇರಿತು.

ಕ್ಷಣಮಾತ್ರದಲ್ಲಿ ಅಂತ್ಯಗೊಂಡ ಸಾವಿರ ಕನಸುಗಳ ಬದುಕಿನ ಪಯಣ ಜುಲೈ 14ರಂದು ಹೊಳಲ್ಕೆರೆ ಪಟ್ಟಣದ ಹೊರವಲಯದಲ್ಲಿರುವ ಹನುಮಂತ ದೇವರ ಕಣಿವೆಯ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತವು ಎರಡು ಅಮೂಲ್ಯ ಜೀವಗಳನ್ನು ಕಸಿದುಕೊಂಡಿತು. ಶಿವಮೊಗ್ಗದಿಂದ ತಮ್ಮ ಸ್ವಗೃಹವಾದ ಚಿತ್ರದುರ್ಗಕ್ಕೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಲಾರಿ ಮತ್ತು ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಈ ಯುವ ದಂಪತಿ ಲಿಂಗೈಕರಾದರು.

ಇದನ್ನೂ ಓದಿ: ಚಿತ್ರದುರ್ಗ ತಾಲ್ಲೂಕಿನ 8 ಕೆರೆಗಳಿಗೆ ಸಂಪುಟದ ಅನುಮೋದನೆಗೆ ಶಾಸಕ ವೀರೇಂದ್ರ ಪಪ್ಪಿ ಮನವಿ

ಬದುಕಿನ ಅತ್ಯಂತ ಸುಂದರ ಅಧ್ಯಾಯಗಳನ್ನು ಬರೆಯಬೇಕಿದ್ದ ವಯಸ್ಸಿನಲ್ಲಿಯೇ ವಿಧಿಯು ಅವರ ಬದುಕಿನ ಪುಟಗಳನ್ನು ಶಾಶ್ವತವಾಗಿ ಮುಚ್ಚಿಬಿಟ್ಟಿತು.

ಸರಳತೆ, ಸಜ್ಜನಿಕೆ ಮತ್ತು ಮಾನವೀಯ ಮೌಲ್ಯಗಳ ಪ್ರತಿರೂಪವಾಗಿದ್ದ ಯುವ ದಂಪತಿ:

ಚಿತ್ರದುರ್ಗದ ಪ್ರತಿಷ್ಠಿತ ಮಾರುತಿ ಗ್ಯಾಸ್ ಏಜೆನ್ಸಿಯ ಮಾಲೀಕರಾಗಿದ್ದ ಶ್ರೀ ಪ್ರಭುರವರ ಪುತ್ರ ಲೋಹಿತ್ ಪ್ರಸಾದ್ ಅವರು ತಮ್ಮ ಸರಳತೆ, ಸಜ್ಜನಿಕೆ ಮತ್ತು ಮಾನವೀಯ ಮೌಲ್ಯಗಳ ಮೂಲಕ ಸಮಾಜದಲ್ಲಿ ವಿಶಿಷ್ಟ ಗೌರವವನ್ನು ಗಳಿಸಿದ್ದರು. ಅವರ ಧರ್ಮಪತ್ನಿ ನಿತ್ಯಶ್ರೀ ಅವರು ಸಹ ಸೌಮ್ಯ ಸ್ವಭಾವ, ಕೌಟುಂಬಿಕ ಮೌಲ್ಯಗಳು ಮತ್ತು ಆತ್ಮೀಯತೆಯ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಅವರ ಬದುಕು ಕೇವಲ ಒಂದು ಕುಟುಂಬದ ಸೀಮಿತ ವಲಯಕ್ಕೆ ಸೇರಿದ್ದಲ್ಲ; ಸಮಾಜದೊಂದಿಗೆ ಬೆಸೆದುಕೊಂಡಿದ್ದ ಅನೇಕ ಹೃದಯಗಳ ಪ್ರೀತಿಯ ಪ್ರತಿರೂಪವಾಗಿತ್ತು.

ಶಿವಭಕ್ತಿ, ಸಮಾಜಸೇವೆ ಮತ್ತು ಶ್ರೀಮಠದೊಂದಿಗಿನ ಅವಿನಾಭಾವ ಬಾಂಧವ್ಯ:

ಈ ದುರಂತದಿಂದ ಅತೀವ ದುಃಖಕ್ಕೊಳಗಾಗಿರುವುದು ಲೋಹಿತ್ ಪ್ರಸಾದ್ ಅವರ ತಂದೆ ಪ್ರಭು ಅವರ ಕುಟುಂಬ. ಚಿತ್ರದುರ್ಗ ಜಿಲ್ಲೆಯ ಹೆಸರಾಂತ ಉದ್ಯಮಿಗಳು ಹಾಗೂ ಸಮಾಜಸೇವಕರಾಗಿರುವ ಪ್ರಭು ಅವರು ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡು ಜನಮಾನಸದಲ್ಲಿ ಅಪಾರ ಗೌರವ ಮತ್ತು ಅಭಿಮಾನವನ್ನು ಗಳಿಸಿದ್ದಾರೆ.

ಇದನ್ನೂ ಓದಿ: ರೈತರ ನೆಲಕ್ಕೆ ಕಾಲಿಟ್ಟು ಒಣಗಿದ ಬೆಳೆ ವೀಕ್ಷಿಸಿದ ನಾಡದೊರೆ

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪರಮ ಭಕ್ತರು ಹಾಗೂ ಆರಾಧಕರಾಗಿರುವ ಅವರ ಕುಟುಂಬವು ಶ್ರೀಮಠದೊಂದಿಗೆ ಅವಿನಾಭಾವ ಆಧ್ಯಾತ್ಮಿಕ ಬಾಂಧವ್ಯವನ್ನು ಹೊಂದಿದ್ದು, ಶ್ರೀಮಠದ ಧಾರ್ಮಿಕ ಹಾಗೂ ಸೇವಾ ಚಟುವಟಿಕೆಗಳಲ್ಲಿ ನಿರಂತರವಾಗಿ ಭಾಗಿಯಾಗುತ್ತಿದೆ. ಇಂತಹ ಸದ್ಭಾವನೆ ಮತ್ತು ಸೇವಾ ಮನೋಭಾವವನ್ನು ಜೀವನದ ಮೌಲ್ಯವನ್ನಾಗಿಸಿಕೊಂಡಿರುವ ಈ ಕುಟುಂಬಕ್ಕೆ ಪುತ್ರ ಮತ್ತು ಸೊಸೆಯ ಅಕಾಲಿಕ ಲಿಂಗೈಕ್ಯವು ತುಂಬಲಾರದ ನೋವನ್ನುಂಟು ಮಾಡಿದ್ದು, ಅವರ ದುಃಖದಲ್ಲಿ ಇಡೀ ಸಮಾಜವೇ ಭಾಗಿಯಾಗಿದೆ.

ಪುತ್ರ-ಸೊಸೆಯನ್ನು ಕಳೆದುಕೊಂಡ ತಂದೆಯ ಅಸಹನೀಯ ವೇದನೆ:

ತಮ್ಮ ಬದುಕಿನ ನೆಮ್ಮದಿಯ ಕಾಲದಲ್ಲಿ ಪುತ್ರ ಮತ್ತು ಸೊಸೆಯ ಸಾಧನೆಗಳನ್ನು ಕಂಡು ಸಂತೋಷಪಡುವ ಸಮಯದಲ್ಲಿ, ಅವರ ಅಂತ್ಯಸಂಸ್ಕಾರಗಳನ್ನು ನೆರವೇರಿಸಬೇಕಾದಂತಹ ದುರ್ವಿಧಿಯೊಂದು ಪ್ರಭು ಅವರ ಕುಟುಂಬವನ್ನು ಆವರಿಸಿದೆ. ಪುತ್ರ ಮತ್ತು ಸೊಸೆಯನ್ನು ಒಂದೇ ದಿನದಲ್ಲಿ ಕಳೆದುಕೊಂಡ ನೋವು ಯಾವ ತಂದೆಯ ಹೃದಯಕ್ಕೂ ಸಹಿಸಲಾರದಂತಹುದು.

ಅಂತಹ ಅಸಹನೀಯ ವೇದನೆಯ ನಡುವೆಯೂ ಶಿವಸ್ಮರಣೆಯನ್ನು ಆಶ್ರಯಿಸಿ, ಅವರ ಆತ್ಮಗಳ ಸದ್ಗತಿಗಾಗಿ ಕೈಲಾಸ ಶಿವಗಣಾರಾಧನೆಯನ್ನು ಆಯೋಜಿಸಿರುವುದು ಅವರ ಶಿವಭಕ್ತಿ ಮತ್ತು ಧರ್ಮನಿಷ್ಠೆಗೆ ಜೀವಂತ ಸಾಕ್ಷಿಯಾಗಿದೆ.

ಇದನ್ನೂ ಓದಿ: ಜಾಲಿಕಟ್ಟೆ ಗ್ರಾಮದ ಬಳಿ ಕೇಂದ್ರೀಯ ವಿದ್ಯಾಲಯ ಸ್ವಂತ ಕಟ್ಟಡ ನಿರ್ಮಾಣ | ಸಂಸದ ಗೋವಿಂದ ಕಾರಜೋಳ 

ಜೀವನದ ಅನಿತ್ಯತೆ ಸಾರಿದ ಶ್ರೀಗಳವರ ಆಶೀರ್ವಚನ:

ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ ಶ್ರೀ ತರಳಬಾಳು ಜಗದ್ಗುರುಗಳವರು ಮೃತ ದಂಪತಿಯ ಆತ್ಮಗಳಿಗೆ ಶಿವಸಾಯುಜ್ಯ ಪ್ರಾಪ್ತಿಯಾಗಲೆಂದು ಪ್ರಾರ್ಥನೆ ಸಲ್ಲಿಸಿ, ಜೀವನದ ಅನಿತ್ಯತೆ, ಧರ್ಮಮಯ ಬದುಕಿನ ಸಾರ್ಥಕತೆ ಹಾಗೂ ಶಿವಸ್ಮರಣೆಯ ಮಹಿಮೆಯನ್ನು ತಮ್ಮ ಆಶೀರ್ವಚನದಲ್ಲಿ ವಿವರಿಸಿದರು.

ಭಾವಪೂರ್ಣ ಶ್ರದ್ಧಾಂಜಲಿಗೆ ಸಾಕ್ಷಿಯಾದ ಕೈಲಾಸ ಶಿವಗಣಾರಾಧನೆ:

ಕಣ್ಣೀರಿನ ನಮನದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಕಾರಜೋಳ, ಮುಖಂಡರಾದ ಜಿ.ಎಸ್. ಮಂಜುನಾಥ್ ಸೇರಿದಂತೆ ಅನೇಕ ಗಣ್ಯರು, ಕುಟುಂಬದ ಸದಸ್ಯರು, ಬಂಧು-ಮಿತ್ರರು, ಹಿತೈಷಿಗಳು ಹಾಗೂ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿ, ದಿವಂಗತ ದಂಪತಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿದರು.

ಇದನ್ನೂ ಓದಿ: ಪ್ರಜಾಸೇವೆ ನೂತನ ಇಲಾಖೆ ಪ್ರಾರಂಭ | ಸಿಎಂ ಡಿಕೆಶಿ 

ಕೆಲವು ಅಗಲಿಕೆಗಳು ಕೇವಲ ಒಂದು ಕುಟುಂಬದ ನೋವಾಗಿರುವುದಿಲ್ಲ; ಅವು ಇಡೀ ಸಮಾಜದ ದುಃಖವಾಗಿಬಿಡುತ್ತವೆ.” ಲೋಹಿತ್ ಪ್ರಸಾದ್ ಮತ್ತು ನಿತ್ಯಶ್ರೀ ಅವರ ಅಕಾಲಿಕ ಲಿಂಗೈಕ್ಯವೂ ಅಂತಹುದೇ ಒಂದು ನೋವು. ಅವರು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರ ಸರಳತೆ, ಸಜ್ಜನಿಕೆ, ಶಿವಭಕ್ತಿ ಮತ್ತು ಸತ್ಸಂಸ್ಕಾರಗಳ ನೆನಪುಗಳು ಶಾಶ್ವತವಾಗಿ ಎಲ್ಲರ ಹೃದಯಗಳಲ್ಲಿ ಉಳಿಯಲಿವೆ.

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:ChitradurgaChitradurga newsSirigere Sriಚಿತ್ರದುರ್ಗಚಿತ್ರದುರ್ಗ ನ್ಯೂಸ್ಸಿರಿಗೆರೆ ಶ್ರೀ
Share This Article
Facebook Email Print
Previous Article Sprouted beans ಮೊಳಕೆ ಕಾಳುಗಳಿಗೆ ಉಪ್ಪು ಮತ್ತು ನಿಂಬೆ ಬೆರೆಸಿ ತಿನ್ನುವುದು ಒಳ್ಳೆಯದೇ?
Next Article ಡಿ.ಸುಧಾಕರ್ ನುಡಿ ನಮನ ಕಾರ್ಯಕ್ರಮ ಹಿರಿಯೂರಿನಲ್ಲಿ ಡಿ.ಸುಧಾಕರ್ ನುಡಿ ನಮನ | ಸಿಎಂ ಡಿಕೆಶಿ, ಸಿದ್ದರಾಮಯ್ಯ ಸೇರಿ ಗಣ್ಯರು ಭಾಗೀ 
Leave a Comment

Leave a Reply Cancel reply

Your email address will not be published. Required fields are marked *

ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಿದ್ಧತಾ ಸಭೆ
ಗೌರಿ-ಗಣೇಶ ಹಬ್ಬ | ಶಾಂತಿ-ಸುವ್ಯವಸ್ಥೆಗೆ ಜಿಲ್ಲಾಡಳಿತ ಕಟ್ಟೆಚ್ಚರ
ಮುಖ್ಯ ಸುದ್ದಿ
ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 10 | ಹತ್ತಿ ರೇಟ್…
ಮಾರುಕಟ್ಟೆ ಧಾರಣೆ
ಅರ್ಜಿ ಅಹ್ವಾನ
ಸಹಾಯಧನ, ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಮುಖ್ಯ ಸುದ್ದಿ
ಯಂಗ್ ಇಂಡಿಯಾ ಸ್ಪೋಟ್ರ್ಸ್ ಫೆಲೋಷಿಪ್‍ಗೆ ಅರ್ಜಿ ಆಹ್ವಾನ
ಮುಖ್ಯ ಸುದ್ದಿ
© Chitradurga News 2025 | Powered By Karnatakabest.com
Welcome Back!

Sign in to your account

Username or Email Address
Password

Lost your password?

Not a member? Sign Up