ಕ್ರೈಂ ಸುದ್ದಿ
ಕಾರಿನ ಟೈಯರ್ ಬ್ಲಾಸ್ಟ್ | ಅಜ್ಜಿಯ ಶವ ಸಂಸ್ಕಾರಕ್ಕೆ ಹೋಗುತ್ತಿದ್ದ ಮೂವರು ಮೃತ | ಮೂರು ಜನ ಗಂಭೀರ ಗಾಯ

CHITRADURGA NEWS | 19 JANUARY 2024
ಚಿತ್ರದುರ್ಗ: ಬೆಂಗಳೂರಿನಲ್ಲಿ ಮೃತಪಟ್ಟಿದ್ದ ಅಜ್ಜಿಯ ಶವವನ್ನು ಊರಿಗೆ ಸಾಗಿಸುವ ವೇಳೆ ಟೈಯರ್ ಬ್ಲಾಸ್ಟ್ ಆಗಿ ಕಾರು ಪಲ್ಟಿಯಾಗಿ ಮೂರು ಮಂದಿ ಮೃತಪಟ್ಟಿರುವ ಘಟನೆ ಮೊಳಕಾಲ್ಮೂರು ತಾಲೂಕು ರಾಂಪುರ ಬಳಿ ನಡೆದಿದೆ.
ರಾಂಪುರ ಬಳಿಯ ಗ್ರ್ಯಾಂಡ್ ಫೋರ್ಡ್ ಹೋಟೆಲ್ ಬಳಿ ರಾಷ್ಟ್ರೀಯ ಹೆದ್ದಾರಿ 150ಎ ನಲ್ಲಿ ಕಾರಿನ ಟೈಯರ್ ಬ್ಲಾಸ್ಟ್ ಆಗಿದ್ದು, ಕಾರು ಪಲ್ಟಿಯಾಗಿದೆ. ಈ ವೇಳೆ ಕಾರಿನಲ್ಲಿದ್ದ ಮೂರು ಮಂದಿ ಮೃತಪಟ್ಟಿದ್ದು, ಇನ್ನೂ ಮೂರು ಮಂದಿ ಗಂಭಿರವಾಗಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಕಾರು ಟ್ಯಾಂಕರ್ ನಡುವೆ ಡಿಕ್ಕಿ ಇಬ್ಬರು ಸ್ಥಳದಲ್ಲೇ ಸಾವು
ಮೃತರನ್ನು ಸಿರಗುಪ್ಪ ಮೂಲದ ಸುರೇಶ್(40), ಮಲ್ಲಿ(25 ಹಾಗೂ ಭೂಮಿಕಾ(9) ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ನಾಗಮ್ಮ, ತಾಯಮ್ಮ, ಧನರಾಜ್ ಹಾಗೂ ಚಾಲಕ ಶಿವು ಗಾಯಗೊಂಡಿದ್ದಾರೆ.
ಸುರೇಶ್ ಅವರ ಕುಟುಂಬ ತನ್ನ ಅಜ್ಜಿಯ ಅಂತ್ಯಸಂಸ್ಕಾರವನ್ನು ಸ್ವಗ್ರಾಮ ದೇಸನೂರಿಗೆ ತೆಗೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸ್ಥಳಕ್ಕೆ ರಾಂಪುರ ಪೊಲೀಸ್ ಠಾಣೆ ಪಿಎಸ್‍ಐ ಪರಶುರಾಮ್ ಲಮಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
