
CHITRADURGA NEWS | 18 APRIL 2026
ಚಿತ್ರದುರ್ಗ: ಜಯದೇವ ಜಗದ್ಗುರುಗಳ ಮೂರ್ತಿಯನ್ನು ಸ್ಥಾಪಿಸುವ ಕುರಿತು ಚಿಂತನೆ ನಡೆಯುತ್ತಿದ್ದು,ಶೀಘ್ರದಲ್ಲೇ ಜೆಎಂಐಟಿ ವೃತ್ತದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ವಿಗ್ರಹ ಸ್ಥಾಪನೆ ಮಾಡುವವರಿದ್ದೇವೆ ಎಂದು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ತಿಳಿಸಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಏಪ್ರಿಲ್ 18 | ಹತ್ತಿ ರೇಟ್ ಎಷ್ಟಿದೆ?

ಸಾಂಸ್ಕೃತಿಕ ನಾಯಕ ಬಸವೇಶ್ವರ ಜಯಂತಿ ನಿಮಿತ್ತ ನಗರದ ಐಎಂಎ ಸಭಾಂಗಣದಲ್ಲಿ ಜಗದ್ಗುರು ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮಿಗಳ ಕುರಿತು ಆರ್ಥಿಕ ಚಿಂತಕ ಡಾ.ಜಿ.ಎಂ.ಮಲ್ಲಿಕಾರ್ಜುನಪ್ಪ ರಚಿಸಿರುವ ʼಜಯದೇವ ಸಿರಿʼ ನಾಟಕ ಕೃತಿ ಜನಾರ್ಪಣೆ ಮಾಡಿ ಮಾತನಾಡಿದರು.
ಜಯದೇವ ಜಗದ್ಗುರುಗಳ ಬಗ್ಗೆ ಹೆಚ್ಚಿನ ಪ್ರಚಾರ ಅಗತ್ಯವಿದೆ. ಅವರ ಕೊಡುಗೆ ಸಮಾಜಕ್ಕೆ ಅಪಾರವಾದದ್ದು. ಅಂದಿನ ಕಾಲದ ಶಿಷ್ಯ ವೃಂದದವರ ಭಕ್ತಿ ಪರಾಕಾಷ್ಠೆಯನ್ನು ಕಾಣಬಹುದು. ಶ್ರೀಗಳು ಸರ್ವ ಕ್ಷೇತ್ರಕ್ಕೆ ಕೊಡುಗೆ ನೀಡಿದವರು. ಶ್ರೀಗಳ ಬಗ್ಗೆ ಸಂಶೋಧನಾತ್ಮಕ ಕೃತಿ ರಚನೆಯಾಗಬೇಕಿದೆ.
ಅವರು ನಿರ್ಮಿಸಿದ ಹಾಸ್ಟೆಲ್‌ಗಳು ಅರಮನೆ ರೀತಿ ಕಾಣುತ್ತವೆ. ಅನೇಕ ಮಹನೀಯರು ಜಯದೇವ ವಿದ್ಯಾರ್ಥಿ ನಿಲಯದ ಆಶ್ರಯದಲ್ಲಿ ಓದಿ ಉನ್ನತ ಸಾಧನೆ ಮಾಡಿದ್ದಾರೆ. ಕಂತೆ ಭಿಕ್ಷೆಯ ಮೂಲಕ ವಿದ್ಯಾರ್ಥಿಗಳಿಗೆ ಅನ್ನದಾಸೋಹ ಮಾಡಿದವರಾಗಿದ್ದಾರೆ. ಕೊಡಗಿನ ಮಹಾರಾಜರು ಜಮೀನು ನೀಡಲು ಜಯದೇವ ಶ್ರೀಗಳು ಕಾರಣ ಎಂದು ನುಡಿದರು.
ಇದನ್ನೂ ಓದಿ: ಜಿಲ್ಲಾ ಯಾದವ ಗೊಲ್ಲರ ಸಂಘದ ಆಡಳಿತಾಧಿಕಾರಿ ಅವಧಿ ವಿಸ್ತರಣೆ
ಕೃತಿ ಕುರಿತು ಅವಲೋಕನ ಮಾಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ್ ದಂಡಿನ, ಸಾಹಿತ್ಯವೆಂದರೆ ಕಾವ್ಯ ಎಂದಾಗಿತ್ತು. ಕಥೆ ಕಾದಂಬರಿಗಳು ಇದ್ದವು. ಆದರೆ, ನಾಟಕ ಜನ ಮನ ತಲುಪುವಲ್ಲಿ ಹೆಚ್ಚಿನ ಪಾತ್ರ ವಹಿಸಿದೆ. ಇದು ಜನರಿಗೆ ಸಂದೇಶಗಳನ್ನು ಬೇಗ ತಿಳಿಸಲು ಸಹಾಯಕವಾಗಿರುತ್ತದೆ. ನಾಟಕಗಳಲ್ಲಿ ಅನೇಕ ವಿಧಗಳಿವೆ ಇವುಗಳು ದೃಶ್ಯ & ಶ್ರವ್ಯದ ಮೂಲಕ ಅಳವಡಿಕೆ ಆಗುತ್ತದೆ. ನಾಟಕ ಮನುಷ್ಯನ ಹುಟ್ಟಿನಿಂದ ಒಂದಲ್ಲ ಒಂದು ರೀತಿಯ ಪಾತ್ರ ವಹಿಸುತ್ತದೆ ಎಂದರು.
ಜಯದೇವ ಸಿರಿ ನಾಟಕವು ಜಯದೇವ ಶ್ರೀಗಳ ಬಗ್ಗೆ ತಿಳಿಸುತ್ತಾ, ಗುರುವಿನ ಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಕೃತಿಕಾರರು ಈ ಮುಂಚೆ 6 ವಿವಿಧ ನಾಟಕಗಳನ್ನು ರಚಿಸಿ ಪ್ರದರ್ಶನಗೊಳಿಸಿದ್ದಾರೆ. ಈ ನಾಟಕ ಲಾವಣಿಕಾರರ ಮುಖಾಂತರ ಪ್ರಾರಂಭವಾಗುತ್ತದೆ.
ಕಥಾನಾಯಕರನ್ನಾಗಿ ಜಯದೇವ ಶ್ರೀಗಳನ್ನು ಆಯ್ದುಕೊಂಡು ಜಯದೇವ ಶ್ರೀಗಳು ಶ್ರೀಮಠಕ್ಕೆ ಬರುವ ಮುಂಚೆ ಅವರ ಬಾಲ್ಯಾವಸ್ಥೆಯನ್ನು ತಿಳಿಸಿದ್ದಾರೆ. ಈ ನಾಟಕದಲ್ಲಿ 13 ದೃಶ್ಯಗಳನ್ನು ರಚಿಸಿದ್ದಾರೆ. ಕಾಶಿಯ ವಿದ್ಯಾಭ್ಯಾಸ, ಚಳುವಳಿಯ ಬಗ್ಗೆ ಬಾಲಗಂಗಾಧರ ತಿಲಕರ ಭೇಟಿ, ಸನ್ಯಾಸಿಗಳ ಜೀವನಶೈಲಿ ಬಗ್ಗೆ ತಿಳಿಸಿದ್ದಾರೆ ಎಂದು ಕೃತಿಯನ್ನು ವಿವರಿಸಿದರು.
ಇದನ್ನೂ ಓದಿ: ಬೈಕ್ – ಕಾರ್ ನಡುವೆ ಭೀಕರ ಅಪಘಾತ | ಬೈಕ್ ಸವಾರರು ಇಬ್ಬರು ಸಾವು
ಕೃತಿಕಾರ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಮಾತನಾಡಿ, ಜಯದೇವ ಜಗದ್ಗುರುಗಳು ಸರ್ವ ಸಮುದಾಯಗಳನ್ನು ಸಮಕಾಲಿನವಾಗಿ ತೆಗೆದುಕೊಂಡವರು. ಶ್ರೀಗಳು ಆಧ್ಯಾತ್ಮ ಮತ್ತು ವೈಜ್ಞಾನಿಕ ವಿಚಾರಧಾರೆಗಳನ್ನು ಇಟ್ಟುಕೊಂಡವರು. ಅವರ ಬಗ್ಗೆ ಪಿ.ಹೆಚ್.ಡಿಯಲ್ಲಿ ಸಂಶೋಧನೆಯನ್ನು ಮಾಡಿಸಿದರು ಸಹ ಅವರ ವಿಚಾರಧಾರೆಗಳಿಗೆ ಕಡಿಮೆ ಇಲ್ಲ. ಆ ನಿಟ್ಟಿನಲ್ಲಿ ನಾನು ಅವರ ಆದರ್ಶ ವಾದಿತ್ವವನ್ನು ಜನಮನಗಳಿಗೆ ನಾಟಕ ರೂಪದಲ್ಲಿ ನೀಡಬೇಕೆಂದು ಸಾಹಿತ್ಯ ಆಧಾರದ ಮೇಲೆ ಜಯದೇವ ಸಿರಿ ನಾಟಕವನ್ನು ರಚಿಸಿದ್ದೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಧಕೃಷ್ಣ ಪಲ್ಲಕ್ಕಿ ಅವರನ್ನು ಸನ್ಮಾನಿಸಲಾಯಿತು. ಬಾಪೂಜಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಡಾ.ಕೆ.ಎಂ.ವೀರೇಶ್, ಎಸ್ ನಿಜಲಿಂಗಪ್ಪ ಪ್ರತಿಷ್ಠಾನದ ಅಧ್ಯಕ್ಷ ಎಸ್.ಷಣ್ಮುಖಪ್ಪ, ಪತ್ರಕರ್ತ ಜಡೇಕುಂಟೆ ಮಂಜುನಾಥ್, ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಉಪಾಧ್ಯಕ್ಷ ಟಿ.ಯರಿಸ್ವಾಮಿ, ಲಿಂಗಾಯತ ಪಂಚಮಸಾಲಿ ಮಹಿಳಾ ಸಮಾಜದ ಅಧ್ಯಕ್ಷ ಉಮಾ ರಮೇಶ್, ವೀರಶೈವ ಬ್ಯಾಂಕ್ ಅಧ್ಯಕ್ಷ ಪಟೇಲ್ ಶಿವಕುಮಾರ್, ಗಾಯಕ ತೋಟಪ್ಪ ಉತ್ತಂಗಿ ಇತರರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
