ಕ್ರೈಂ ಸುದ್ದಿ
ಕಾರು-ಟ್ಯಾಂಕರ್ ನಡುವೆ ಡಿಕ್ಕಿ | ಸ್ಥಳದಲ್ಲೇ ಇಬ್ಬರು ಮಹಿಳೆಯರು ಸಾವು | ಮಗು ಸೇರಿ ಮೂರು ಜನರಿಗೆ ಗಾಯ

CHITRADURGA NEWS | 19 JANUARY 2024
ಚಿತ್ರದುರ್ಗ: ನಗರದ ಹೊರವಲಯದ ಮದಕರಿಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ ಫ್ಲೈಓವರ್ ನಲ್ಲಿ ಕಾರು ಹಾಗೂ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.
ಬೆಂಗಳೂರು ಮೂಲದ 55 ವರ್ಷದ ನಿರ್ಮಲಾ ಹಾಗೂ 40 ವರ್ಷದ ವಿನುತಾ ಮೃತ ಮಹಿಳೆಯರು ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಕೆಟಿಎಂ ಬೈಕ್ ಕಾರಿನ ನಡುವೆ ಅಪಘಾತ | ಬೈಕ್ ಸವಾರ ಮೃತ
ಕ್ಯಾದಿಗೆರೆಯಿಂದ ಸೀಬಾರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 4ರ ಬೈಪಾಸ್‍ನಲ್ಲಿ ಮದಕರಿ ಸಮೀಪದಲ್ಲಿ ನಿರ್ಮಿಸಿರುವ ಫ್ಲೈಓವರ್‍ನಲ್ಲಿ ಈ ಅವಘಡ ನಡೆದಿದೆ.
ಬೆಂಗಳೂರು ಕಡೆಯಿಂದ ಬಂದ ಕಾರು ಹೊಸಪೇಟೆ ಕಡೆಗೆ ತೆರಳುತ್ತಿದ್ದಾಗ ಹಿಂಬದಿಯಿಂದ ಟ್ಯಾಂಕರ್‍ಗೆ ಡಿಕ್ಕಿಯಾಗಿದೆ.
ಇದನ್ನೂ ಓದಿ: ಮಠದ ಆವರಣದಲ್ಲಿ ಕರಡಿಗಳ ಸಂಚಾರ
ಅಪಘಾತದಲ್ಲಿ 2 ವರ್ಷದ ಶ್ರೇಯಸ್, ಫಣಿರಾಜ್ ಹಾಗೂ ರಶ್ಮಿ ಎನ್ನುವವರು ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತ ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಸಿಪಿಐ ಮುದ್ದುರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
