By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ
    ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ವಾಲ್ಮೀಕಿ ಜಯಂತಿ ಸರಳ ಆಚರಣೆಗೆ ಸೂಚನೆ
    4 hours ago
    ರಾಜ್ಯಮಟ್ಟದ ವಿಕಲಚೇತನರ ಸಮಾವೇಶ, ಒಂದು ಲಕ್ಷ ಸಹಿ ಸಂಗ್ರಹ ಅಭಿಯಾನ
    ವಿಕಲಚೇತನರ ಮಾಸಾಶನ ₹6 ಸಾವಿರಕ್ಕೆ ಹೆಚ್ಚಿಸಲು ಆಗ್ರಹ
    13 hours ago
    ಕಲಾವಿದ ನರಸಪ್ಪ
    ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿಗೆ ಚಿತ್ರದುರ್ಗದ ಕೋಲಾಟ ಕಲಾವಿದ ನರಸಪ್ಪ ಆಯ್ಕೆ
    14 hours ago
    ಶರಣ ಸಂಸ್ಕೃತಿ ಉತ್ಸವ-2026ರ ಅಂಗವಾಗಿ ಮಹಿಳಾ ಸಮಾವೇಶ
    ಶರಣ ಸಂಸ್ಕೃತಿ ಉತ್ಸವದಲ್ಲಿ ಮಹಿಳಾ ಸಮಾವೇಶ | ವಿವಿಧ ಕ್ಷೇತ್ರಗಳ ಸಾಧಕಿಯರಿಗೆ ಸನ್ಮಾನ
    1 day ago
    ಸರ್ವೋದಯಕ್ಕಾಗಿ ಮದ್ಯಪಾನ ನಿಯಂತ್ರಣ ಸಮಾಲೋಚನಾ ದುಂಡುಮೇಜಿನ ಪರಿಷತ್‌
    ಮದ್ಯಪಾನ ನಿಯಂತ್ರಣಕ್ಕೆ ಸರ್ಕಾರ ದೃಢ ನಿರ್ಧಾರ ಕೈಗೊಳ್ಳಲಿ | ಮಠಾಧೀಶರ ಒತ್ತಾಯ
    1 day ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    ಆರೋಪಿ ರಂಗಸ್ವಾಮಿ
    ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಮಹಿಳೆ ಕೊಲೆ | ಆರೋಪಿ ಬಂಧನ
    1 week ago
    ಲಾರಿಗೆ ರಾಜಹಂಸ ಬಸ್ ಡಿಕ್ಕಿ | ಚಾಲಕ ಸಾವು, 15 ಮಂದಿಗೆ ಗಾಯ
    3 weeks ago
    ಖಾಸಗಿ ಬಸ್ ಪಲ್ಟಿ | ಸ್ಥಳದಲ್ಲೇ ಮೂವರ ಸಾವು | 15ಕ್ಕೂ ಹೆಚ್ಚು ಮಂದಿಗೆ ಗಾಯ
    2 months ago
    ಚಲಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಲಾರಿ ಡಿಕ್ಕಿ | ಇಬ್ಬರು ಸಾವು
    2 months ago
    ನಾಯಿ ತಪ್ಪಿಸಲು ಹೋಗಿ ರಸ್ತೆ ಬದಿ ನಿಂತಿದ್ದವರಿಗೆ ಕಾರು ಡಿಕ್ಕಿ | ಸ್ಥಳದಲ್ಲೇ ಓರ್ವ ಸಾವು
    3 months ago
  • ತಾಲೂಕು
    ತಾಲೂಕುShow More
    ಸಾಣೇಹಳ್ಳಿ | ಶ್ರೀ ಶಿವಕುಮಾರ ಪ್ರಶಸ್ತಿ ಪ್ರಕಟ | ಬಿ.ಆರ್.ಪೊಲೀಸ್ ಪಾಟೀಲ ಆಯ್ಕೆ
    3 days ago
    DIET Principal Nagabhushan spoke at the progress review meeting
    ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ 29 ಅಂಶಗಳ ಕಾರ್ಯಕ್ರಮ ಅನುಷ್ಠಾನಕ್ಕೆ ಸೂಚನೆ
    2 weeks ago
    Power outage on May 1
    ಸೆ.27ರಂದು ಹೊಸದುರ್ಗ ತಾಲ್ಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯ
    3 weeks ago
    A tribute was paid to Shantaveera Shree on behalf of the Kadugolla Association
    ಕಾಡುಗೊಲ್ಲರಿಗಿದೆ ಶ್ರೀಮಂತ ಸಾಂಸ್ಕೃತಿಕ ಪರಂಪರೆ | ಶ್ರೀ ಶಾಂತವೀರ ಸ್ವಾಮೀಜಿ
    1 month ago
    ಮಾರಿಕಾಂಭ ದೇವಿಯ ಪರವು ಆಚರಣೆ
    ಮಾರಿಕಾಂಭ ದೇವಿಯ ಪರವು ಆಚರಣೆ | ಶತಮಾನದ ಪರಂಪರೆ ಮುಂದುವರಿಕೆ
    2 months ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    arecanut price list
    ಅಡಿಕೆ ಧಾರಣೆ | 7 ಸೆಪ್ಟಂಬರ್‌ | ಇಂದಿನ ಅಡಿಕೆ ರೇಟ್‌
    1 month ago
    arecanut price list
    ಅಡಿಕೆ ಧಾರಣೆ | ಸೆಪ್ಟಂಬರ್‌ 4 | ಯಾವ ಅಡಿಕೆಗೆ ಎಷ್ಟು ರೇಟ್‌
    2 months ago
    arecanut price list
    ಅಡಿಕೆ ಧಾರಣೆ | ಸೆ.3 | ಚನ್ನಗಿರಿ, ತೀರ್ಥಹಳ್ಳಿ ಸೇರಿ ರಾಜ್ಯದ ಅಡಿಕೆ ವಹಿವಾಟು
    2 months ago
    arecanut price list
    ಅಡಿಕೆ ಧಾರಣೆ | ಅಡಿಕೆ ಬೆಲೆಯಲ್ಲಿ ಕುಸಿತ
    3 months ago
    ARECANUT RATE
    ಅಡಿಕೆ ಧಾರಣೆ | 8 ಜೂನ್‌ | ಇಂದಿನ ಅಡಿಕೆ ರೇಟ್‌
    4 months ago
  • Dina Bhavishya
    Dina BhavishyaShow More
    today bhavishya
    ದಿನ ಭವಿಷ್ಯ | ಅಕ್ಟೋಬರ್ 20 | ಪರಿಶ್ರಮಕ್ಕೆ ತಕ್ಕ ಫಲಿತಾಂಶ, ಶುಭಸುದ್ದಿಗಳು
    3 hours ago
    today bhavishya
    ದಿನ ಭವಿಷ್ಯ | ಅಕ್ಟೋಬರ್ 19 | ಕೈಗೆತ್ತಿಕೊಂಡ ಕಾರ್ಯಗಳಲ್ಲಿ ವಿಳಂಬ, ಉದ್ಯೋಗದಲ್ಲಿ ಹೊಸ ಪ್ರೋತ್ಸಾಹ ದೊರೆಯುತ್ತದೆ
    1 day ago
    today bhavishya
    ದಿನ ಭವಿಷ್ಯ | ಅಕ್ಟೋಬರ್ 18 | ಅನಿರೀಕ್ಷಿತ ಧನಲಾಭ, ದೂರ ಪ್ರಯಾಣಗಳನ್ನು ಮುಂದೂಡುವುದು ಉತ್ತಮ
    2 days ago
    today bhavishya
    ದಿನ ಭವಿಷ್ಯ | 17 ಅಕ್ಟೋಬರ್ 2026 | ನಿರುದ್ಯೋಗಿಗಳಿಗೆ ಶುಭಸುದ್ದಿ, ಕೈಗೆತ್ತಿಕೊಂಡ ಕಾರ್ಯಗಳಲ್ಲಿ ಯಶಸ್ಸು
    3 days ago
    today bhavishya
    ದಿನ ಭವಿಷ್ಯ | ಅಕ್ಟೋಬರ್ 16 | ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು, ದೂರದ ಪ್ರಯಾಣ ಬೇಡ
    4 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ | ಅಕ್ಟೋಬರ್ 19 | ರಾಗಿ, ಸೂರ್ಯಕಾಂತಿ ರೇಟ್ ಎಷ್ಟಿದೆ?
    19 hours ago
    ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್…
    5 days ago
    ಮಾರುಕಟ್ಟೆ ಧಾರಣೆ | ಅಕ್ಟೋಬರ್ 14 | ರಾಗಿ, ಶೇಂಗಾ ರೇಟ್ ಎಷ್ಟಿದೆ?
    6 days ago
    ಮಾರುಕಟ್ಟೆ ಧಾರಣೆ | ಅಕ್ಟೋಬರ್ 12 | ಮೆಕ್ಕೆಜೋಳ, ಸೂರ್ಯಕಾಂತಿ ರೇಟ್ ಎಷ್ಟಿದೆ?
    1 week ago
    ಮಾರುಕಟ್ಟೆ ಧಾರಣೆ | ಅಕ್ಟೋಬರ್ 09 | ರಾಗಿ, ಶೇಂಗಾ ರೇಟ್….
    2 weeks ago
  • ಹೊಳಲ್ಕೆರೆ
    ಹೊಳಲ್ಕೆರೆShow More
    X MLA Umapathi Press meet
    ಮಲ್ಲಾಡಿಹಳ್ಳಿ ಅನಾಥೇವಾಶ್ರಮ | ಸಮಗ್ರ ತನಿಖೆಗಾಗಿ ಲೋಕಾಯುಕ್ತಕ್ಕೆ ದೂರು | ಮಾಜಿ ಶಾಸಕ ಎ.ವಿ.ಉಮಾಪತಿ
    3 weeks ago
    Inauguration of Teachers' Day Celebrations
    ಗುರು ಸ್ಥಾನ ಪರಮ ಪವಿತ್ರ | ಮಕ್ಕಳ ಭವಿಷ್ಯ ರೂಪಿಸುವ ಹೊಣೆ ಶಿಕ್ಷಕರದ್ದು | ಶಾಸಕ ಎಂ.ಚಂದ್ರಪ್ಪ
    1 month ago
    Inauguration of the Public Service Movement meeting
    ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ | ಶಾಸಕ ಚಂದ್ರಪ್ಪ
    1 month ago
    ತಾಳಿಕಟ್ಟೆ–ದೊಗ್ಗನಾಳ್ ರಸ್ತೆ ಅಭಿವೃದ್ಧಿಗೆ ₹12 ಕೋಟಿ | ಶಾಸಕ ಎಂ.ಚಂದ್ರಪ್ಪ
    2 months ago
    ಹೊಳಲ್ಕೆರೆ ಪಟ್ಟಣದ ಕ್ರೀಡಾಂಗಣದಲ್ಲಿ 80ನೇ ಸ್ವಾತಂತ್ರ್ಯೋತ್ಸವ
    ಹಿರಿಯರ ತ್ಯಾಗದ ಮಾರ್ಗದರ್ಶನದಲ್ಲಿ ಮುನ್ನಡೆಯೋಣ | ಶಾಸಕ ಡಾ.ಎಂ.ಚಂದ್ರಪ್ಪ
    2 months ago
  • ಹಿರಿಯೂರು
    ಹಿರಿಯೂರುShow More
    ವಾಣಿ ವಿಲಾಸ ಸಾಗರಕ್ಕೆ 23 ಟಿಎಂಸಿ ನೀರು ಹರಿಸಿ | ಹಿರಿಯೂರಿನಲ್ಲಿ ನಿಖಿಲ್ ಕುಮಾರಸ್ವಾಮಿ ಆಗ್ರಹ
    2 weeks ago
    Power outage on May 1
    ಜೂನ್ 23 ರಂದು ಹಿರಿಯೂರು ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯ
    4 months ago
    ವೈಷ್ಣವ
    ನಾಲ್ಕು ವರ್ಷದ ಬಾಲಕ ಸಾವು | ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಪುತ್ರ
    4 months ago
    Babburu Horticulture college
    ಕೃಷಿ ಪ್ರಾಯೋಗಿಕ ಮರು ಪರೀಕ್ಷೆ ಜೂನ್ 1ಕ್ಕೆ ನಿಗದಿ
    5 months ago
    ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಪ್ರತಿಭಟನೆ
    ಹಿರಿಯೂರು | ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಒತ್ತಾಯ 
    6 months ago
  • ಹೊಸದುರ್ಗ
    ಹೊಸದುರ್ಗShow More
    ಸಾಣೇಹಳ್ಳಿ | ಶ್ರೀ ಶಿವಕುಮಾರ ಪ್ರಶಸ್ತಿ ಪ್ರಕಟ | ಬಿ.ಆರ್.ಪೊಲೀಸ್ ಪಾಟೀಲ ಆಯ್ಕೆ
    3 days ago
    DIET Principal Nagabhushan spoke at the progress review meeting
    ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ 29 ಅಂಶಗಳ ಕಾರ್ಯಕ್ರಮ ಅನುಷ್ಠಾನಕ್ಕೆ ಸೂಚನೆ
    2 weeks ago
    Power outage on May 1
    ಸೆ.27ರಂದು ಹೊಸದುರ್ಗ ತಾಲ್ಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯ
    3 weeks ago
    A tribute was paid to Shantaveera Shree on behalf of the Kadugolla Association
    ಕಾಡುಗೊಲ್ಲರಿಗಿದೆ ಶ್ರೀಮಂತ ಸಾಂಸ್ಕೃತಿಕ ಪರಂಪರೆ | ಶ್ರೀ ಶಾಂತವೀರ ಸ್ವಾಮೀಜಿ
    1 month ago
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    2 months ago
  • Life Style
    Life StyleShow More
    hair grow darker and thicker
    ಕೂದಲು ಕಪ್ಪಾಗಿ ದಪ್ಪವಾಗಿ ಬೆಳೆಯಲು ಈ ಹೇರ್ ಪ್ಯಾಕ್ ಹಚ್ಚಿ
    2 hours ago
    dry fruits
    ಆರೋಗ್ಯ ಪ್ರಯೋಜನಗಳಿಗಾಗಿ ಒಣ ಹಣ್ಣುಗಳನ್ನು ಯಾವಾಗ ತಿನ್ನಬೇಕು? ತಿಳಿಯಿರಿ
    3 hours ago
    eat chicken when you have a fever
    ಜ್ವರ ಬಂದಾಗ ಚಿಕನ್ ತಿಂದರೆ ಏನಾಗುತ್ತದೆ?
    1 day ago
    banana and papaya
    ಬಾಳೆಹಣ್ಣು ಮತ್ತು ಪಪ್ಪಾಯಿಯನ್ನು ಒಟ್ಟಿಗೆ ತಿಂದರೆ ಏನಾಗುತ್ತದೆ ಗೊತ್ತಾ?
    1 day ago
    Face Clean Up vs Facial
    ಫೇಸ್ ಕ್ಲೀನ್ ಅಪ್ ಹಾಗೂ ಫೇಶಿಯಲ್; ಚರ್ಮಕ್ಕೆ ಯಾವುದು ಉತ್ತಮ? ತಿಳಿಯಿರಿ
    2 days ago
Reading: ಮದ್ಯಪಾನ ನಿಯಂತ್ರಣಕ್ಕೆ ಸರ್ಕಾರ ದೃಢ ನಿರ್ಧಾರ ಕೈಗೊಳ್ಳಲಿ | ಮಠಾಧೀಶರ ಒತ್ತಾಯ
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಮುಖ್ಯ ಸುದ್ದಿ

ಮದ್ಯಪಾನ ನಿಯಂತ್ರಣಕ್ಕೆ ಸರ್ಕಾರ ದೃಢ ನಿರ್ಧಾರ ಕೈಗೊಳ್ಳಲಿ | ಮಠಾಧೀಶರ ಒತ್ತಾಯ

News Desk Chitradurga News
Last updated: 19 October 2026 08:22
News Desk Chitradurga News
1 day ago
Share
ಸರ್ವೋದಯಕ್ಕಾಗಿ ಮದ್ಯಪಾನ ನಿಯಂತ್ರಣ ಸಮಾಲೋಚನಾ ದುಂಡುಮೇಜಿನ ಪರಿಷತ್‌
ಸರ್ವೋದಯಕ್ಕಾಗಿ ಮದ್ಯಪಾನ ನಿಯಂತ್ರಣ ಸಮಾಲೋಚನಾ ದುಂಡುಮೇಜಿನ ಪರಿಷತ್‌
SHARE

CHITRAUDRGA NEWS | 19 OCTOBER 2026

ಚಿತ್ರದುರ್ಗ: ಮದ್ಯಪಾನ ವ್ಯಸನದಿಂದ ಕುಟುಂಬಗಳು ಬೀದಿಪಾಲಾಗುತ್ತಿದ್ದು, ಸಮಾಜದ ಆರೋಗ್ಯ ಮತ್ತು ನೆಮ್ಮದಿ ಹಾಳಾಗುತ್ತಿದೆ. ಮದ್ಯಪಾನ ನಿಯಂತ್ರಣ ಹಾಗೂ ನಿಷೇಧದ ನಿಟ್ಟಿನಲ್ಲಿ ಸರ್ಕಾರ ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ವಿವಿಧ ಮಠಾಧೀಶರು, ಧರ್ಮಗುರುಗಳು ಹಾಗೂ ಚಿಂತಕರು ಒತ್ತಾಯಿಸಿದರು.

ಇದನ್ನೂ ಓದಿ: ಜ್ವರ ಬಂದಾಗ ಚಿಕನ್ ತಿಂದರೆ ಏನಾಗುತ್ತದೆ?

ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಶರಣ ಸಂಸ್ಕೃತಿ ಉತ್ಸವ-2026ರ ಅಂಗವಾಗಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ಮಠದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ಸರ್ವೋದಯಕ್ಕಾಗಿ ಮದ್ಯಪಾನ ನಿಯಂತ್ರಣ ಸಮಾಲೋಚನಾ ದುಂಡುಮೇಜಿನ ಪರಿಷತ್‌’ನಲ್ಲಿ ಅವರು ಮಾತನಾಡಿದರು.

ಗದಗದ ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಮದ್ಯವ್ಯಸನದಿಂದ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ. ಗ್ರಾಮಗಳಲ್ಲಿ ಮದ್ಯದಂಗಡಿಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಮದ್ಯಪಾನದಿಂದಾಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ನೈತಿಕ ಮೌಲ್ಯಗಳನ್ನು ಬೆಳೆಸುವ ಮೂಲಕ ಸಮಾಜದ ಪರಿವರ್ತನೆಗೆ ಮಠಾಧೀಶರು ಕೈಜೋಡಿಸಬೇಕು ಎಂದರು.

ಸಾಣೆಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಮದ್ಯಪಾನದಿಂದ ಜನರ ಆರೋಗ್ಯ ಹದಗೆಡುತ್ತಿದ್ದು, ದುಡಿಮೆಯ ಬಹುಪಾಲು ಹಣ ಚಿಕಿತ್ಸೆಗೆ ವ್ಯಯವಾಗುತ್ತಿದೆ. ಸರ್ಕಾರ, ಧರ್ಮಗುರುಗಳು, ಸಮಾಜದ ಮುಖಂಡರು ಹಾಗೂ ಮಹಿಳಾ ಸಂಘಟನೆಗಳು ಒಗ್ಗೂಡಿ ಮದ್ಯವ್ಯಸನ ನಿಯಂತ್ರಣಕ್ಕೆ ಮುಂದಾಗಬೇಕು. ಇಂತಹ ಸಭೆಗಳು ಕೇವಲ ಚರ್ಚೆಗೆ ಸೀಮಿತವಾಗದೆ, ನಿರ್ಧಾರಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಸಮಾಜದಲ್ಲಿ ಬದಲಾವಣೆ ತರಬೇಕು ಎಂದು ಹೇಳಿದರು.

ಇದನ್ನೂ ಓದಿ: ಬಾಳೆಹಣ್ಣು ಮತ್ತು ಪಪ್ಪಾಯಿಯನ್ನು ಒಟ್ಟಿಗೆ ತಿಂದರೆ ಏನಾಗುತ್ತದೆ ಗೊತ್ತಾ?

ಇಳಕಲ್ಲಿನ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನದ ಶ್ರೀ ಗುರು ಮಹಾಂತ ಮಹಾಸ್ವಾಮಿಗಳು ಮಾತನಾಡಿ, ಮದ್ಯವ್ಯಸನದಿಂದ ಬಳಲುವವರಿಗೆ ಸಮಾಲೋಚನೆ ಮತ್ತು ಪುನರ್ವಸತಿ ಸೌಲಭ್ಯ ಕಲ್ಪಿಸಬೇಕು. ಗ್ರಾಮ ಪಂಚಾಯಿತಿಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಮದ್ಯಪಾನ ನಿಯಂತ್ರಣಕ್ಕೆ ಸಂಬಂಧಿಸಿದ ನಿರ್ಣಯ ಕೈಗೊಳ್ಳುವ ಅಧಿಕಾರ ನೀಡಬೇಕು. ಶಾಲಾ-ಕಾಲೇಜುಗಳು ಹಾಗೂ ವಸತಿ ಪ್ರದೇಶಗಳ ಸಮೀಪದ ಮದ್ಯದಂಗಡಿಗಳನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿಯೂ ಕ್ರಮ ಅಗತ್ಯ ಎಂದರು.

ಬೆಂಗಳೂರಿನ ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಶ್ರೀ ನಿಶ್ಚಲಾನಂದ ಮಹಾಸ್ವಾಮಿಗಳು ಮಾತನಾಡಿ, ಮಹಿಳೆಯರು ಮನಸ್ಸು ಮಾಡಿದರೆ ಸಮಾಜದಲ್ಲಿ ಮಹತ್ವದ ಬದಲಾವಣೆ ತರಲು ಸಾಧ್ಯ. ಮದ್ಯಪಾನ ನಿಷೇಧದಿಂದ ಸರ್ಕಾರದ ಆದಾಯ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ಹಿಂದೆ ಸರಿಯದೆ, ಜನರ ಆರೋಗ್ಯ, ಶಿಕ್ಷಣ, ಕಲ್ಯಾಣ ಹಾಗೂ ಮೂಲಸೌಕರ್ಯಗಳಿಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಶ್ರೀ ಸಿದ್ಧರಾಮ ಸಂಸ್ಥಾನಮಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳು ಮಾತನಾಡಿ, ರಾಜ್ಯವು ನಿಜವಾದ ಕಲ್ಯಾಣ ರಾಜ್ಯವಾಗಬೇಕಾದರೆ ಸಮಾಜ ಮದ್ಯವ್ಯಸನದಿಂದ ಮುಕ್ತವಾಗಬೇಕು ಎಂದರು.

ಇದನ್ನೂ ಓದಿ: ಕಾಂಗ್ರೆಸ್ಸಿನಿಂದ ರಾಜ್ಯದ ಬೊಕ್ಕಸಕ್ಕೆ ಬರಗಾಲ | ಕೆ.ಎಸ್.ನವೀನ್‌

ಕರ್ನಾಟಕ ರಾಜ್ಯ ವಿಕೇಂದ್ರೀಕೃತ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್. ಪಾಟೀಲ್ ಮಾತನಾಡಿ, ಮದ್ಯಪಾನ ನಿಷೇಧದ ಪರವಾಗಿ ನಿಲ್ಲುವ ರಾಜಕಾರಣಿಗಳಿಗೆ ಜನರು ಬೆಂಬಲ ನೀಡಬೇಕು. ಸರ್ಕಾರವೂ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ವೂಡೇ ಪಿ. ಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಅಸ್ಪೃಶ್ಯತೆ, ಕೋಮುಗಲಭೆ ಮತ್ತು ಮದ್ಯಪಾನ ಸಮಾಜಕ್ಕೆ ಕಂಟಕವಾಗಿವೆ. ಮದ್ಯವ್ಯಸನದಿಂದ ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದು, ಗಾಂಧೀಜಿಯವರ ಆಶಯದಂತೆ ಮದ್ಯಪಾನ ನಿಷೇಧಕ್ಕಾಗಿ ಎಲ್ಲ ಧರ್ಮಗುರುಗಳು ಒಗ್ಗಟ್ಟಿನಿಂದ ಹೋರಾಡಬೇಕು ಎಂದು ತಿಳಿಸಿದರು.

ಮದ್ಯನಿಷೇಧ ಆಂದೋಲನದ ಕಾರ್ಯಕರ್ತೆ ಸ್ವರ್ಣಭಟ್, ದಾವಣಗೆರೆಯ ಬ್ರಹ್ಮಕುಮಾರಿ ಆಶ್ರಮದ ಲೀಲಕ್ಕ, ಮಂಗಳೂರಿನ ಮೊಹಮ್ಮದ್ ಸೇರಿದಂತೆ ಹಲವು ಗಣ್ಯರು ಮದ್ಯಪಾನದ ದುಷ್ಪರಿಣಾಮಗಳು, ಯುವಜನರಲ್ಲಿ ಜಾಗೃತಿ ಹಾಗೂ ಕುಟುಂಬಗಳ ರಕ್ಷಣೆಯ ಅಗತ್ಯದ ಕುರಿತು ಮಾತನಾಡಿದರು.

ಇದನ್ನೂ ಓದಿ: ರಾಜ್ಯ ಸರ್ಕಾರದ ವಿರುದ್ಧ ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌ ವಾಗ್ದಾಳಿ

ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಮಠಾಧೀಶರು, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಶರಣಪ್ಪ ಸಲದಾಪುರ, ಸಾಹಿತಿಗಳು, ಕಲಾವಿದರು, ರೈತ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ‘ಮುಗಿಲ ಮಾಲೆ’ ಕೃತಿಯನ್ನು ಬಿಡುಗಡೆ ಮಾಡಲಾಯಿತು.

ಉಮೇಶ್ ಪತ್ತಾರ್ ವಚನ ಪ್ರಾರ್ಥನೆ ಸಲ್ಲಿಸಿದರು. ಡಾ. ಬಸವಕುಮಾರ ಸ್ವಾಮೀಜಿ ಸ್ವಾಗತಿಸಿದರು. ಬಸವಲಿಂಗಪ್ಪ ನಿರೂಪಿಸಿದರು. ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಶರಣು ಸಮರ್ಪಣೆ ಮಾಡಿದರು.

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:ಚಿತ್ರದುರ್ಗ, ಕನ್ನಡ ನ್ಯೂಸ್, ಮದ್ಯಪಾನ, ಸರ್ಕಾರ, ಮುರುಘಾ ಮಠ, Chitradurga, Kannada News, Alcohol, Government, Muruga Math,
Share This Article
Facebook Email Print
Previous Article eat chicken when you have a fever ಜ್ವರ ಬಂದಾಗ ಚಿಕನ್ ತಿಂದರೆ ಏನಾಗುತ್ತದೆ?
Next Article ಶರಣ ಸಂಸ್ಕೃತಿ ಉತ್ಸವ-2026ರ ಅಂಗವಾಗಿ ಮಹಿಳಾ ಸಮಾವೇಶ ಶರಣ ಸಂಸ್ಕೃತಿ ಉತ್ಸವದಲ್ಲಿ ಮಹಿಳಾ ಸಮಾವೇಶ | ವಿವಿಧ ಕ್ಷೇತ್ರಗಳ ಸಾಧಕಿಯರಿಗೆ ಸನ್ಮಾನ
Leave a Comment

Leave a Reply Cancel reply

Your email address will not be published. Required fields are marked *

hair grow darker and thicker
ಕೂದಲು ಕಪ್ಪಾಗಿ ದಪ್ಪವಾಗಿ ಬೆಳೆಯಲು ಈ ಹೇರ್ ಪ್ಯಾಕ್ ಹಚ್ಚಿ
Life Style
dry fruits
ಆರೋಗ್ಯ ಪ್ರಯೋಜನಗಳಿಗಾಗಿ ಒಣ ಹಣ್ಣುಗಳನ್ನು ಯಾವಾಗ ತಿನ್ನಬೇಕು? ತಿಳಿಯಿರಿ
Life Style
today bhavishya
ದಿನ ಭವಿಷ್ಯ | ಅಕ್ಟೋಬರ್ 20 | ಪರಿಶ್ರಮಕ್ಕೆ ತಕ್ಕ ಫಲಿತಾಂಶ, ಶುಭಸುದ್ದಿಗಳು
Dina Bhavishya
ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ
ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ವಾಲ್ಮೀಕಿ ಜಯಂತಿ ಸರಳ ಆಚರಣೆಗೆ ಸೂಚನೆ
ಮುಖ್ಯ ಸುದ್ದಿ

Categories

Dina Bhavishya Life Style ಅಡಕೆ ಧಾರಣೆ ಕ್ರೈಂ ಸುದ್ದಿ ಚಳ್ಳಕೆರೆ ತಾಲೂಕು ನಿಧನವಾರ್ತೆ ಮಾರುಕಟ್ಟೆ ಧಾರಣೆ ಮುಖ್ಯ ಸುದ್ದಿ ಮೊಳಕಾಳ್ಮೂರು ಲೋಕಸಮರ 2024 ಸಂಡೆ ಸ್ಪಷಲ್ ಹಿರಿಯೂರು ಹೊಳಲ್ಕೆರೆ ಹೊಸದುರ್ಗ
© Chitradurga News 2025 | Powered By Karnatakabest.com
Welcome Back!

Sign in to your account

Username or Email Address
Password

Lost your password?

Not a member? Sign Up